BPCL Diesel Delivery: ಮುಂಬೈನಲ್ಲಿ ಮನೆ ಬಾಗಿಲಿಗೆ ಡೀಸೆಲ್ ತಲುಪಿಸುವ ಸೇವೆ ಆರಂಭಿಸಿದ ಬಿಪಿಸಿಎಲ್

| Updated By: Srinivas Mata

Updated on: Aug 14, 2021 | 1:09 PM

ಬಿಪಿಸಿಎಲ್​ನಿಂದ ಮನೆ ಬಾಗಿಲಿಗೆ ಡೀಸೆಲ್ ಡೆಲಿವರಿ ಮಾಡುವ ಸೇವೆಯನ್ನು ಆರಂಭಿಸಲಾಗಿದೆ. ಎಲ್ಲಿ, ಏನು, ಎತ್ತ ಎಂಬಿತ್ಯಾದಿ ವಿವರಗಳು ಇಲ್ಲಿವೆ.

BPCL Diesel Delivery: ಮುಂಬೈನಲ್ಲಿ ಮನೆ ಬಾಗಿಲಿಗೆ ಡೀಸೆಲ್ ತಲುಪಿಸುವ ಸೇವೆ ಆರಂಭಿಸಿದ ಬಿಪಿಸಿಎಲ್
ಸಾಂದರ್ಭಿಕ ಚಿತ್ರ
Follow us on

ಮುಂಬೈ: ಬೇಡಿಕೆ ಹೆಚ್ಚಳದ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮನೆ ಬಾಗಿಲಿಗೆ ಡೀಸೆಲ್ ಡೆಲಿವರಿ ಮಾಡುವ ಸೇವೆಯನ್ನು ಆರಂಭಿಸಿದೆ. 15 ಮೊಬೈಲ್ ಟ್ಯಾಂಕರ್ ಹಾಗೂ 9 ವ್ಯಾನ್​ಗಳ ಮೂಲಕವಾಗಿ ಮುಂಬೈನ ಪೂರ್ವ ಭಾಗದ ಮೂಲೆಗಳಿಗೆ ತಲುಪಿಸಲಾಗುತ್ತದೆ. ನಮ್ಮ ಫ್ಯುಯೆಲ್​ಕಾರ್ಟ್​ ಮೂಲಕ ಮನೆ ಮನೆ ಬಾಗಿಲಿಗೆ ಡೀಸೆಲ್ ಮುಟ್ಟಿಸುತ್ತೇವೆ. ಅದರ ಶುದ್ಧತೆ ಹಾಗೂ ಪ್ರಮಾಣದಲ್ಲಿ ಖಾತ್ರಿ ಇರುತ್ತದೆ. ಇದಕ್ಕೆ ಈಚೆಗಿನ ಎಲೆಕ್ಟ್ರಾನಿಕ್ ಡಿಸ್ಪೆನ್ಸಿಂಗ್ ಮತ್ತು ಜಿಯೋ ಫೆನ್ಸಿಂಗ್ ತಂತ್ರಜ್ಞಾನದ ಬೆಂಬಲ ಇದೆ. ಗ್ರಾಹಕರು ಚಿಂತೆ ಮಾಡುವ ಅಗತ್ಯ ಇಲ್ಲ. ತಮ್ಮ ಬಳಿ ಇರುವ ಸಲಕರಣೆಗಳಿಗೆ ಹಾಗೂ ಭಾರೀ ವಾಹನಗಳಿಗೆ ಡೀಸೆಲ್ ಭರ್ತಿ ಮಾಡುವುದಕ್ಕೆ ಇದರಿಂದ ಅನುಕೂಲ ಆಗುತ್ತದೆ ಎಂದು ಬಿಪಿಸಿಎಲ್​ ರೀಟೇಲ್ ಉಸ್ತುವಾರಿ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಎಸ್. ರವಿ ಹೇಳಿದ್ದಾರೆ.

