Tata Group: ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆ ಆರಂಭಿಸಲಿದೆ ಟಾಟಾ

ಸೆಮಿಕಂಡಕ್ಟರ್ ಹಾಗೂ ಸೆಮಿಕಂಡಕ್ಟರ್ ಉತ್ಪನ್ನಗಳಿಗೆ ತೀವ್ರ ಬೇಡಿಕೆ ಹಾಗೂ ಪೂರೈಕೆ ಸಮಸ್ಯೆ ಇರುವ ಸಂದರ್ಭದಲ್ಲೇ ಟಾಟಾ ಗ್ರೂಪ್ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.

Tata Group: ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆ ಆರಂಭಿಸಲಿದೆ ಟಾಟಾ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Dec 10, 2022 | 6:23 PM

ನವದೆಹಲಿ: ಮುಂಬರುವ ವರ್ಷಗಳಲ್ಲಿ ದೇಶದಲ್ಲಿ ಸೆಮಿಕಂಡಕ್ಟರ್ (Semiconductor) ಉತ್ಪಾದನೆ ಆರಂಭಿಸುವ ಯೋಜನೆ ಹೊಂದಿರುವುದಾಗಿ ಟಾಟಾ ಗ್ರೂಪ್ (Tata Group) ತಿಳಿಸಿದೆ. ಈ ವಿಚಾರವಾಗಿ ‘ನಿಕ್ಕಿ ಏಷ್ಯಾ’ಗೆ ನೀಡಿರುವ ಸಂದರ್ಶನದಲ್ಲಿ ಟಾಟಾ ಸನ್ಸ್ ಚೇರ್ಮನ್ ನಟರಾಜನ್ ಚಂದ್ರಶೇಖರನ್ ಮಾಹಿತಿ ನೀಡಿದ್ದಾರೆ. ಎಲೆಕ್ಟ್ರಿಕ್ ವಾಹನಗಳಂಥ ಹೊಸ ಉದ್ಯಮಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಮುಂದಾಗಿರುವುದಾಗಿ ಅವರು ಹೇಳಿದ್ದಾರೆ.

ನಾವು ಈಗಾಗಲೇ ಟಾಟಾ ಎಲೆಕ್ಟ್ರಾನಿಕ್ಸ್ ಸ್ಥಾಪಿಸಿದ್ದೇವೆ. ಇದರ ಅಡಿಯಲ್ಲಿ ಸೆಮಿಕಂಡಕ್ಟರ್ ಉದ್ಯಮ ಆರಂಭಿಸುವುದಾಗಿ ಚಂದ್ರಶೇಖರನ್ ಹೇಳಿದ್ದಾರೆ ಎಂದು ‘ನಿಕ್ಕಿ ಏಷ್ಯಾ’ ಉಲ್ಲೇಖಿಸಿದೆ. ಅಸ್ತಿತ್ವದಲ್ಲಿರುವ ಚಿಪ್ ತಯಾರಕರೊಂದಿಗೆ ಪಾಲುದಾರಿಕೆ ಮಾಡುವ ಸಾಧ್ಯತೆಯನ್ನು ಕೂಡ ಅವರು ಪ್ರಸ್ತಾಪಿಸಿದ್ದಾರೆ. ಅಂತಿಮವಾಗಿ ಚಿಪ್ ತಯಾರಿ ಉದ್ಯಮ ಆರಂಭಿಸುವುದೇ ನಮ್ಮ ಗುರಿ ಎಂದೂ ಅವರು ತಿಳಿಸಿದ್ದಾರೆ.

ಸೆಮಿಕಂಡಕ್ಟರ್ ಹಾಗೂ ಸೆಮಿಕಂಡಕ್ಟರ್ ಉತ್ಪನ್ನಗಳಿಗೆ ತೀವ್ರ ಬೇಡಿಕೆ ಹಾಗೂ ಪೂರೈಕೆ ಸಮಸ್ಯೆ ಇರುವ ಸಂದರ್ಭದಲ್ಲೇ ಟಾಟಾ ಗ್ರೂಪ್ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಸ್ಮಾರ್ಟ್​ಫೋನ್, ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ದೇಶದಲ್ಲಿ ಹೆಚ್ಚುತ್ತಿದ್ದು, ಸದ್ಯ ಇವುಗಳ ತಯಾರಿಗೆ ಅಗತ್ಯ ಪ್ರಮಾಣದಲ್ಲಿ ಚಿಪ್ ಪೂರೈಕೆಯಾಗುತ್ತಿಲ್ಲ.

