AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಷೇರು ಮಾರುಕಟ್ಟೆ ಸದ್ಯದಲ್ಲೇ ಮತ್ತೆ ಗರಿಗೆದರುತ್ತೆ ಅನ್ನೋದಕ್ಕೆ ಇಲ್ಲಿವೆ ಪ್ರಬಲ ಸಾಕ್ಷ್ಯಗಳು

MarketSmith India's equity head Mayuresh Joshi thumbs up for Indian stock Market: ಷೇರು ಮಾರುಕಟ್ಟೆಯ ಪತನದ ಅಂತ್ಯ ಮುಗಿಯುತ್ತಾ ಬಂದಿದೆ. ಇನ್ನೇನಿದ್ದರೂ ಮೇಲೇರಿಕೆಯ ಆಟ ಎನ್ನುತ್ತಾರೆ ಮಯೂರೇಶ್ ಜೋಷಿ. ಬಾಂಡ್ ಮತ್ತು ನಿಫ್ಟಿ ಗಳಿಕೆಯ ನಡುವಿನ ಅಂತರ ಮತ್ತು 200 ದಿನದ ಮೂವಿಂಗ್ ಆ್ಯವರೇಜ್ ನಿದರ್ಶನಗಳನ್ನು ಅವರು ನೀಡಿದ್ದಾರೆ. ಹಣಕಾಸು, ಆಗ್ರೋಕೆಮಿಕಲ್ಸ್ ಮತ್ತು ಹೆಲ್ತ್​ಕೇರ್ ಸೆಕ್ಟರ್​ಗಳು ಉತ್ತಮ ಬೆಳವಣಿಗೆಯ ಲಕ್ಷಣ ಹೊಂದಿವೆ ಎನ್ನುತ್ತಾರೆ ಅವರು.

ಷೇರು ಮಾರುಕಟ್ಟೆ ಸದ್ಯದಲ್ಲೇ ಮತ್ತೆ ಗರಿಗೆದರುತ್ತೆ ಅನ್ನೋದಕ್ಕೆ ಇಲ್ಲಿವೆ ಪ್ರಬಲ ಸಾಕ್ಷ್ಯಗಳು
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 23, 2025 | 4:56 PM

ಷೇರು ಮಾರುಕಟ್ಟೆ ಕಳೆದ ಕೆಲ ತಿಂಗಳಿಂದ ತೀವ್ರವಾಗಿ ಅಲುಗಾಡುತ್ತಿದೆ. ನಿಫ್ಟಿ, ಸೆನ್ಸೆಕ್ಸ್ ಸೇರಿದಂತೆ ಪ್ರಮುಖ ಸೂಚ್ಯಂಕಗಳು ಸಾಕಷ್ಟು ಅಂಕಗಳನ್ನು ಕಳೆದುಕೊಂಡಿವೆ. ಷೇರುಬೆಲೆ ಇನ್ನಷ್ಟು ಕುಸಿತ ಕಾಣುತ್ತದೆಯಾ? ಯಾವಾಗ ಬೆಲೆ ಏರಲು ಮತ್ತೆ ಆರಂಭಿಸುತ್ತದೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ತಜ್ಞರ ಅಭಿಪ್ರಾಯದಲ್ಲಿ ಸ್ಪಷ್ಟತೆ ಇಲ್ಲ. ಆದರೆ, ಮಾರ್ಕೆಟ್​ಸ್ಮಿತ್ ಇಂಡಿಯಾ ಸಂಸ್ಥೆಯ ಈಕ್ವಿಟಿ ವಿಭಾಗದ ಮುಖ್ಯಸ್ಥರಾದ ಮಯೂರೇಶ್ ಜೋಷಿ ಕೆಲ ಕುತುಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಅವರ ಪ್ರಕಾರ ಭಾರತದ ಷೇರು ಮಾರುಕಟ್ಟೆಯ ಪತನದ ಸಮಯ ಅಂತಿಮಗೊಂಡಿದ್ದು, ಅತಿಶೀಘ್ರದಲ್ಲೇ ಮಾರುಕಟ್ಟೆ ಮತ್ತೆ ಮೇಲ್ಮುಖವಾಗಿ ಹೋಗಬಹುದು. ಅದಕ್ಕೆ ಕೆಲ ಪ್ರಮುಖ ಸಾಕ್ಷ್ಯಗಳನ್ನೂ ಅವರು ವಿವರಿಸಿದ್ದಾರೆ.

