ಲಾಭದ ಹಳಿಗೆ ಬರಲು ಸ್ವಿಗ್ಗಿ ಹರಸಾಹಸ; ಇನ್ಸ್​ಟಾಮಾರ್ಟ್ ಡೆಲಿವರಿ ಫೀ ಹೆಚ್ಚಳಕ್ಕೆ ಯೋಜನೆ

Swiggy Instamart delivery fees: ಸ್ವಿಗ್ಗಿ ಸಂಸ್ಥೆಯ ಕ್ವಿಕ್ ಕಾಮರ್ಸ್ ಅಂಗವಾಗಿರುವ ಇನ್ಸ್​ಟಾಮಾರ್ಟ್​ನಲ್ಲಿ ಡೆಲಿವರಿ ಫೀ ಹೆಚ್ಚಿಸಲು ಯೋಜಿಸಲಾಗುತ್ತಿದೆ. ಸ್ವಿಗ್ಗಿ ಒನ್ ಸಬ್​ಸ್ಕ್ರೈಬರ್​ಗಳಿಗೆ ಡೆಲಿವರಿ ಫೀಯಿಂದ ವಿನಾಯಿತಿ ಇರಲಿದೆ. ಉಳಿದವರಿಗೆ ಹೆಚ್ಚಿನ ಶುಲ್ಕ ವಿಧಿಸಬಹುದು. ಜೊಮಾಟೊದ ಬ್ಲಿಂಕಿಟ್​ನಲ್ಲೂ ಹೆಚ್ಚಿನ ಡೆಲಿವರಿ ಶುಲ್ಕವಿದ್ದು, ಅದೇ ಮಾದರಿಯಲ್ಲಿ ಇನ್ಸ್​ಟಾಮಾರ್ಟ್​ನಲ್ಲೂ ಶುಲ್ಕ ಹೆಚ್ಚಿಸಬಹುದು.

ಲಾಭದ ಹಳಿಗೆ ಬರಲು ಸ್ವಿಗ್ಗಿ ಹರಸಾಹಸ; ಇನ್ಸ್​ಟಾಮಾರ್ಟ್ ಡೆಲಿವರಿ ಫೀ ಹೆಚ್ಚಳಕ್ಕೆ ಯೋಜನೆ
ಸ್ವಿಗ್ಗಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 04, 2024 | 1:39 PM

ನವದೆಹಲಿ, ಡಿಸೆಂಬರ್ 4: ಫೂಡ್ ಟೆಕ್ ಸಂಸ್ಥೆಯಾದ ಸ್ವಿಗ್ಗಿ ತನ್ನ ಇನ್ಸ್​ಟಾಮಾರ್ಟ್ ವಿಭಾಗದಲ್ಲಿ ಡೆಲಿವರಿ ಫೀ ಹೆಚ್ಚಿಸಲು ಯೋಜಿಸುತ್ತಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇನ್ಸ್​ಟಾಮಾರ್ಟ್ ನಿಮಿಷಗಳಲ್ಲಿ ದಿನಸಿ ವಸ್ತುಗಳನ್ನು ಮನೆಗೆ ತಲುಪಿಸುವ ಸೇವೆ ನೀಡುತ್ತದೆ. ಇದರ ಕಾರ್ಯಾಚರಣೆ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಡೆಲಿವರಿ ಶುಲ್ಕವನ್ನು ಹೆಚ್ಚಿಸಿ ಆದಾಯ ಸರಿದೂಗಿಸುವ ಆಲೋಚನೆಯಲ್ಲಿ ಸ್ವಿಗ್ಗಿ ಇದೆ. ಈ ಬಗ್ಗೆ ಸ್ವಿಗ್ಗಿಯ ಸಿಎಫ್​ಒ ಆಗಿರುವ ರಾಹುಲ್ ಬೋತ್ರಾ ಅವರು ಸುಳಿವು ನೀಡಿದ್ದಾರೆ.

ಸ್ವಿಗ್ಗಿಯ ಲಾಭ ನಿರೀಕ್ಷಿತ ಮಟ್ಟದಲ್ಲಿಲ್ಲ. ಜೊಮಾಟೋ ಜೊತೆಗಿನ ರೇಸ್​ನಲ್ಲಿ ತುಸು ಹಿಂದೆ ಬಿದ್ದಿದೆ. ಫೂಡ್ ಡೆಲಿವರಿ ಮಾತ್ರವಲ್ಲ, ಕ್ವಿಕ್ ಕಾಮರ್ಸ್ ಕ್ಷೇತ್ರದಲ್ಲೂ ಜೊಮಾಟೊ ಮುಂಚೂಣಿಯಲ್ಲಿದೆ. ಜೊಮಾಟೋದ ಬ್ಲಿಂಕಿಟ್ ಸದ್ಯ ನಂಬರ್ ಒನ್ ಕ್ವಿಕ್ ಕಾಮರ್ಸ್ ಕಂಪನಿಯಾಗಿದೆ. ಬ್ಲಿಂಕಿಟ್​ನಲ್ಲಿ ಪ್ರತಿಯೊಂದು ಆರ್ಡರ್​ಗೂ ಡೆಲಿವರಿ ಫೀ ಇರುತ್ತದೆ. ಅದೇ ರೀತಿಯಲ್ಲೂ ಸ್ವಿಗ್ಗಿಯ ಇನ್ಸ್​ಟಾಮಾರ್ಟ್​ನಲ್ಲಿ ಡೆಲಿವರಿ ಫೀ ವಿಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಎರಡು ದಿನ ವೀಕಾಫ್ ಇಲ್ಲ; ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಬ್ಯಾಂಕ್ ಯೂನಿಯನ್​ಗಳಿಂದ ಪ್ಲಾನ್

