ಬೆಂಗಳೂರಿನ ದೇವಾಲಯದ ಅರ್ಚಕರಿಗೆ, ಸಿಬ್ಬಂದಿಗಳಿಗೆ ಸುಹರ್ತ್ ಫೌಂಡೇಶನ್​ನಿಂದ ಉಚಿತ ಪಡಿತರ ಕಿಟ್ ವಿತರಣೆ

Free Rations for Priests: ಸಚಿನ್ ತಂತ್ರಿ ಎಂಬವರು ಇತ್ತೀಚೆಗೆ ಆರಂಭಿಸಿದ ಸುಹರ್ತ್ ಫೌಂಡೇಶನ್​ವತಿಯಿಂದ 100 ಅರ್ಚಕರಿಗೆ ಮತ್ತು ದೇವಾಲಯದ ಸಿಬ್ಬಂದಿಗಳಿಗೆ ಪಡಿತರ ಕಿಟ್ ವಿತರಿಸಲಾಗಿದೆ.

ಬೆಂಗಳೂರಿನ ದೇವಾಲಯದ ಅರ್ಚಕರಿಗೆ, ಸಿಬ್ಬಂದಿಗಳಿಗೆ ಸುಹರ್ತ್ ಫೌಂಡೇಶನ್​ನಿಂದ ಉಚಿತ ಪಡಿತರ ಕಿಟ್ ವಿತರಣೆ
ರೇಷನ್ ಕಿಟ್ ವಿತರಣೆ (ಕೃಪೆ: ಸಚಿನ್ ತಂತ್ರಿ ಅವರ ಟ್ವಿಟರ್ ಖಾತೆ)
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 10, 2021 | 6:22 PM

ಬೆಂಗಳೂರು: ಬೆಂಗಳೂರು ಮೂಲದ ಸಾರ್ವಜನಿಕ ನೀತಿ ರೂಪಿಸುವ ವೃತ್ತಿಯ ಸಚಿನ್ ತಂತ್ರಿ ಎಂಬವರು ಇತ್ತೀಚೆಗೆ ಆರಂಭಿಸಿದ ಸುಹರ್ತ್ ಫೌಂಡೇಶನ್​ ವತಿಯಿಂದ 100 ಅರ್ಚಕರಿಗೆ ಮತ್ತು ದೇವಾಲಯದ ಸಿಬ್ಬಂದಿಗಳಿಗೆ ಪಡಿತರ ಕಿಟ್ ವಿತರಿಸಲಾಗಿದೆ. ಲಾಕ್‌ಡೌನ್ ಅರ್ಚಕ ವೃತ್ತಿಗೆ ಯಾವ ರೀತಿ ಹೊಡೆತ ನೀಡಿದೆ ಎಂಬುದನ್ನು ಮನಗಂಡ ತಂತ್ರಿ ಮೂರು ದಿನಗಳಲ್ಲಿ 1.3 ಲಕ್ಷ ರೂ ದೇಣಿಗೆ ಸಂಗ್ರಹಿಸಿದ್ದಾರೆ. ಇದರಲ್ಲಿ ಹೆಚ್ಚಿನ ದೇಣಿಗೆಗಳು ಸ್ನೇಹಿತರು ಮತ್ತು ಕುಟುಂಬದಿಂದ ಬಂದವು.

ದೈನಂದಿನ ಕೂಲಿ ಕಾರ್ಮಿಕರು, ಆಟೋ ಚಾಲಕರು ಮತ್ತು ಇತರರಿಗೆ ಜೀವನೋಪಾಯಕ್ಕೆ ಸಹಾಯ ಮಾಡುವ ಅನೇಕ ಜನರಿದ್ದಾರೆ. ಆದರ ಅರ್ಚಕರು ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವ ಇತರರನ್ನು ನಿರ್ಲಕ್ಷಿಸಲಾಗಿದೆ ಎಂದು ತಂತ್ರಿ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಹಣವನ್ನು ಸಂಗ್ರಹಿಸಿದ ನಂತರ, ತಂತ್ರ ಅವರು ಸುಹರ್ತ್ ಫೌಂಡೇಶನ್ ಎಂಬ ಟ್ರಸ್ಟ್ ಆರಂಭಿಸಿದರು. ಸುಹರ್ತ್ ಎಂದರೆ ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ಇತರರಿಗೆ ಸಹಾಯ ಮಾಡುವುದು. ಬೆಂಗಳೂರಿನ ಗಿರಿನಗರದಲ್ಲಿ ಎರಡು ಪ್ರತ್ಯೇಕ ಡ್ರೈವ್‌ಗಳಲ್ಲಿ 100 ಜನರಿಗೆ ಪಡಿತರ ಕಿಟ್ ನೀಡಲಾಗಿದೆ. ಧಾರ್ಮಿಕ ಸಂದರ್ಭಗಳಲ್ಲಿ ಅರ್ಚಕರು ಉಪವಾಸ ಮಾಡುತ್ತಿರುವುದರಿಂದ ನಾವು ಮಂಡಕ್ಕಿ ಕೂಡಾ ನೀಡಿದ್ದೇವೆ. ಏಕಾದಶಿಯಂದು ಅವರು ಅಕ್ಕಿ ಸೇವಿಸುವುದಿಲ್ಲ” ಎಂದು ತಂತ್ರಿ ಹೇಳಿದರು.

