TDS on Cash: ನೀವು ಕ್ಯಾಷ್ ವಿತ್​ಡ್ರಾ ಮಾಡಿದರೆ ಶೇ. 2ರಷ್ಟು ಟಿಡಿಎಸ್ ಕಡಿತವಾಗುತ್ತಾ? ಈ ಇನ್ಕಮ್ ಟ್ಯಾಕ್ಸ್ ನಿಯಮ ತಿಳಿದಿರಿ

IT Act Rules: ವರ್ಷಕ್ಕೆ ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚು ಹಣವನ್ನು ವಿತ್​ಡ್ರಾ ಮಾಡಿದರೆ ಶೇ. 2ರಷ್ಟು ಟಿಡಿಎಸ್ ಮುರಿದುಕೊಳ್ಳಲಾಗುತ್ತದೆ. ಈ ಬಗ್ಗೆ ಮಾಹಿತಿ ಇಲ್ಲಿದೆ...

TDS on Cash: ನೀವು ಕ್ಯಾಷ್ ವಿತ್​ಡ್ರಾ ಮಾಡಿದರೆ ಶೇ. 2ರಷ್ಟು ಟಿಡಿಎಸ್ ಕಡಿತವಾಗುತ್ತಾ? ಈ ಇನ್ಕಮ್ ಟ್ಯಾಕ್ಸ್ ನಿಯಮ ತಿಳಿದಿರಿ
ಕ್ಯಾಷ್ ವಿತ್​ಡ್ರಾ

Updated on: Jul 19, 2023 | 6:33 PM

ಆದಾಯ ತೆರಿಗೆಯ ರಿಟರ್ನ್ (IT Return Filing) ಸಲ್ಲಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಜುಲೈ 31ಕ್ಕೆ ಡೆಡ್​ಲೈನ್ ಇದೆ. ಇಲ್ಲಿಯವರೆಗೂ 3 ಕೋಟಿಗೂ ಹೆಚ್ಚು ಐಟಿಆರ್​ಗಳು ಸಲ್ಲಿಕೆಯಾಗಿವೆ. ಒಂದು ಹಣಕಾಸು ವರ್ಷದಲ್ಲಿ ನಮಗೆ ಬಂದ ಆದಾಯವನ್ನು ತೋರಿಸಲು ಮತ್ತು ಕಡಿತಗೊಂಡ ಟಿಡಿಎಸ್ ಇತ್ಯಾದಿ ತೆರಿಗೆಯ ಹಣವನ್ನು ಕ್ಲೇಮ್ ಮಾಡಲು ಐಟಿ ರಿಟರ್ನ್ ಫೈಲ್ ಮಾಡಲಾಗುತ್ತದೆ. ಟಿಡಿಎಸ್ ವಿಚಾರಕ್ಕೆ ಬಂದರೆ ವಿವಿಧ ರೀತಿಯ ಟಿಡಿಎಸ್​ಗಳುಂಟು. ನಮಗೆ ನೀಡುವ ಸಂಬಳದಲ್ಲಿ ನೇರವಾಗಿ ಟಿಡಿಎಸ್ ಮುರಿದುಕೊಳ್ಳಲಾಗುತ್ತದೆ. ಹಾಗೆಯೇ, ಆದಾಯ ತೆರಿಗೆ ಕಾಯ್ದೆಯ ನಿಯಮವೊಂದರ ಪ್ರಕಾರ ಕ್ಯಾಷ್ ವಿತ್​ಡ್ರಾ (Cash Withdrawal) ಮಾಡಿಕೊಂಡರೆ ಟಿಡಿಎಸ್ ಕಡಿತವಾಗುತ್ತದೆ. ಇದು 1961ರ ಇನ್ಕಮ್ ಟ್ಯಾಕ್ಸ್ ಕಾಯ್ದೆಯ ಸೆಕ್ಷನ್ 194ಎನ್​ನಲ್ಲಿ ವಿವರಿಸಲಾಗಿದೆ.

ಆದರೆ, ಕಳವಳ ಬೇಡ. ದೊಡ್ಡ ಮೊತ್ತದ ಕ್ಯಾಷ್ ವಿತ್​ಡ್ರಾ ಮಾಡಿದರೆ ಮಾತ್ರ ಟಿಡಿಎಸ್ ಕಟ್ ಆಗುತ್ತದೆ. ಕುತೂಹಲ ಎಂದರೆ ನೀವು ಹಿಂದಿನ ಮೂರು ವರ್ಷ ಐಟಿಆರ್ ಸಲ್ಲಿಸದೇ ಇದ್ದರೆ ಟಿಡಿಎಸ್ ಕಡಿತ ಅನ್ವಯ ಆಗುವ ಮೊತ್ತ ಕಡಿಮೆ ಆಗುತ್ತದೆ. ನೀವು ಐಟಿ ರಿಟರ್ನ್ ಫೈಲ್ ಮಾಡದಿದ್ದರೆ ಒಂದು ವರ್ಷದಲ್ಲಿ 20 ಲಕ್ಷ ರೂಗಿಂತ ಹೆಚ್ಚು ಹಣ ವಿತ್​ಡ್ರಾ ಮಾಡಿದರೆ ಅದಕ್ಕೆ ಟಿಡಿಎಸ್ ಮುರಿದುಕೊಳ್ಳಲಾಗುತ್ತದೆ. ಐಟಿಆರ್ ಫೈಲ್ ಮಾಡಿದ್ದರೆ 1 ಲಕ್ಷ ರೂವರೆಗೂ ಟಿಡಿಎಸ್ ಕಡಿತ ಇಲ್ಲದೇ ಹಣ ವಿತ್​ಡ್ರಾ ಮಾಡಬಹುದು.

ಇದನ್ನೂ ಓದಿITR Filing: ಜುಲೈ 18ರವರೆಗೂ 3 ಕೋಟಿ ಮಂದಿಯಿಂದ ಐಟಿ ರಿಟರ್ನ್ ಸಲ್ಲಿಕೆ; ಕಳೆದ ವರ್ಷಕ್ಕಿಂತ ಹೆಚ್ಚು

ಎಷ್ಟು ಟಿಡಿಎಸ್ ಮುರಿದುಕೊಳ್ಳಲಾಗುತ್ತದೆ?

ನೀವು ಕಳೆದ 3 ವರ್ಷಗಳಿಂದ ಐಟಿ ರಿಟರ್ನ್ ಫೈಲ್ ಮಾಡದೇ ಇದ್ದರೆ ಒಂದು ವರ್ಷದಲ್ಲಿ 20 ಲಕ್ಷಕ್ಕಿಂತ ಹೆಚ್ಚು ಹಣ ವಿತ್​ಡ್ರಾ ಮಾಡಿದರೆ ಶೇ. 2ರಷ್ಟು ಟಿಡಿಎಸ್ ಕಡಿತ ಆಗುತ್ತದೆ. ಐಟಿ ರಿಟರ್ನ್ ಫೈಲ್ ಮಾಡಿದರೆ 1 ಕೋಟಿ ರೂ ಮೇಲ್ಪಟ್ಟ ವಿತ್​ಡ್ರಾಯಲ್ ಹಣಕ್ಕೆ ಶೇ. 2ರಷ್ಟು ಟಿಡಿಎಸ್ ಕಡಿತ ಇರುತ್ತದೆ. ನೀವು ಹಣ ವಿತ್​ಡ್ರಾ ಮಾಡುವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಈ ಟಿಡಿಎಸ್ ಅನ್ನು ಮುರಿದುಕೊಳ್ಳುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