Share Market News: ಷೇರು ಮಾರುಕಟ್ಟೆಯಲ್ಲಿ ‘ಕರಡಿ ಹಿಡಿತ’; 1500ಕ್ಕೂ ಹೆಚ್ಚು ಪಾಯಿಂಟ್ಸ್​ ಕುಸಿದ ಸೆನ್ಸೆಕ್ಸ್

| Updated By: Srinivas Mata

Updated on: Nov 22, 2021 | 3:19 PM

Sensex Updates: ನವೆಂಬರ್​ 22ನೇ ತಾರೀಕಿನ ಸೋಮವಾರದಂದು ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಭಾರೀ ಇಳಿಕೆ ಕಂಡಿವೆ.

Share Market News: ಷೇರು ಮಾರುಕಟ್ಟೆಯಲ್ಲಿ ಕರಡಿ ಹಿಡಿತ; 1500ಕ್ಕೂ ಹೆಚ್ಚು ಪಾಯಿಂಟ್ಸ್​ ಕುಸಿದ ಸೆನ್ಸೆಕ್ಸ್
ಸಾಂದರ್ಭಿಕ ಚಿತ್ರ
Follow us on

ಭಾರತದ ಷೇರು ಮಾರುಕಟ್ಟೆ ಹೂಡಿಕೆದಾರರು ತತ್ತರಿಸುವಂತೆ ನವೆಂಬರ್​ 22ನೇ ತಾರೀಕ ಸೋಮವಾರದಂದು ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಭಾರೀ ಕುಸಿತ ಕಂಡಿವೆ. ಈ ವರದಿ ಆಗುವ ಹೊತ್ತಿಗೆ ಬಿಎಸ್​ಇ ಸೆನ್ಸೆಕ್ಸ್ 1331.72 ಪಾಯಿಂಟ್ಸ್, ನಿಫ್ಟಿ 396.65 ಪಾಯಿಂಟ್ಸ್ ಹಾಗೂ ನಿಫ್ಟಿ ಬ್ಯಾಂಕ್ 1016 ಪಾಯಿಂಟ್ಸ್ ನೆಲ ಕಚ್ಚಿದ್ದವು. ಹಿಂದಿನ ಸೆಷನ್​ನಲ್ಲಿ 59,636.01 ಪಾಯಿಂಟ್ಸ್​ನೊಂದಿಗೆ ವಹಿವಾಟು ಮುಗಿಸಿದ್ದ ಸೆನ್ಸೆಕ್ಸ್, ಈ ದಿನದ ವ್ಯವಹಾರನ್ನು ಶುರು ಮಾಡಿದ್ದು 59,710.48 ಪಾಯಿಂಟ್ಸ್​ನೊಂದಿಗೆ. ಇನ್ನು ದಿನದ ಗರಿಷ್ಠ ಎಂದು 59,778.37 ಪಾಯಿಂಟ್ಸ್​ ತಲುಪಿದ್ದು ಬಿಟ್ಟರೆ, ಕನಿಷ್ಠ ಮಟ್ಟವಾದ 58,011.92, ಅಂದರೆ 1600 ಪಾಯಿಂಟ್ಸ್​ನಷ್ಟು ನೆಲ ಕಚ್ಚಿತು. ಇತ್ತ ನಿಫ್ಟಿ ಹಿಂದಿನ ಸೆಷನ್​ ಅನ್ನು 17,764.80 ಪಾಯಿಂಟ್ಸ್​ನೊಂದಿಗೆ ಮುಕ್ತಾಯಗೊಳಿಸಿದ್ದು, ದಿನದ ಆರಂಭವನ್ನು 17,796.25 ಪಾಯಿಂಟ್ಸ್​ನೊಂದಿಗೆ ಮಾಡಿತು. ದಿನದ ಗರಿಷ್ಠ 17,796.25 ಪಾಯಿಂಟ್ಸ್​ ಆಗಿದ್ದು, ಕನಿಷ್ಠ ಎಂದು 17,280.45 ಪಾಯಿಂಟ್ಸ್​ ಮುಟ್ಟಿತ್ತು.

