AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

FD Interest: ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಿಂದ ಮೂರು ವರ್ಷದ ಅವಧಿಯ ಎಫ್​ಡಿಗೆ ಶೇ 7ರ ಬಡ್ಡಿ

ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ ಮೂರು ವರ್ಷಗಳ ಅವಧಿಗೆ ಎಫ್​ಡಿ ಮೇಲಿನ ಬಡ್ಡಿ ದರ ಶೇ 7ರಷ್ಟಿದೆ. ವಿವಿಧ ಅವಧಿಯ ಬಡ್ಡಿ ದರಗಳು ಇಲ್ಲಿವೆ.

FD Interest: ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಿಂದ ಮೂರು ವರ್ಷದ ಅವಧಿಯ ಎಫ್​ಡಿಗೆ ಶೇ 7ರ ಬಡ್ಡಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Mar 15, 2022 | 5:32 PM

Share

ಈಕ್ವಿಟಿ ಮಾರುಕಟ್ಟೆಗಳು ಹೆಚ್ಚಿನ ಏರಿಳಿತದಿಂದ ಕೂಡಿರುವುದರಿಂದ ಯೋಗ್ಯವಾದ ರಿಟರ್ನ್ಸ್ ಗಳಿಸಲು ಸುರಕ್ಷಿತ ಹೂಡಿಕೆ ಆಯ್ಕೆಗಳು ಭಾರತೀಯ ಹೂಡಿಕೆದಾರರ ಪ್ರಮುಖ ಆದ್ಯತೆ ಆಗಿದೆ. ಅಂತಹ ಹೂಡಿಕೆದಾರರ ಅಗತ್ಯಗಳನ್ನು ಪೂರೈಸಲು, ಹಲವಾರು ಬ್ಯಾಂಕ್​ಗಳು ನಿಶ್ಚಿತ ಠೇವಣಿಗಳ  (Fixed Deposits) ಆಫರ್​ಗಳನ್ನು ನೀಡುತ್ತವೆ. ಠೇವಣಿಗಳ ಮೇಲೆ ಉದಾರವಾದ ಲಾಭವನ್ನು ನೀಡುತ್ತವೆ. ಎಫ್‌ಡಿ ಹೂಡಿಕೆದಾರರಿಗೆ ಉತ್ತೇಜನ ನೀಡುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಕೆಲವು ಬ್ಯಾಂಕ್‌ಗಳು ಬಡ್ಡಿ ದರಗಳನ್ನು ಹೆಚ್ಚಿಸಿವೆ. ಎಫ್​ಡಿ ಬಡ್ಡಿದರಗಳನ್ನು ಹೆಚ್ಚಿಸಿದ ಮತ್ತೊಂದು ಬ್ಯಾಂಕ್ ಅಂದರೆ, ಅದು ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್. ಈಗ ಬ್ಯಾಂಕ್ ಮಾರ್ಚ್ 10, 2022ರಿಂದ ಜಾರಿಗೆ ಬರುವಂತೆ 3 ವರ್ಷಗಳ ಅವಧಿಗೆ ಠೇವಣಿಗಳ ಮೇಲೆ ಎಫ್​ಡಿ ಖಾತೆಗೆ ಶೇ 7ರ ರಿಟರ್ನ್ ನೀಡುತ್ತಿದೆ.

ಅಲ್ಲದೆ, ಹಿರಿಯ ನಾಗರಿಕರು ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ ತಮ್ಮ ನಿಶ್ಚಿತ ಠೇವಣಿಗಳ ಮೇಲೆ ಹೆಚ್ಚುವರಿ ಶೇ 0.50ರಷ್ಟು ಲಾಭವನ್ನು ಪಡೆಯುತ್ತಾರೆ. ಆದ್ದರಿಂದ ಹಿರಿಯ ನಾಗರಿಕ ಎಫ್​ಡಿ ಖಾತೆದಾರರು 3 ವರ್ಷಗಳ ಅವಧಿಗೆ ಖಾತೆಯಲ್ಲಿ ಶೇ 7.5 ರಿಟರ್ನ್ಸ್ ಪಡೆಯುತ್ತಾರೆ.

ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ (SSFB) ಹೊಸ ಎಫ್​ಡಿ ಬಡ್ಡಿ ದರಗಳು 7ರಿಂದ 14 ದಿನಗಳ ಠೇವಣಿ – ಶೇ 3.25

15 ರಿಂದ 45 ದಿನಗಳ ಠೇವಣಿ- ಶೇ 3.25

46 ದಿನಗಳಿಂದ 90 ದಿನಗಳ ಠೇವಣಿ – ಶೇ 4.25

91 ದಿನಗಳಿಂದ 6 ತಿಂಗಳ ಠೇವಣಿ – ಶೇ 4.75

6 ತಿಂಗಳಿಂದ 9 ತಿಂಗಳ ಮೇಲಿನ ಠೇವಣಿ – ಶೇ 5.25

9 ತಿಂಗಳ ಮೇಲಿನಿಂದ 1 ವರ್ಷಕ್ಕಿಂತ ಕಡಿಮೆ ಅವಧಿ- ಶೇ 5.75

1 ವರ್ಷದಿಂದ 1 ವರ್ಷ 6 ತಿಂಗಳ ಠೇವಣಿ – ಶೇ 6.50

1 ವರ್ಷ 6 ತಿಂಗಳಿಂದ 2 ವರ್ಷಗಳ ಮೇಲಿನ ಠೇವಣಿ – ಶೇ 6.50

2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿ – ಶೇ 6.25

3 ವರ್ಷಗಳ ಅವಧಿ – ಶೇ 7.0

ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ಎಫ್​ಡಿ ಬಡ್ಡಿ ದರ ಸಾರ್ವಜನಿಕ ಸ್ವಾಮ್ಯದ ಎಸ್‌ಬಿಐ ಇತ್ತೀಚೆಗೆ ತನ್ನ ಎಫ್‌ಡಿ ಬಡ್ಡಿ ದರಗಳನ್ನು ರೂ 2 ಕೋಟಿಗಿಂತ ಹೆಚ್ಚಿನ ಠೇವಣಿಗಳ ಮೇಲೆ 20ರಿಂದ 40 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಇತ್ತೀಚಿನ ದರಗಳು ಮಾರ್ಚ್ 10, 2022ರಿಂದ ಜಾರಿಗೆ ಬಂದಿವೆ.

ಇದನ್ನೂ ಓದಿ: ಆರ್​ಬಿಐ ವಿತ್ತೀಯ ನೀತಿ ಪ್ರಕಟ; ನಿಮ್ಮ ಹೋಂ ಲೋನ್, ಕಾರ್ ಲೋನ್, ಬ್ಯಾಂಕ್ ಎಫ್​ಡಿಗಳ ಇಎಂಐ ಮೇಲಾಗುವ ಪರಿಣಾಮಗಳೇನು?

Follow Us
TV9 Web
TV9 Web

TV9 Kannada

Read More
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