ನವದೆಹಲಿ, ಡಿಸೆಂಬರ್ 4: ಕೆಲವಾರು ತಿಂಗಳಿಂದ ಆಗುತ್ತಿರುವ ಅಲುಗಾಟದ ನಡುವೆಯೂ ಹಲವು ಸ್ಟಾಕ್ಗಳು ಭರ್ಜರಿಯಾಗಿ ವಹಿವಾಟು ಕಾಣುತ್ತಿವೆ. ವರದಿಯೊಂದರ ಪ್ರಕಾರ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ನಿನ್ನೆ ಮಂಗಳವಾರದ ಇಂಟ್ರಾಡೇ ಟ್ರೇಡಿಂಗ್ನಲ್ಲಿ ಬರೋಬ್ಬರಿ 251 ಷೇರುಗಳು ಒಂದು ವರ್ಷದ ಗರಿಷ್ಠ ಬೆಲೆ ಮಟ್ಟ ಪಡೆದಿವೆ. ಎಚ್ಡಿಎಫ್ಸಿ ಬ್ಯಾಂಕ್, ಇನ್ಫೋ ಎಡ್ಜ್, ಪರ್ಸಿಸ್ಟೆಂಟ್ ಸಿಸ್ಟಮ್ಸ್, ಡಿಕ್ಸನ್ ಟೆಕ್ನಾಲಜೀಸ್, ಓಬೇರಾಯ್ ರಿಯಾಲ್ಟಿ, ಪಿಬಿ ಫಿನ್ಟೆಕ್, ಕ್ಯಾಪ್ಲಿನ್ ಪಾಯಿಂಟ್ ಲ್ಯಾಬೊರೇಟರೀಸ್, ಕೇಯ್ನ್ಸ್ ಟೆಕ್ನಾಲಜಿ, ದೀಪಕ್ ಫರ್ಟಿಲೈಸರ್ಸ್ ಮೊದಲಾದ ಷೇರುಗಳು ನಿನ್ನೆ ಗರಿಷ್ಠ ಬೆಲೆ ಮಟ್ಟ ಪಡೆದಿರುವ ಸಾಲಿನಲ್ಲಿವೆ.
ಅದಅನಿ ಪೋರ್ಟ್ಸ್, ಎನ್ಟಿಪಿಸಿ, ಎಸ್ಬಿಐ ಷೇರುಗಳು ನಿನ್ನೆ ಅತಿಹೆಚ್ಚು ಏರಿಕೆ ಕಂಡ ಸ್ಟಾಕ್ಗಳಾಗಿವೆ. ಭಾರ್ತಿ ಏರ್ಟೆಲ್, ಐಟಿಸಿ, ಸನ್ ಫಾರ್ಮಾ ಅತಿ ಹೆಚ್ಚು ಬೆಲೆ ಕಳೆದುಕೊಂಡ ಷೇರುಗಳಾಗಿವೆ.
ಮಂಗಳವಾರ ಬಿಎಸ್ಇ ಸೆನ್ಸೆಕ್ಸ್ ಶೇ. 0.74ರಷ್ಟು ಏರಿಕೆ ಕಂಡು 80,845.75 ಅಂಕಗಳ ಮಟ್ಟ ಮುಟ್ಟಿತು. ಸೆನ್ಸೆಕ್ಸ್ನ 30 ಷೇರುಗಳಲ್ಲಿ 25 ಷೇರುಗಳು ಹಸಿರು ಬಣ್ಣದಲ್ಲಿದ್ದವು. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿ50 ಸೂಚ್ಯಂಕ ಶೇ. 0.75ರಷ್ಟು ಏರಿಕೆ ಕಂಡಿತು.
ಇದನ್ನೂ ಓದಿ: ಪಿಎಂ ಗ್ರಾಮ್ ಸಡಕ್ ಸ್ಕೀಮ್ ಅಡಿ ಜಮ್ಮು ಕಾಶ್ಮೀರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಯೋಜನೆಗಳು ಪೂರ್ಣ
ಇವತ್ತು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಎರಡೂ ಕೂಡ ಸಾಕಷ್ಟು ಏರಿಳಿತಗಳನ್ನು ಕಾಣುತ್ತಿವೆ. ಹೆಚ್ಚಿನ ಸೂಚ್ಯಂಕಗಳು ಅಲ್ಪ ವ್ಯತ್ಯಯ ಕಾಣುತ್ತಿವೆ. ಕೆಲ ಸೂಚ್ಯಂಕಗಳು ಅಲ್ಪ ಏರಿಕೆ ಕಂಡರೆ, ಮತ್ತೆ ಕೆಲವು ತುಸು ಇಳಿಕೆ ಆಗಿವೆ. ನಿಫ್ಟಿ50 ಸದ್ಯ ಮಧ್ಯಾಹ್ನ 12ಗಂಟೆಯ ವೇಳೆ 24,453 ಅಂಕಗಳ ಮಟ್ಟದಲ್ಲಿತ್ತು. ಬುಧವಾರ ಸುಮಾರು 4 ಅಂಕಗಳಷ್ಟು ಮಾತ್ರ ಕಡಿಮೆ ಆಗಿದೆ. ನಿಫ್ಟಿ ಬ್ಯಾಂಕ್, ಮಿಡ್ಕ್ಯಾಪ್ 100, ನೆಕ್ಸ್ಟ್ 50, ನಿಫ್ಟಿ 100, ನಿಫ್ಟಿ 200 ಇತ್ಯಾದಿ ಹಲವು ಸೂಚ್ಯಂಕಗಳು ಹಸಿರು ಬಣ್ಣದಲ್ಲಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