ಮನೆ ಬಾಗಿಲಿಗೆ ಮೊಬೈಲ್ ಡಿಸ್ಪೆನ್ಸರ್ಸ್​ ಮೂಲಕ ಡೆಲಿವರಿ ಮಾಡುವುದರ ಪರಿಣಾಮ 1588 FuelKarts ಮತ್ತು 129 FuelEnts ಕಳೆದ ಎರಡು ವರ್ಷದಲ್ಲಿ ಈ ವಲಯದಲ್ಲಿ ಮತ್ತು ಅಖಿಲ ಭಾರತ ಮಟ್ಟದಲ್ಲಿ ಶುಕ್ರವಾರದ ತನಕ ಆಗಿದೆ ಎಂದು ಕಂಪೆನಿ ಹೇಳಿದೆ. ಸರಿಯಾದ ಸಮಯಕ್ಕೆ ಡೆಲಿವರಿ, ಗುಣಮಟ್ಟ ಹಾಗೂ ಪ್ರಮಾಣದ ಬಗ್ಗೆ ಸಂಪೂರ್ಣ ಖಾತ್ರಿ, ಸುರಕ್ಷಿತ ಮತ್ತು ಭದ್ರತೆಯಿಂದ ಉತ್ಪನ್ನಗಳ ನಿರ್ವಹಣೆ, FuelKarts ಕಾರ್ಯನಿರ್ವಹಣೆ ಕ್ಷಮತೆಯನ್ನು ವಿಸ್ತರಿಸಿ ಉದ್ಯಮವನ್ನು ಇನ್ನಷ್ಟು ಸುಲಭವಾಗಿ ಮಾಡಬಹುದು.

ಕಂಪೆನಿಯಿಂದ ಈಗಾಗಲೇ 63 ಮೊಬೈಲ್ ಡಿಸ್ಪೆನ್ಸರ್ಸ್​ಗಳನ್ನು ಆರಂಭಿಸಲಾಗಿದೆ. ಪಶ್ಚಿಮ ಬಂಗಾಲ, ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಈಶಾನ್ಯ ರಾಜ್ಯಗಳಲ್ಲಿ ಸೇವೆಯನ್ನು ಒದಗಿಸುತ್ತದೆ. ಈಗಿನ ಆರಂಭವು ಹೊಸ ಉದ್ಯಮ ಸೃಷ್ಟಿಗೆ ಮತ್ತು ಪೂರ್ವ ಭಾಗದ ಯುವ ಉದ್ಯಮಿಗಳಿಗೆ ಅವಕಾಶ ಸೃಷ್ಟಿಸಲು ದೀರ್ಘ ಹಾದಿಯನ್ನು ಸವೆಸಬೇಕಿದೆ ಎಂದು ಕಂಪೆನಿ ತಿಳಿಸಿದೆ. ಖಾಸಗಿ ಕಂಪೆನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ನಯಾರಾ ಎನರ್ಜಿಯಿಂದ ಮನೆ ಬಾಗಿಲಿಗೆ ಇಂಧನ ಒದಗಿಸುವ ಸೇವೆ ಕೂಡ ದೊರಕಿಸುತ್ತಿದೆ.

ಸ್ಟಾರ್ಟ್​ಅಪ್​ಗಳಾದ ರೆಪೋಸ್ ಎನರ್ಜಿ, ಪೆಪ್​ಫ್ಯುಯೆಲ್ಸ್, ಮೈಪೆಟ್ರೋಲ್​ಪಂಪ್, ಫ್ಯುಯೆಲ್​ಬಡ್ಡಿ, ಹಮ್​ಸಫರ್​ನಿಂದ ಈಗಾಗಲೇ ಇಂಧನ ಡೆಲಿವರಿಯನ್ನು ಬೇಡಿಕೆ ಆಧಾರದಲ್ಲಿ ನೀಡಲಾಗುತ್ತಿದೆ. ಎಲ್ಲ ಸ್ಟಾರ್ಟ್​ ಅಪ್​ಗಳು ಸರ್ಕಾರಿ ಸ್ವಾಮ್ಯ ಹಾಗೂ ಖಾಸಗಿ ತೈಲ ಮಾರ್ಕೆಟಿಂಗ್ ಕಂಪೆನಿಗಳ ಜತೆಗೂಡಿ ಕೆಲಸ ಮಾಡುತ್ತವೆ.

ಇದನ್ನೂ ಓದಿ: Fuel Demand: ಕೊರೊನಾ ಎರಡನೇ ಅಲೆ ಹೊಡೆತಕ್ಕೆ 9 ತಿಂಗಳ ಕನಿಷ್ಠ ಮಟ್ಟ ತಲುಪಿದ್ದ ಇಂಧನ ಬೇಡಿಕೆ ಜೂನ್​ನಲ್ಲಿ ಮತ್ತೆ ಚೇತರಿಕೆ

(State Owned BPCL Launched Door Step Delivery Of Diesel)