ಕಲಾವಿದ, ವಿಮರ್ಶಕನಾಗಿ ನನಗಿರುವ ಹಕ್ಕುಗಳಿಗೆ ಐಟಿ ನಿಯಮಗಳು ಧಕ್ಕೆ ತರುತ್ತವೆ: ಮದ್ರಾಸ್ ಹೈಕೋರ್ಟ್​ಗೆ ಸಂಗೀತ ಕಲಾವಿದ ಟಿ.ಎಂ.ಕೃಷ್ಣ ಅರ್ಜಿ

ಮದ್ರಾಸ್ ಹೈಕೋರ್ಟ್​ ಗುರುವಾರ ಭಾರತ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ. ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಹೊಸ ಐಟಿ ನಿಯಮಗಳು ಅತಾರ್ಕಿಕ ಮತ್ತು ಅತಿಕ್ರಮಣಕಾರಿ ಸ್ವರೂಪದ್ದು ಎಂದು ಕೃಷ್ಣ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.

ಕಲಾವಿದ, ವಿಮರ್ಶಕನಾಗಿ ನನಗಿರುವ ಹಕ್ಕುಗಳಿಗೆ ಐಟಿ ನಿಯಮಗಳು ಧಕ್ಕೆ ತರುತ್ತವೆ: ಮದ್ರಾಸ್ ಹೈಕೋರ್ಟ್​ಗೆ ಸಂಗೀತ ಕಲಾವಿದ ಟಿ.ಎಂ.ಕೃಷ್ಣ ಅರ್ಜಿ
ಮದ್ರಾಸ್ ಹೈಕೋರ್ಟ್ ಮತ್ತು ಸಂಗೀತ ಕಲಾವಿದ ಟಿ.ಎಂ.ಕೃಷ್ಣ
Follow us
| Edited By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 10, 2021 | 4:43 PM

ಚೆನ್ನೈ: ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಪ್ರಶ್ನಿಸಿ ಖ್ಯಾತ ಕರ್ನಾಟಕ ಸಂಗೀತ ಕಲಾವಿದ ಹಾಗೂ ರಾಮನ್ ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತ ಟಿ.ಎಂ.ಕೃಷ್ಣ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿರುವ ಮದ್ರಾಸ್ ಹೈಕೋರ್ಟ್​ ಗುರುವಾರ ಭಾರತ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ. ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಈ ನಿಯಮಗಳು ಅತಾರ್ಕಿಕ ಮತ್ತು ಅತಿಕ್ರಮಣಕಾರಿ ಸ್ವರೂಪದ್ದು ಎಂದು ಕೃಷ್ಣ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.

ಟಿ.ಎಂ.ಕೃಷ್ಣ ಸಲ್ಲಿಸಿರುವ ಅರ್ಜಿಗೆ ಉತ್ತರವಾಗಿ ಕೇಂದ್ರ ಸರ್ಕಾರವು ಮೂರು ವಾರಗಳ ಒಳಗೆ ಕೌಂಟರ್ ಅಫಿಡವಿಟ್ ಸಲ್ಲಿಸಬೇಕು ಎಂದು ಮದ್ರಾಸ್ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂತಿಲ್​ಕುಮಾರ್ ರಾಮಮೂರ್ತಿ ಅವರಿದ್ದ ನ್ಯಾಯಪೀಠ ಕೇಂದ್ರಕ್ಕೆ ನಿರ್ದೇಶನ ನೀಡಿದೆ. ಟಿ.ಎಂ.ಕೃಷ್ಣ ಪರವಾಗಿ ಚುಟುಕಾಗಿ ವಾದ ಮಂಡಿಸಿದ ವಕೀಲ ಸುಹೃತ್ ಪಾರ್ಥಸಾರಥಿ ಈ ನಿಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯ, ಖಾಸಗಿತನವನ್ನು ಉಲ್ಲಂಘಿಸುತ್ತದೆ. ಈ ನಿಯಮಗಳು ಸಂವಿಧಾನಾತ್ಮಕವಾಗಿಲ್ಲ ಎಂದು ಹೇಳಿದರು.

ಈ ಅರ್ಜಿಯನ್ನು ಇಂಟರ್ನೆಟ್ ಫ್ರೀಡಂ ಫೌಂಡೇಶನ್ ಮತ್ತು ವಕೀಲ ವೃಂದಾ ಭಂಡಾರಿ ಸಿದ್ಧಪಡಿಸಿದ್ದಾರೆ. ಕಲಾವಿದ ಮತ್ತು ಕಲಾ ವಿಮರ್ಶಕನಾಗಿ ನನಗಿರುವ ಹಕ್ಕುಗಳನ್ನು ಈ ನಿಯಮಗಳು ಉಲ್ಲಂಘಿಸುತ್ತವೆ ಎಂದು ಕೃಷ್ಣ ಹೇಳಿದ್ದಾರೆ. ‘ನನ್ನ ಖಾಸಗಿ ಬದುಕಿನಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ವಾಕ್ ಸ್ವಾತಂತ್ರ್ಯಕ್ಕೂ ಧಕ್ಕೆಯುಂಟು ಮಾಡುತ್ತದೆ’ ಎಂದು ಕೃಷ್ಣ ತಿಳಿಸಿದ್ದಾರೆ.

