Sensex Stocks: ಷೇರುಪೇಟೆಯಲ್ಲಿ ಒಂದೇ ದಿನ ಹೂಡಿಕೆದಾರರ 4.29 ಲಕ್ಷ ಕೋಟಿ ರೂ. ಉಡೀಸ್; ಸೆನ್ಸೆಕ್ಸ್ 950 ಪಾಯಿಂಟ್ಸ್ ಕುಸಿತ

| Updated By: Srinivas Mata

Updated on: Dec 06, 2021 | 5:03 PM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ 950 ಪಾಯಿಂಟ್ಸ್, ನಿಫ್ಟಿ 284 ಪಾಯಿಂಟ್ಸ್ ಕುಸಿತವಾಗಿದೆ. ಇಂದಿನ ವಹಿವಾಟಿನಲ್ಲಿ ಕುಸಿತ ಕಂಡ ಪ್ರಮುಖ ಷೇರುಗಳ ವಿವರ ಇಲ್ಲಿದೆ.

Sensex Stocks: ಷೇರುಪೇಟೆಯಲ್ಲಿ ಒಂದೇ ದಿನ ಹೂಡಿಕೆದಾರರ 4.29 ಲಕ್ಷ ಕೋಟಿ ರೂ. ಉಡೀಸ್; ಸೆನ್ಸೆಕ್ಸ್ 950 ಪಾಯಿಂಟ್ಸ್ ಕುಸಿತ
ಸಾಂದರ್ಭಿಕ ಚಿತ್ರ
Follow us on

ಕೊರೊನಾದ ಒಮಿಕ್ರಾನ್ ವೇರಿಯಂಟ್​ ವ್ಯಾಪಿಸುತ್ತಿರುವ ಬಗ್ಗೆ ಹೆಚ್ಚುತ್ತಿರುವ ಆತಂಕದ ಮಧ್ಯೆ ಡಿಸೆಂಬರ್ 6ನೇ ತಾರೀಕಿನ ಸೋಮವಾರದಂದು ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳ ಪೈಕಿ ಎನ್​ಎಸ್​ಇ ನಿಫ್ಟಿ 17,000 ಪಾಯಿಂಟ್ಸ್​ಗಳಿಗಿಂತ ಕೆಳಗೆ ದಿನಾಂತ್ಯದ ವ್ಯವಹಾರವನ್ನು ಮುಗಿಸಿದೆ. ಆ ಮೂಲಕ ಷೇರು ಮಾರುಕಟ್ಟೆಯು ಸತತ ಎರಡನೇ ದಿನವೂ ಇಳಿಕೆ ದಾಖಲಿಸಿದೆ. ದಿನಾಂತ್ಯಕ್ಕೆ ಬಿಎಸ್​ಇ ಸೆನ್ಸೆಕ್ಸ್ 949.32 ಪಾಯಿಂಟ್ ಅಥವಾ ಶೇ 1.65ರಷ್ಟು ಇಳಿಕೆಯಾಗಿ 56,747.14 ಪಾಯಿಂಟ್ಸ್​ನಲ್ಲಿ ವಹಿವಾಟು ಚುಕ್ತಾ ಮಾಡಿದೆ. ಇನ್ನು ಎನ್​ಎಸ್​ಇ ನಿಫ್ಟಿ 284.40 ಪಾಯಿಂಟ್ ಅಥವಾ ಶೇ 1.65ರಷ್ಟು ಕುಸಿದು, 16,912.30 ಪಾಯಿಂಟ್ಸ್​ಗೆ ತಲುಪಿದೆ. ಇಂದಿನ ವಹಿವಾಟಿನಲ್ಲಿ ಸುಮಾರು 1340 ಕಂಪೆನಿಗಳ ಷೇರು ಮೇಲಕ್ಕೆ ಏರಿದರೆ, 1948 ಕಂಪೆನಿಗಳ ಷೇರು ಇಳಿಕೆ ಕಂಡಿವೆ. 165 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಯುಪಿಎಲ್ ಹೊರತುಪಡಿಸಿ ನಿಫ್ಟಿ- 50 ಅಡಿಯಲ್ಲಿನ ಇತರ ಎಲ್ಲ ಷೇರುಗಳು ಇಳಿಕೆ ದಾಖಲಿಸಿದವು. ವಲಯವಾರು ಗಮನಿಸುವುದಾದರೆ, ಮಾಹಿತಿ ತಂತ್ರಜ್ಞಾನ ಸೂಚ್ಯಂಕವು ಶೇಕಡಾ 2 ಕ್ಕಿಂತ ಹೆಚ್ಚು ಕುಸಿದಿದೆ, ಆದರೆ ಇತರ ವಲಯಗಳು ತಲಾ ಶೇಕಡಾ 1ರಷ್ಟು ಕಳೆದುಕೊಂಡಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ ಶೇ 1ರಷ್ಟು ಕುಸಿದವು. ಷೇರು ಮಾರುಕಟ್ಟೆಯ ಹೂಡಿಕೆದಾರರ ಸಂಪತ್ತು 4.29 ಲಕ್ಷ ಕೋಟಿ ರೂಪಾಯಿ ಕೊಚ್ಚಿಕೊಂಡು ಹೋಯಿತು.

ಎನ್​ಎಸ್​ಇಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಯುಪಿಎಲ್​ ಶೇ 0.53

ಎನ್​ಎಸ್​ಇಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಕೋಲ್ ಇಂಡಿಯಾ ಶೇ -7.01
ಇಂಡಸ್​ಇಂಡ್​ ಬ್ಯಾಂಕ್ ಶೇ -3.73
ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಶೇ -3.45
ಬಜಾಜ್​ ಫಿನ್​ಸರ್ವ್ ಶೇ -3.40
ಎಚ್​ಸಿಎಲ್​ ಟೆಕ್ ಶೇ -2.98

ಇದನ್ನೂ ಓದಿ: T+1 Settlement Cycle: ಷೇರುಪೇಟೆಯಲ್ಲಿ T+1 ತೀರುವಳಿ ಫೆಬ್ರವರಿ 25ರಿಂದ ಹಂತ ಹಂತವಾಗಿ ಪರಿಚಯ

Published On - 4:58 pm, Mon, 6 December 21