ಸಿಂಡಿಕೇಟ್ ಬ್ಯಾಂಕ್ ಗ್ರಾಹಕರ ಈ ಹಿಂದಿನ ಐಎಫ್ಎಸ್ಸಿ ಕೋಡ್ಗಳು ಜುಲೈ 1, 2021ರಿಂದ ಬದಲಾಗಲಿವೆ. 2020ರ ಏಪ್ರಿಲ್ನಲ್ಲಿ ಕೆನರಾ ಬ್ಯಾಂಕ್ ಜತೆಗೆ ಸಿಂಡಿಕೇಟ್ ಬ್ಯಾಂಕ್ ವಿಲೀನವಾಗಿದೆ. ಕೇಂದ್ರ ಸರ್ಕಾರದಿಂದ ಹಲವು ಬ್ಯಾಂಕ್ಗಳ ಘೋಷಣೆ ಮಾಡಲಾಯಿತು. ಅದರ ಭಾಗವಾಗಿ ಈ ವಿಲೀನ ಆಗಿದೆ. ಈ ನಡೆಯ ಅರ್ಥ ಏನೆಂದರೆ, ಇನ್ನು ಮುಂದೆ ಎನ್ಇಎಫ್ಟಿ, ಆರ್ಟಿಜಿಎಸ್ ಅಥವಾ ಐಎಂಪಿಎಸ್ ಮೂಲಕವಾಗಿ ಆನ್ಲೈನ್ ವಹಿವಾಟು ಮಾಡಬೇಕೆಂದರೆ ಹೊಸ ಐಎಫ್ಎಸ್ಸಿ ಕೋಡ್ಗಳನ್ನು ಬಳಸಬೇಕು. “ಕೆನರಾ ಬ್ಯಾಂಕ್ ಜತೆಗೆ ಸಿಂಡಿಕೇಟ್ ಬ್ಯಾಂಕ್ ವಿಲೀನವಾಗಿದ್ದು, ಈ ಮೂಲಕ ತಿಳಿಸುವುದೇನೆಂದರೆ ಎಲ್ಲ ಇಸಿಂಡಿಕೇಟ್ ಐಎಫ್ಎಸ್ಸಿ ಕೋಡ್ಗಳು SYNB ಎಂದು ಆರಂಭವಾಗುವುದು ಬದಲಾವಣೆ ಆಗಲಿದೆ. ಜುಲೈ 1, 2021ರಿಂದ ಅನ್ವಯ ಆಗುವಂತೆ SYNB ಎಂದು ಆರಂಭವಾಗುವ ಐಎಫ್ಎಸ್ಸಿ ಕೋಡ್ಗಳು ಕಾರ್ಯ ನಿರ್ವಹಣೆ ನಿಲ್ಲಿಸುತ್ತದೆ,” ಎಂದು ಕೆನರಾ ಬ್ಯಾಂಕ್ ವೆಬ್ಸೈಟ್ನಲ್ಲಿ ತಿಳಿಸಿದೆ. ಇನ್ನು ಮುಂದೆ ಎನ್ಇಎಫ್ಟಿ/ಆರ್ಟಿಜಿಎಸ್/ಐಎಂಪಿಎಸ್ ಮೂಲಕ ಹಣ ಕಳಿದುವಾಗ ಹೊಸ ಐಎಫ್ಎಸ್ಸಿ ಕೋಡ್ ‘CNRB’ ಎಂದು ಬಳಸುವಂತೆ ಮನವಿ ಮಾಡಲಾಗಿದೆ.