ಜಾಗತಿಕವಾಗಿಯೇ ಮಾರುಕಟ್ಟೆ ದುರ್ಬಲವಾಗಿರುವುದು ದೇಶೀ ಮಾರುಕಟ್ಟೆ ಮೇಲೆ ಪ್ರಭಾವ ಬೀರುತ್ತಿದೆ. ಇನ್ನು ಏಷ್ಯನ್ ಷೇರು ಮಾರುಕಟ್ಟೆಗಳು ಮಿಶ್ರವಾಗಿದ್ದವು. ನ.22ರಂದು ಚೀನಾದ ರೀಟೇಲ್ ಮಾರಾಟದ ಡೇಟಾ ಬಿಡುಗಡೆ ಆಗಿದ್ದು, ಅದು ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಒಂದು ಕಡೆ ಕೈಗಾರಿಕೆ ಉತ್ಪಾದನೆ ಗಟ್ಟಿಯಾಗಿದ್ದರೂ ಜಾಗತಿಕ ಮಟ್ಟದಲ್ಲಿನ ಹಣದುಬ್ಬರವು ಚಿನ್ನ ಮೂರು ತಿಂಗಳ ಗರಿಷ್ಠ ಮಟ್ಟ ತಲುಪುವುದಕ್ಕೆ ಸಹಾಯ ಮಾಡಿತು. ಇನ್ನು ದೇಶದ ವಿದೇಶೀ ವಿನಿಮಯ ಮೀಸಲು ಪ್ರಮಾಣ ಕೂಡ ಕಡಿಮೆ ಆಗಿರುವುದು ಪ್ರಭಾವ ಬೀರಿದೆ. ಮುಖ್ಯವಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳು ರಿಯಾಲ್ಟಿ ವಲಯ ತಲಾ ಶೇಕಡಾ 3ರಿಂದ 4ರಷ್ಟು ಇಳಿದಿವೆ.

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಬಜಾಜ್ ಫೈನಾನ್ಸ್ ಶೇ -5.65
ಒಎನ್​ಜಿಸಿ ಶೇ -5.12
ಬಜಾಜ್​ ಫಿನ್​ಸರ್ವ್​ ಶೇ -4.75
ಟಾಟಾ ಮೋಟಾರ್ಸ್ ಶೇ -4.67
ರಿಲಯನ್ಸ್​ ಶೇ -4.48

ಪೇಟಿಎಂ ಷೇರಿನ ನಷ್ಟ ಸೋಮವಾರವೂ ಮುಂದುವರಿದಿದೆ. ಹಿಂದಿನ ದಿನ 1560 ರೂಪಾಯಿಗೆ ವಹಿವಾಟು ಮುಗಿಸಿದ್ದ ಪೇಟಿಎಂ, ಇಂದು ವ್ಯವಹಾರ ಶುರು ಮಾಡಿದ್ದು 1509 ರೂಪಾಯಿಗೆ. ದಿನದ ಗರಿಷ್ಠ 1519 ರೂಪಾಯಿ ತಲುಪಿದರೆ, ಕನಿಷ್ಠ ಮಟ್ಟ 1271 ರೂಪಾಯಿ ತಲುಪಿತು. ಈ ವರದಿ ಆಗುವ ಹೊತ್ತಿಗೆ 1357 ರೂಪಾಯಿಗೆ ವಹಿವಾಟು ನಡೆಸುತ್ತಿತ್ತು. ಈ ಷೇರಿಗೆ ನಿಗದಿ ಮಾಡಿದ್ದ ಐಪಿಒ ದರ ತಲಾ 2150 ರೂಪಾಯಿ.

ಇದನ್ನೂ ಓದಿ: ಒಂದೇ ದಿನಕ್ಕೆ ಹೂಡಿಕೆದಾರರು ಬರುವುದಿಲ್ಲ: ಷೇರುಪೇಟೆಯಲ್ಲಿ ಕುಸಿತದ ನಂತರ ಪೇಟಿಎಂ ಕಾರ್ಯತಂತ್ರ ವಿವರಿಸಿದ ಸಿಇಒ ವಿಜಯ್ ಶೇಖರ್ ಶರ್ಮಾ