ಮಯೂರೇಶ್ ಅವರು ನೀಡಿದ ಮೊದಲ ಸಾಕ್ಷ್ಯವು ಬಾಂಡ್ ಗಳಿಕೆ ಮತ್ತು ನಿಫ್ಟಿ ಗಳಿಕೆಯ ನಡುವಿನ ಅಂತರದ್ದು. ಇವೆರಡರ ನಡುವಿನ ಅಂತರ ಶೇ. 1.8ರಿಂದ 1.9ಕ್ಕೆ ಇಳಿಕೆ ಆಗಿದೆ. ಈ ಅಲ್ಪ ಅಂತರದ ಸ್ಥಿತಿ ಇದ್ದಾಗೆಲ್ಲಾ ಮಾರುಕಟ್ಟೆಯ ಕುಸಿತದ ಅಂಚು ಸಮೀಪಿಸುತ್ತದೆ. ಅಂದರೆ, ಮಾರುಕಟ್ಟೆ ಮತ್ತೆ ಮೇಲೇರತೊಡಗುತ್ತದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಚೀನೀ ಏರ್ಪೋರ್ಟ್; ವಿಮಾನ ಇಲ್ಲ, ಪ್ರಯಾಣಿಕರಿಲ್ಲ, ಪ್ರಯೋಜನವೂ ಇಲ್ಲ…

ಎಕನಾಮಿಕ್ಸ್ ಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ಮಯೂರೇಶ್ ಅವರು ಮತ್ತೊಂದು ಸಾಕ್ಷ್ಯ ನೀಡುತ್ತಾರೆ. ಅದು 200 ದಿನದ ಮೂವಿಂಗ್ ಆ್ಯವರೇಜ್​ನದ್ದು. ಸದ್ಯ ನಿಫ್ಟಿ500 ಇಂಡೆಕ್ಸ್​ನ ಐನ್ನೂರು ಷೇರುಗಳಲ್ಲಿ 200 ದಿನದ ಸರಾಸರಿ ಮೌಲ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಟ್ರೇಡಿಂಗ್ ಆಗುತ್ತಿರುವುದು ಶೇ. 15ರಷ್ಟು ಷೇರುಗಳು ಮಾತ್ರ. ಐತಿಹಾಸಿಕವಾಗಿ ಗಮನಿಸಿದಾಗ, ಈ ಸ್ಥಿತಿಯು ಮಾರ್ಕೆಟ್ ಕರೆಕ್ಷನ್ ಅನ್ನು ಸೂಚಿಸುತ್ತದೆ. 2008, 2014, 2020 ವರ್ಷಗಳಲ್ಲೂ ಇದೇ ರೀತಿ ಆಗಿದ್ದು, ಬಳಿಕ ಷೇರುಪೇಟೆ ಗರಿಗೆದರತೊಡಗಿದ್ದನ್ನು ಮಾರ್ಕೆಟ್​ಸ್ಮಿತ್ ಇಂಡಿಯಾದ ಈ ಎಕ್ಸಿಕ್ಯೂಟಿವ್ ಎತ್ತಿ ತೋರಿಸಿದ್ದಾರೆ.