ಇದನ್ನೂ ಓದಿ: Tata Group: ಭಾರತದಲ್ಲಿ ಐಫೋನ್ ತಯಾರಿಸುವ ವಿಸ್ಟ್ರಾನ್ ಬೆಂಗಳೂರು ಘಟಕ ಖರೀದಿಗೆ ಟಾಟಾ ಒಲವು

ಭಾರತದ ಸೆಮಿಕಂಡಕ್ಟರ್ ಮಾರುಕಟ್ಟೆ 2026ರ ವೇಳೆಗೆ 64 ಶತಕೋಟಿ ಡಾಲರ್​ಗೆ ತಲುಪುವ ನಿರೀಕ್ಷೆ ಇದೆ ಎಂದು ‘ಇಂಡಿಯಾ ಎಲೆಕ್ಟ್ರಾನಿಕ್ಸ್ ಆ್ಯಂಡ್ ಸೆಮಿಕಂಡಕ್ಟರ್ ಅಸೋಸಿಯೇಷನ್’ ಇತ್ತೀಚೆಗೆ ತಿಳಿಸಿತ್ತು.

ಜಾಗತಿಕ ಚಿಪ್ ಕೊರತೆ, ಅಮೆರಿಕ ಮತ್ತು ಚೀನಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಪ್ರಮುಖ ಚಿಪ್‌ ತಯಾರಕರು ಪೂರೈಕೆಯಲ್ಲಿ ಬದಲಾವಣೆ ಮಾಡಲು ಕಾರಣವಾಗಿದೆ. ಇದರಿಂದಾಗಿ ಪೂರ್ವ ಮತ್ತು ದಕ್ಷಿಣ ಪೂರ್ವ ಏಷ್ಯಾದಲ್ಲಿ ಪೂರೈಕೆಗೆ ಸಮಸ್ಯೆ ಉಂಟುಮಾಡಿದೆ. ಇದರ ಲಾಭ ಪಡೆದುಕೊಂಡು ದೇಶದ ಚಿಪ್ ಉದ್ಯಮವನ್ನು ವಿಸ್ತರಿಸುವ ಬಗ್ಗೆ ಟಾಟಾ ಮತ್ತು ಭಾರತ ಸರ್ಕಾರ ಎದುರು ನೋಡುತ್ತಿವೆ ಎಂದು ವರದಿ ತಿಳಿಸಿದೆ. ಭಾರತದಲ್ಲಿ ಸೆಮಿಕಂಡಕ್ಟರ್  ಅಭಿವೃದ್ಧಿ ಕಾರ್ಯಕ್ರಮ ಮತ್ತು ಡಿಸ್ ಪ್ಲೇ ಉತ್ಪಾದನೆಗೆ ಪೂರಕ ವ್ಯವಸ್ಥೆ ನಿರ್ಮಾಣ ಕಾರ್ಯಕ್ರಮದಲ್ಲಿ ಕೆಲವು ಮಾರ್ಪಾಡಿಗೆ ಕೇಂದ್ರ ಸಚಿವ ಸಂಪುಟ ಸೆಪ್ಟೆಂಬರ್​ನಲ್ಲಿ ಅನುಮೋದನೆ ನೀಡಿತ್ತು. ಜತೆಗೆ ತಂತ್ರಜ್ಞಾನದ ಎಲ್ಲ ವಿಧಾನಗಳಲ್ಲಿ ಸೆಮಿಕಂಡಕ್ಟರ್ ಫ್ಯಾಬ್​ಗಳಿಗೆ ಮತ್ತು ಸಂಯುಕ್ತ ಅರೆವಾಹಕಗಳಿಗೆ, ಪ್ಯಾಕೇಜಿಂಗ್ ಮತ್ತು ಇತರೆ ಸೆಮಿಕಂಡ್ಕರ್ ಸೌಕರ್ಯಗಳಿಗೆ ಶೇ.50ರಷ್ಟು ಪ್ರೋತ್ಸಾಹಧನ ಘೋಷಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್