Alert: ರಿಸರ್ವ್ ಬ್ಯಾಂಕ್​ನಿಂದ 4.62 ಕೋಟಿ ರೂ. ನೀಡುವುದಾಗಿ ನಿಮಗೇನಾದರೂ ಮೆಸೇಜ್ ಬಂದಿದೆಯಾ?

ಕೆಲ ವಂಚಕರು ಆರ್​ಬಿಐ ಹೆಸರಿನಲ್ಲಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವ ಬಗ್ಗೆ ಪಿಐಬಿಯಿಂದ ಫ್ಯಾಕ್ಟ್​ ಚೆಕ್ ಇಲ್ಲಿದೆ.

Alert: ರಿಸರ್ವ್ ಬ್ಯಾಂಕ್​ನಿಂದ 4.62 ಕೋಟಿ ರೂ. ನೀಡುವುದಾಗಿ ನಿಮಗೇನಾದರೂ ಮೆಸೇಜ್ ಬಂದಿದೆಯಾ?
ಆರ್​ಬಿಐ ಗವರ್ನರ್ ಶಕ್ತಿಕಾಂತ್​ ದಾಸ್ (ಸಂಗ್ರಹ ಚಿತ್ರ)
TV9kannada Web Team

| Edited By: Srinivas Mata

Sep 08, 2021 | 11:02 AM

“ನೀವು 4.62 ಕೋಟಿ ರೂಪಾಯಿ ಗಳಿಸಬಹುದು, ಅದು ಕೇವಲ ರೂ. 12,500 ಪಾವತಿಸುವ ಮೂಲಕ” -ಇಂಥದ್ದೊಂದು ಒಕ್ಕಣೆಯುಳ್ಳ ಸಂದೇಶ ರಿಸರ್ವ್ ಬ್ಯಾಂಕ್​ ಆಫ್ ಇಂಡಿಯಾದಿಂದ ಅಂತ ಏನಾದರೂ ಬಂದಿದೆಯಾ? ಈ ಪ್ರಶ್ನೆಗೆ ನಿಮ್ಮ ಉತ್ತರ ಹೌದು ಎಂದಾದಲ್ಲಿ ಎಚ್ಚರಿಕೆಯಿಂದ ಇರಿ. ಏಕೆಂದರೆ ಇದು ವಂಚನೆಯ ಜಾಲ. ಕೇಂದ್ರ ಸರ್ಕಾರದ Press Information Bureau (PIB) ತಂಡದ ಫ್ಯಾಕ್ಟ್​ ಚೆಕ್ (ಸತ್ಯಾಂಶ ಪರೀಕ್ಷೆ) ಪ್ರಕಾರ, ಆರ್​ಬಿಐನಿಂದ ಇಂಥ ಯಾವುದನ್ನು ನೀಡುತ್ತಿಲ್ಲ ಮತ್ತು ವಂಚಕರು ಆರ್​ಬಿಐ ಹೆಸರು ಹೇಳಿಕೊಂಡು ಜನರ ಹಣವನ್ನು ವಂಚಿಸುತ್ತಿದೆ. ಪಿಐಬಿ ಟ್ವೀಟ್​ ಪ್ರಕಾರ, ವಂಚಕರು ತಾವು ಆರ್​ಬಿಐಗಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಾರೆ. ಅವರ ವೆಬ್​ಸೈಟ್​ನಲ್ಲಿ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್​ ಚಿತ್ರವನ್ನು ಸಹ ಒಳಗೊಂಡಿದ್ದಾರೆ. “ನೀವು 12,500 ರೂಪಾಯ ಪಾವತಿ ಮಾಡಿದಲ್ಲಿ 4 ಕೋಟಿ 62 ಲಕ್ಷ ರೂಪಾಯಿ ವಾಪಸ್ ನೀಡುವುದಾಗಿ” ಹೇಳುತ್ತಾರೆ.

ಇದಕ್ಕಿಂತ ಹೆಚ್ಚಾಗಿ ವಂಚಕರು ಬಳಸುವ ತಂತ್ರ ಏನೆಂದರೆ, ಆನ್​ಲೈನ್​ ಬ್ಯಾಂಕಿಂಗ್ ಮ್ಯಾನೇಜರ್ 30 ನಿಮಿಷದೊಳಗಾಗಿ ಹಣ ವರ್ಗಾವಣೆ ಮಾಡುತ್ತಾರೆ ಎನ್ನುತ್ತಾರೆ. “ಆರ್​ಬಿಐ ಹೆಸರಲ್ಲಿ ಇಂಥ ನಕಲಿ ಮಂಜೂರಾತಿ ಪತ್ರ ಅಥವಾ ಯೋಜನೆಗಳಿಗೆ ಬಲಿ ಆಗಬೇಡಿ,” ಎಂದು ಪಿಐಬಿ ಫ್ಯಾಕ್ಟ್​ ಚೆಕ್​ನಲ್ಲಿ ಸೇರಿಸಲಾಗಿದೆ.

