ಮುಂಬೈ, ಮೇ 1: ಇಂದು ಕಾರ್ಮಿಕರ ದಿನ ಹಾಗು ಮಹಾರಾಷ್ಟ್ರ ದಿನ. ಷೇರು ಮಾರುಕಟ್ಟೆಗೆ ಇಂದು ಬುಧವಾರ ರಜೆ ಇದೆ. ಮಹಾರಾಷ್ಟ್ರ ದಿನದ (Maharashtra Day) ಹಿನ್ನೆಲೆಯಲ್ಲಿ ಷೇರು ವಿನಿಮಯ ಕೇಂದ್ರಗಳು (stock exchanges) ಇಂದು ಬಂದ್ ಆಗಿರುತ್ತದೆ. ಇಂದು ಷೇರು ವಹಿವಾಟು ನಡೆಯುವುದಿಲ್ಲ. ಬಿಎಸ್ಇ ಮತ್ತು ಎನ್ಎಸ್ಇ ಭಾರತದಲ್ಲಿರುವ ಎರಡು ಷೇರು ವಿನಿಮಯ ಕೇಂದ್ರಗಳು. ಇವು ಬಿಡುಗಡೆ ಮಾಡಿದ ರಜಾ ದಿನಗಳ ಪಟ್ಟಿಯಲ್ಲಿ ಮೇ 1 ಇದೆ. ಆದರೆ, ಕಮಾಡಿಟಿ ಎಕ್ಸ್ಚೇಂಜ್ ಅಥವಾ ಸರಕು ವಿನಿಮಯ ಕೇಂದ್ರವಾದ ಎಂಸಿಎಕ್ಸ್ನಲ್ಲಿ ಅರ್ಧದಿನ ಮಾತ್ರ ಚಟುವಟಿಕೆ ಇರುತ್ತದೆ. ಎಂಸಿಎಕ್ಸ್ನಲ್ಲಿ 9 ಗಂಟೆಗೆ ಆರಂಭವಾಗುವ ಬೆಳಗಿನ ಸೆಷನ್ ಇರುವುದಿಲ್ಲ. ಸಂಜೆ 5ಕ್ಕೆ ಇಲ್ಲಿ ವ್ಯಾಪಾರ ಶುರುವಾಗುತ್ತದೆ. ಆದರೆ, ಇಂದು ಟ್ರೇಡ್ ಸೆಟಲ್ಮೆಂಟ್ ಇರುವುದಿಲ್ಲ.
ಷೇರು ಮಾರುಕಟ್ಟೆಗೆ ಒಂದು ವಾರದಲ್ಲಿ ಶನಿವಾರ ಮತ್ತು ಭಾನುವಾರ ಎರಡು ರೆಗ್ಯುಲರ್ ರಜಾ ದಿನಗಳಿವೆ. ಇದರ ಜೊತೆಗೆ ಬೇರೆ ಬೇರೆ ಕೆಲ ದಿನಗಳಲ್ಲಿ ರಜೆ ಇರುತ್ತದೆ. ಮೇ 1ರಂದು ಮಹಾರಾಷ್ಟ್ರ ದಿನವಾಗಿ ರಜೆ ಇದೆ. ಮೇ 20ರಂದು ಮುಂಬೈನಲ್ಲಿ ಲೋಕಸಭಾ ಚುನಾವಣೆ ಇರುವುದರಿಂದ ಅಂದು ರಜೆ ಇರುತ್ತದೆ. ಷೇರು ವಿನಿಮಯ ಕೇಂದ್ರಗಳಾದ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಮುಂಬೈನಲ್ಲಿ ಇವೆ. ಹೀಗಾಗಿ, ಷೇರು ಮಾರುಕಟ್ಟೆಯ ರಜಾ ದಿನಗಳಿಗೂ ಮಹಾರಾಷ್ಟ್ರ ರಾಜ್ಯದ ರಜಾ ದಿನಗಳಿಗೂ ನಂಟಿದೆ.
ಇದನ್ನೂ ಓದಿ: ಮೇ ತಿಂಗಳಲ್ಲಿ ಬ್ಯಾಂಕುಗಳಿಗೆ 14 ದಿನ ರಜೆ; ಕಾರ್ಮಿಕರ ದಿನ, ಬಸವ ಜಯಂತಿ ಇತ್ಯಾದಿ ರಜಾ ದಿನಗಳು; ಇಲ್ಲಿದೆ ಪಟ್ಟಿ
ಈ ವರ್ಷ, ಅಂದರೆ 2024ರಲ್ಲಿ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ 15 ದಿನ ಷೇರುಪೇಟೆಗೆ ರಜೆ ಇರುತ್ತದೆ. ಮೇ ತಿಂಗಳಿಂದ 6 ರಜಾ ದಿನಗಳಿವೆ.
ನಿನ್ನೆ ಷೇರು ಮಾರುಕಟ್ಟೆ ವಿಚಿತ್ರವಾಗಿ ವರ್ತಸಿತ್ತು. ಮಂಗಳವಾರ ಇಂಟ್ರಾ ಡೇ ಟ್ರೇಡಿಂಗ್ನಲ್ಲಿ ನಿಫ್ಟಿ 50 ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿ ಬಳಿಕ ಕುಸಿಯಿತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