TCS salary: ಟಿಸಿಎಸ್​ ಸಿಇಒ ರಾಜೇಶ್ ವಾರ್ಷಿಕ ವೇತನ ಶೇ 52ರಷ್ಟು, ಸಿಒಒ ಸುಬ್ರಮಣಿಯಮ್​ಗೆ ಶೇ 60ರಷ್ಟು ಹೆಚ್ಚಳ

ಹೆಸರಾಂತ ಕಂಪೆನಿಗಳ ಮೇಲಿನ ಹಂತದ ಹುದ್ದೆಗಳಲ್ಲಿ ಇರುವವರ ವೇತನ ಸದಾ ಕಾಲ ಚರ್ಚೆಯಲ್ಲಿ ಇರುವಂಥ ವಿಷಯ. ಈಗ ಟಿಸಿಎಸ್ ಸಿಇಒ ಸರದಿ. 2020- 21ರಲ್ಲಿ ಶೇ 52 ರಷ್ಟು ಏರಿಕೆಯಾಗಿ 20 ಕೋಟಿ ರೂ. ಮುಟ್ಟಿದೆ ವೇತನ.

TCS salary: ಟಿಸಿಎಸ್​ ಸಿಇಒ ರಾಜೇಶ್ ವಾರ್ಷಿಕ ವೇತನ ಶೇ 52ರಷ್ಟು, ಸಿಒಒ ಸುಬ್ರಮಣಿಯಮ್​ಗೆ ಶೇ 60ರಷ್ಟು ಹೆಚ್ಚಳ
ರಾಜೇಶ್ ಗೋಪಿನಾಥನ್
Follow us
Srinivas Mata
|

Updated on: May 21, 2021 | 8:38 PM

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್​ನ ಸಿಇಒ ಆದ ರಾಜೇಶ್ ಗೋಪಿನಾಥನ್ ಅವರ ವಾರ್ಷಿಕ ವೇತನ ಕಳೆದ ವರ್ಷಕ್ಕಿಂತ (2019-20) ಶೇ 52ರಷ್ಟು ಹೆಚ್ಚಳವಾಗಿದೆ. ಅಂದರೆ 20 ಕೋಟಿ ರೂಪಾಯಿಗೂ ಹೆಚ್ಚಾಗಿದೆ ಎಂಬ ಅಂಶವನ್ನು ಕಂಪೆನಿಯ 2020-21ರ ವರದಿಯಲ್ಲಿ ತಿಳಿಸಲಾಗಿದೆ. ಹಣಕಾಸು ವರ್ಷ 2020ರಲ್ಲಿ ರಾಜೇಶ್ ಗೋಪಿನಾಥನ್ 13.3 ಕೋಟಿ ರೂಪಾಯಿ ಗಳಿಸಿದ್ದರು. ಅವರು ನಿರ್ವಹಣಾ ವೇತನದ ಸರಾಸರಿಯು ಕಳೆದ ಹಣಕಾಸು ವರ್ಷದಲ್ಲಿ ಶೇ 55.22ರಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಅಂದ ಹಾಗೆ, ಟಿಸಿಎಸ್​ನಿಂದ ಕಾರ್ಯನಿರ್ವಹಣಾ ನಿರ್ದೇಶಕರಿಗೆ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕರಿಗೆ ಪಾವತಿಸುತ್ತಿರುವ ವೇತನ ಅಂದರೆ, ಅದರಲ್ಲಿ ಸಂಬಳ, ಅನುಕೂಲಗಳು, ಸೌಲಭ್ಯಗಳು ಮತ್ತು ಭತ್ಯೆಗಳು (ಸ್ಥಿರವಾದವು) ಹಾಗೂ ಕಮಿಷನ್ (ಬದಲಾಗುವಂಥದ್ದು) ಎಲ್ಲವೂ ಒಳಗೊಂಡಿರುತ್ತವೆ ಎಂದು ಕಂಪೆನಿ ಹೇಳಿದೆ.

