E Commerce Rule: ಇ ಕಾಮರ್ಸ್​ ಕರಡು ನಿಯಮಗಳ ಬಗ್ಗೆ ಸರ್ಕಾರದೊಳಗೆ ಭಿನ್ನಾಭಿಪ್ರಾಯ ಎನ್ನುತ್ತಿವೆ ಮೂಲಗಳು

| Updated By: Srinivas Mata

Updated on: Sep 22, 2021 | 9:15 PM

ಇ-ಕಾಮರ್ಸ್ ಕರಡು ನಿಯಮಗಳ ಬಗ್ಗೆ ಸರ್ಕಾರದೊಳಗೆ ಭಿನ್ನಾಭಿಪ್ರಾಯ ಇದೆ ಎಂದು ಮೂಲಗಳು ತಿಳಿಸಿವೆ.

E Commerce Rule: ಇ ಕಾಮರ್ಸ್​ ಕರಡು ನಿಯಮಗಳ ಬಗ್ಗೆ ಸರ್ಕಾರದೊಳಗೆ ಭಿನ್ನಾಭಿಪ್ರಾಯ ಎನ್ನುತ್ತಿವೆ ಮೂಲಗಳು
ಸಾಂದರ್ಭಿಕ ಚಿತ್ರ
Follow us on

ಗ್ರಾಹಕ ವ್ಯವಹಾರಗಳ ಸಚಿವಾಲಯವು ಹೊರಡಿಸಿದ ಇ-ಕಾಮರ್ಸ್ ಕರಡು ನಿಯಮಗಳ ಬಗ್ಗೆ ಸರ್ಕಾರದೊಳಗೆ ಗಮನಾರ್ಹವಾದ ಭಿನ್ನಾಭಿಪ್ರಾಯವಿದೆ, ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ ಮತ್ತು ನೀತಿಯ ನಿರಂತರ ಬದಲಾವಣೆಯಿಂದ ದೊಡ್ಡ ಮಟ್ಟದ ಅನಿಶ್ಚಿತತೆ ಉಂಟು ಮಾಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈಗಿನ ಇ-ಕಾಮರ್ಸ್ ನೀತಿಯು ಕಿರು ವ್ಯಾಪಾರಿಗಳನ್ನು ಸಮಸ್ಯೆ ಮಾಡುತ್ತಿದೆ ಎಂದು ಅನಗತ್ಯ ಭಯವನ್ನು ಸೃಷ್ಟಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. “ಗ್ರಾಹಕ ವ್ಯವಹಾರಗಳ ಸಚಿವಾಲಯವು ಹೊರಡಿಸಿದ ಕರಡು ಗ್ರಾಹಕ ಸಂರಕ್ಷಣೆ (ಇ-ಕಾಮರ್ಸ್) ನಿಯಮಗಳ ಬಗ್ಗೆ ಸರ್ಕಾರದೊಳಗೆ ಗಮನಾರ್ಹವಾದ ಭಿನ್ನಾಭಿಪ್ರಾಯವಿದೆ. ನೀತಿಯ ನಿರಂತರ ಬದಲಾವಣೆಯು ಹೆಚ್ಚಿನ ಅನಿಶ್ಚಿತತೆಯನ್ನು ಉಂಟು ಮಾಡುತ್ತದೆ,” ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿ ಹೇಳಿದ್ದಾರೆ.

ಗ್ರಾಹಕ ರಕ್ಷಣೆ (ಇ-ಕಾಮರ್ಸ್) ನಿಯಮಗಳು, 2020ಕ್ಕೆ ಪ್ರಸ್ತಾಪಿಸಲಾದ ಪ್ರಮುಖ ತಿದ್ದುಪಡಿಗಳಲ್ಲಿ ಮೋಸದ ಫ್ಲ್ಯಾಷ್ ಮಾರಾಟ ಮತ್ತು ತಪ್ಪು ಮಾರಾಟದ ಮೇಲೆ ನಿಷೇಧ ಮತ್ತು ಮುಖ್ಯ ನಿಯಮಾವಳಿ ಅಧಿಕಾರಿ/ದೂರು ಪರಿಹಾರ ಅಧಿಕಾರಿಯ ನೇಮಕಾತಿ ಸೇರಿವೆ. ಸಚಿವಾಲಯವು ಜುಲೈ 6ರೊಳಗೆ ಕರಡು ನಿಯಮಗಳ ಬಗ್ಗೆ ಸಾರ್ವಜನಿಕ ಅಭಿಪ್ರಾಯಗಳನ್ನು ಕೋರಿತ್ತು ಮತ್ತು ನಂತರ ಗಡುವನ್ನು ಜುಲೈ 21ರ ವರೆಗೆ ವಿಸ್ತರಿಸಲಾಯಿತು. ಸ್ಪರ್ಧೆಗೆ ಸಂಬಂಧಿಸಿದ ವಿಷಯವು ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವುದಿಲ್ಲ ಮತ್ತು ಆ ಸಮಸ್ಯೆಗಳು ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಅಡಿಯಲ್ಲಿ ಬರುತ್ತವೆ ಎಂದು ಅಧಿಕಾರಿ ಹೇಳಿದ್ದಾರೆ.

