Air India: ಬೋಯಿಂಗ್​ನಿಂದ 150 ವಿಮಾನ ಖರೀದಿಗೆ ಏರ್​ ಇಂಡಿಯಾ ಒಪ್ಪಂದ ಸಾಧ್ಯತೆ

ಹೆಚ್ಚು ಇಂಧನ ದಕ್ಷತೆಯುಳ್ಳ ವಿಮಾನಗಳನ್ನು ಖರೀದಿಸುವ ಮೂಲಕ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾರ್ಯಾಚರಣೆ ಹೆಚ್ಚಿಸುವುದು ಏರ್​ ಇಂಡಿಯಾ ಉದ್ದೇಶ ಎನ್ನಲಾಗಿದೆ.

Air India: ಬೋಯಿಂಗ್​ನಿಂದ 150 ವಿಮಾನ ಖರೀದಿಗೆ ಏರ್​ ಇಂಡಿಯಾ ಒಪ್ಪಂದ ಸಾಧ್ಯತೆ
ಏರ್ ಇಂಡಿಯಾ ವಿಮಾನ
Follow us
TV9 Web
| Updated By: Ganapathi Sharma

Updated on: Dec 10, 2022 | 1:13 PM

ನವದೆಹಲಿ: ಟಾಟಾ ಗ್ರೂಪ್ (Tata Group) ಒಡೆತನದ ಏರ್ ಇಂಡಿಯಾ ಲಿಮಿಟೆಡ್ (Air India Ltd.) 150 ‘737 ಮ್ಯಾಕ್ಸ್​​’ ವಿಮಾನಗಳ ಖರೀದಿಗೆ ಬೋಯಿಂಗ್ (Boeing Co.) ಕಂಪನಿ ಜತೆ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದೆ. ಏರ್​ ಇಂಡಿಯಾ ಖಾಸಗೀಕರಣದ ಬಳಿಕ ನಡೆಯಲಿರುವ ಅತಿ ದೊಡ್ಡ ಒಪ್ಪಂದ ಇದಾಗಿರಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಎಕಾನಮಿಕ್ ಟೈಮ್ಸ್’ ವರದಿ ಮಾಡಿದೆ. 50 ‘737 ಮ್ಯಾಕ್ಸ್​​’ ವಿಮಾನಗಳನ್ನು ಏರ್ ಇಂಡಿಯಾ ಖರೀದಿಸುವುದು ಬಹುತೇಕ ಖಚಿತವಾಗಿದೆ. ಕ್ರಮೇಣ 150 ವಿಮಾನಗಳನ್ನು ಖರೀದಿಸಲಿದೆ ಎಂದು ವರದಿ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಲು ಬೋಯಿಂಗ್ ವಕ್ತಾರರು ನಿರಾಕರಿಸಿದ್ದಾರೆ. ಏರ್​ ಇಂಡಿಯಾ ಕೂಡ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಹೆಚ್ಚು ಇಂಧನ ದಕ್ಷತೆಯುಳ್ಳ ವಿಮಾನಗಳನ್ನು ಖರೀದಿಸುವ ಮೂಲಕ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾರ್ಯಾಚರಣೆ ಹೆಚ್ಚಿಸುವುದು ಏರ್​ ಇಂಡಿಯಾ ಉದ್ದೇಶ ಎನ್ನಲಾಗಿದೆ. ಸಿಂಗಾಪುರ ಏರ್​ಲೈನ್ಸ್​ನ ವಿಸ್ತಾರವನ್ನು ಏರ್​ ಇಂಡಿಯಾ ಜತೆ ವಿಲೀನಗೊಳಿಸುವ ಟಾಟಾ ನಿರ್ಧಾರವು ಏರ್​ ಇಂಡಿಯಾವನ್ನು ಜಗತ್ತಿನ ವಿಮಾನಯಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಲಿದೆ ಎಂದು ವರದಿ ತಿಳಿಸಿದೆ. ಈ ವಿಲೀನದಿಂದ ಏರ್​ ಇಂಡಿಯಾ ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ, ಎರಡನೇ ಅತಿದೊಡ್ಡ ಸ್ಥಳೀಯ ವಿಮಾನಯಾನ ಸಂಸ್ಥೆಯಾಗಿ ಗುರುತಿಸಿಕೊಳ್ಳಲಿದೆ. ವಿಲೀನದ ಬಳಿಕ ಏರ್​ ಇಂಡಿಯಾ ಬಳಿ ಇರುವ ವಿಮಾನಗಳ ಸಂಖ್ಯೆ 218 ಆಗಿರಲಿದೆ.

ಇದನ್ನು ಓದಿ: Tata Sons and Singapore Airlines: ಮಾರ್ಚ್ 2024ಕ್ಕೆ ಏರ್ ಇಂಡಿಯಾ ಮತ್ತು ವಿಸ್ತಾರ ವಿಲೀನ

ಏರ್​ಬಸ್ ಮತ್ತು ಬೋಯಿಂಗ್ ಜತೆ 50 ಶತಕೋಟಿ ಡಾಲರ್ ವಿಮಾನ ಖರೀದಿ ಒಪ್ಪಂದಕ್ಕೆ ಏರ್​ ಇಂಡಿಯಾ ಮುಂದಾಗಿದೆ ಎಂದು ಕೈಗಾರಿಕಾ ಮೂಲಗಳು ಜುಲೈನಲ್ಲಿ ತಿಳಿಸಿದ್ದವು. ಈ ಒಪ್ಪಂದ ಸಾಧ್ಯವಾದರೆ ಬೋಯಿಂಗ್​ಗೆ ಭಾರತದಿಂದ ಬೇಡಿಕೆ ಕುದುರಿಸಿಕೊಳ್ಳುವಲ್ಲಿ ದೊಡ್ಡ ಮಟ್ಟದ ಯಶಸ್ಸು ದೊರೆತಂತಾಗಲಿದೆ. ಈ ಹಿಂದೆ 2021ರಲ್ಲಿ ಆಕಾಸ ಏರ್​ಲೈನ್​ 72 ‘737 ಮ್ಯಾಕ್ಸ್’ ವಿಮಾನ ಖರೀದಿಗೆ ಆರ್ಡರ್ ಮಾಡಿದ್ದು ಬಿಟ್ಟರೆ ನಂತರ ಯಾವುದೇ ಆರ್ಡರ್ ಬೋಯಿಂಗ್​ಗೆ ಸಿಕ್ಕಿರಲಿಲ್ಲ.

ಟಾಟಾ ಮಾಲೀಕತ್ವ ವಹಿಸಿಕೊಂಡ ಬಳಿಕ ಏರ್​ ಇಂಡಿಯಾ ತನ್ನ ಉದ್ಯಮ ಬೆಳೆಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ. 5 ಶತಕೋಟಿ ಡಾಲರ್ ಮೌಲ್ಯದ ಕ್ಯಾರಿಯರ್​ಗಳನ್ನು ಹೊಂದುವ ಸಲುವಾಗಿ 1 ಶತಕೋಟಿ ಡಾಲರ್ ಫಡಿಂಗ್ ಸಂಗ್ರಹಿಸುವ ಬಗ್ಗೆಯೂ ಏರ್​ ಇಂಡಿಯಾ ಚಿಂತನೆ ನಡೆಸಿದೆ ಎಂದು ಬೆಳವಣಿಗೆಗಳ ಬಗ್ಗೆ ನಿಕಟ ಮಾಹಿತಿ ಹೊಂದಿರುವ ಮೂಲಗಳು ಇತ್ತೀಚೆಗೆ ತಿಳಿಸಿದ್ದವು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್