ಕರ್ನಾಟಕದ ಜಿಲ್ಲೆಗಳಲ್ಲಿ ಇಂಟರ್​ನೆಟ್​ ವೇಗ, ಸಂಪರ್ಕಕ್ಕೆ ಕಾರ್ಯಪಡೆ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

ಕರ್ನಾಟಕದ ಜಿಲ್ಲೆಗಳಲ್ಲಿ ಇಂಟರ್​ನೆಟ್​ ಸಂಪರ್ಕ ಮತ್ತು ವೇಗ ಹೆಚ್ಚಿಸುವುದಕ್ಕೆ ಕಾರ್ಯಪಡೆ ಕಳುಹಿಸುವುದಾಗಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಜನ್ ಆಶೀರ್ವಾದ್ ಯಾತ್ರೆಯಲ್ಲಿ ಹೇಳಿದ್ದಾರೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂಟರ್​ನೆಟ್​ ವೇಗ, ಸಂಪರ್ಕಕ್ಕೆ ಕಾರ್ಯಪಡೆ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
Edited By:

Updated on: Sep 08, 2021 | 12:55 PM

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿರ್ದೇಶನದಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ (MeitY) ಸಚಿವಾಲಯದ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್ ಅವರು ಕರ್ನಾಟಕದಲ್ಲಿ ಇತ್ತೀಚೆಗೆ ನಡೆಸಿದ 6 ಜಿಲ್ಲೆಗಳ ಜನ್ ಆಶೀರ್ವಾದ್ ಯಾತ್ರೆಯಲ್ಲಿ, ಇಂಟರ್ನೆಟ್ ಸಂಪರ್ಕದ ವೇಗ ಮತ್ತು ಸಂಪರ್ಕ ಸುಧಾರಿಸಲು ಪ್ರತಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಹಲವಾರು ವಿನಂತಿಗಳು ಬಂದವು. ಪ್ರತಿ ಜಿಲ್ಲೆಯಲ್ಲಿಯೂ ಇದನ್ನು ಅಧ್ಯಯನ ಮಾಡಲು MeitY ಕಾರ್ಯಪಡೆಯನ್ನು ಕಳುಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಈ ಬದ್ಧತೆಗೆ ಪ್ರತಿಕ್ರಿಯೆಯಾಗಿ, ನ್ಯಾಷನಲ್ ಇಂಟರ್‌ನೆಟ್ ಎಕ್ಸ್‌ಚೇಂಜ್ ಆಫ್ ಇಂಡಿಯಾ (NIXI) ಮತ್ತು ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (STPI) ಅಧಿಕಾರಿಗಳನ್ನು ಒಳಗೊಂಡ MeitY ಕಾರ್ಯಪಡೆಯು ತಮ್ಮ ಭೇಟಿ ಮತ್ತು ಕೆಲಸವನ್ನು ಶೀಘ್ರವಾಗಿ ಆರಂಭಿಸಲಿದೆ. ಅವರು ಪ್ರತಿ ಜಿಲ್ಲೆಗೆ ಬಂದು, ಜನರನ್ನು ಭೇಟಿ ಮಾಡುತ್ತಾರೆ. ಅವರು ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಭೇಟಿ ಮಾಡಿ, ಸಚಿವರಿಗೆ ವರದಿ ಸಲ್ಲಿಸುತ್ತಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಒಂದು ನೀತಿ ಆದ್ಯತೆಯೆಂದರೆ ಎಲ್ಲ ಭಾರತೀಯರನ್ನು ಸಂಪರ್ಕಿಸುವುದು ಮತ್ತು ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಪ್ರಯೋಜನಗಳನ್ನು ಪ್ರತಿಯೊಬ್ಬ ಭಾರತೀಯರು ನೇರವಾಗಿ ತಲುಪುವಂತೆ ಮಾಡುವುದು.

ಇದನ್ನೂ ಓದಿ: ಕೇರಳ ಮೂಲ, ಬೆಂಗಳೂರು ವಾಸ್ತವ್ಯ: ನೂತನ ಸಚಿವ ರಾಜೀವ್ ಚಂದ್ರಶೇಖರ್​ ಟೆಕಿ, ಉದ್ಯಮಿಯೂ ಹೌದು