ಅಮೆಜಾನ್, ಫ್ಲಿಪ್​ಕಾರ್ಟ್ ವಿರುದ್ಧದ ತನಿಖೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಕರ್ನಾಟಕ ಹೈಕೋರ್ಟ್

ಫ್ಲಿಪ್​ಕಾರ್ಟ್, ಅಮೆಜಾನ್ ವಿರುದ್ಧ ಸಿಸಿಐ ನೀಡಿದ್ದ ತನಿಖೆ ಆದೇಶ ವಿರುದ್ಧ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈ ಕೋರ್ಟ್ ಶುಕ್ರವಾರ ವಜಾ ಮಾಡಿದೆ.

ಅಮೆಜಾನ್, ಫ್ಲಿಪ್​ಕಾರ್ಟ್ ವಿರುದ್ಧದ ತನಿಖೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಕರ್ನಾಟಕ ಹೈಕೋರ್ಟ್
ಸಾಂದರ್ಭಿಕ ಚಿತ್ರ

ಸ್ಪರ್ಧೆ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಭಾರತ ಸ್ಪರ್ಧಾ ಆಯೋಗ (ಸಿಸಿಐ) ತನಿಖೆಗೆ ನೀಡಿದ್ದ ಆದೇಶಕ್ಕೆ ಸಂಬಂಧಿಸಿದಂತೆ ಇ ಕಾಮರ್ಸ್ ಕಂಪೆನಿಗಳಾದ ಅಮೆಜಾನ್ ಮತ್ತು ಫ್ಲಿಪ್​ಕಾರ್ಟ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ವಜಾ ಮಾಡಿದೆ. ನ್ಯಾಯಮೂರ್ತಿ ದಿನೇಶ್​ ಕುಮಾರ್ ಅವರು ಈ ಎರಡು ಕಂಪೆನಿಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ, ಆದೇಶಿಸಿದ್ದಾರೆ. “ರಿಟ್​ನಲ್ಲಿ ಅರ್ಜಿದಾರರು ಎತ್ತಿದ ಸಮಸ್ಯೆಗಳನ್ನು ಈ ಹಂತದಲ್ಲಿ ಪೂರ್ವಗ್ರಹ ಮಾಡುವುದು ಮತ್ತು ತನಿಖೆಯನ್ನು ತಡೆಯುವುದು ಅವಿವೇಕದ ಸಂಗತಿ ಆಗಲಿದೆ,” ಎಂದು ನ್ಯಾಯಮೂರ್ತಿಗಳು ಆದೇಶದಲ್ಲಿ ತಿಳಿಸಿದ್ದಾರೆ. ಜನವರಿ 13, 2020ರಂದು ಫ್ಲಿಪ್​ಕಾರ್ಟ್ ಮತ್ತು ಅಮೆಜಾನ್​ ಉದ್ಯಮ ನಡೆಸುವ ರೀತಿಯು ಸರಿಯಲ್ಲ ಎಂದು ಆರೋಪಿಸಲಾಗಿತ್ತು. ಭಾರೀ ರಿಯಾಯಿತಿಯಗಳು, ತಮ್ಮ ಪ್ಲಾಟ್​ಫಾರ್ಮ್​ನಲ್ಲಿ ಕೆಲವೇ ಮಾರಾಟಗಾರರ ಜತೆ ಕೈಜೋಡಿಸುತ್ತಿದೆ ಎಂದು ಸಿಸಿಐ ತನಿಖೆಗೆ ಆದೇಶಿಸಿತ್ತು.

ಆ ನಂತರ ಈ ತನಿಖೆಯ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಎರಡು ಕಂಪೆನಿಗಳು ಹೈಕೋರ್ಟ್ ಮೊರೆ ಹೋಗಿದ್ದವು. ಫೆಬ್ರವರಿ 14, 2020ರಂದು ಸಿಸಿಐ ಆದೇಶಕ್ಕೆ ಹೈಕೋರ್ಟ್​ನಿಂದ ಮಧ್ಯಂತರ ತಡೆ ನೀಡಿತ್ತು. ಆ ನಂತರ ಸಿಸಿಐನಿಂದ ಸುಪ್ರೀಮ್ ಕೋರ್ಟ್​ ಮೆಟ್ಟಿಲೇರಲಾಗಿತ್ತು. ಅಕ್ಟೋಬರ್ 26, 2020ರಂದು, ಮತ್ತೆ ಹೈಕೋರ್ಟ್ ಬಳಿಯೇ ತೆರಳುವಂತೆ ಸೂಚಿಸಲಾಗಿತ್ತು.

ಅಂದ ಹಾಗೆ, ಸ್ಮಾರ್ಟ್​ಫೋನ್​ಗಳು ಮತ್ತು ಸಂಬಂಧಿತ ಆಕ್ಸೆಸರಿಗಳ ವ್ಯವಹಾರಕ್ಕೆ ಸಂಬಂಧಿಸಿದಂತೆ ದೆಹಲಿ ವ್ಯಾಪಾರ್ ಮಹಾಸಂಘ್ ನೀಡಿದ ದೂರಿನ ಹಿನ್ನೆಲೆಯಲ್ಲಿ 2020ರ ಜನವರಿ ತಿಂಗಳಲ್ಲಿ ಸಿಸಿಐ ತನಿಖೆಗೆ ಆದೇಶ ನೀಡಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಕರ್ನಾಟಕ ಹೈಕೋರ್ಟ್ ತಡೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: Karnataka High Court: ವಿಶೇಷ ಚೇತನರಿಗೆ ಲಸಿಕೆ ವಿತರಣೆಗೆ ಇನ್ನಷ್ಟು ವೇಗ ನೀಡುವಂತೆ ಸರ್ಕಾರಕ್ಕೆ ತಾಕೀತು ಮಾಡಿದ ಹೈಕೋರ್ಟ್

(Karnataka high court on Friday dismissed Amazon and Flipkart plea to stay CCI probe order against these two companies)