ಈ ಮೂರು ಕ್ಷೇತ್ರಗಳತ್ತ ಗಮನ ಹರಿಸುವಂತೆ ಹೂಡಿಕೆದಾರರಿಗೆ ಸಲಹೆ

ಮಯೂರೇಶ್ ಜೋಷಿ ಅವರು ಮುಂಬರುವ ಮಾರುಕಟ್ಟೆ ಬೂಮ್​ನಲ್ಲಿ ಹೆಚ್ಚು ಬೆಳವಣಿಗೆ ಕಾಣಬಲ್ಲ ವಲಯಗಳನ್ನು ಹೆಸರಿಸಿದ್ದಾರೆ. ಅದರಲ್ಲಿ ಪ್ರಮುಖವಾದುದು ಆಗ್ರೋಕೆಮಿಕಲ್, ಹೆಲ್ತ್​ಕೇರ್ ಮತ್ತು ಫೈನಾನ್ಷಿಯಲ್ ಸೆಕ್ಟರ್​ಗಳು. ಅವರ ಪ್ರಕಾರ, ಆಗ್ರೋಕೆಮಿಕಲ್ಸ್ ಕ್ಷೇತ್ರದಲ್ಲಿ ಕೋರಮಂಡಲ್ ಇಂಟರ್ನ್ಯಾಷನಲ್ ಇತ್ಯಾದಿ ಕಂಪನಿಗಳು ಉತ್ತಮ ಬೆಳವಣಿಗೆ ಕಾಣಬಹುದು.

ಇದನ್ನೂ ಓದಿ: ಒಂದು ಮೊಟ್ಟೆಯ ಕಥೆ… ಅಮೆರಿಕದಲ್ಲಿ ಕೋಳಿಗಳನ್ನು ಬಾಡಿಗೆಗೆ ಪಡೆದು ಸಾಕುತ್ತಿರುವ ಜನರು… ಕಾರಣ ಏನು ಗೊತ್ತಾ?

ಹೆಲ್ತ್​ಕೇರ್ ಸೆಕ್ಟರ್​ನಲ್ಲಿ ಮ್ಯಾಕ್ಸ್ ಹೆಲ್ತ್​ಕೇರ್, ಕಿಮ್ಸ್ ಮೊದಲಾದ ಕಂಪನಿಗಳ ಷೇರುಗಳು; ಹಣಕಾಸು ಕ್ಷೇತ್ರದಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್, ಕರೂರ್ ವೈಷ್ಯ ಬ್ಯಾಂಕ್ ಮೊದಲಾದ ಕಂಪನಿಗಳು ಉತ್ತಮ ಲಕ್ಷಣ ಹೊಂದಿವೆ ಎಂಬುದು ಮಯೂರೇಶ್ ಅವರ ಅನಿಸಿಕೆ.