ಅಲ್ಲದೆ, ಅಂದಾಜು 7 ಕೋಟಿ ವ್ಯಾಪಾರಿಗಳಲ್ಲಿ ಶೇಕಡಾ 85ರಷ್ಟು ಕಿರು ವ್ಯಾಪಾರಿಗಳು ಮತ್ತು ಸದ್ಯಕ್ಕೆ ಇ-ಕಾಮರ್ಸ್ ನೀತಿಯಿಂದ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. “ಇ-ಕಾಮರ್ಸ್‌ನ ಆಧುನೀಕರಣವು ಹೆಚ್ಚಿನ ಉದ್ಯೋಗಗಳು ಮತ್ತು ಆರ್ಥಿಕ ಬೆಳವಣಿಗೆಯನ್ನು ಸೃಷ್ಟಿಸುತ್ತದೆ. ಮತ್ತು ಶೇಕಡಾ 85ರಷ್ಟು ಕಿರು ವ್ಯಾಪಾರಿಗಳ ಲಾಭವೂ ಹೆಚ್ಚಾಗುತ್ತದೆ,” ಎಂದು ಅಧಿಕಾರಿ ಹೇಳಿದ್ದಾರೆ. ಇತ್ತೀಚೆಗೆ, ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಲೀನಾ ನಂದನ್ ಅವರು “ವ್ಯಾಪಕ ಮತ್ತು ವೈವಿಧ್ಯಮಯ” ಕಾಮೆಂಟ್‌ಗಳನ್ನು ಪಾಲುದಾರರಿಂದ ಸ್ವೀಕರಿಸಿರುವ ಕಾರಣ ನಿಯಮಗಳಿಗೆ ಪ್ರಸ್ತಾಪಿಸಲಾದ ತಿದ್ದುಪಡಿಗಳನ್ನು ಅಂತಿಮಗೊಳಿಸುವಾಗ ಸರ್ಕಾರವು “ಸಮತೋಲಿತ” ವಿಧಾನವನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದರು.

ಕಳೆದ ವರ್ಷ ಇ-ಕಾಮರ್ಸ್ ಸಂಬಂಧಿತ ವಲಯವಾಗಿದೆ ಮತ್ತು ಈಗಲೂ ಮುಂದುವರಿದಿದೆ ಎಂದು ಕಾರ್ಯದರ್ಶಿ ಹೇಳಿದ್ದರು. ಜೂನ್​ನಲ್ಲಿ, ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ (ಸಿಸಿಪಿಎ) ಮುಖ್ಯ ಆಯುಕ್ತರಾದ ನಿಧಿ ಖರೆ ಅವರು ಸಚಿವಾಲಯವು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ವ್ಯಾಪಾರವನ್ನು ನಿಯಂತ್ರಿಸುವುದಿಲ್ಲ ಮತ್ತು ಇ-ಟೇಲರ್‌ಗಳು ಉದ್ದೇಶಿತ ನಿಯಮಗಳ ಬದಲಾವಣೆಗಳ ಬಗ್ಗೆ “ಆತಂಕ ಪಡುವ” ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: E Commerce rule: ಥರಗುಟ್ಟಿದ ಇ- ಕಾಮರ್ಸ್ ಕಂಪೆನಿಗಳು; ಕೇಂದ್ರ ಸರ್ಕಾರದಿಂದ ಹೊಸ ನಿಯಮಾವಳಿಯ ಕಡಿವಾಣ

(There Is A Difference Of Opinion Inside Government On Draft Of Ecommerce Rule)