Tata Vehicles finance: ಕೊಟಕ್ ಮಹೀಂದ್ರಾ ಪ್ರೈಮ್​ನಿಂದ ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನದ ಮೇಲೆ ಸಾಲ ಸೌಲಭ್ಯ

| Updated By: Srinivas Mata

Updated on: Jun 23, 2021 | 7:45 PM

ಕೊಟಕ್ ಮಹೀಂದ್ರಾ ಪ್ರೈಮ್ ಲಿಮಿಟೆಡ್ ಜತೆಗೂಡಿ ಟಾಟಾ ಮೋಟಾರ್ಸ್​ನಿಂದ ಪ್ರಯಾಣಿಕರ ವಾಹನಗಳಿಗಾಗಿ ಮೂರು ಹಣಕಾಸು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿ ನೀಡಲಾಗಿದೆ.

Tata Vehicles finance: ಕೊಟಕ್ ಮಹೀಂದ್ರಾ ಪ್ರೈಮ್​ನಿಂದ ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನದ ಮೇಲೆ ಸಾಲ ಸೌಲಭ್ಯ
ಸಾಂದರ್ಭಿಕ ಚಿತ್ರ
Follow us on

ಕೊಟಕ್ ಮಹೀಂದ್ರಾ ಪ್ರೈಮ್ ಲಿಮಿಟೆಡ್ ಜತೆಗೂಡಿ ಟಾಟಾ ಮೋಟಾರ್ಸ್​ನಿಂದ ಪ್ರಯಾಣಿಕರ ವಾಹನಗಳಿಗಾಗಿ ಮೂರು ಹಣಕಾಸು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ರೆಡ್​ ಕಾರ್ಪೆಟ್, ಪ್ರೈಮ್ ವಿಶ್ವಾಸ್ ಹಾಗೂ ನಗರ ಹಾಗೂ ಗ್ರಾಮೀಣ ಪ್ರದೇಶದ ಗ್ರಾಹಕರಿಗೆ (ವೇತನದಾರರು, ಸ್ವ- ಉದ್ಯೋಗಿಗಳು ಮತ್ತು ಯಾವುದೇ ಆದಾಯದ ದಾಖಲೆ ಅಗತ್ಯ ಇಲ್ಲ) ಕಡಿಮೆ ಇಎಂಐ ಯೋಜನೆ ಕೂಡ ಇದೆ. ಜತೆಗೆ ಮಾಡೆಲ್​ಗಳ ಅಧಾರದಲ್ಲಿ ಆಯ್ಕೆಗೆ ತಕ್ಕಂತೆ ಅವಧಿ ಇದೆ. ಕೊರೊನಾ ಸಂದರ್ಭದಲ್ಲಿ ಗ್ರಾಹಕರ ಮೇಲೆ ಆರ್ಥಿಕ ಹೊರೆ ಬೀಳಬಾರದು ಎಂಬ ಕಾರಣಕ್ಕೆ ಈ ಯೋಜನೆ ರೂಪಿಸಲಾಗಿದೆ.

ರೆಡ್ ಕಾರ್ಪೆಟ್ ಯೋಜನೆ
ಯಾರಿಗೆ ಆದಾಯ ಪ್ರೂಫ್ ಇರುತ್ತದೋ ಅಂಥವರಿಗಾಗಿ ಇರುವಂಥ ಯೋಜನೆ ಇದು. ಆನ್​ಲೈನ್ ರೋಡ್ ದರದ ಶೇ 90ರಷ್ಟು ಮೊತ್ತದ ತನಕ ಹಣಕಾಸು ಸೌಲಭ್ಯ ಸಿಗುತ್ತದೆ. ಸಾಲ ಮರುಪಾವತಿ 7 ವರ್ಷದ ತನಕ ಇದೆ. 11 ಲಕ್ಷ ರೂಪಾತಿ ತನಕದ ಸಾಲಕ್ಕೆ ಫಿಕ್ಸೆಡ್ ಆಬ್ಲಿಗೇಷನ್ ಟು ಇನ್​ಕಮ್ ರೇಷಿಯೋ (FOIR) ಇಲ್ಲ. ಸಾಲದ ಭಾಗಶಃ ಮರುಪಾವತಿ ಮತ್ತು ಪೂರ್ವ ಪಾವತಿಗೆ ಆಕರ್ಷಕ ಆಫರ್​ಗಳಿವೆ.