ಈ ಮೂರು ಕ್ಷೇತ್ರಗಳಲ್ಲಿ ಮೂಲಭೂತವಾಗಿ ಪ್ರಬಲವಾಗಿರುವ ಮತ್ತು ಉತ್ತಮ ಬೆಳವಣಿಗೆಯ ಲಕ್ಷಣ ಹೊಂದಿರುವ ಷೇರುಗಳ ಮೇಲೆ ಹೂಡಿಕೆ ಮಾಡುವಂತೆ ಹೂಡಿಕೆದಾರರಿಗೆ ಅವರು ಸಲಹೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಲ್ಟಿ ಹೊಡೆದು ಶತಕದ ಸಂಭ್ರಮಾಚರಣೆ ಮಾಡಿದ ಪಂತ್
ಪಲ್ಟಿ ಹೊಡೆದು ಶತಕದ ಸಂಭ್ರಮಾಚರಣೆ ಮಾಡಿದ ಪಂತ್
ನೀವು ಉತ್ತಮ ಕೆಲಸಗಾರರೆಂದು ಕೇಳಸಿಕೊಂಡಿದ್ದೇನೆ ಅಂತ ಡಿಸಿಗೆ ಹೇಳಿದ ಸೋಮಣ್ಣ
ನೀವು ಉತ್ತಮ ಕೆಲಸಗಾರರೆಂದು ಕೇಳಸಿಕೊಂಡಿದ್ದೇನೆ ಅಂತ ಡಿಸಿಗೆ ಹೇಳಿದ ಸೋಮಣ್ಣ
73ನೇ ವಯಸ್ಸಿನಲ್ಲೂ 51 ಪುಶ್-ಅಪ್ ಮಾಡಿದ ತಮಿಳುನಾಡು ರಾಜ್ಯಪಾಲ
73ನೇ ವಯಸ್ಸಿನಲ್ಲೂ 51 ಪುಶ್-ಅಪ್ ಮಾಡಿದ ತಮಿಳುನಾಡು ರಾಜ್ಯಪಾಲ
ರಿಷಭ್ ಪಂತ್​ಗೆ ಕೈ ಮುಗಿದ ರಾಹುಲ್; ವಿಡಿಯೋ ವೈರಲ್
ರಿಷಭ್ ಪಂತ್​ಗೆ ಕೈ ಮುಗಿದ ರಾಹುಲ್; ವಿಡಿಯೋ ವೈರಲ್
ಐಸಿಯು ಬಗ್ಗೆ ಮಾತಾಡಲು ಸಂಸದ ಸುಧಾಕರ್​ಗೆ ನಾಚಿಕೆಯಾಗಬೇಕು: ಸಚಿವ
ಐಸಿಯು ಬಗ್ಗೆ ಮಾತಾಡಲು ಸಂಸದ ಸುಧಾಕರ್​ಗೆ ನಾಚಿಕೆಯಾಗಬೇಕು: ಸಚಿವ
ಊಹಿಸಲಾಗದ ದುಃಖ ಬರಲಿದೆ, ಜನವರಿ ಒಳಗೆ ದೊಡ್ಡ ಗಂಡಾಂತರ: ಕೋಡಿ ಶ್ರೀ ಭವಿಷ್ಯ
ಊಹಿಸಲಾಗದ ದುಃಖ ಬರಲಿದೆ, ಜನವರಿ ಒಳಗೆ ದೊಡ್ಡ ಗಂಡಾಂತರ: ಕೋಡಿ ಶ್ರೀ ಭವಿಷ್ಯ
ಕಾಂಗ್ರೆಸ್ ಸರ್ಕಾರ ಬಡವರನ್ನೂ ಬಿಡದೆ ಸುಲಿಗೆ ಮಾಡುತ್ತಿದೆ: ಅಶೋಕ
ಕಾಂಗ್ರೆಸ್ ಸರ್ಕಾರ ಬಡವರನ್ನೂ ಬಿಡದೆ ಸುಲಿಗೆ ಮಾಡುತ್ತಿದೆ: ಅಶೋಕ
ವಿರಾಟ್ ಕೊಹ್ಲಿಯನ್ನು ಹೀಯಾಳಿಸಿದ ಬೆನ್ನಲ್ಲೇ ಕೆಎಲ್ ರಾಹುಲ್ ಔಟ್..!
ವಿರಾಟ್ ಕೊಹ್ಲಿಯನ್ನು ಹೀಯಾಳಿಸಿದ ಬೆನ್ನಲ್ಲೇ ಕೆಎಲ್ ರಾಹುಲ್ ಔಟ್..!
ಮಾತಾಡಿದ್ದು ನಾನೇ ಅಂತ ಪಾಟೀಲ್ ಹೇಳಿದರೂ ಸರ್ಕಾರದ ಧೋರಣೆ ಅರ್ಥಹೀನ
ಮಾತಾಡಿದ್ದು ನಾನೇ ಅಂತ ಪಾಟೀಲ್ ಹೇಳಿದರೂ ಸರ್ಕಾರದ ಧೋರಣೆ ಅರ್ಥಹೀನ
ಡಿಕ್ಕಿ ಹೊಡೆದು ಬಿದ್ದ ಬ್ಯಾಟರ್​ಗಳು... ಆದರೂ ರನೌಟ್ ಮಾಡಲು ಸಾಧ್ಯವಾಗಿಲ್ಲ!
ಡಿಕ್ಕಿ ಹೊಡೆದು ಬಿದ್ದ ಬ್ಯಾಟರ್​ಗಳು... ಆದರೂ ರನೌಟ್ ಮಾಡಲು ಸಾಧ್ಯವಾಗಿಲ್ಲ!