ಹಣಕಾಸು ವರ್ಷ 2021ರಲ್ಲಿ ರಾಜೇಶ್ ಗೋಪಿನಾಥನ್ ಸಂಬಳ ರೂ. 1.27 ಕೋಟಿ ರೂಪಾಯಿ. ನಿಮಗೆ ಆಶ್ಚರ್ಯ ಆಗಬಹುದು, ಅದಕ್ಕೆ ಒಂದು ವರ್ಷದ ಹಿಂದೆ 1.30 ಕೋಟಿ ರೂಪಾಯಿ ಇತ್ತು. ಅನುಕೂಲಗಳು, ಸೌಲಭ್ಯಗಳು ಮತ್ತು ಭತ್ಯೆಗಳು ಸೇರಿ ರೂ. 2.09 ಕೋಟಿ ಇತ್ತು. ಅದರ ಹಿಂದಿನ ವರ್ಷ 1.30 ಕೋಟಿ ರೂಪಾಯಿ ಇತ್ತು. ಕಳೆದ ಹಣಕಾಸು ವರ್ಷದಲ್ಲಿ ಕಮಿಷನ್ 17 ಕೋಟಿ ಬಂದಿದೆ. ಅದರ ಹಿಂದಿನ ವರ್ಷ 10 ಕೋಟಿ ಇತ್ತು. ಟಿಸಿಎಸ್​ನಲ್ಲಿ ಸಿಇಒ ಸಂಬಳವು ಉದ್ಯೋಗಿ ಸಂಬಳದ ಮೀಡಿಯನ್​ನ 326.8:1 ಇದ್ದು, ವರ್ಷದ ಹಿಂದೆ ಈ ಪ್ರಮಾಣ 214.6:1 ಇತ್ತು.

ಇನ್ನು ಸಿಒಒ ಎನ್​.ಜಿ. ಸುಬ್ರಮಣಿಯಮ್ ಸಂಬಳ ಕಳೆದ ಹಣಕಾಸು ವರ್ಷಕ್ಕಿಂತ ಶೇ 60ರಷ್ಟು ಏರಿಕೆಯಾಗಿದೆ. ಅದರಲ್ಲಿ 1.215 ಕೋಟಿ ರೂಪಾಯಿ ಸಂಬಳ, ರೂ. 1.88 ಕೋಟಿ ಅನುಕೂಲ ಮತ್ತು ಭತ್ಯೆಗಳು ಹಾಗೂ ರೂ. 13 ಕೋಟಿ ರೂಪಾಯಿ ಪರಿಹಾರ ಎಂದು ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ. ಭಾರತದ ಅತಿದೊಡ್ಡ ಸಾಫ್ಟ್​ವೇರ್ ರಫ್ತುದಾರ ಕಂಪೆನಿ ಟಿಸಿಎಸ್​​ನಲ್ಲಿ ಮಾರ್ಚ್ 31, 2021ಕ್ಕೆ ಒಟ್ಟು 4,88,650 ಸಿಬ್ಬಂದಿ ಇದ್ದಾರೆ. ಕಂಪೆನಿಯಿಂದ FY21ರಲ್ಲಿ ಸರಾಸರಿ ವೇತನ ಹೆಚ್ಚಳ ಶೇ 5.2ರಷ್ಟು ಮಾಡಲಾಗಿದೆ. ಭಾರತದ ಹೊರಗೆ ಇರುವ ಟಿಸಿಎಸ್ ಸಿಬ್ಬಂದಿಗೆ ಶೇ 2ರಿಂದ ಶೇ 6ರಷ್ಟು ವೇತನ ಹೆಚ್ಚಳ ಮಾಡಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: TCS employees salary hike: FY22ಕ್ಕೆ ಉದ್ಯೋಗಿಗಳ ವೇತನ ಹೆಚ್ಚಳ ಘೋಷಿಸಿದ ಮೊದಲ ಕಂಪೆನಿ ಟಿಸಿಎಸ್

(TCS CEO Rajesh Gopinathan salary increased by 52% in 2020- 21 and COO Subramaniyam salary by 60%)

ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು