ಐದನೇ ಹಂತದ ಮತದಾನವಿರುವ ಮೇ 20ರಂದು ಷೇರು ಮಾರುಕಟ್ಟೆಗೆ ರಜೆ; ಕಾರಣ ಇದು

|

Updated on: May 19, 2024 | 3:19 PM

Stock Market Holiday On 2024 May 20th: ಮೇ 20, ಸೋಮವಾರದಂದು ಭಾರತದ ಷೇರು ವಿನಿಮಯ ಕೇಂದ್ರಗಳಿಗೆ ರಜೆ ಇದ್ದು, ಅಂದು ಯಾವ ಟ್ರೇಡಿಂಗ್ ನಡೆಯುವುದಿಲ್ಲ. ಐದನೇ ಹಂತದ ಚುನಾವಣೆ ಮುಂಬೈನಲ್ಲಿ ಇರುವುದರಿಂದ ರಜೆ ನೀಡಲಾಗಿದೆ. ಷೇರು ವಿನಿಮಯ ಕೇಂದ್ರಗಳಾದ ಬಿಎಸ್​ಇ ಮತ್ತು ಎನ್​ಎಸ್​ಇ ಮುಂಬೈನಲ್ಲೇ ಇರುವುದರಿಂದ ರಜೆ ಕೊಡಲಾಗಿದೆ. ಮಂಗಳವಾರ ಟ್ರೇಡಿಂಗ್ ಆರಂಭವಾಗಲಿದೆ. ಮಂಗಳವಾರ ಎರಡು ಐಪಿಒಗಳು ಮುಕ್ತಾಯವಾಗಲಿವೆ. ಇನ್ನೂ ಮೂರು ಐಪಿಒಗಳು ಮಂಗಳವಾರದ ಬಳಿಕ ಬಿಡುಗಡೆ ಆಗುತ್ತಿವೆ.

ಐದನೇ ಹಂತದ ಮತದಾನವಿರುವ ಮೇ 20ರಂದು ಷೇರು ಮಾರುಕಟ್ಟೆಗೆ ರಜೆ; ಕಾರಣ ಇದು
ಷೇರು ಮಾರುಕಟ್ಟೆ
Follow us on

ಮುಂಬೈ, ಮೇ 19: ಷೇರು ಮಾರುಕಟ್ಟೆಗೆ ವಾರದಲ್ಲಿ ಎರಡು ವೀಕೆಂಡ್ ದಿನಗಳು ರಜೆ ಇರುತ್ತವೆ. ಈ ಬಾರಿ ಸತತ ಮೂರು ದಿನ ರಜೆ ಇದೆ. ನಿನ್ನೆ ಶನಿವಾರದಿಂದ ಆರಂಭವಾಗಿ ನಾಳೆ ಸೋಮವಾರದವರೆಗೂ ಷೇರು ವಿನಿಮಯ ಕೇಂದ್ರಗಳು (stock exchanges) ಬಂದ್ ಆಗಿರುತ್ತವೆ. ಮೇ 20 ಆಗಿರುವ ನಾಳೆ ಐದನೇ ಹಂತದ ಚುನಾವಣೆ ಇದೆ. ಹಿಂದಿನ ಯಾವ ಹಂತದ ಮತದಾನಕ್ಕೂ ರಜೆ ಇರದ ಷೇರುಪೇಟೆ ಐದನೇ ಹಂತದಲ್ಲಿ ರಜೆ ಹೊಂದಿರಲು ಕಾರಣ ಇದೆ. ಷೇರು ವಿನಿಮಯ ಕೇಂದ್ರಗಳೆರಡೂ ಕೂಡ ಇರುವುದು ಮುಂಬೈನಲ್ಲಿ. ಅಲ್ಲಿ ಐದನೇ ಹಂತದ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಜೆ ಘೋಷಿಸಲಾಗಿದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಎರಡೂ ಕೂಡ ನಾಳೆ ಬಂದ್ ಆಗಿರುತ್ತವೆ. ಮಂಗಳವಾರದಿಂದ ಮತ್ತೆ ಅಲ್ಲಿ ಮಾರುಕಟ್ಟೆ ತೆರೆದಿರುತ್ತದೆ. ಮಹಾರಾಷ್ಟ್ರ ದಿನವಾದ ಮೇ 1ರಂದೂ ಕೂಡ ಷೇರು ಮಾರುಕಟ್ಟೆ ಬಂದ್ ಆಗಿತ್ತು.

