Karnataka High Court: ವಿಶೇಷ ಚೇತನರಿಗೆ ಲಸಿಕೆ ವಿತರಣೆಗೆ ಇನ್ನಷ್ಟು ವೇಗ ನೀಡುವಂತೆ ಸರ್ಕಾರಕ್ಕೆ ತಾಕೀತು ಮಾಡಿದ ಹೈಕೋರ್ಟ್
Covid Vaccine: ಈ ವೇಳೆ ಹೈಕೋರ್ಟ್ಗೆ ಸ್ಲಂಗಳಲ್ಲಿ ಲಸಿಕೆ ವಿತರಣೆ ನಡೆಸಿರುವ ಬಗ್ಗೆ ಮಾಹಿತಿ ನೀಡಿದ ಬಿಬಿಎಂಪಿ ಪರ ವಕೀಲ ಶ್ರೀನಿಧಿ, ಈಗಾಗಲೇ ಸ್ಲಂಗಳಲ್ಲಿ ವಾಸಿಸುವ 10 ಲಕ್ಷ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. 3ನೇ ಒಂದರಷ್ಟು ಸ್ಲಮ್ ನಿವಾಸಿಗಳಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರು: ಈವರೆಗೂ ಕರ್ನಾಟಕದ ಶೇ.35.53ರಷ್ಟು ವಿಶೇಷ ಚೇತನರಿಗೆ ಮಾತ್ರ ಕೊವಿಡ್ ಲಸಿಕೆ ವಿತರಣೆ ಮಾಡಲಾಗಿದೆ. ಉಳಿದವರಿಗೂ ಲಸಿಕೆ ವಿತರಣೆ ನಡೆಸಲು ತುರ್ತು ಕ್ರಮ ಕೈಗೊಳ್ಳುವಂತೆ ಒದಗಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ವೇಳೆ ಹೈಕೋರ್ಟ್ಗೆ ಸ್ಲಂಗಳಲ್ಲಿ ಲಸಿಕೆ ವಿತರಣೆ ನಡೆಸಿರುವ ಬಗ್ಗೆ ಮಾಹಿತಿ ನೀಡಿದ ಬಿಬಿಎಂಪಿ ಪರ ವಕೀಲ ಶ್ರೀನಿಧಿ, ಈಗಾಗಲೇ ಸ್ಲಂಗಳಲ್ಲಿ ವಾಸಿಸುವ 10 ಲಕ್ಷ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. 3ನೇ ಒಂದರಷ್ಟು ಸ್ಲಮ್ ನಿವಾಸಿಗಳಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.
ಕೆಲ ಕೊವಿಡ್ ಕೇರ್ ಸೆಂಟರ್ಗಳನ್ನು ಮುಚ್ಚುವುದಾಗಿಬಿಬಿಎಂಪಿ ಆಯುಕ್ತರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಹೈಕೋರ್ಟ್, ಕೊವಿಡ್ ಹಾಗೂ ಟ್ರಯಾಸ್ ಸೆಂಟರ್ ಮುಚ್ಚಬೇಡಿ. ಮುಂದಿನ ಪರಿಸ್ಥಿತಿಗೆ ಸಿದ್ಧವಾಗಿರುವಂತೆ ಸಲಹೆ ನೀಡಿತು.
ನಾಳೆ ನಡೆಯಬೇಕಿದ್ದ ಮೈಸೂರು ಪಾಲಿಕೆಯ ಮೇಯರ್ ಚುನಾವಣೆಗೆ ತಡೆ ನಾಳೆ (ಜೂನ್ 11) ನಡೆಯಬೇಕಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಕರ್ನಾಟಕ ಹೈಕೋರ್ಟ್ ತಡೆ ಒಡ್ಡಿದೆ. ಕೊವಿಡ್-19 ಮಾರ್ಗಸೂಚಿ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಪಾಲಿಕೆ ಸದಸ್ಯ ಪ್ರದೀಪ್ ಚಂದ್ರ ಅರ್ಜಿ ಸಲ್ಲಿಸಿದ್ದರು. ಜೂನ್ 21ರವರೆಗೆ ಪಾಲಿಕೆ ಮೇಯರ್ ಚುನಾವಣೆ ಸೂಕ್ತವಲ್ಲ. ಬಳಿಕ ಪರಿಸ್ಥಿತಿ ಪರಾಮರ್ಶಿಸಿ ಚುನಾವಣೆ ದಿನಾಂಕ ನಿಗದಿಪಡಿಸಿ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದೆ.
ಮೈಸೂರಿನಲ್ಲಿ ಕೊವಿಡ್ ಸೋಂಕು ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರಾಕೃತಿಕ ವಿಕೋಪ ಕಾಯ್ದೆ ಅಡಿಯೂ ನಿರ್ಬಂಧವಿದೆ. ಚುನಾವಣೆ ನಡೆಸಿದರೆ ಪಾಲಿಕೆ ಸದಸ್ಯರು ಹಾಗೂ ಬೆಂಬಲಿಗರು ಒಂದೆಡೆ ಸೇರುತ್ತಾರೆ. ಹೀಗಾಗಿ ಚುನಾವಣೆಗೆ ತಡೆ ನೀಡುವಂತೆ ಅರ್ಜಿದಾರರ ಪರ ಎಲ್.ಎಂ.ಚಿದಾನಂದಯ್ಯ ಮನವಿ ಮಾಡಿದ್ದರು. ಈ ವಾದವನ್ನಾಲಿಸಿದ ಹೈಕೋರ್ಟ್ ಜೂನ್ 21ರವರೆಗೆ ಪಾಲಿಕೆ ಮೇಯರ್ ಚುನಾವಣೆ ಸೂಕ್ತವಲ್ಲ. ಬಳಿಕ ಪರಿಸ್ಥಿತಿ ಪರಾಮರ್ಶಿಸಿ ಚುನಾವಣೆ ದಿನಾಂಕ ನಿಗದಿಪಡಿಸಿ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದೆ.
ಇದನ್ನೂ ಓದಿ: Work From Home: ತನ್ನ ಉದ್ಯೋಗಿಗಳಿಗೆ ಶಾಶ್ವತವಾಗಿ ವರ್ಕ್ ಫ್ರಂ ಹೋಂ ಅವಕಾಶ ನೀಡಿದ ಫೇಸ್ಬುಕ್
ಕೊವಿಡ್ ರೋಗಿಗಳ ಹೆಣ ಎಸೆಯಲು ಮುಂಬೈನಲ್ಲಿ ಯಾವುದೇ ನದಿ ಇಲ್ಲ: ಮೇಯರ್ ಕಿಶೋರಿ ಪೆಡನೆಕರ್
(Karnataka High Court directs state govt to distribute Covid vaccine to specially abled persons more fastly)