IT Raid: ಎಂಜಿಎಂ ಕಂಪನಿ ಮೇಲೆ ಐಟಿ ದಾಳಿ, ತೆರಿಗೆ ವಂಚನೆ ದೂರು
ಚೆನ್ನೈನ ರಾಣಿಪೇಟೆಯಲ್ಲಿರುವ ಎಂಜಿಎಂ ಕಚೇರಿಗೆ 15ಕ್ಕೂ ಹೆಚ್ಚು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ಆರಂಭಿಸಿದ್ದಾರೆ.
ಚೆನ್ನೈ: ಮನರಂಜನಾ ಉದ್ಯಮದ ಮುಂಚೂಣಿ ಸಂಸ್ಥೆ ಎಂಜಿಎಂನ ಸಮೂಹದ (MGM Group) ಚೆನ್ನೈ, ತಿರುನಲ್ವೇಲಿ ಮತ್ತು ಬೆಂಗಳೂರು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ (Income Tax Department) ಬುಧವಾರ ಮುಂಜಾನೆ ದಾಳಿ ನಡೆಸಿದೆ. ಐಟಿ ಅಧಿಕಾರಿಗಳು (IT Raid) ವಿವಿಧ ದಾಖಲೆ ಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ. ಚೆನ್ನೈನ ರಾಣಿಪೇಟೆಯಲ್ಲಿರುವ ಎಂಜಿಎಂ ಕಚೇರಿಗೆ 15ಕ್ಕೂ ಹೆಚ್ಚು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ಆರಂಭಿಸಿದ್ದಾರೆ. ತೆರಿಗೆ ವಂಚನೆ ದೂರಿನ ಆಧಾರದ ಮೇಲೆ ಈ ದಾಳಿ ನಡೆದಿದೆ ಎಂದು ಮೂಲಗಳು ಹೇಳಿವೆ. ಥೀಮ್ ಪಾರ್ಕ್, ಮದ್ಯ ಮತ್ತು ಹೊಟೆಲ್ ಉದ್ಯಮಗಳನ್ನು ಎಂಜಿಎಂ ಗ್ರೂಪ್ ನಿರ್ವಹಿಸುತ್ತಿದೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
(ಮತ್ತಷ್ಟು ಮಾಹಿತಿ ಶೀಘ್ರ ಅಪ್ಡೇಟ್ ಆಗಲಿದೆ)
Published On - 10:13 am, Wed, 15 June 22