AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ವರ್ಷದ ಗರಿಷ್ಠ ಮಟ್ಟಕ್ಕೆ 250ಕ್ಕೂ ಹೆಚ್ಚು ಷೇರುಗಳ ಬೆಲೆ; ಎಚ್​ಡಿಎಫ್​ಸಿ, ಡಿಕ್ಸಾನ್, ಓಬೇರಾಯ್ ಇತ್ಯಾದಿ ಸ್ಟಾಕ್ಸ್​ಗೆ ಹೆಚ್ಚಿದ ಬೇಡಿಕೆ

Stock Market updates: ಭಾರತದ ಷೇರು ಮಾರುಕಟ್ಟೆ ಡಿಸೆಂಬರ್ 3, ನಿನ್ನೆ ಸಕಾರಾತ್ಮಕ ದಿನವಾಗಿತ್ತು. ಬಿಎಸ್​ಇನಲ್ಲಿ 251 ಷೇರುಗಳು ಒಂದು ವರ್ಷದ ಗರಿಷ್ಠ ಬೆಲೆ ಮಟ್ಟ ಪಡೆದಿವೆ. ನಿನ್ನೆ ಬಹುತೇಕ ಎಲ್ಲಾ ಸೂಚ್ಯಂಕಗಳು ಪಾಸಿಟಿವ್ ಆಗಿದ್ದವು. ಆದರೆ, ಇವತ್ತು ಬಿಎಸ್​ಇ ಮತ್ತು ಎನ್​ಎಸ್​ಇ ಎರಡರಲ್ಲೂ ಏರಿಳಿತಗಳು ಹೆಚ್ಚಿವೆ.

ಒಂದು ವರ್ಷದ ಗರಿಷ್ಠ ಮಟ್ಟಕ್ಕೆ 250ಕ್ಕೂ ಹೆಚ್ಚು ಷೇರುಗಳ ಬೆಲೆ; ಎಚ್​ಡಿಎಫ್​ಸಿ, ಡಿಕ್ಸಾನ್, ಓಬೇರಾಯ್ ಇತ್ಯಾದಿ ಸ್ಟಾಕ್ಸ್​ಗೆ ಹೆಚ್ಚಿದ ಬೇಡಿಕೆ
ಸ್ಟಾಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 04, 2024 | 12:21 PM

Share

ನವದೆಹಲಿ, ಡಿಸೆಂಬರ್ 4: ಕೆಲವಾರು ತಿಂಗಳಿಂದ ಆಗುತ್ತಿರುವ ಅಲುಗಾಟದ ನಡುವೆಯೂ ಹಲವು ಸ್ಟಾಕ್​ಗಳು ಭರ್ಜರಿಯಾಗಿ ವಹಿವಾಟು ಕಾಣುತ್ತಿವೆ. ವರದಿಯೊಂದರ ಪ್ರಕಾರ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ನಿನ್ನೆ ಮಂಗಳವಾರದ ಇಂಟ್ರಾಡೇ ಟ್ರೇಡಿಂಗ್​ನಲ್ಲಿ ಬರೋಬ್ಬರಿ 251 ಷೇರುಗಳು ಒಂದು ವರ್ಷದ ಗರಿಷ್ಠ ಬೆಲೆ ಮಟ್ಟ ಪಡೆದಿವೆ. ಎಚ್​ಡಿಎಫ್​ಸಿ ಬ್ಯಾಂಕ್, ಇನ್ಫೋ ಎಡ್ಜ್, ಪರ್ಸಿಸ್ಟೆಂಟ್ ಸಿಸ್ಟಮ್ಸ್, ಡಿಕ್ಸನ್ ಟೆಕ್ನಾಲಜೀಸ್, ಓಬೇರಾಯ್ ರಿಯಾಲ್ಟಿ, ಪಿಬಿ ಫಿನ್​ಟೆಕ್, ಕ್ಯಾಪ್ಲಿನ್ ಪಾಯಿಂಟ್ ಲ್ಯಾಬೊರೇಟರೀಸ್, ಕೇಯ್ನ್ಸ್ ಟೆಕ್ನಾಲಜಿ, ದೀಪಕ್ ಫರ್ಟಿಲೈಸರ್ಸ್ ಮೊದಲಾದ ಷೇರುಗಳು ನಿನ್ನೆ ಗರಿಷ್ಠ ಬೆಲೆ ಮಟ್ಟ ಪಡೆದಿರುವ ಸಾಲಿನಲ್ಲಿವೆ.

