ಭಾರತದಲ್ಲಿ ಅತಿಹೆಚ್ಚು ಬಡ್ಡಿ ಕೊಡುವ ಬ್ಯಾಂಕಿಂಗ್ ಹಣಕಾಸು ಸಂಸ್ಥೆಗಳಲ್ಲಿ ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Suryoday Small Finance Bank) ಒಂದು. ಇದೀಗ ತನ್ನ ಬಡ್ಡಿದರಗಳನ್ನು ಪರಿಷ್ಕರಿಸಿರುವ ಸೂರ್ಯೋದಯ್ ಬ್ಯಾಂಕು, 85 ಮೂಲಾಂಕಗಳಷ್ಟು ದರ ಹೆಚ್ಚಿಸಿದೆ. ಅದರಂತೆ ಬ್ಯಾಂಕ್ನಲ್ಲಿ ಇಡುವ ನಿಶ್ಚಿತ ಠೇವಣಿಗಳಿಗೆ ಶೇ. 8.60ರವರೆಗೂ ಬಡ್ಡಿ ಸಿಗಲಿದೆ. ಹಿರಿಯ ನಾಗರಿಕರಿಗೆ 50 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ, ಅಂದರೆ ಶೇ. 9.1ರವರೆಗೂ ಬಡ್ಡಿ ಸಿಗುತ್ತದೆ. ಸೋಮವಾರದಿಂದಲೇ ಸುರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ಪರಿಷ್ಕೃತ ಬಡ್ಡಿದರ ಜಾರಿಗೆ ಬರಲಿದೆ. ಇದರ ಸೇವಿಂಗ್ಸ್ ಅಕೌಂಟ್ಗೆ ಸಿಗುವ ಬಡ್ಡಿದರವೇ ಶೇ. 7ರಷ್ಟಿದೆ.
ಇದನ್ನೂ ಓದಿ: ಫೋನ್ ಪೇ, ಗೂಗಲ್ ಪೇಯನ್ನು ಬೈಪಾಸ್ ಮಾಡುವ ಹೊಸ ಯುಪಿಐ ಪ್ಲಗಿನ್; ಆನ್ಲೈನ್ ವರ್ತಕರಿಗೊಂದು ಹೊಸ ಸೌಲಭ್ಯ
ಈ ಮೇಲಿನ ದರಗಳು ಬ್ಯಾಂಕ್ನ ಸಾಮಾನ್ಯ ಗ್ರಾಹಕರಿಗೆ ಅನ್ವಯ ಆಗುತ್ತವೆ. ಹಿರಿಯ ನಾಗರಿಕರಿಗೆ ಅರ್ಧ ಪ್ರತಿಶತದಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. 15 ತಿಂಗಳಿಂದ 3 ವರ್ಷದ ವಿವಿಧ ಅವಧಿಗೆ ಶೇ. 8.5ಕ್ಕಿಂತಲೂ ಹೆಚ್ಚು ಬಡ್ಡಿ ಸಿಗುತ್ತದೆ.
ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನಲ್ಲಿ ಆರ್ಡಿ ದರಗಳೂ ಆಕರ್ಷಕವಾಗಿವೆ. 30ರಿಂದ 36 ತಿಂಗಳವರೆಗಿನ ಆರ್ಡಿ ಹಣಕ್ಕೆ ವಾರ್ಷಿಕ ಶೇ. 8.60ರಷ್ಟು ಬಡ್ಡಿ ಸಿಗುತ್ತದೆ. ಹಾಗೆಯೇ, 18 ತಿಂಗಳಿದ 24 ತಿಂಗಳವರೆಗಿನ ಆರ್ಡಿಗೆ ಶೇ. 8.50ರಷ್ಟು ಬಡ್ಡಿ ಕೊಡಲಾಗುತ್ತದೆ. ಇಲ್ಲಿಯೂ ಹಿರಿಯ ನಾಗರಿಕರಿಗೆ 50 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ.
ಮಹಾರಾಷ್ಟ್ರ ಮೂಲದ ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಕರ್ನಾಟಕವೂ ಸೇರಿದಂತೆ ಒಟ್ಟು 30ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಬೆಂಗಳೂರು ಹಾಗೂ ಕರ್ನಾಟಕದ ಹಲವೆಡೆ ಇದರ ಕಚೇರಿಗಳಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