ನವದೆಹಲಿ: ಭಾರತದ ಸಾಫ್ಟ್ವೇರ್ ಸರ್ವಿಸ್ ಕಂಪನಿ ಟಿಸಿಎಸ್ (Tata Consultancy Services) ಅಮೆರಿಕದಲ್ಲಿ ಮಿಂಚುತ್ತಿದೆ. ಅಮೆರಿಕದಲ್ಲಿ ಅತಿ ಹೆಚ್ಚು ಉದ್ಯೋಗ ನೀಡುತ್ತಿರುವ ಐಟಿ ಸರ್ವಿಸ್ ಕಂಪನಿಗಳ ಪಟ್ಟಿಗೆ ಟಿಸಿಎಸ್ ಸೇರಿದೆ. ಅಮೆರಿಕದ ಅತಿದೊಡ್ಡ ಹಾಗೂ ಅತ್ಯುತ್ತಮ ಉದ್ಯೋಗದಾತರ ಫೋರ್ಬ್ಸ್ ಪಟ್ಟಿಯಲ್ಲಿ (America’s Best Large Employers) ಟಾಟಾ ಕನ್ಸಲ್ಟೆನ್ಸಿ ಸ್ಥಾನ ಪಡೆದಿದೆ. ಭಾರತದ ಸಾಫ್ಟ್ವೇರ್ ಸರ್ವಿಸ್ ಸಂಸ್ಥೆಯೊಂದು ಇಂಥ ಮೈಲಿಗಲ್ಲು ಮುಟ್ಟಿದ್ದು ಇದೇ ಮೊದಲು ಎನ್ನಲಾಗಿದೆ. ಉದ್ಯೋಗಿ ಸ್ನೇಹಿ ವಾತಾವರಣಕ್ಕೆ (Employee Friendly Environment) ಹೆಸರಾಗಿರುವ ಟಿಸಿಎಸ್ ಅಮೆರಿಕದಲ್ಲಿ 45,000ಕ್ಕೂ ಹೆಚ್ಚು ಮಂದಿಯನ್ನು ನೇಮಕ ಮಾಡಿಕೊಂಡಿದೆ. ಜಗತ್ತಿನ ವಿವಿಧ ದೇಶಗಳ ವಿವಿಧ ಕ್ಷೇತ್ರಗಳಲ್ಲಿ ಫೋರ್ಬ್ಸ್ (Forbes) ನಾನಾ ಪಟ್ಟಿಗಳನ್ನು ಪ್ರತೀ ವರ್ಷವೂ ಪ್ರಕಟಿಸುತ್ತಿರುತ್ತದೆ. ಅತಿಹೆಚ್ಚು ಪ್ರಭಾವ ಬೀರುವ ವ್ಯಕ್ತಿತ್ವಗಳು, ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳು, ಅತೀ ಹೆಚ್ಚು ಸಂಬಳ ಪಡೆಯುವ ಸಿಇಒಗಳು, ಅತ್ಯುತ್ತಮ ಸ್ಟಾರ್ಟಪ್ಗಳು ಹೀಗೆ ವಿವಿಧ ಫೋರ್ಬ್ಸ್ ಪಟ್ಟಿ ನಿರೀಕ್ಷಿಸಬಹುದು.
ಅಮೆರಿಕದ ಅತ್ಯುತ್ತಮ ಉದ್ಯೋಗದಾತರ ಪಟ್ಟಿ ತಯಾರಿಸುವ ಮುನ್ನ ಫೋರ್ಬ್ಸ್ ಸಂಸ್ಥೆ 1,000ಕ್ಕೂ ಹೆಚ್ಚು ಉದ್ಯೋಗಿಗಳಿರುವ ಅಮೆರಿಕದ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ 45,000 ಉದ್ಯೋಗಿಗಳನ್ನು ಸ್ವತಂತ್ರವಾಗಿ ಸಮೀಕ್ಷೆ ಮಾಡಿದೆ. ಫೋರ್ಬ್ಸ್ ಇಂಥ 500 ಪ್ರಮುಖ ಕಂಪನಿಗಳನ್ನು ಪಟ್ಟಿ ಮಾಡಿದೆ. ಇದರಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆ 486ನೇ ಸ್ಥಾನದಲ್ಲಿದೆ. ಆದರೂ ಭಾರತೀಯ ಕಂಪನಿಯೊಂದು ಯಾವುದೇ ವರ್ಷದಲ್ಲಿ ಈ ಪಟ್ಟಿಯಲ್ಲಿರುವುದು ಗಮನಾರ್ಹ ಸಂಗತಿ.
ಟಿಸಿಎಸ್ ಕಳೆದ 3 ವರ್ಷದಲ್ಲಿ ಅಮೆರಿಕದಲ್ಲಿ 21 ಸಾವಿರಕ್ಕೂ ಹೆಚ್ಚು ಮಂದಿಗೆ ನೌಕರಿ ಒದಗಿಸಿದೆ. ಆ ದೇಶದಲ್ಲಿ 45 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗಿಗಳು ಟಿಸಿಎಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲೂ ಟಿಸಿಎಸ್ ಬಹಳ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಒದಗಿಸುವ ಕಂಪನಿಯಾಗಿದೆ.
