10ನೇ ಕ್ಲಾಸ್ ಓದಿದ್ರೆ ಸಾಕು, ಹೆಣ್ಮಕ್ಕಳಿಗೆ ಎಲ್​ಐಸಿ ಬಿಮಾ ಸಖಿ ಯೋಜನೆಯಿಂದ ಮಾಸಿಕ ಆದಾಯ ಮತ್ತು ವೃತ್ತಿಜೀವನ

LIC Bima Sakhi Yojana: ಲೈಫ್ ಇನ್ಷೂರೆನ್ಸ್ ಕಾರ್ಪೊರೇಶನ್ ಸಂಸ್ಥೆ 10ನೇ ಕ್ಲಾಸ್ ಪಾಸಾದ ಮಹಿಳೆಯರಿಗೆ ಎಲ್​ಐಸಿ ಏಜೆಂಟ್ ಆಗಲು ಪ್ರೇರೇಪಿಸುತ್ತಿದೆ. ಈ ನಿಟ್ಟಿನಲ್ಲಿ ಬಿಮಾ ಸಖಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಸ್ಕೀಮ್ ಅಡಿಯಲ್ಲಿ ಮಹಿಳೆಯರಿಗೆ ಎಲ್​ಐಸಿ ಏಜೆಂಟ್ ಆಗಲು ತರಬೇತಿ ಕೊಡಲಾಗುತ್ತದೆ. ಮೂರು ವರ್ಷದ ತರಬೇತಿಯಲ್ಲಿ ಮಾಸಿಕ ಸ್ಟೈಪೆಂಡ್ ಕೂಡ ಸಿಗುತ್ತದೆ.

10ನೇ ಕ್ಲಾಸ್ ಓದಿದ್ರೆ ಸಾಕು, ಹೆಣ್ಮಕ್ಕಳಿಗೆ ಎಲ್​ಐಸಿ ಬಿಮಾ ಸಖಿ ಯೋಜನೆಯಿಂದ ಮಾಸಿಕ ಆದಾಯ ಮತ್ತು ವೃತ್ತಿಜೀವನ
ಎಲ್​ಐಸಿ
Image Credit source: Shutterstock

Updated on: May 28, 2026 | 3:14 PM

ಭಾರತದ ಅತಿದೊಡ್ಡ ಜನರಲ್ ಇನ್ಷೂರೆನ್ಸ್ ಕಂಪನಿಯಾದ ಭಾರತೀಯ ಜೀವ ವಿಮಾ ನಿಗಮ (LIC) ಕೋಟ್ಯಂತರ ಜನರಿಗೆ ಜೀವ ವಿಮೆ ರಕ್ಷಣೆ ಕೊಟ್ಟಿದೆ. ಲಕ್ಷಾಂತರ ಕುಟುಂಬಗಳಿಗೆ ಉದ್ಯೋಗ ಮತ್ತು ರೆಗ್ಯುಲರ್ ಇನ್ಕಮ್ ಕೊಟ್ಟಿದೆ. ಸಾಕಷ್ಟು ಸಂಖ್ಯೆಯ ಏಜೆಂಟ್​ಗಳ ಬಲ ಎಲ್​ಐಸಿಗೆ ಇದೆ. ಇದೇ ವೇಳೆ, ಎಲ್​ಐಸಿಯಲ್ಲಿ ಬಿಮಾ ಸಖಿ ಯೋಜನೆ (LIC Bima Sakhi Yojana) ಮೂಲಕ ಆರ್ಥಿಕ ಅನನುಕೂಲದ ಮಹಿಳೆಯರಿಗೆ ನಿಯಮಿತ ಆದಾಯ ಕೊಡುತ್ತಿದೆ ಮತ್ತು ವೃತ್ತಿ ಆಯ್ಕೆ ಒದಗಿಸಿದೆ.

ಏನಿದು ಎಲ್​ಐಸಿ ಬಿಮಾ ಸಖಿ ಯೋಜನೆ?

ಬಿಮಾ ಸಖಿ ಯೋಜನೆಯಲ್ಲಿ ಎಲ್​ಐಸಿ ಏಜೆಂಟ್ ಆಗಿ ಅಣಿಯಾಗಲು ತರಬೇತಿ ಕೊಡಲಾಗುತ್ತದೆ. ಇದಕ್ಕೆ 10ನೇ ಕ್ಲಾಸ್ ಪಾಸಾದ ಮತ್ತು 18 ವರ್ಷ ಮೇಲ್ಪಟ್ಟ ಹಾಗೂ 70 ವರ್ಷ ಕೆಳಪಟ್ಟ ಮಹಿಳೆಯರು ಅರ್ಹರಾಗಿರುತ್ತಾರೆ. ಈ ತರಬೇತಿ ಅವಧಿ ಮೂರು ವರ್ಷ ಇರುತ್ತದೆ. ಈ ವೇಳೆ, ಅಭ್ಯರ್ಥಿಗಳಿಗೆ ತಿಂಗಳಿಗೆ 7,000 ರೂವರೆಗೂ ಸ್ಟೈಪೆಂಡ್ ಕೊಡಲಾಗುತ್ತದೆ.

ಇದನ್ನೂ ಓದಿ: ಮಾರುಕಟ್ಟೆ ಕುಸಿದಾಗ ಹೆದರಿಬಿಟ್ಟರೆ ಲಕ್ಷ್ಮೀಕಟಾಕ್ಷ ತಪ್ಪಿ ಹೋದೀತು ಜೋಕೆ..! ಶೆಲ್ಬಿ ಡೇವಿಸ್ ಸಲಹೆ ಕೇಳಿ

ಅಭ್ಯರ್ಥಿಗಳಿಗೆ ಏನು ತರಬೇತಿ ಕೊಡಲಾಗುತ್ತದೆ?

ಎಲ್​ಐಸಿ ಬಿಮಾ ಸಖಿ ಯೋಜನೆಗೆ ಆಯ್ಕೆಯಾದ ಮಹಿಳೆಯರಿಗೆ ಇನ್ಷೂರೆನ್ಸ್ ಸರ್ವಿಸ್​ಗಳು, ಹಣಕಾಸು ಸಾಕ್ಷರತೆಯ ವಿಚಾರವಾಗಿ ತಿಳಿವಳಿಕೆ ಮೂಡಿಸಲಾಗುತ್ತದೆ. ಎಲ್​ಐಸಿಯ ಎಲ್ಲಾ ಉತ್ಪನ್ನಗಳನ್ನು ಪರಿಚಯಿಸಲಾಗುತ್ತದೆ.

ಈ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮಹಿಳೆಯರು ಪೂರ್ಣ ಪ್ರಮಾಣದ ಎಲ್​ಐಸಿ ಏಜೆಂಟ್​ಗಳಾಗಿ ಕೆಲಸ ಮಾಡಲು ಆರಂಭಿಸಬಹುದು. ಎಲ್​ಐಸಿ ಏಜೆಂಟ್ ಆದರೆ ಕಮಿಷನ್ ಮೂಲಕ ಆದಾಯ ಸಿಗುತ್ತದೆ. ಪಾಲಿಸಿ ಪ್ರೀಮಿಯಮ್ ಮೊತ್ತದ ಮೇಲೆ ಆದಾಯ ನಿಂತಿರುತ್ತದೆ.

ಎಲ್​ಐಸಿ ಬಿಮಾ ಸಖಿ ಯೋಜನೆಯಲ್ಲಿ ಮೂರು ವರ್ಷದ ಸ್ಟೈಪೆಂಡ್ ಇರುತ್ತದೆ. ಮೊದಲ ವರ್ಷ ತಿಂಗಳಿಗೆ 7,000 ರೂ ಸ್ಟೈಪೆಂಡ್ ಕೊಡಲಾಗುತ್ತದೆ. ಎರಡನೇ ಮತ್ತು ಮೂರನೇ ವರ್ಷದಲ್ಲಿ ಕ್ರಮವಾಗಿ 6,000 ರೂ ಮತ್ತು 5,000 ರೂ ಸ್ಟೈಪೆಂಡ್ ಕೊಡಲಾಗುತ್ತದೆ. ಆದರೆ, ಈ ಅವಧಿಯಲ್ಲಿ ಅಭ್ಯರ್ಥಿಗಳು ನಿರ್ದಿಷ್ಟ ಮೊತ್ತದ ಪಾಲಿಸಿಗಳನ್ನು ಮಾರಾಟ ಮಾಡಬೇಕು. ಆ ಪಾಲಿಸಿಗಳಿಂದ ಕಮಿಷನ್ ಕೂಡ ಸಿಗುತ್ತದೆ.

ಇದನ್ನೂ ಓದಿ: ವಿಚಿತ್ರ ಕಾರಣ..! ಅನುಭವಿ ಗೂಗಲ್ ಉದ್ಯೋಗಿಯ ಅರ್ಜಿ ತಿರಸ್ಕಾರ; ಕಾಲೇಜು ಗ್ರೇಡ್ ಕಡಿಮೆ ಬಂದಿದ್ದಕ್ಕೆ ರಿಜೆಕ್ಟ್

ಮೂರು ವರ್ಷದ ತರಬೇತಿ ಮುಗಿಸಿದ ಮಾತ್ರಕ್ಕೆ ಎಲ್​ಐಸಿ ಏಜೆಂಟ್ ಕೆಲಸ ಸಿಕ್ಕೋದಿಲ್ಲ. ಐಆರ್​ಡಿಎಐನ ವಿಮಾ ಪರೀಕ್ಷೆ ಬರೆದು ಪಾಸಾಗಬೇಕು.

ಎಲ್​ಐಸಿ ಏಜೆಂಟ್ ಆದರೆ ಒಂದು ಪ್ರಮುಖ ಅನುಕೂಲವೆಂದರೆ ಫ್ಲೆಕ್ಸಿಬಲ್ ವರ್ಕಿಂಗ್ ಅವರ್. ದಿನವೆಲ್ಲಾ ಕೆಲಸ ಮಾಡುವ ಅಗತ್ಯ ಇರುವುದಿಲ್ಲ. ಮಧ್ಯ ಮಧ್ಯೆ ಸಾಕಷ್ಟು ಬಿಡುವು ಮಾಡಿಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us