SBI Customer Alert: ಕೆವೈಸಿ ನೆಪದಲ್ಲಿ ಆನ್​ಲೈನ್ ವಂಚನೆ; ದೇಶದ ಅತಿದೊಡ್ಡ ಬ್ಯಾಂಕ್​ನಿಂದ 2 ಫೋನ್​ ನಂಬರ್ ನೀಡಿ ಗ್ರಾಹಕರಿಗೆ ಎಚ್ಚರಿಕೆ

ಭಾರತದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಎರಡು ಫೋನ್​ ನಂಬರ್ ಬಗ್ಗೆ ಎಚ್ಚರಿಸಿದ್ದು, ಅದರಿಂದ ಎಚ್ಚರಿಕೆಯಿಂದ ಇರುವಂತೆ ಗ್ರಾಹಕರನ್ನು ಕೇಳಿಕೊಂಡಿದೆ.

SBI Customer Alert: ಕೆವೈಸಿ ನೆಪದಲ್ಲಿ ಆನ್​ಲೈನ್ ವಂಚನೆ; ದೇಶದ ಅತಿದೊಡ್ಡ ಬ್ಯಾಂಕ್​ನಿಂದ 2 ಫೋನ್​ ನಂಬರ್ ನೀಡಿ ಗ್ರಾಹಕರಿಗೆ ಎಚ್ಚರಿಕೆ
ಸಾಂದರ್ಭಿಕ ಚಿತ್ರ
Edited By:

Updated on: Apr 22, 2022 | 12:32 PM

ಸಂದೇಶಗಳು, ಇಮೇಲ್ ಮತ್ತು ಟ್ವೀಟ್‌ಗಳಂತಹ ವಿವಿಧ ಸಂವಹನ ವಿಧಾನಗಳೊಂದಿಗೆ ಫಿಶಿಂಗ್ ಮೂಲಕ ವಂಚನೆಗಳ ಬಗ್ಗೆ ತನ್ನ ಗ್ರಾಹಕರಿಗೆ ಭಾರತದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಎಚ್ಚರಿಕೆಯನ್ನು ನೀಡಿದೆ. ಕೆವೈಸಿ (KYC) ವಂಚನೆಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬ್ಯಾಂಕ್ ಎರಡು ಸಂಖ್ಯೆಗಳನ್ನು ಹಂಚಿಕೊಂಡಿದೆ ಮತ್ತು ಯಾವುದೇ ಅನುಮಾನಾಸ್ಪದ ಕರೆಗಳಿಗೆ ಪ್ರತಿಕ್ರಿಯಿಸದೆ ಇರುವಂತೆ ತನ್ನ ಗ್ರಾಹಕರಿಗೆ ತಿಳಿಸಿದೆ. “ಈ ಸಂಖ್ಯೆಗಳೊಂದಿಗೆ ಸಂವಹನ ನಡೆಸಬೇಡಿ ಮತ್ತು ಕೆವೈಸಿ ಅಪ್​ಡೇಟ್​ಗಳಿಗಾಗಿ ಫಿಶಿಂಗ್ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಏಕೆಂದರೆ ಅವು ಎಸ್​ಬಿಐನೊಂದಿಗೆ ಸಂಬಂಧ ಹೊಂದಿಲ್ಲ. ಎಸ್​ಬಿಐ ಗ್ರಾಹಕರು ಎರಡು ಸಂಖ್ಯೆಗಳಿಂದ ಕರೆಗಳನ್ನು ಸ್ವೀಕರಿಸುತ್ತಿದ್ದಾರೆ. +91-8294710946 ಮತ್ತು +91-7362951973 ಕರೆ ಬರುತ್ತಿದ್ದು, ಕೆವೈಸಿ ಅಪ್‌ಡೇಟ್‌ಗಾಗಿ ಫಿಶಿಂಗ್ ಲಿಂಕ್ ಅನ್ನು ಕ್ಲಿಕ್ ಮಾಡಲು ಕೇಳುತ್ತಿದ್ದಾರೆ. ಅಂತಹ ಯಾವುದೇ ಫಿಶಿಂಗ್/ಅನುಮಾನಾಸ್ಪದ ಲಿಂಕ್ ಅನ್ನು ಕ್ಲಿಕ್ ಮಾಡದಂತೆ ಎಸ್‌ಬಿಐನ ಎಲ್ಲ ಗ್ರಾಹಕರಿಗೆ ವಿನಂತಿಸುತ್ತಿದೆ,” ಎಂದು ಎಸ್‌ಬಿಐ ತನ್ನ ಅಧಿಕೃತ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದೆ.

ಕೊವಿಡ್-19 ಕಾಣಿಸಿಕೊಂಡ ಮೇಲೆ ಏಕಾಏಕಿ ಮೊಬೈಲ್ ವ್ಯಾಲೆಟ್‌ಗಳು, ಯುಪಿಐ ಇತ್ಯಾದಿಗಳ ಮೂಲಕ ಹೆಚ್ಚಿನ ಪ್ರಮಾಣದ ಡಿಜಿಟಲ್ ಪಾವತಿಗಳು ಮತ್ತು ವರ್ಧಿತ ಇಂಟರ್​ನೆಟ್/ಮೊಬೈಲ್ ಬ್ಯಾಂಕಿಂಗ್ ಬಳಕೆಯಿಂದಾಗಿ ಆನ್‌ಲೈನ್ ವಂಚನೆಗಳು ದೇಶದಲ್ಲಿ ಹೆಚ್ಚುತ್ತಿವೆ. ಎಸ್‌ಬಿಐ ಗ್ರಾಹಕರು ತಮ್ಮ ನೋಂದಾಯಿತ ಇಮೇಲ್ ಐಡಿಗಳಲ್ಲಿ ಆನ್‌ಲೈನ್ ವಂಚನೆಗೆ ಸಂಬಂಧಿಸಿದಂತೆ ಜಾಗೃತಿ ಇಮೇಲ್‌ಗಳನ್ನು ಸ್ವೀಕರಿಸುತ್ತಿದ್ದಾರೆ.

“ಗ್ರಾಹಕರು ಫಿಶಿಂಗ್ ಇಮೇಲ್ ಅನ್ನು ಸ್ವೀಕರಿಸಿದರೆ ನಂತರ report.phishing@sbi.co.inನಲ್ಲಿ ಬ್ಯಾಂಕ್‌ಗೆ ಅಂತಹ ವಿಷಯಗಳನ್ನು ವರದಿ ಮಾಡಬಹುದು,” ಎಂದು ಬ್ಯಾಂಕ್ ಮೇಲ್‌ನಲ್ಲಿ ತಿಳಿಸಿದೆ.

ಇದನ್ನೂ ಓದಿ: SBI Customer Alert: ನೀವು ಎಸ್​ಬಿಐ ಗ್ರಾಹಕರೇ? ಈ ತಪ್ಪು ಮಾಡಿದಲ್ಲಿ ಖಾತೆಯಲ್ಲಿನ ಹಣವೇ ಖಾಲಿಯಾದೀತು