ಇದನ್ನೂ ಓದಿ: PM Kisan: 14ನೇ ಕಂತು ಯಾವಾಗ ಬಿಡುಗಡೆ? ರಾಜ್ಯ ಸರ್ಕಾರದ ಹಣ ಎಂದು? ಹಿಂದಿನ ಕಂತು ಸಿಗದವರು ಏನು ಮಾಡಬೇಕು?
ಟಿಸಿಎಸ್ ಅತಿಹೆಚ್ಚು ಉದ್ಯೋಗ ನೀಡಿರುವುದಲ್ಲದೇ ಕಂಪನಿಯಲ್ಲಿ ಉತ್ತಮ ಕೆಲಸದ ವಾತಾವರಣಕ್ಕೂ ಹೆಸರುವಾಸಿಯಾಗಿದೆ. ಆರ್ಥಿಕ ಹಿನ್ನಡೆ ಸಂದರ್ಭದಲ್ಲೂ ಟಿಸಿಎಸ್ ಉದ್ಯೋಗಕಡಿತಕ್ಕೆ ಕೈಹಾಕಿದ್ದು ಕಡಿಮೆ. ಉದ್ಯೋಗಿಗಳು ಬಹಳ ಖುಷಿಯಿಂದ ಕೆಲಸ ಮಾಡುವ ಕಂಪನಿಗಳಲ್ಲಿ ಟಿಸಿಎಸ್ ಕೂಡ ಒಂದು.
ಇತರ ಮೈಲಿಗಲ್ಲುಗಳು
ಅಮೆರಿಕದಲ್ಲಿ ಟಿಸಿಎಸ್ ಸಂಸ್ಥೆಗೆ ವಿಶೇಷ ಸ್ಥಾನ ಇದೆ. ವಿಶ್ವದ ಅತಿ ಪ್ರಮುಖ ಸಂಸ್ಥೆಗಳಲ್ಲಿ ಅದೂ ಒಂದೆನಿಸಿರುವುದು ಹೌದು. ಇದರಲ್ಲಿರುವ ಉದ್ಯೋಗಿ ಸ್ನೇಹಿ ವಾತಾವರಣ ಉದ್ಯಮ ವಲಯದ ಗಮನ ಸೆಳೆದಿದೆ. ಬಹಳಷ್ಟು ಉದ್ಯೋಗಾಕಾಂಕ್ಷಿಗಳ ಕನಸಿನ ಕಂಪನಿಯಾಗಿ ಮಾರ್ಪಡಿಸಿದೆ.
2023ರಲ್ಲಿ ಫಾರ್ಚೂನ್ ಮ್ಯಾಗಝಿನ್ ವಿಶ್ವದ ಅತ್ಯಂತ ಮೆಚ್ಚುಗೆಯ ಕಂಪನಿಗಳ ಪಟ್ಟಿಯಲ್ಲಿ (Best Regarded Companies) ಟಿಸಿಎಸ್ ಅನ್ನು ಸೇರಿಸಿರುವುದು ವಿಶೇಷ.
ಕರಿಯರ್ಬ್ಲಿಸ್ ಎಂಬ ಸಂಸ್ಥೆಯು 2023ರ ಟಾಪ್ 50 ಖುಷಿ ಕಂಪನಿಗಳ ಪಟ್ಟಿಯಲ್ಲಿ (Top 50 Happiest Companies) ಟಿಸಿಎಸ್ ಅನ್ನು ಒಳಗೊಂಡಿದೆ.
ಇದನ್ನೂ ಓದಿ: Mutual Fund: ಮ್ಯೂಚುವಲ್ ಫಂಡ್ಗಳಿಗೆ ನೆಚ್ಚಿನ ಮತ್ತು ಲಾಭದ ಕುದುರೆಗಳಾಗಿರುವ ಷೇರುಗಳಿವು…
ಫೋರ್ಬ್ಸ್ನ ಹಿಂದಿನ ಪಟ್ಟಿಗಳಲ್ಲೂ ಟಿಸಿಎಸ್
ಅಮೆರಿಕದ ಅತ್ಯುತ್ತಮ ದೊಡ್ಡ ಉದ್ಯೋಗದಾತ (Employers) ಕಂಪನಿಗಳ ಪಟ್ಟಿ 2023ವರ್ಷದ್ದು. ಫೋರ್ಬ್ಸ್ನ 2022ರ ಅಮೆರಿಕದ ಅತ್ಯುತ್ತಮ ಉದ್ಯೋಗದಾತರ ಪಟ್ಟಿಯಲ್ಲಿ ಟಿಸಿಎಸ್ ಸ್ಥಾನ ಪಡೆದಿತ್ತು. ಇದಲ್ಲದೇ ಫೋರ್ಬ್ಸ್ ಪಟ್ಟಿಯಲ್ಲಿ ಟಿಸಿಎಸ್ ಕಾಣಿಸಿಕೊಂಡ ನಿದರ್ಶನಗಳು ಈ ಕೆಳಗಿವೆ:
Published On - 5:33 pm, Tue, 14 March 23