ಡಿಸೆಂಬರ್​ವರೆಗೂ ಷೇರು ಮಾರುಕಟ್ಟೆಗೆ ಇರುವ ರಜೆಗಳ ಪಟ್ಟಿ

  • ಮೇ 20: ಮುಂಬೈನಲ್ಲಿ ಲೋಕಸಭಾ ಚುನಾವಣೆ
  • ಜೂನ್ 17: ಈದ್ ಉಲ್ ಆಧಾ
  • ಜುಲೈ 17: ಮೊಹರಂ
  • ಆಗಸ್ಟ್ 15: ಸ್ವಾತಂತ್ರ್ಯ ದಿನೋತ್ಸವ
  • ಸೆಪ್ಟಂಬರ್ 7: ಗಣೇಶ ಹಬ್ಬ
  • ಅಕ್ಟೋಬರ್ 2: ಗಾಂಧಿ ಜಯಂತಿ
  • ಅಕ್ಟೋಬರ್ 13: ದಸರಾ
  • ನವೆಂಬರ್ 2: ದೀಪಾವಳಿ
  • ನವೆಂಬರ್ 2: ಬಲಿಪಾಡ್ಯಮಿ
  • ನವೆಂಬರ್ 15: ಗುರುನಾನಕ್ ಜಯಂತಿ
  • ಡಿಸೆಂಬರ್ 25: ಕ್ರಿಸ್ಮಸ್

ಇವು ಶನಿವಾರ ಮತ್ತು ಭಾನುವಾರ ಹೊರತುಡಿಸಿ ಇರುವ ರಜಾ ದಿನಗಳು. ಷೇರು ಮಾರುಕಟ್ಟೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9:15ರಿಂದ ಮಧ್ಯಾಹ್ನ 3:30ರವರೆಗೆ ಟ್ರೇಡಿಂಗ್​ಗೆ ಲಭ್ಯ ಇರುತ್ತದೆ.

ಇದನ್ನೂ ಓದಿ: ಸ್ವಿಟ್ಜರ್​ಲೆಂಡ್​ನಲ್ಲಿರುವ ನೆಸ್ಲೆ ಇಂಡಿಯಾದ ಮಾತೃಸಂಸ್ಥೆಗೆ ರಾಯಲ್ಟಿ ಹೆಚ್ಚಳಕ್ಕೆ ಷೇರುದಾರರ ವಿರೋಧ; ಏನು ಕಾರಣ?

ಮುಂಬರುವ ಐಪಿಒಗಳು

ಕಳೆದ ಎರಡು ವಾರದಲ್ಲಿ ಐಪಿಒಗಳಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಗುರುವಾರ ಎರಡು ಐಪಿಒಗಳು ಬಿಡುಗಡೆ ಆಗಿದ್ದವು. ಸಣ್ಣ ಮತ್ತು ಮಧ್ಯಮ ಉದ್ದಿಮೆ ಕ್ಷೇತ್ರದ ಎಚ್​ಒಎಸಿ ಫೂಡ್ಸ್ ಮತ್ತು ರುಲ್ಕ ಎಲೆಕ್ಟ್ರಿಕಲ್ಸ್ ಸಂಸ್ಥೆಗಳ ಐಪಿಒ ಮೇ 21 ಮಂಗಳವಾರ ಮುಕ್ತಾಯಗೊಳ್ಳಲಿದೆ.

ಮುಂದಿನ ವಾರ ಮೂರು ಐಪಿಒಗಳಿವೆ. ಮೇ 22ರಿಂದ 27ರವರೆಗೆ ಆವ್​ಫಿಸ್ ಸ್ಪೇಸ್ ಸಲ್ಯೂಶನ್ಸ್; ಮೇ 24ರಿಂದ 28ರವರೆಗೆ ಜಿಎಸ್​ಎಂ ಫಾಯಿಲ್ಸ್; ಮೇ 27ರಿಂದ 29ರವರೆಗೆ ವಿಲಾಸ್ ಟ್ರಾನ್ಸ್​ಕೋರ್​ನ ಐಪಿಒಗಳು ತೆರೆದಿರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