ಕೆನರಾ ಬ್ಯಾಂಕ್ನಿಂದ ಅಧಿಕೃತ ವೆಬ್ಸೈಟ್ನಲ್ಲಿ ಹೊಸ ಐಎಫ್ಎಸ್ಸಿ ಕೋಡ್ಗಳನ್ನು ಬಿಡುಗಡೆ ಮಾಡಲಾಗಿದೆ. ಅವುಗಳನ್ನು ಸಿಂಡಿಕೇಟ್ ಬ್ಯಾಂಕ್ ಗ್ರಾಹಕರು ಇನ್ನು ಮುಂದೆ ಬಳಸಬೇಕು. ತಮ್ಮ ಹೊಸ ಐಎಫ್ಎಸ್ಸಿ ಕೋಡ್ಗಳನ್ನು ಕೆನರಾ ಬ್ಯಾಂಕ್ನ ವೆಬ್ಸೈಟ್ನಲ್ಲಿ ಇರುವ ಟೂಲ್ ಮೂಲಕ ತಿಳಿಯಬಹುದು. ಸಿಂಡಿಕೇಟ್ ಬ್ಯಾಂಕ್ ಗ್ರಾಹಕರು ಹೊಸ ಐಎಫ್ಎಸ್ ಕೋಡ್ ಮತ್ತು ಎಂಐಸಿಆರ್ ಕೋಡ್ಗಳ ಜತೆಗೆ ಹೊಸ ಚೆಕ್ಬುಕ್ಗಳನ್ನು ಪಡೆಯಬೇಕು. ಸಿಂಡಿಕೇಟ್ ಬ್ಯಾಂಕ್ನ ಈ ಹಿಂದಿನ ಸ್ವಿಫ್ಟ್ ಕೋಡ್ SYNBINBBXXX ಕೂಡ ಜುಲೈ 1, 2021ರಿಂದ ಬಳಕೆ ನಿಲ್ಲಲಿದೆ. ವಿದೇಶೀ ವಿನಿಮಯ ವಹಿವಾಟನ್ನು ಸ್ವಿಫ್ಟ್ ಸಂದೇಶಗಳನ್ನು ಸ್ವೀಕರಿಸಲು ಮತ್ತ ಕಳುಹಿಸಲು ಸ್ವಿಫ್ಟ್ ಕೋಡ್ಸ್ ಅನ್ನು ಬಳಸಲಾಗುತ್ತದೆ. ಕೆನರಾ ಬ್ಯಾಂಕ್ ಹೇಳಿರುವ ಪ್ರಕಾರ, ವಿದೇಶೀ ವಿನಿಮಯ ವಹಿವಾಟಿಗೆ ಇನ್ನು ಮುಂದೆ ಸ್ವಿಫ್ಟ್ ಕೋಡ್ CNRBINBBFD ಬಳಸಲು ಮನವಿ ಮಾಡಲಾಗಿದೆ.
ಐಎಫ್ಎಸ್ಸಿ ಅಥವಾ ಇಂಡಿಯನ್ ಫೈನಾನ್ಷಿಯಲ್ ಸಿಸ್ಟಮ್ ಕೋಡ್ ಎಂಬುದು ವಿಶಿಷ್ಟವಾದ, 11 ಕ್ಯಾರಕ್ಟರ್ನ ಅಲ್ಫಾ- ನ್ಯೂಮರಿಕ್ ಕೋಡ್. ಎನ್ಇಎಫ್ಟಿ, ಆರ್ಟಿಜಿಎಸ್ ಅಥವಾ ಐಎಂಪಿಎಸ್ ವಹಿವಾಟುಗಳಿಗೆ ಬ್ಯಾಂಕ್ ಶಾಖೆಗಳನ್ನು ಗುರುತಿಸಲು ಇದನ್ನು ಬಳಸಲಾಗುತ್ತದೆ. ಮೊದಲ ನಾಲ್ಕು ಅಕ್ಷರಗಳು ಬ್ಯಾಂಕ್ ಹೆಸರನ್ನು ಪ್ರತಿನಿಧಿಸುತ್ತದೆ. ಐದನೇ ಕ್ಯಾರಕ್ಟರ್ ಸೊನ್ನೆ ಮತ್ತು ಕೊನೆ ಆರು ಕ್ಯಾರಕ್ಟರ್ಗಳ ಸಂಖ್ಯೆಯ ಸಹಾಯದಿಂದ ಬ್ಯಾಂಕ್ ಶಾಖೆಯನ್ನು ಗುರುತಿಸಲಾಗುತ್ತದೆ.
2019ರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 10 ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳ ವಿಲೀನ ಘೋಷಣೆ ಮಾಡಿ, ಅದನ್ನು ಜಾಗತಿಕ ಸಾಮರ್ಥ್ಯದ ನಾಲ್ಕು ಬ್ಯಾಂಕ್ಗಳನ್ನಾಗಿಸುವ ಪ್ರಸ್ತಾವ ಮಾಡಿದರು. ಈ ವಿಲೀನಗಳು ಏಪ್ರಿಲ್ 1, 2021ರಿಂದ ಜಾರಿಗೆ ಬಂತು. ಕೆನರಾ ಬ್ಯಾಂಕ್ನಲ್ಲಿ ಸಿಂಡಿಕೇಟ್ ಬ್ಯಾಂಕ್ ವಿಲೀನವಾಗಿದ್ದು ಅದೇ ಪ್ರಕ್ರಿಯೆಯ ಭಾಗ. ಈ ಪ್ರಕ್ರಿಯೆಯ ನಂತರ ಕೆನರಾ ಬ್ಯಾಂಕ್ ದೇಶದ ನಾಲ್ಕನೇ ಅತಿ ದೊಡ್ಡ ಬ್ಯಾಂಕ್ ಆಗಿದೆ.
ಇದನ್ನೂ ಓದಿ: ಈ 8 ಬ್ಯಾಂಕ್ಗಳ ಚೆಕ್ಬುಕ್, ಪಾಸ್ಬುಕ್ ಏಪ್ರಿಲ್ 1ರಿಂದ ಚಾಲ್ತಿಯಲ್ಲಿ ಇರಲ್ಲ
(Syndicate Bank IFSC code and swift code will change from July 1st, 2021, after merger with Canara Bank in 2021, April)