Stock market: ದಿನದ ಕನಿಷ್ಠ ಮಟ್ಟದಿಂದ 400 ಪಾಯಿಂಟ್ ಚೇತರಿಕೆ ಕಂಡ ಸೆನ್ಸೆಕ್ಸ್; ಈಗಲೂ 1000 ಪಾಯಿಂಟ್ ಕುಸಿತ

|

Updated on: Apr 19, 2021 | 1:51 PM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸೋಮವಾರದಂದು (ಏಪ್ರಿಲ್ 19, 2021) ಭಾರೀ ಇಳಿಕೆ ಕಂಡಿವೆ. ಏರುತ್ತಿರುವ ಕೊರೊನಾ ಸೋಂಕು ಪ್ರಕರಣಗಳ ಪ್ರಭಾವ ಮಾರುಕಟ್ಟೆ ಮೇಲೆ ಆಗಿದೆ.

Stock market: ದಿನದ ಕನಿಷ್ಠ ಮಟ್ಟದಿಂದ 400 ಪಾಯಿಂಟ್ ಚೇತರಿಕೆ ಕಂಡ ಸೆನ್ಸೆಕ್ಸ್; ಈಗಲೂ 1000 ಪಾಯಿಂಟ್ ಕುಸಿತ
ಸಾಂದರ್ಭಿಕ ಚಿತ್ರ
Follow us on

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಸೋಮವಾರ (ಏಪ್ರಿಲ್ 19, 2021) ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿವೆ. ಸೆನ್ಸೆಕ್ಸ್ ಸೂಚ್ಯಂಕವು ಮಧ್ಯಾಹ್ನ 1.10ರ ಹೊತ್ತಿಗೆ 1022 ಪಾಯಿಂಟ್ ಕುಸಿದು, 47,809 ಪಾಯಿಂಟ್​ನೊಂದಿಗೆ ವಹಿವಾಟು ನಡೆಸುತ್ತಿತ್ತು. ಆ ಮೂಲಕ ದಿನದ ಕನಿಷ್ಠ ಮಟ್ಟವಾಗಿ 1450ಕ್ಕೂ ಹೆಚ್ಚು ಪಾಯಿಂಟ್ ಕುಸಿದಿದ್ದ ಸೆನ್ಸೆಕ್ಸ್, 400ಕ್ಕೂ ಹೆಚ್ಚು ಪಾಯಿಂಟ್ ಏರಿಕೆ ಕಂಡಿದೆ. ಇನ್ನು ಎನ್​ಎಸ್​ಇ ನಿಫ್ಟಿ ಸೂಚ್ಯಂಕವು ಮಧ್ಯಾಹ್ನ 1.15ರ ಹೊತ್ತಿಗೆ 306 ಪಾಯಿಂಟ್ ಕುಸಿದು 14,311.65 ಪಾಯಿಂಟ್​ನೊಂದಿಗೆ ವ್ಯವಹಾರ ನಡೆಸುತ್ತಿತ್ತು. ಅಂದ ಹಾಗೆ ನಿಫ್ಟಿ- 50 ದಿನದ ಕನಿಷ್ಠ ಮಟ್ಟವಾದ 14,191.40 ಪಾಯಿಂಟ್ ತಲುಪಿ ಅಲ್ಲಿಂದ ಚೇತರಿಕೆ ಕಂಡಿದೆ.

ನಿಫ್ಟಿ ಪಿಎಸ್​ಯು ಬ್ಯಾಂಕ್, ವಾಹನ, ಮೂಲಸೌಕರ್ಯ ಮತ್ತು ಎನರ್ಜಿ ಸೂಚ್ಯಂಕಗಳು ಶೇ 2ರಿಂದ 5ರಷ್ಟು ಕುಸಿತ ಕಂಡವು. ಇನ್ನು ಬಿಎಸ್​ಇ ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್ ಸೂಚ್ಯಂಕಗಳು ತಲಾ 2 ಪರ್ಸೆಂಟ್ ಇಳಿಕೆ ಕಂಡವು. ಹೆಚ್ಚುತ್ತಿರುವ ಕೊರೊನಾ ಸೋಂಕಿನ ಪ್ರಕರಣದ ಹಿನ್ನೆಲೆಯಲ್ಲಿ ಹೂಡಿಕೆದಾರರು ಆತಂಕಕ್ಕೆ ಈಡಾಗಿದ್ದಾರೆ. ಅಮೆರಿಕ ಡಾಲರ್ ವಿರುದ್ಧ ರೂಪಾಯಿ ಮೌಲ್ಯದ ಕುಸಿತವು ಮುಂದುವರಿದಿದೆ. ಈ ಲೇಖನ ಸಿದ್ಧವಾಗುವ ಹೊತ್ತಿಗೆ ಷೇರು ಮಾರ್ಕೆಟ್​ನಲ್ಲಿ ಏರಿಕೆ ಹಾಗೂ ಇಳಿಕೆ ಕಂಡಿದ್ದ ಪ್ರಮುಖ ಷೇರುಗಳ ವಿವರ ಹೀಗಿದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ 5 ಷೇರುಗಳು
ಡಾ ರೆಡ್ಡೀಸ್ ಲ್ಯಾಬ್ಸ್
ಇನ್ಫೋಸಿಸ್
ಸಿಪ್ಲಾ
ಎಚ್​ಸಿಎಲ್ ಟೆಕ್
ವಿಪ್ರೋ

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ 5 ಷೇರುಗಳು
ಆಕ್ಸಿಸ್ ಬ್ಯಾಂಕ್
ಇಂಡಸ್​ಇಂಡ್ ಬ್ಯಾಂಕ್
ಒಎನ್​ಜಿಸಿ
ಅದಾನಿ ಪೋರ್ಟ್ಸ್
ಅಲ್ಟ್ರಾಟೆಕ್ ಸಿಮೆಂಟ್

ಇದನ್ನೂ ಓದಿ: ಷೇರು ಮಾರ್ಕೆಟ್​ನಲ್ಲಿ ಹಣ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ 10 ಸಿಂಪಲ್ ಟಿಪ್ಸ್

(Indian stock market index Sensex tank more than 1000 points on April 19, 2021 at 1 PM. Here is the top gainers and losers)

Published On - 1:39 pm, Mon, 19 April 21