ಅದಅನಿ ಪೋರ್ಟ್ಸ್, ಎನ್​ಟಿಪಿಸಿ, ಎಸ್​ಬಿಐ ಷೇರುಗಳು ನಿನ್ನೆ ಅತಿಹೆಚ್ಚು ಏರಿಕೆ ಕಂಡ ಸ್ಟಾಕ್​ಗಳಾಗಿವೆ. ಭಾರ್ತಿ ಏರ್ಟೆಲ್, ಐಟಿಸಿ, ಸನ್ ಫಾರ್ಮಾ ಅತಿ ಹೆಚ್ಚು ಬೆಲೆ ಕಳೆದುಕೊಂಡ ಷೇರುಗಳಾಗಿವೆ.

ಮಂಗಳವಾರ ಬಿಎಸ್​ಇ ಸೆನ್ಸೆಕ್ಸ್ ಶೇ. 0.74ರಷ್ಟು ಏರಿಕೆ ಕಂಡು 80,845.75 ಅಂಕಗಳ ಮಟ್ಟ ಮುಟ್ಟಿತು. ಸೆನ್ಸೆಕ್ಸ್​ನ 30 ಷೇರುಗಳಲ್ಲಿ 25 ಷೇರುಗಳು ಹಸಿರು ಬಣ್ಣದಲ್ಲಿದ್ದವು. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ನಿಫ್ಟಿ50 ಸೂಚ್ಯಂಕ ಶೇ. 0.75ರಷ್ಟು ಏರಿಕೆ ಕಂಡಿತು.

ಇದನ್ನೂ ಓದಿ: ಪಿಎಂ ಗ್ರಾಮ್ ಸಡಕ್ ಸ್ಕೀಮ್ ಅಡಿ ಜಮ್ಮು ಕಾಶ್ಮೀರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಯೋಜನೆಗಳು ಪೂರ್ಣ

ಇವತ್ತು ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಎರಡೂ ಕೂಡ ಸಾಕಷ್ಟು ಏರಿಳಿತಗಳನ್ನು ಕಾಣುತ್ತಿವೆ. ಹೆಚ್ಚಿನ ಸೂಚ್ಯಂಕಗಳು ಅಲ್ಪ ವ್ಯತ್ಯಯ ಕಾಣುತ್ತಿವೆ. ಕೆಲ ಸೂಚ್ಯಂಕಗಳು ಅಲ್ಪ ಏರಿಕೆ ಕಂಡರೆ, ಮತ್ತೆ ಕೆಲವು ತುಸು ಇಳಿಕೆ ಆಗಿವೆ. ನಿಫ್ಟಿ50 ಸದ್ಯ ಮಧ್ಯಾಹ್ನ 12ಗಂಟೆಯ ವೇಳೆ 24,453 ಅಂಕಗಳ ಮಟ್ಟದಲ್ಲಿತ್ತು. ಬುಧವಾರ ಸುಮಾರು 4 ಅಂಕಗಳಷ್ಟು ಮಾತ್ರ ಕಡಿಮೆ ಆಗಿದೆ. ನಿಫ್ಟಿ ಬ್ಯಾಂಕ್, ಮಿಡ್​ಕ್ಯಾಪ್ 100, ನೆಕ್ಸ್ಟ್ 50, ನಿಫ್ಟಿ 100, ನಿಫ್ಟಿ 200 ಇತ್ಯಾದಿ ಹಲವು ಸೂಚ್ಯಂಕಗಳು ಹಸಿರು ಬಣ್ಣದಲ್ಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್