ಬೆಂಗಳೂರು: ಭಾರತದ ಅತಿದೊಡ್ಡ ಐಟಿ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ನಲ್ಲಿ (TCS) ಇತ್ತೀಚೆಗಷ್ಟೇ ಸಿಇಒ ಬದಲಾಗಿದ್ದಾರೆ. 58 ವರ್ಷದ ಕೆ ಕೃತಿವಾಸನ್ (K Krithivasan) ಅವರು ಹೊಸ ಸಿಇಒ ಆಗಿದ್ದಾರೆ. 52 ವರ್ಷದ ರಾಜೇಶ್ ಗೋಪಿನಾಥನ್ ಸ್ಥಾನವನ್ನು ಕೃತಿವಾಸನ್ ತುಂಬುತ್ತಿದ್ದಾರೆ. ಭಾರತದಲ್ಲಿ ಅತಿಹೆಚ್ಚು ಸ್ಯಾಲರಿ ಪ್ಯಾಕೇಜ್ ಪಡೆಯುವ ಸಿಇಒಗಳ ಪಟ್ಟಿಯಲ್ಲಿ ರಾಜೇಶ್ ಗೋಪಿನಾಥನ್ 5ನೇಯವರಾಗಿದ್ದರು. ಈಗ ಅವರು ಸೆಪ್ಟೆಂಬರ್ 16ರವರೆಗೂ ಟಿಸಿಎಸ್ನಲ್ಲಿ ಸಲಹೆಗಾರರಾಗಿ ಉಳಿಯಲಿದ್ದಾರೆ. ಹಿಂದಿನ ಸಿಇಒ ಮತ್ತು ಹೊಸ ಸಿಇಒ ಇಬ್ಬರೂ ಕೂಡ ಟಿಸಿಎಸ್ನ ಹಳೆಯ ಉದ್ಯೋಗಿಗಳೇ. ಹಲವಾರು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಾ ಬಂದಿದ್ದವರು. ರಾಜೇಶ್ ಗೋಪಿನಾಥನ್ 22 ವರ್ಷಗಳ ಕಾಲ ಟಿಸಿಎಸ್ನಲ್ಲಿ ಇದ್ದಾರೆ. ಹೊಸ ಸಿಇಒ ಕೆ ಕೃತಿವಾಸನ್ 30ಕ್ಕೂ ಹೆಚ್ಚು ವರ್ಷಗಳಿಂದ ಟಾಟಾ ಗ್ರೂಪ್ನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ. ರಾಜೇಶ್ ಗೋಪಿನಾಥನ್ ಟಿಸಿಎಸ್ನ ಅತಿಕಿರಿಯ ವಯಸ್ಸಿನ ಸಿಇಒ ಎನಿಸಿದರೆ, ಕೃತಿವಾಸನ್ ಅತಿಹಿರಿಯ ವಯಸ್ಸಿನ ಸಿಇಒ ಎನಿಸಿದ್ದಾರೆ.
ರಾಜೇಶ್ ಗೋಪಿನಾಥನ್ 2022-23ರ ಹಣಕಾಸು ವರ್ಷದಲ್ಲಿ ಬೇಸಿಕ್ ಸ್ಯಾಲರಿ ವರ್ಷಕ್ಕೆ 1.7 ಕೋಟಿ ರೂ ಇತ್ತು. ಬೇರೆ ಭತ್ಯೆ ಎಲ್ಲಾ ಸೇರಿ ಒಂದು ವರ್ಷದಲ್ಲಿ ಅವರ ಸ್ಯಾಲರಿ ಪ್ಯಾಕೇಜ್ 29.16 ಕೋಟಿ ರೂನಷ್ಟಿದೆ.