ಪ್ರೈಮ್ ವಿಶ್ವಾಸ್ ಪ್ರಾಡಕ್ಟ್
ಈ ಯೋಜನೆ ಇರುವುದು ಯಾವುದೇ ಆದಾಯದ ಪ್ರೂಫ್ ಇಲ್ಲದವರಿಗಾಗಿ. ಎಕ್ಸ್​ ಶೋರೂಮ್ ಬೆಲೆಯ ಶೇ 90ರ ತನಕ ಸಾಲ ದೊರೆಯುತ್ತದೆ. ಸಾಲ ಮರುಪಾವತಿ ಅವಧಿ 5 ವರ್ಷಗಳ ತನಕ ಇದೆ. ಕೃಷಿ ಭೂಮಿ ಅಥವಾ ಆಸ್ತಿ ಮಾಲೀಕತ್ವ ಮಾನದಂಡದ ಆಧಾರದಲ್ಲಿ ನೀಡಲಾಗುತ್ತದೆ.

ಕಡಿಮೆ ಇಎಂಐ ಯೋಜನೆ
ಸ್ವ ಉದ್ಯೋಗಿಗಳು, ವೇತನದಾರ ಗ್ರಾಹಕರು ಇಬ್ಬರಿಗೂ ಇದು ದೊರೆಯುತ್ತದೆ. ಶೇ 50ರ ತನಕ ಕಡಿಮೆ ಇಎಂಐ- ಮೊದಲ ಮೂರು ತಿಂಗಳು ಹೀಗೆ ಇಎಂಐ ಕಡಿಮೆ ಆಗುವುದರಿಂದ ಆರಂಭದಲ್ಲಿ ಒತ್ತಡ ಕಡಿಮೆ ಆಗುತ್ತದೆ. ಒಂದು ಲಕ್ಷಕ್ಕೆ ರೂ. 999ರಿಂದ ಆರಂಭವಾಗುತ್ತದೆ. ಮೊದಲ ಮೂರು ತಿಂಗಳು ಇದೇ ಮೊತ್ತ ಇರುತ್ತದೆ. ಆನ್​ ರೋಡ್​ ದರದ ಶೇ 80ರ ತನಕ ಸಾಲ ಸಿಗುತ್ತದೆ.

ವಿವಿಧ ಹಣಕಾಸು ಯೋಜನೆಯ ಅನುಕೂಲ ಪಡೆಯುವುದಕ್ಕೆ ಗ್ರಾಹಕರು ತಮ್ಮ ಹತ್ತಿರದ ಟಾಟಾ ಮೋಟಾರ್ಸ್ ಡೀಲರ್ ಅಥವಾ ಕೊಟಕ್ ಮಹೀಂದ್ರಾ ಪ್ರೈಮ್ ಶಾಖೆ ಭೇಟಿ ನೀಡಬೇಕು ಅಥವಾ https://cars.tatamotors.com/ ಇಲ್ಲಿಗೆ ಭೇಟಿ ನೀಡಬೇಕು. ಕ್ಲಿಕ್ ಟು ಡ್ರೈವ್, ಟಾಟಾ ಮೋಟಾರ್ಸ್ ಎಂಡ್ ಟು ಎಂಡ್ ಆನ್​ಲೈನ್ ಪ್ಲಾಟ್​ಫಾರ್ಮ್​ನಲ್ಲಿ ಗ್ರಾಹಕರು ಟೆಸ್ಟ್​ ಡ್ರೈವ್ ಮನವಿ, ಬುಕ್ಕಿಂಗ್ ಮಾಡಬಹುದು ಮತ್ತು ತಮ್ಮ ಆದ್ಯತೆಯ ಹಣಕಾಸು ಸೌಲಭ್ಯವನ್ನು ಸಹ ಆರಿಸಬಹುದು.

ಇದನ್ನೂ ಓದಿ: Tata passenger vehicles: ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನಗಳ ಬೆಲೆ ಮೇ 8ರಿಂದ ಏರಿಕೆ

(Tata Motors collaborates with Kotak Mahindra Prime to offer three financing solutions for its passenger vehicle customers. Here is the complete details)