ಕೇಂದ್ರದ ಅಧಿಸೂಚನೆಯಲ್ಲಿರುವ 2ನೇ ಪರಿಚ್ಛೇದ (ಸೋಷಿಯಲ್ ಮೀಡಿಯಾ ಮೇಲಿನ ನಿಯಂತ್ರಣ ಕ್ರಮಗಳು) ಹಲವು ಅಂಶಗಳು ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರನಾಗಿ ನನ್ನ ಹಕ್ಕುಗಳನ್ನು ಉಲ್ಲಂಘಿಸಿದೆ. 3ನೇ ಪರಿಚ್ಛೇದ (ಡಿಜಿಟಲ್ ಸುದ್ದಿ ಮಾಧ್ಯಮ ಮತ್ತು ಒಟಿಟಿ ವೇದಿಕೆಗಳ ನಿಯಮ) ಒಬ್ಬ ಆನ್​ಲೈನ್ ಕಂಟೆಂಟ್ ಕ್ರಿಯೇಟರ್ ಆಗಿ ನನಗಿರುವ ಹಕ್ಕುಗಳನ್ನು ಕಿತ್ತುಕೊಳ್ಳುತ್ತದೆ ಎಂದು ದೂರಿದ್ದಾರೆ.

ಒಬ್ಬ ಕಲಾವಿದನಾಗಿ, ಸಾಂಸ್ಕೃತಿಕ ಮತ್ತು ರಾಜಕೀಯ ವಿಶ್ಲೇಷಕನಾಗಿ ಮುಕ್ತ ಅಭಿವ್ಯಕ್ತಿಯನ್ನು ಮತ್ತು ಸಂವಿಧಾನವು ಖಾತ್ರಿಪಡಿಸಿರುವ ಗೌಪ್ಯತಾ ಹಕ್ಕುಗಳನ್ನು ಪ್ರತಿಪಾದಿಸುತ್ತೇನೆ. ನನಗೆ ಗೌಪ್ಯತೆ ಎನ್ನುವುದು ಸಂಗೀತದಂತೆಯೇ ಒಂದು ಅನುಭವ ನಾನು ಗೌಪ್ಯತೆ ಎದು ಯೋಚಿಸಿದಾಗ ಬದುಕಿನ ಬಗ್ಗೆ, ಆತ್ಮೀಯತೆಯ ಬಗ್ಗೆ, ಅನುಭವಗಳ ಬಗ್ಗೆ, ಶೋಧನೆಗಳ ಬಗ್ಗೆ, ಭದ್ರತೆಯ ಬಗ್ಗೆ, ಸಂತೋಷದ ಬಗ್ಗೆ ಯೋಚಿಸುತ್ತೇನೆ. ಯಾವುದೇ ಭಯ ಅಥವಾ ಆತಂಕವಿಲ್ಲದ ಸ್ಥಿತಿಯಲ್ಲಿ ಮಾತ್ರ ಒಂದು ಸೃಜನಶೀಲ ಕೃತಿ ರೂಪಿಸಲು ಸಾಧ್ಯ. ನನ್ನ ಸ್ವಭಾವದ ಭಾಗವಾಗಿಯೇ ಸ್ವಾತಂತ್ರ್ಯ ಮತ್ತು ಘನತೆಯನ್ನು ಪರಿಭಾವಿಸುತ್ತೇನೆ. ಒಬ್ಬ ಕಲಾವಿದನಾಗಿ ಮಾತ್ರವಲ್ಲ, ಒಬ್ಬ ಮನುಷ್ಯನಾಗಿಯೂ ನನಗೆ ಸ್ವಾತಂತ್ರ್ಯ ಬೇಕು’ ಎಂದು ಅವರು ಹೇಳಿದ್ದಾರೆ.

(Musician TM Krishna Moves to Madras High Court says IT Rules Offend My Rights)

ಇದನ್ನೂ ಓದಿ: ಹೊಸ ಐಟಿ ಮಾರ್ಗಸೂಚಿಯಂತೆ 3 ಹಂತದ ಅಧಿಕಾರಿಗಳನ್ನು ನೇಮಿಸಿ ಕೇಂದ್ರಕ್ಕೆ ವಿವರ ಸಲ್ಲಿಸಿದ ಪ್ರಮುಖ ಸಾಮಾಜಿಕ ಜಾಲತಾಣ ಕಂಪೆನಿಗಳು

ಇದನ್ನೂ ಓದಿ: ಮದ್ರಾಸ್ ಹೈಕೋರ್ಟ್​ನ ಟೀಕೆ ಕಟುವಾಗಿರಬಹುದು ಆದರೆ ತೆಗೆದುಹಾಕಲಾಗದು: ಸುಪ್ರೀಂಕೋರ್ಟ್

Published On - 4:42 pm, Thu, 10 June 21

ತಾಜಾ ಸುದ್ದಿ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ಕಟುಕರಿಗೆ ಈ ವಾರ ಇದೆ ಮಾರಿ ಹಬ್ಬ; ಸೂಚನೆ ಕೊಟ್ಟ ಸುದೀಪ್
ಕಟುಕರಿಗೆ ಈ ವಾರ ಇದೆ ಮಾರಿ ಹಬ್ಬ; ಸೂಚನೆ ಕೊಟ್ಟ ಸುದೀಪ್