AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tata: ಸೌಂದರ್ಯ ಕ್ಷೇತ್ರಕ್ಕೂ ಟಾಟಾ ಎಂಟ್ರಿ; ‘ಬ್ಯೂಟಿ ಟೆಕ್’ ಮಳಿಗೆಗಳನ್ನು ಆರಂಭಿಸಲು ಚಿಂತನೆ

18ರಿಂದ 45 ವರ್ಷ ವಯೋಮಾನದವರನ್ನು ಗುರಿಯಾಗಿಸಿಕೊಂಡು ಟಾಟಾ ಸಂದರ್ಯ ಕ್ಷೇತ್ರಕ್ಕೆ ಕಾಲಿಡಲು ಉದ್ದೇಶಿಸಿದೆ. ಹೊಸ ಮಳಿಗೆಗಳಿಗೆ ಉತ್ಪನ್ನಗಳನ್ನು ಪೂರೈಸಲು ಟಾಟಾ ಹತ್ತಕ್ಕೂ ಹೆಚ್ಚು ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.

Tata: ಸೌಂದರ್ಯ ಕ್ಷೇತ್ರಕ್ಕೂ ಟಾಟಾ ಎಂಟ್ರಿ; ‘ಬ್ಯೂಟಿ ಟೆಕ್’ ಮಳಿಗೆಗಳನ್ನು ಆರಂಭಿಸಲು ಚಿಂತನೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Nov 16, 2022 | 10:28 AM

Share

ನವದೆಹಲಿ: ಇತ್ತೀಚೆಗಷ್ಟೇ ರಿಲಯನ್ಸ್ ಇಂಡಸ್ಟ್ರೀಸ್ ಸಲೂನ್ ಉದ್ಯಮಕ್ಕೆ ಕಾಲಿಡುವ ಬಗ್ಗೆ ವರದಿಯಾಗಿತ್ತು. ಇದೀಗ ಟಾಟಾ ಸಮೂಹ (Tata Group) ಕೂಡ ಸೌದರ್ಯ ಕ್ಷೇತ್ರಕ್ಕೆ ಕಾಲಿಡುವ ಬಗ್ಗೆ ಯೋಚಿಸುತ್ತಿದೆ ಎಂದು ವರದಿಯಾಗಿದೆ. ಟಾಟಾ ಸಮೂಹವು ದೇಶದಲ್ಲಿ ಕನಿಷ್ಠ 20 ಬ್ಯೂಟಿ ಟೆಕ್ ಮಳಿಗೆಗಳನ್ನು (Beauty Tech Stores) ಆರಂಭಿಸಲು ಚಿಂತನೆ ನಡೆಸಿದೆ. ಈ ಮಳಿಗೆಗಳಲ್ಲಿ ವರ್ಚುವಲ್ ಮೇಕಪ್ ಕಿಯೋಸ್ಕ್​ಗಳು, ಡಿಜಿಟಲ್ ಸ್ಕಿನ್ ಟೆಸ್ಟ್ ಸಾಧನಗಳನ್ನು ಅಳವಡಿಸಲು ಉದ್ದೇಶಿಸಿದೆ. ಈ ಮೂಲಕ ಯುವ, ಶ್ರೀಮಂತ ವ್ಯಾಪಾರಿಗಳು ಪ್ರೀಮಿಯಂ ಕಾಸ್ಮೆಟಿಕ್ ಉತ್ಪನ್ನಗಳನ್ನು ಖರೀದಿಸಲು ಅನುವು ಮಾಡಿಕೊಡಲಿದೆ ಎಂದು ಬೆಳವಣಿಗೆಗಳ ಬಗ್ಗೆ ಖಚಿತ ಮಾಹಿತಿಯುಳ್ಳ ಮೂಲಗಳು ತಿಳಿಸಿವೆ.

