Income Tax: Form 26AS ಹೊಸ ಐಟಿ ವೆಬ್ ಪೋರ್ಟಲ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?
How to Download Form 26AS: ಆದಾಯ ತೆರಿಗೆಯ ಹೊಸ ಪೋರ್ಟಲ್ನಲ್ಲಿ ಫಾರ್ಮ್ 26AS ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬ ಹಂತಹಂತವಾದ ವಿವರಣೆ ಇಲ್ಲಿದೆ.
ಆದಾಯ ತೆರಿಗೆ ಇಲಾಖೆಯು ಜೂನ್ 7, 2021ರಂದು www.incometax.gov.in ಹೊಸ ವೆಬ್ಸೈಟ್ ಬಿಡುಗಡೆ ಮಾಡಿದೆ. ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫೈಲಿಂಗ್ ಸರಳಗೊಳಿಸುವುದು ಮತ್ತು ಮೊಬೈಲ್ಫೋನ್ನಿಂದಲೂ ಐಟಿಆರ್ ಫೈಲಿಂಗ್ ಸಾಧ್ಯವಾಗುವಂತೆ ಮಾಡುವುದು ಈ ಹೊಸ ವೆಬ್ಸೈಟ್ ಗುರಿಯಾಗಿದೆ. ಬೇರೆಲ್ಲ ವೈಶಿಷ್ಟ್ಯಗಳ ಜತೆಗೆ ಈ ವೆಬ್ಸೈಟ್ನೊಂದಿಗೆ ತೆರಿಗೆ ಪಾವತಿದಾರರಿಗೆ ಐಟಿಆರ್ ಫಾರ್ಮ್- 1 ಹಾಗೂ ಐಟಿಆರ್ ಫಾರ್ಮ್- 2ಗೆ ಐಟಿಆರ್ ಸಿದ್ಧತೆಯ ಸಾಫ್ಟ್ವೇರ್ ದೊರೆಯುತ್ತದೆ. ಫಾರ್ಮ್ 26AS ಡೌನ್ಲೋಡ್ ಅನ್ನು ಸಹ ಈ ಹೊಸ ಪೋರ್ಟಲ್ ಸರಳಗೊಳಿಸಿದೆ. ಇದನ್ನು ವಾರ್ಷಿಕ ಸಮಗ್ರ ಸ್ಟೇಟ್ಮೆಂಟ್ ಎನ್ನಲಾಗುತ್ತದೆ. ಇದರಲ್ಲಿ ಎಲ್ಲ ಮುಖ್ಯವಾದ ತೆರಿಗೆಗೆ ಸಂಬಂಧಿಸಿದ ಮಾಹಿತಿಗಳಿರುತ್ತವೆ. ತೆರಿಗೆದಾರರ ಟಿಡಿಎಸ್, ಮುಂಗಡ ತೆರಿಗೆ ಮುಂತಾದ ಮಾಹಿತಿಗಳಿರುತ್ತವೆ. ಹೊಸ ವೆಬ್ಸೈಟ್ ಆರಂಭವಾದ ಮೇಲೆ ತೆರಿಗೆದಾರರು ಹೊಸ ಪೋರ್ಟಲ್ನಲ್ಲಿ ತಮ್ಮ ಫಾರ್ಮ್ 26AS ಸುಲಭವಾಗಿ ಡೌನ್ಲೋಡ್ ಮಾಡಿಕೊಂಡು, ತೆರಿಗೆಗೆ ಸಂಬಂಧಿಸಿದ ಮಾಹಿತಿಗಳನ್ನು ತಿಳಿಯಬಹುದು.
ಹೊಸ ಪೋರ್ಟಲ್ನಲ್ಲಿ ಫಾರ್ಮ್ 26AS ಡೌನ್ಲೋಡ್ ಮಾಡುವುದು ಹೇಗೆ? ಹಂತ 1: ಆದಾಯ ತೆರಿಗೆ ಹೊಸ ವೆಬ್ಸೈಟ್ www.incometax.gov.inಗೆ ತೆರಳಬೇಕು ಹಂತ2: ಹೋಮ್ ಪೇಜ್ನ ಬಲಭಾಗಕ್ಕೆ ಮೇಲ್ಭಾಗದಲ್ಲಿ ಇರುವ ಲಾಗ್ ಇನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು ಹಂತ 3: ಲಾಗ್ ಇನ್ ಆದ ನಂತರ ಇ-ಫೈಲ್ ಮೆನುಗೆ ತೆರಳಿ “View Form 26AS (Tax Credit)” ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ಹಂತ 4: ಡಿಸ್ಕ್ಲೇಮರ್ ಅನ್ನು ಜಾಗ್ರತೆಯಿಂದ ಓದಿದ ನಂತರ ‘confirm’ ಬಟನ್ ಕ್ಲಿಕ್ ಮಾಡಬೇಕು. ಹಂತ 5: ಡಿಸ್ಕ್ಲೇಮರ್ ‘confirm’ ಬಟನ್ ಕ್ಲಿಕ್ ಮಾಡಿದ ಮೇಲೆ ಟಿಡಿಎಸ್-ಸಿಪಿಸಿ ವೆಬ್ಸೈಟ್ಗೆ ರೀಡೈರೆಕ್ಟ್ ಆಗುತ್ತದೆ. ಹಂತ 6: ಟಿಡಿಎಸ್-ಸಿಪಿಸಿ ವೆಬ್ಸೈಟ್ನಲ್ಲಿ ಯೂಸೇಜಸ್ಗೆ ಒಪ್ಪಿಗೆ ಸೂಚಿಸಿ, Proceed ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಹಂತ 7: ಆ ನಂತರ “View Tax Credit (Form 26AS)” ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಹಂತ 8: ಅಸೆಸ್ಮೆಂಟ್ ವರ್ಷವನ್ನು ಆರಿಸಬೇಕು ಹಂತ 9: ಯಾವ ರೀತಿಯಲ್ಲಿ ನೋಡಲು ಬಯಸುತ್ತೀರಿ (HTML, Text ಅಥವಾ ಪಿಡಿಎಫ್) ಎಂಬುದನ್ನು ಆರಿಸಿಕೊಳ್ಳಬೇಕು ಹಂತ 10: View/Download ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ಹಂತ 11: Form 26AS ಕಂಪ್ಯೂಟರ್ ಮಾನಿಟರ್ನಲ್ಲಿ ಅಥಬಾ ಸೆಲ್ಫೋನ್ ಸ್ಕ್ರೀನ್ ಮೇಲೆ ಕಾಣಿಸುತ್ತದೆ. ಅದನ್ನು ಡೌನ್ಲೋಡ್ ಹಾಗೂ ಸೇವ್ ಮಾಡಿಕೊಂಡ ಮೇಲೆ ಭವಿಷ್ಯದಲ್ಲಿ ಬಳಸಲು ಅನುಕೂಲ ಆಗುತ್ತದೆ.
ಇದನ್ನೂ ಓದಿ: ITR Filing: ಇಂದಿನಿಂದ ಆದಾಯ ತೆರಿಗೆ ಹೊಸ ಇ ಪೋರ್ಟಲ್; ಆದಾಯ ತೆರಿಗೆ ಪಾವತಿದಾರರಿಗೆ ಗೊತ್ತಿರಬೇಕಾದ 6 ವೈಶಿಷ್ಟ್ಯಗಳು
(How to download Form 26AS from Income Tax department new web portal? Here is the step by step details)
Published On - 4:16 pm, Fri, 11 June 21