
ನವದೆಹಲಿ, ಜೂನ್ 8: ಆಪರೇಷನ್ ಸಿಂದೂರ್ನಲ್ಲಿ (Operation Sindoor) ಭಾರತದ ಅಭೇದ್ಯ ರಕ್ಷಣಾ ಕೋಟೆಯ ಭಾಗವಾಗಿದ್ದ ಡಿ4 ಸಿಸ್ಟಂಗಳನ್ನು ಖರೀದಿಸಲು ತೈವಾನ್ (Taiwan) ಆಸಕ್ತಿ ತೋರಿದೆ. ಅಷ್ಟು ಮಾತ್ರವಲ್ಲ, ಖರೀದಿಗಾಗಿ ಅಧಿಕೃತವಾಗಿ ಮನವಿಯನ್ನೂ ಮಾಡಿದೆ ಎಂದು ಇಂಡಿಯನ್ ಡಿಫೆನ್ಸ್ ರಿಸರ್ಚ್ ವಿಂಗ್ ವೆಬ್ಸೈಟ್ನಲ್ಲಿ ವರದಿಯಾಗಿದೆ. ಡಿಆರ್ಡಿಒ ಅಭಿವೃದ್ಧಿಪಡಿಸಿದ ಮತ್ತು ಬಿಇಎಲ್ ಹಾಗೂ ಝೆನ್ ಟೆಕ್ನಾಲಜೀಸ್ ಸಂಸ್ಥೆಗಳು ತಯಾರಿಸುತ್ತಿರುವ ಡಿ4 ಸಿಸ್ಟಂಗಳು ಡ್ರೋನ್ ನಾಶಕ ಶಸ್ತ್ರಗಳೆನಿಸಿವೆ.
ಆಪರೇಷನ್ ಸಿಂದೂರ್ ವೇಳೆ, ಪಾಕಿಸ್ತಾನದಿಂದ ಪ್ರವಾಹೋಪಾದಿಯಲ್ಲಿ ಹಾರಿ ಬಂದ ಡ್ರೋನ್ಗಳನ್ನು ಈ ಡಿ4 ಸಿಸ್ಟಂ ಬಹಳ ಪರಿಣಾಮಕಾರಿಯಾಗಿ ತಡೆದಿತ್ತು. ಟರ್ಕಿ ದೇಶ ನಿರ್ಮಿಸಿದ ಡ್ರೋನ್ ಮತ್ತು ಲಾಯ್ಟರಿಂಗ್ ಮ್ಯುನಿಶನ್ಗಳನ್ನು ಆಗಸದಲ್ಲೇ ಪತ್ತೆ ಮಾಡಿ ನಾಶ ಮಾಡಿತ್ತು ಡಿ4 ವೆಪನ್ ಸಿಸ್ಟಂ.
ಇದನ್ನೂ ಓದಿ: ಮೋದಿ ನೇತೃತ್ವದಲ್ಲಿ ಬದಲಾಗಿದೆ ಭಾರತ: ಹೀನಾ ಖಾನ್, ಸುಭಾಷ್ ಘಾಯ್ ಅನಿಸಿಕೆ
ಇಸ್ರೇಲ್ ರೀತಿ ತೈವಾನ್ ಕೂಡ ತನ್ನ ನೆತ್ತಿಯ ಮೇಲೆ ಸದಾ ತೂಗುಗತ್ತಿ ಹೊಂದಿರುವ ದೇಶ. ತೈವಾನ್ ತನ್ನ ದೇಶದ ಅವಿಭಾಜ್ಯ ಅಂಗ ಎಂದು ಚೀನಾ ಯಾವಾಗಲೂ ಹೇಳಿಕೊಳ್ಳುತ್ತದೆ. ಚೀನಾದಿಂದ ಯಾವಾಗ ಬೇಕಾದರೂ ಅದು ಆಕ್ರಮಣ ಎದುರಿಸಬಹುದು. ಹೀಗಾಗಿ, ತೈವಾನ್ ದೇಶಕ್ಕೆ ಶಸ್ತ್ರಾಸ್ತ್ರಗಳ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಡಿ4 ಸಿಸ್ಟಂ ಅನ್ನು ಖರೀದಿಸಲು ತೈವಾನ್ ಮುಂದಾಗಿರುವುದರಲ್ಲಿ ಅಚ್ಚರಿ ಇಲ್ಲ.