ಸುಹರ್ತ್ ಫೌಂಡೇಶನ್ ಗುರುವಾರ ತಮ್ಮ ಮುಂದಿನ ಡ್ರೈವ್ ಅನ್ನು ಕೈಗೊಳ್ಳಲಿದ್ದು, ಬೆಂಗಳೂರಿನಲ್ಲಿ ಅರ್ಚಕರಿಗೆ ವ್ಯಾಕ್ಸಿನೇಷನ್ ಡ್ರೈವ್ ಸಹ ಯೋಜಿಸುತ್ತಿದೆ.

B.Pac ಸಿವಿಕ್ ನಾಯಕರೂ ಆಗಿರುವ ತಂತ್ರಿ , “ಈ ಜನರಲ್ಲಿ ಅನೇಕರು ಲಾಕ್ ಡೌನ್ ಇಲ್ಲದೆ ತಿಂಗಳಿಗೆ 3,000 ರೂ.ಗಳಿಸುವುದು ಕಷ್ಟ. ದೇವಾಲಯಗಳನ್ನು ಅಡುಗೆ ಮಾಡುವ, ಬಡಿಸುವ ಅಥವಾ ಸ್ವಚ್ಛ ಗೊಳಿಸುವಂತಹ ಕಾರ್ಮಿಕರಿಗೆ ಹೆಚ್ಚಿನ ಸಂಬಳ ನೀಡಲಾಗುವುದಿಲ್ಲ. ಅವರಿಗೆ ಸಹಾಯ ಬೇಕು ಎಂದಿದ್ದಾರೆ.

ಗಿರಿನಗರದ ಶ್ರೀ ವಾದಿರಾಜ ವಿಜಯ ಧಾರ್ಮಿಕ ಮಂದಿರದ ಅರ್ಚಕ ಜಿ. ಮೋಹನ ಉಪಾಧ್ಯಾಯ, ಎರಡನೇ ಲಾಕ್‌ಡೌನ್ ಹೆಚ್ಚಿನ ಪುರೋಹಿತರಿಗೆ ತೀವ್ರಹ ಹೊಡೆತ ನೀಡಿದೆ ಎಂದಿದ್ದಾರೆ. ಮದುವೆ, ನಾಮಕರಣ, ಗೃಹ ಪ್ರವೇಶ ನಡೆಯುವ ಸಮಯ ಇದು . “ಈ ತಿಂಗಳುಗಳಲ್ಲಿ ನಾವು ಗಳಿಸುವ ಮೊತ್ತದಿದಂದ ಉಳಿದ ಎಂಟು ತಿಂಗಳುಗಳವರೆಗೆ ಜೀವನ ಸಾಗಿಸುತ್ತೇವೆ.

ಉಪಾಧ್ಯಾಯ ಅವರ ಅಣ್ಣ ಕೂಡ ಅರ್ಚಕರಾಗಿದ್ದಾರೆ. “ನಾವು ಆರು ಜನರಿರುವ ಕುಟುಂಬ ಮತ್ತು ನಾವಿಬ್ಬರೂ ಪುರೋಹಿತರಾಗಿರುವುದರಿಂದ, ನಾವು ಈಗ ಉತ್ತಮ ಸ್ಥಿತಿಯಲ್ಲಿಲ. ಸುಹರ್ತ್ ಫೌಂಡೇಶನ್‌ನ ಉಪಕ್ರಮವು ಸಮಯೋಚಿತ, ನಮಗೆ ಮತ್ತು ನಮ್ಮ ಸಮುದಾಯಕ್ಕೆ ಉತ್ತಮ ಸಹಾಯವಾಗಿದೆ ಎಂದು ಅವರು ಹೇಳಿದ್ದಾರೆ .

ಇದನ್ನೂ ಓದಿ: ನಟ ಚೇತನ್ ಹೇಳಿಕೆ ಬ್ರಾಹ್ಮಣ ಸಮುದಾಯಕ್ಕೆ ನೋವು ತಂದಿದೆ, ಅವರು ಕ್ಷಮೆ ಕೇಳಬೇಕು; ಪೊಲೀಸ್ ಆಯುಕ್ತರಿಗೆ ದೂರು

(Suhrt Foundation provided Free ration kits to about 100 priests and temple employees in Bengaluru)

Published On - 6:20 pm, Thu, 10 June 21

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್