ಇದರೊಂದಿಗೆ ಟಾಟಾ ಉದ್ಯಮವು ಮತ್ತಷ್ಟು ವಿಸ್ತರಣೆಯಾಗಲಿದೆ. ಕಾರು, ಆಭರಣ ಮಾರಾಟ ಸೇರಿದಂತೆ ಹಲವು ಉದ್ಯಮಗಳಲ್ಲಿ ಟಾಟಾ ಸಮೂಹ ಈಗಾಗಲೇ ಪ್ರಸಿದ್ಧಿಪಡೆದಿದೆ. ಮುಂದೆ ಸೌಂದರ್ಯ ಕ್ಷೇತ್ರದ ಕಂಪನಿಗಳಾದ ಎಲ್​​ವಿಎಂಎಚ್​ನ ಸಿಫೋರಾ ಹಾಗೂ ದೇಶೀಯ ನೈಕಾಗೆ ಪೈಪೋಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

18ರಿಂದ 45 ವರ್ಷ ವಯೋಮಾನದವರನ್ನು ಗುರಿಯಾಗಿಸಿಕೊಂಡು ಟಾಟಾ ಸಂದರ್ಯ ಕ್ಷೇತ್ರಕ್ಕೆ ಕಾಲಿಡಲು ಉದ್ದೇಶಿಸಿದೆ. ಎಸ್ಟೀ ಲಾಡರ್ಸ್ ಎಂಎಸಿ, ಬೊಬ್ಬಿ ಬ್ರೌನ್​ನಂಥ ವಿದೇಶಿ ಬ್ರ್ಯಾಂಡ್​ಗಳ ಜತೆ ಮಾತುಕತೆಯಲ್ಲಿದೆ. ಹೊಸ ಮಳಿಗೆಗಳಿಗೆ ಉತ್ಪನ್ನಗಳನ್ನು ಪೂರೈಸಲು ಟಾಟಾ ಹತ್ತಕ್ಕೂ ಹೆಚ್ಚು ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ. ಆದರೆ, ಯಾವೆಲ್ಲ ಬ್ರ್ಯಾಂಡ್​ಗಳ ಜತೆ ಟಾಟಾ ಮಾತುಕತೆ ನಡೆಸುತ್ತಿದೆ ಎಂಬ ವಿವರಗಳನ್ನು ತಿಳಿಸಿಲ್ಲ.

ಟಾಟಾ ಸಮೂಹ ಹೇಳುವುದೇನು?

‘ಬ್ಯೂಟಿ ಟೆಕ್’ ಮಳಿಗೆಗಳನ್ನು ಆರಂಭಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಟಾಟಾ ಸಮೂಹ ನಿರಾಕರಿಸಿದೆ ಎಂದು ‘ರಾಯಿಟರ್ಸ್’ ಸುದ್ದಿ ಸಂಸ್ಥೆ ತಿಳಿಸಿದೆ. ಅದೇ ರೀತಿ, ಟಾಟಾ ಸಮೂಹ ಮಾತುಕತೆ ನಡೆಸುತ್ತಿದೆ ಎನ್ನಲಾದ ಕೆಲವು ಕಂಪನಿಗಳೂ ಪ್ರತಿಕ್ರಿಯಿಸಲು ನಿರಾಕರಿಸಿವೆ.

ಸಲೂನ್ ಉದ್ಯಮಕ್ಕೆ ರಿಲಯನ್ಸ್ ಎಂಟ್ರಿ…

ಚೆನ್ನೈ ಮೂಲದ ‘ನ್ಯಾಚುರಲ್ಸ್ ಸಲೂನ್ ಆ್ಯಂಡ್ ಸ್ಪಾ’ ಕಂಪನಿಯ ಶೇಕಡಾ 49ರಷ್ಟು ಷೇರು ಖರೀದಿಗೆ ರಿಲಯನ್ಸ್​ ರಿಟೇಲ್ ಮುಂದಾಗಿದೆ. ಈ ಮೂಲಕ ಹಿಂದೂಸ್ತಾನ್ ಯುನಿಲೀವರ್​ನ ಲ್ಯಾಕ್ಮೆ ಬ್ರ್ಯಾಂಡ್, ಎನ್ರಿಚ್ ಮತ್ತು ಗೀತಾಂಜಲಿಯಂಥ ಇತರ ಸ್ಥಳೀಯ ಬ್ರ್ಯಾಂಡ್​ಗಳಿಗೆ ಪೈಪೋಟಿ ನೀಡಲಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಆದರೆ ಈ ವಿಚಾರವಾಗಿ ನ್ಯಾಚುರಲ್ಸ್ ಅಥವಾ ರಿಲಯನ್ಸ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:28 am, Wed, 16 November 22

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