ಡಿಆರ್ಡಿಒ ಅಭಿವೃದ್ಧಿಪಡಿಸಿದ ಮತ್ತು ಬಿಇಎಲ್ ತಯಾರಿಸಿರುವ ಡಿ4 ಡಿಫೆನ್ಸ್ ಸಿಸ್ಟಂ ತನ್ನ ಉಪಯುಕ್ತತೆಯನ್ನು ಆಪರೇಷನ್ ಸಿಂದೂರ್ನಲ್ಲಿ ತೋರಿಸಿದೆ. ಟರ್ಕಿಯಿಂದ ನೀಡಲಾಗಿದ್ದ ನೂರಾರು ಡ್ರೋನ್ಗಳ ಪಾಕ್ ದಾಳಿಯನ್ನು ಈ ಡಿ4 ಸಿಸ್ಟಂ ತಡೆದು ನಾಶ ಮಾಡಿತ್ತು.
ರೇಡಿಯೊ ಫ್ರೀಕ್ವೆನ್ಸಿ ಜ್ಯಾಮ್ ಮಾಡುವುದು, ಜಿಪಿಎಸ್ ಸ್ಪೂಫ್ ಮಾಡುವುದು, ಲೇಸ್ ಆಧಾರಿತವಾಗಿ ನಾಶ ಮಾಡುವುದು ಇತ್ಯಾದಿ ತಂತ್ರಜ್ಞಾನದ ಮೂಲಕ ಡಿ4 ಸಿಸ್ಟಂ ಡ್ರೋನ್ಗಳನ್ನು ನಾಶ ಮಾಡುತ್ತದೆ ಅಥವಾ ನಿಷ್ಕ್ರಿಯಗೊಳಿಸುತ್ತದೆ.
ಇದನ್ನೂ ಓದಿ: ಭಾರತದ ಬೆಳವಣಿಗೆಯ ವೇಗ ನೋಡಿದರೆ ಈ ವರ್ಷವೇ ಟಾಪ್-3ಗೆ ಸೇರುವಂತಿದೆ: ಬೋರ್ಜೆ ಬ್ರೆಂಡೆ
ಚೀನಾದ ಆಂತರಿಕ ವಿಚಾರದಲ್ಲಿ ಮಧ್ಯಪ್ರವೇಶಿಸಿದಂತಾಗುತ್ತದೆ ಎಂಬ ಕಾರಣಕ್ಕೆ ಭಾರತವು ತೈವಾನ್ ಜೊತೆಗೆ ಮಿಲಿಟರಿ ಸಂಬಂಧ ಹೊಂದುವುದರಿಂದ ದೂರ ಇದೆ ಎಂದು ಹೇಳಲಾಗುತ್ತದೆ. ಆದರೆ, ಪಾಕಿಸ್ತಾನಕ್ಕೆ ಚೀನಾ ಬಹಳ ಮುಕ್ತವಾಗಿ ಬೆಂಬಲ ನೀಡುತ್ತಿರುವ ಹಿನ್ನೆಲೆಯಲ್ಲಿ ಭಾರತವೂ ಕೂಡ ತನ್ನ ನೀತಿಯನ್ನು ಬದಲಿಸಿಕೊಳ್ಳುವುದು ಸರಿ ಎಂದು ಹಲವು ತಜ್ಞರು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ತೈವಾನ್ಗೆ ಡಿ4 ಸಿಸ್ಟಂ ಮಾರಾಟ ಮಾಡುವುದು ಭಾರತದ ಮೊದಲ ಹೆಜ್ಜೆ ಎನಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