‘ಡೆಲಿವರಿ ಫೀ ವಿಚಾರಕ್ಕೆ ಬಂದರೆ ಒಂದಷ್ಟು ಸಬ್ಸಿಡಿಗಳು ಅಸ್ತಿತ್ವದಲ್ಲಿವೆ. ಸ್ವಿಗ್ಗಿ ಒನ್ ಸಬ್​ಸ್ಕ್ರೈಬರ್​ಗಳಿಗೆ ಡೆಲಿವರಿ ಫೀಯಿಂದ ವಿನಾಯಿತಿ ಇದೆ. ಇನ್ಸ್​ಟಾಮಾರ್ಟ್​ಗೆ ಗ್ರಾಹಕರನ್ನು ಸೆಳೆಯಲೂ ಡೆಲಿವರಿ ಫೀ ವಿನಾಯಿತಿ ಕೊಡಲಾಗುತ್ತಿದೆ. ಈ ಪ್ಲಾಟ್​ಫಾರ್ಮ್ ಬಳಕೆ ರೂಢಿಯಾಗಲಿ ಎನ್ನುವ ಉದ್ದೇಶದಿಂದ ಈ ವಿನಾಯಿತಿ ನೀಡಲಾಗುತ್ತಿದೆ. ಹೋಗುತ್ತಾ ಹೋಗುತ್ತಾ ಡೆಲಿವರಿ ಫೀ ಹೆಚ್ಚಿಸಬೇಕಾಗಬಹುದು,’ ಎಂದು ಸ್ವಿಗ್ಗಿಯ ಚೀಫ್ ಫೈನಾನ್ಷಿಯಲ್ ಆಫೀಸರ್ ಹೇಳಿದ್ದಾರೆ.

ಸ್ವಿಗ್ಗಿಯ ತ್ರೈಮಾಸಿಕ ವರದಿ ಬಿಡುಗಡೆ ಆಗಿದ್ದು, ಅದರ ನಷ್ಟದ ಪ್ರಮಾಣ ತುಸು ಕಡಿಮೆಗೊಂಡಿದೆ. ಜುಲೈನಿಂದ ಸೆಪ್ಟೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ಸ್ವಿಗ್ಗಿ 3,601 ಕೋಟಿ ರೂ ಆದಾಯ ತೋರಿದೆ. ಕಳದ ವರ್ಷದಕ್ಕೆ ಹೋಲಿಸಿದರೆ ಶೇ. 30ರಷ್ಟು ಆದಾಯ ಹೆಚ್ಚಳವಾಗಿದೆ.

ಇನ್ನು, ಸ್ವಿಗ್ಗಿಗೆ ಲಾಭ ಸಿಕ್ಕಿಲ್ಲ. ಆದರೆ, ನಷ್ಟದ ಪ್ರಮಾಣ ಕಡಿಮೆ ಆಗಿದೆ. ಒಂದು ವರ್ಷದ ಹಿಂದೆ ಅದು 657 ಕೋಟಿ ರೂನಷ್ಟು ನಿವ್ವಳ ನಷ್ಟ ಕಂಡಿತ್ತು. ಈಗ ಅದು 625.5 ಕೋಟಿ ರೂಗೆ ಇಳಿದಿದೆ. ನಿವ್ವಳ ನಷ್ಟ ಶೇ. 5ರಷ್ಟು ಕಡಿಮೆ ಆಗಿದೆ. ಇದು ಸಕಾರಾತ್ಮಕ ಬೆಳವಣಿಗೆ.

ಇದನ್ನೂ ಓದಿ: ಒಂದು ವರ್ಷದ ಗರಿಷ್ಠ ಮಟ್ಟಕ್ಕೆ 250ಕ್ಕೂ ಹೆಚ್ಚು ಷೇರುಗಳ ಬೆಲೆ; ಎಚ್​ಡಿಎಫ್​ಸಿ, ಡಿಕ್ಸಾನ್, ಓಬೇರಾಯ್ ಇತ್ಯಾದಿ ಸ್ಟಾಕ್ಸ್​ಗೆ ಹೆಚ್ಚಿದ ಬೇಡಿಕೆ

ಇತ್ತೀಚೆಗಷ್ಟೇ ಷೇರು ಮಾರುಕಟ್ಟೆಗೆ ಬಂದಿರುವ ಸ್ವಿಗ್ಗಿ ತನ್ನ ನಷ್ಟದ ಹಾದಿಯಿಂದ ಲಾಭದ ಹಾದಿಗೆ ಹೊರಳಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಅದರಲ್ಲಿ ಡೆಲಿವರಿ ಫೀ ಹೆಚ್ಚಳದ ಕ್ರಮವೂ ಒಂದಾಗಿರಬಹುದು. ಒಂದೆರಡು ತಿಂಗಳ ಹಿಂದೆ ಅದು ಫೂಡ್ ಡೆಲಿವರಿಯ ಪ್ಲಾಟ್​ಫಾರ್ಮ್ ಶುಲ್ಕವನ್ನು ಎರಡು ಪಟ್ಟು ಹೆಚ್ಚಿಸಿತ್ತು. ಅದು ಸ್ವಿಗ್ಗಿಯ ನಷ್ಟದ ಪ್ರಮಾಣ ಕಡಿಮೆ ಮಾಡಲು ಸಹಾಯವಾಗಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