12,500 ರೂಪಾಯಿ ಪಾವತಿಸಿ ಮತ್ತು ಬದಲಿಗೆ 4 ಕೋಟಿ 62 ಲಕ್ಷ ಪಡೆಯಿರಿ!!

ಸರಿ, ಇದು ನಿಜವಾದರೆ ಎಷ್ಟು ಚೆಂದ ಎನಿಸುವಂಥ ಅಂಶ ಇದು.

ವಂಚಕರು ಸರ್ಕಾರಿ ಸಂಸ್ಥೆಯೊಂದರ ಹೆಸರನ್ನು ಹೇಳಿಕೊಂಡು ಜನರಿಗೆ ಹಣವನ್ನು ವಂಚಿಸುತ್ತಿದೆ.

ಆರ್​ಬಿಐ ಹೆಸರಲ್ಲಿ ಇಂಥ ನಕಲಿ ಮಂಜೂರಾತಿ ಪತ್ರ ಅಥವಾ ಯೋಜನೆಗಳಿಗೆ ಬೀಳಬೇಡಿ ಎಂದು ಪಿಐಬಿ ಫ್ಯಾಕ್ಟ್​ ಚೆಕ್​ನಲ್ಲಿ ಹೇಳಲಾಗಿದೆ.

ಇತ್ತೀಚಿನ ದಿನದಲ್ಲಿ ಆನ್​ಲೈನ್ ವಂಚನೆ ಸಾಮಾನ್ಯ ಎಂಬಂತಾಗಿದೆ. ವಂಚಕರು ಜನರ ಹಣಕ್ಕೆ ಮೋಸ ಮಾಡುವುದಕ್ಕೆ ಹೊಸ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಪಿಐಬಿ ಫ್ಯಾಕ್ಟ್ ಚೆಕ್ ತಂಡಕ್ಕೆ ಮತ್ತೊಂದು ವಂಚನೆ ಕಂಡುಬಂದಿತ್ತು. ಒಂದು ಲಿಂಕ್ ಕ್ಲಿಕ್ ಮಾಡಿದರೆ ಅದರ ಮೂಲಕ 2,67,000 ರೂಪಾಯಿ ವರ್ಗಾವಣೆ ಮಾಡುವುದಾಗಿ ಹೇಳಲಾಗಿತ್ತು. “ಪ್ರಿಯ ಗ್ರಾಹಕರೇ ನಿಮ್ಮ ಖಾತೆ ಸಂಖ್ಯೆ ****6525ಕ್ಕೆ ಸರ್ಕಾರಿ ಯೋಜನೆ ಅಡಿಯಲ್ಲಿ 2,67,000 ರೂಪಾಯಿ ಜಮೆ ಆಗಿದೆ” ಎಂದು ಸಂದೇಶ ಬರುತ್ತಿತ್ತು. ಆದರೆ ಅದು ಕೂಡ ವಂಚನೆಯೇ ಹೊರತು ಸರ್ಕಾರದಿಂದ ಅಂಥ ಯಾವ ಯೋಜನೆಯೂ ಇಲ್ಲ ಎಂದು ಪಿಐಬಿ ಹೇಳಿದೆ.

ಪಿಐಬಿ ಫ್ಯಾಕ್ಟ್​ ಚೆಕ್ ತಂಡವು ನಿಯಮಿತವಾಗಿ ನಕಲಿ ಸಂದೇಶಗಳು ಮತ್ತು ನಕಲಿ ಉದ್ಯೋಗ ಅಧಿಸೂಚನೆಗಳಿಂದ ಆನ್​ಲೈನ್​ ಬ್ಯಾಂಕಿಂಗ್ ವಂಚನೆ ಆಗಬಾರದು ಎಂದು ನಾಗರಿಕರ ರಕ್ಷಣೆ ಮಾಡುತ್ತದೆ. 155260 ಸಂಖ್ಯೆಗೆ ಕರೆ ಅಥವಾ cybercrime.gov.inಗೆ ಭೇಟಿ ನೀಡುವ ಮೂಲಕ ಸೈಬರ್ ವಂಚನೆಗಳ ಬಗ್ಗೆ ದೂರು ನೀಡಬಹುದು.

ಇದನ್ನೂ ಓದಿ: RBI: ಜನವರಿ 1, 2022ರಿಂದ ನಿಮ್ಮ ಕಾರ್ಡ್ ಡೇಟಾ ಆನ್​ಲೈನ್​ನಲ್ಲಿ ಸೇವ್​ ಆಗಲ್ಲ; ಇಲ್ಲಿದೆ ಆರ್​ಬಿಐ ಹೊಸ ನಿಯಮ

RBI Guidelines For Lockers: ಬ್ಯಾಂಕ್​ ಲಾಕರ್​ಗಳಿಗೆ ಸಂಬಂಧಿಸಿದಂತೆ ಆರ್​ಬಿಐನಿಂದ ಮಹತ್ವದ ಮಾರ್ಗಸೂಚಿ

(PIB Fact Check About Fraudsters Claims In The Name Of Reserve Bank Of India)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada