ಭಾರತದಲ್ಲಿ ಟೆಸ್ಲಾ (Tesla) ಪರವಾಗಿ ಲಾಬಿ ಪ್ರಯತ್ನವನ್ನು ಮುನ್ನಡೆಸುತ್ತಿದ್ದ ಪ್ರಮುಖ ಕಾರ್ಯನಿರ್ವಾಹಕರು ರಾಜೀನಾಮೆ ನೀಡಿದ್ದು, ಅಮೆರಿಕ ಮೂಲದ ಕಾರು ತಯಾರಕ ಕಂಪೆನಿ ಟೆಸ್ಲಾವು ದಕ್ಷಿಣ ಏಷ್ಯಾ ರಾಷ್ಟ್ರದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುವ ಯೋಜನೆಯನ್ನು ತಡೆಹಿಡಿದ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ. ಇನ್ನು ಈ ವಿಷಯದ ಬಗ್ಗೆ ತಿಳಿದಿರುವ ಎರಡು ಮೂಲಗಳು ರಾಯಿಟರ್ಸ್‌ಗೆ ತಿಳಿಸಿವೆ. ಭಾರತದಲ್ಲಿ ಟೆಸ್ಲಾದ ನೀತಿ ಮತ್ತು ವ್ಯವಹಾರ ಅಭಿವೃದ್ಧಿ ಕಾರ್ಯನಿರ್ವಾಹಕರಾದ ಮನುಜ್ ಖುರಾನಾ ಅವರನ್ನು ಮಾರ್ಚ್ 2021ರಲ್ಲಿ ನೇಮಿಸಲಾಗಿತ್ತು. ಮತ್ತು ದೇಶದಲ್ಲಿ ಅಮೆರಿಕ ಕಾರು ತಯಾರಕರಿಗೆ ದೇಶೀಯ ಮಾರುಕಟ್ಟೆ-ಪ್ರವೇಶ ಯೋಜನೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎಲೆಕ್ಟ್ರಿಕ್ ಕಾರುಗಳ ಮೇಲಿನ ಆಮದು ತೆರಿಗೆಯನ್ನು ಶೇ 100ರಿಂದ ಶೇ 40ಕ್ಕೆ ಇಳಿಸಲು ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಭಾರತ ಸರ್ಕಾರದ ಬಳಿ ಲಾಬಿ ಮಾಡಿದರು. ಒಂದು ಕಾರ್ಖಾನೆಯಲ್ಲಿ ಹೂಡಿಕೆ ಮಾಡುವ ಮೊದಲು ಚೀನಾದಂತಹ ಉತ್ಪಾದನಾ ಕೇಂದ್ರಗಳಿಂದ ಆಮದು ಮಾಡಿಕೊಳ್ಳುವ ಮೂಲಕ ಮಾರುಕಟ್ಟೆಯನ್ನು ಪರೀಕ್ಷಿಸಲು ಅವಕಾಶ ಎದುರು ನೋಡು ಎಂದು ಟೆಸ್ಲಾ ಹೇಳಿತ್ತು.
ಆದರೆ, ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ಯಾವುದೇ ರಿಯಾಯಿತಿಗಳನ್ನು ನೀಡುವ ಮೊದಲು ಟೆಸ್ಲಾ ಸ್ಥಳೀಯವಾಗಿ ಕಾರುಗಳನ್ನು ತಯಾರಿಸಲು ಬದ್ಧವಾಗಿರಬೇಕು ಎಂದು ಒತ್ತಾಯಿಸಿದರು. ಮಾತುಕತೆಗಳು ಸ್ಥಗಿತಗೊಂಡಿದ್ದರಿಂದ ಟೆಸ್ಲಾ ಭಾರತದಲ್ಲಿ ಕಾರುಗಳನ್ನು ಮಾರಾಟ ಮಾಡುವ ತನ್ನ ಯೋಜನೆಗಳನ್ನು ತಡೆಹಿಡಿಯಿತು, ಕೆಲವು ದೇಶೀಯ ತಂಡವನ್ನು ಮರುಹೊಂದಿಸಿತು ಮತ್ತು ಶೋ ರೂಂ ಜಾಗಕ್ಕಾಗಿ ತನ್ನ ಹುಡುಕಾಟವನ್ನು ಕೈಬಿಟ್ಟಿತು. ಭಾರತದಲ್ಲಿ ಕಂಪೆನಿಯ ಮೊದಲ ಉದ್ಯೋಗಿ ಖುರಾನಾ ಅಥವಾ ಟೆಸ್ಲಾ ಕಾಮೆಂಟ್‌ಗಳ ವಿನಂತಿಗಳಿಗೆ ಪ್ರತಿಕ್ರಿಯಿಸಲಿಲ್ಲ. ಖುರಾನಾ ಅವರಿಗೆ ಕಳುಹಿಸಲಾದ ಇಮೇಲ್ ವಿಳಾಸವು ಇನ್ನು ಮುಂದೆ ಮಾನ್ಯವಾಗಿಲ್ಲ ಮತ್ತು ಭವಿಷ್ಯದ ಇಮೇಲ್‌ಗಳನ್ನು ಸ್ವೀಕರಿಸುವುದಿಲ್ಲ ಎಂದು ಆಟೋಮೆಟೆಡ್ ಪ್ರತ್ಯುತ್ತರವನ್ನು ನೀಡಿದೆ.
“ಇದೀಗ ಭಾರತದಲ್ಲಿ ಪ್ರಾರಂಭಿಸುವ ಟೆಸ್ಲಾ ಯೋಜನೆಗಳು ಹೆಚ್ಚು- ಕಡಿಮೆ ಮುಗಿದಂತೆಯೇ,” ಎಂದು ಮೂಲವೊಂದು ಹೇಳಿದೆ. ಖುರಾನಾ ರಾಜೀನಾಮೆಯನ್ನು ಇನ್ನೂ ಬಹಿರಂಗಗೊಳಿಸದ ಕಾರಣ ಮೂಲಗಳು ಅನಾಮಧೇಯರಾಗಿ ಉಳಿಯಲು ಬಯಸುತ್ತವೆ. ಟೆಸ್ಲಾ ಮುಖ್ಯ ಕಾರ್ಯನಿರ್ವಾಹಕ ಎಲಾನ್ ಮಸ್ಕ್ ಕಳೆದ ತಿಂಗಳು ಟ್ವಿಟರ್‌ನಲ್ಲಿ ತಿಳಿಸಿರುವಂತೆ, ಕಂಪೆನಿಯು ಕಾರುಗಳ ಮಾರಾಟ ಮತ್ತು ಸೇವೆ ಮಾಡಲು ಮೊದಲು ಅನುಮತಿಸದ ಯಾವುದೇ ಸ್ಥಳದಲ್ಲಿ ಉತ್ಪಾದನೆಯನ್ನು ಸ್ಥಾಪಿಸುವುದಿಲ್ಲ ಎಂದು ಹೇಳಿದ್ದರು. ನಿಕ್ಕಲ್-ಸಮೃದ್ಧ ಇಂಡೋನೇಷ್ಯಾದಂತಹ ಆಗ್ನೇಯ ಏಷ್ಯಾದ ಇತರ ಮಾರುಕಟ್ಟೆಗಳಿಗೆ ತನ್ನ ಗಮನವನ್ನು ಟೆಸ್ಲಾ ಬದಲಾಯಿಸಿದೆ. ಅಲ್ಲಿ ಅದು ಸಂಭಾವ್ಯ ಬ್ಯಾಟರಿ-ಸಂಬಂಧಿತ ಹೂಡಿಕೆಯನ್ನು ನೋಡುತ್ತಿದ್ದು, ಹಾಗೆಯೇ ಥಾಯ್ಲೆಂಡ್ನಲ್ಲಿ ಇತ್ತೀಚೆಗೆ ಕಾರುಗಳನ್ನು ಮಾರಾಟ ಮಾಡಲು ಸ್ಥಳೀಯ ಘಟಕವನ್ನು ನೋಂದಾಯಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Tesla: ಎಲೆಕ್ಟ್ರಿಕ್ ವಾಹನಗಳ ಆಮದು ಸುಂಕ ಇಳಿಸುವಂತೆ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಟೆಸ್ಲಾ ಒತ್ತಾಯ