ಇನ್ನು, ಎನ್ ಕ್ರುದಿವಾಸನ್ ಅವರ ಬೇಸಿಕ್ ಸ್ಯಾಲರಿ ತಿಂಗಳಿಗೆ 10 ಲಕ್ಷ ರೂ ಇದೆ. ಅಂದರೆ ವರ್ಷಕ್ಕೆ 1.2 ಕೋಟಿ ರೂನಷ್ಟಿದೆ. ಸಿಇಒ ಆಗಿ ಬಡ್ತಿ ಪಡೆದ ಬಳಿಕ ಅವರ ಸಂಬಳ ವರ್ಷಕ್ಕೆ 1.9 ಕೋಟಿ ರೂಗೆ ಏರಿರಬಹುದು. ಈ ಸಂಬಳದ ಜೊತೆಗೆ ಅವರಿಗೆ ಬೇರೆ ಬೇರೆ ಭತ್ಯೆ, ಪರಿಹಾರಗಳು ಸಿಗುತ್ತವೆ. ಹಿಂದಿನ ಸಿಇಒ ರಾಜೇಶ್ ಗೋಪಿನಾಥನ್ ಸಿಗುತ್ತಿದ್ದಷ್ಟೇ ಪ್ಯಾಕೇಜ್ ಕೃತಿವಾಸನ್ಗೂ ಲಭಿಸಲಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆಯಲ್ಲಿ ಬಹುತೇಕ ಎಲ್ಲಾ ಎಕ್ಸಿಕ್ಯೂಟಿವ್ಸ್ಗೂ ಒಳ್ಳೆಯ ಸಂಬಳ ಇದೆ. ಚೀಫ್ ಆಪರೇಟಿಂಗ್ ಆಫೀಸರ್ ಎನ್.ಜಿ. ಸುಬ್ರಮಣಿಯಮ್ ಅವರು 2022-23ರ ವರ್ಷದಲ್ಲಿ 23.59 ಕೋಟಿ ರೂಗಳ ಪ್ಯಾಕೇಜ್ ಪಡೆದಿದ್ದಾರೆ.
ಇದನ್ನೂ ಓದಿ: Narendra Modi: ಅಮೆರಿಕಕ್ಕೆ ಮೋದಿ ಭೇಟಿ, ಎರಡೂ ದೇಶಗಳ ಸಂಬಂಧಕ್ಕೆ ಪುಷ್ಟಿ: ಅಲ್ಲಿನ ಸಂಸದ ಅಮಿ ಬೆರಾ ವಿಶ್ವಾಸ
ಇನ್ನು, ಕೆ ಕೃತಿವಾಸನ್ ಈ ಸಂಸ್ಥೆಯ ಹಿರಿಯ ತಲೆಮಾರಿಗೆ ಸೇರಿದವರು. ಟಿಸಿಎಸ್ನ ಬ್ಯಾಂಕಿಂಗ್, ಹಣಕಾಸು ಸೇವೆ ಮತ್ತು ಇನ್ಸೂರೆನ್ಸ್ ಬ್ಯುಸಿನೆಸ್ ಗ್ರೂಪ್ನ ಜಾಗತಿಕ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು. 1989ರಲ್ಲಿ ಟಿಸಿಎಸ್ ಸೇರಿದ ಅವರು ತಮ್ಮ ಸುದೀರ್ಘ ವೃತ್ತಿ ಅವಧಿಯಲ್ಲಿ ವಿವಿಧ ಸ್ತರಗಳ ನಾಯಕತ್ವ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ತಮಿಳುನಾಡಿನವರಾದ ಕೃತಿವಾಸನ್ ಮೆಕ್ಯಾನಿಕಲ್ ಎಂಜಿನಿಯರ್, ಹಾಗೂ ಐಐಟಿ ಕಾನ್ಪುರ್ನಲ್ಲಿ ಇಂಡಸ್ಟ್ರಿಯಲ್ ಅಂಡ್ ಮ್ಯಾನೇಜ್ಮೆಂಟ್ ಎಂಜಿನಿಯರಿಂಗ್ನಲ್ಲಿ ಎಂಇ ಕೂಡ ಮಾಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