ಕೊವಿಡ್ ರೋಗಿಗಳ ಹೆಣ ಎಸೆಯಲು ಮುಂಬೈನಲ್ಲಿ ಯಾವುದೇ ನದಿ ಇಲ್ಲ: ಮೇಯರ್ ಕಿಶೋರಿ ಪೆಡನೆಕರ್

Mayor Kishori Pednekar: ಮುಂಬೈ ಎಂದಿಗೂ ಸಾವುಗಳ ಸಂಖ್ಯೆಯನ್ನು ಕಡಿಮೆ ಎಂದು ವರದಿ ಮಾಡುವುದಿಲ್ಲ. ಮೃತದೇಹಗಳನ್ನು ಎಸೆಯಲು ನಮ್ಮಲ್ಲಿ ನದಿಗಳು ಎಂದು ಹೇಳುವ ಮೂಲಕ ಬಿಜೆಪಿ ಆಡಳಿತದ ಬಿಹಾರ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ಟಾಂಗ್ ನೀಡಿದ ಮುಂಬೈ ಮೇಯರ್.

ಕೊವಿಡ್ ರೋಗಿಗಳ ಹೆಣ ಎಸೆಯಲು ಮುಂಬೈನಲ್ಲಿ ಯಾವುದೇ ನದಿ ಇಲ್ಲ: ಮೇಯರ್ ಕಿಶೋರಿ ಪೆಡನೆಕರ್
ಮೇಯರ್ ಕಿಶೋರಿ ಪೆಡನೆಕರ್
Follow us
| Updated By: ರಶ್ಮಿ ಕಲ್ಲಕಟ್ಟ

Updated on:Jun 10, 2021 | 5:39 PM

ಮುಂಬೈ: ಮುಂಬೈನಲ್ಲಿ ಕೊವಿಡ್ -19 ಸಾವುಗಳ ಸಂಖ್ಯೆ ಕಡಿಮೆ ಎಂದು ವರದಿ ಮಾಡುತ್ತಿಲ್ಲ ಎಂದು ಮುಂಬೈ ಮೇಯರ್ ಕಿಶೋರಿ ಪೆಡನೆಕರ್ ಗುರುವಾರ ಹೇಳಿದ್ದಾರೆ.  ಮುಂಬೈ ಎಂದಿಗೂ ಹಾಗೆ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಈ ರೀತಿ ಹೇಳುವ ಮೂಲಕ ಮುಂಬೈ ಮೇಯರ್,ಬಿಜೆಪಿ ಆಡಳಿತದ ಉತ್ತರ ಪ್ರದೇಶ ಮತ್ತು ಬಿಹಾರ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ. ಕಳೆದ ತಿಂಗಳು ಈ ರಾಜ್ಯಗಳಲ್ಲಿ   ಶವಗಳು ನದಿಯಲ್ಲಿ ತೇಲುತ್ತಿರುವುದು ಕಂಡುಬಂದವು ಮತ್ತು ಕೆಲವು ನದಿಯ ದಂಡೆಗೆ ಬಂದು ಬಡಿದ್ದಿತ್ತು. ಮೃತದೇಹಗಳನ್ನು ಎಸೆಯಲು ನಮ್ಮಲ್ಲಿ ನದಿಗಳಿಲ್ಲ ಎಂದಿದ್ದಾರೆ ಮೇಯರ್.

ಬಿಹಾರ ತನ್ನ ಕೋವಿಡ್ -19 ಸಾವು ಪ್ರಕರಣಗಳ ಮಾಹಿತಿ ಪರಿಷ್ಕರಿಸಿದ ಕಾರಣ ಭಾರತದಲ್ಲಿ ಕೊವಿಡ್ ಸಾವಿನ ಸಂಖ್ಯೆ ಏರಿಕೆ ಕಂಡಿದೆ. ಇದರ ಬೆನ್ನಲ್ಲೇ ಮುಂಬೈ ಮೇಯರ್ ಈ ರೀತಿ ಹೇಳಿದ್ದಾರೆ. ಬಿಹಾರ ಕೊವಿಡ್ ಸಾವಿನ ಸಂಖ್ಯೆ ಪರಿಷ್ಕರಣೆ ಮಾಡಿದ್ದರಿಂದ ಸುಮಾರು 4,000 ಸಾವು ಪ್ರಕರಣ ಹೆಚ್ಚಾಗಿದೆ. ಇದು ಗುರುವಾರ ಒಟ್ಟು ಸಂಖ್ಯೆಗೆ ಸೇರ್ಪಡೆಯಾಗಿದೆ. ಪರಿಷ್ಕರಣೆಯ ನಂತರ, ರಾಜ್ಯದಲ್ಲಿ ಒಟ್ಟು ಕೊವಿಡ್ -19 ಸಾವುಗಳ ಸಂಖ್ಯೆ ಮಂಗಳವಾರದವರೆಗೆ 9,429 ಆಗಿತ್ತು. ಪರಿಷ್ಕರಣೆ ಮೊದಲು, ಈ ಸಂಖ್ಯೆ 5,458 ಆಗಿತ್ತು. ಆದಾಗ್ಯೂ ಈ ಸಾವುಗಳು ಯಾವಾಗ ಸಂಭವಿಸಿದವು ಎಂಬುದು ತಿಳಿದಿಲ್ಲ.

ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾದ ರಾಜ್ಯವಾದ ಮಹಾರಾಷ್ಟ್ರದಲ್ಲಿ ಕೊವಿಡ್ -19  ಪ್ರಕರಣಗಳು ಮತ್ತು ದೈನಂದಿನ ಸಾವು ಇಳಿಮುಖವಾಗಿದ್ದು ಪರಿಸ್ಥಿತಿ ಸ್ಥಿರ ಸುಧಾರಣೆ ಕಂಡುಬಂದಿದೆ . ಕಳೆದ ಕೆಲವು ದಿನಗಳಲ್ಲಿ ಮುಂಬೈನಲ್ಲಿ ಸಾವಿನ ಸಂಖ್ಯೆ 30 ಕ್ಕಿಂತ ಕಡಿಮೆಯಾಗಿದೆ. ಬಿಜೆಪಿ ಮುಖಂಡ ದೇವೇಂದ್ರ ಫಡಣವಿಸ್ ಈ ಹಿಂದೆ ನಾಗರಿಕ ಸಂಸ್ಥೆ ಮತ್ತು ಮಹಾರಾಷ್ಟ್ರ ಸರ್ಕಾರವು ಮರಣ ಪ್ರಮಾಣದ ಲೆಕ್ಕದಲ್ಲಿ ಮೋಸ ಮಾಡುತ್ತಿದೆ ಎಂದು ಆರೋಪಿಸಿದ್ದರು.

ಮೇ ತಿಂಗಳಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರದ ಗಂಗಾನದಿಯಲ್ಲಿ ಶವಗಳು ತೇಲುತ್ತಿರುವ ವರದಿಗಳು ಹೊರಬಂದಿತ್ತು . ಕೊವಿಡ್‌ನಿಂದ ಸಾವಗೀಡಾದವರ ಶವಗಳನ್ನು ನದಿಯಲ್ಲಿ ಎಸೆಯಲಾಯಿತು ಎಂದು ಶಂಕಿಸಲಾಗಿದೆ. ಮೇ 17 ರಂದು ಕೇಂದ್ರವು ಗಂಗಾ ಮತ್ತು ಇನ್ನಾವುದೇ ನದಿಯಲ್ಲಿ ಶವಗಳನ್ನು ಎಸೆಯುವುದನ್ನು ತಡೆಯಲು ಉತ್ತರ ಪ್ರದೇಶ ಮತ್ತು ಬಿಹಾರವನ್ನು ಕೇಳಿತು. ಅದೇ ವೇಳೆ ಮಾಧ್ಯಮ ವರದಿಗಳನ್ನು “ಅನಪೇಕ್ಷಿತ ಮತ್ತು ಆತಂಕಕಾರಿ” ಎಂದು ಕರೆದಿತ್ತು.

ಇದನ್ನೂ ಓದಿ: ಗಂಗಾನದಿಯಲ್ಲಿ ಸಾಲುಸಾಲಾಗಿ ತೇಲಿ ಬರುತ್ತಿರುವ ಶವಗಳು; 2 ರಾಜ್ಯಗಳಿಗೆ ಖಡಕ್ ಸೂಚನೆ ನೀಡಿದ ಕೇಂದ್ರ ಸರ್ಕಾರ

Coronavirus Cases in India: ಸತತ ಮೂರನೇ ದಿನ 1 ಲಕ್ಷಕ್ಕಿಂತ ಕಡಿಮೆ ಹೊಸ ಕೊವಿಡ್ ಪ್ರಕರಣ, 6148 ಮಂದಿ ಸಾವು

(We don’t have rivers to dump the bodies Mumbai mayor Kishori Pednekar jibe at BJP ruled Uttar Pradesh and Bihar)

Published On - 5:34 pm, Thu, 10 June 21

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಜಿಟಿ ದೇವೇಗೌಡರ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ನೇಹಮಯಿ ಕೃಷ್ಣ
ಜಿಟಿ ದೇವೇಗೌಡರ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ನೇಹಮಯಿ ಕೃಷ್ಣ
ಗೃಹಲಕ್ಷ್ಮೀಯರಿಗೆ ದಸರಾ ಗಿಫ್ಟ್: ನವರಾತ್ರಿಗೆ ಮಹಿಳೆಯರ ಖಾತೆಗೆ ಹಣ ಜಮೆ
ಗೃಹಲಕ್ಷ್ಮೀಯರಿಗೆ ದಸರಾ ಗಿಫ್ಟ್: ನವರಾತ್ರಿಗೆ ಮಹಿಳೆಯರ ಖಾತೆಗೆ ಹಣ ಜಮೆ