AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

E Commerce rule: ಥರಗುಟ್ಟಿದ ಇ- ಕಾಮರ್ಸ್ ಕಂಪೆನಿಗಳು; ಕೇಂದ್ರ ಸರ್ಕಾರದಿಂದ ಹೊಸ ನಿಯಮಾವಳಿಯ ಕಡಿವಾಣ

ಇ ಕಾಮರ್ಸ್​​ಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಾವಳಿಗಳನ್ನು ಸರ್ಕಾರದಿಂದ ಜಾರಿಗೆ ತರಲು ಹೊರಟಿದ್ದು, ಇದರಿಂದ ಫ್ಲಿಪ್​ಕಾರ್ಟ್​, ಅಮೆಜಾನ್ ಸೇರಿದಂತೆ ಇತರ ಕಂಪೆನಿಗಳು ಕಾರ್ಯ ನಿರ್ವಹಣೆ ವಿಧಾನವನ್ನೇ ಬದಲಿಸಿಕೊಳ್ಳಬೇಕಾಗುತ್ತದೆ.

E Commerce rule: ಥರಗುಟ್ಟಿದ ಇ- ಕಾಮರ್ಸ್ ಕಂಪೆನಿಗಳು; ಕೇಂದ್ರ ಸರ್ಕಾರದಿಂದ ಹೊಸ ನಿಯಮಾವಳಿಯ ಕಡಿವಾಣ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jun 23, 2021 | 1:42 PM

ಹೊಸದಾಗಿ ಬಂದಿರುವ ಭಾರತೀಯ ಇ- ಕಾಮರ್ಸ್ ನಿಯಮಗಳಿಂದಾಗಿ ಆನ್​ಲೈನ್​ ರೀಟೇಲರ್​ಗಳಿಗೆ, ಅದರಲ್ಲೂ ಅಮೆಜಾನ್ ಮತ್ತು ವಾಲ್​ಮಾರ್ಟ್​ ಒಡೆತನದ ಫ್ಲಿಪ್​ಕಾರ್ಟ್​ಗೆ ದುಬಾರಿ ಆಗಲಿದೆ. ತಮ್ಮ ಉದ್ಯಮದ ರಚನೆಯನ್ನು ಮತ್ತೊಮ್ಮೆ ಪರಿಶೀಲಿಸಬೇಕಾಗಬಹುದು ಎಂದು ಹಿರಿಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಗ್ರಾಹಕ ವ್ಯವಹಾರಗಳ ಸಚಿವಾಯಲಯವು ಸೋಮವಾರದಂದು ಕೆಲವು ಯೋಜನೆಗಳನ್ನು ರೂಪಿಸಿದೆ. ಅದರ ಪ್ರಕಾರ, ಆನ್​ಲೈನ್​ ರೀಟೇಲರ್​ಗಳಿಗೆ “ಫ್ಲ್ಯಾಷ್​ ಸೇಲ್ಸ್​”ಗಳಿಗೆ ಮಿತಿ, ಕಡ್ಡಾಯವಾಗಿ ನಿಯಮಾವಳಿಗಳ ಪಾಲನೆಗೆ ಅಧಿಕಾರಿಗಳ ನೇಮಕ, ಒಂದು ವೇಳೆ ಮಾರಾಟಗಾರರು ನಿರ್ಲಕ್ಷ್ಯ ತೋರಿದಲ್ಲಿ ಅದರ ಜವಾಬ್ದಾರಿ ಹೊರಬೇಕು, ಖಾಸಗಿ ಲೇಬಲ್​ಗಳ ಅಡಿಯಲ್ಲಿ ಮಾರಾಟಕ್ಕೆ ಉತ್ತೇಜನದ ಪ್ರಸ್ತಾವ ಮಾಡಲಾಗಿದೆ. ಈ ಹೊಸ ಕಾನೂನು ಎಲ್ಲದರ ಮೇಲೂ ಪರಿಣಾಮ ಬೀರುವ ನಿರೀಕ್ಷೆ ಇದೆ. ಅಂದಹಾಗೆ 2026ರ ಹೊತ್ತಿಗೆ ಭಾರತದಲ್ಲಿ ಇ-ರಿಟೇಲ್ ಮಾರ್ಕೆಟ್ ಅಂದಾಜು 20,000 ಕೋಟಿ ಅಮೆರಿಕನ್ ಇರಲಿದೆ ಎಂದು ಅಂದಾಜು ಮಾಡಲಾಗಿದೆ. ಇದರಲ್ಲಿ ಟಾಟಾದ ಬಿಗ್​ಬ್ಯಾಸ್ಕೆಟ್, ರಿಲಯನ್ಸ್ ಜಿಯೋಮಾರ್ಟ್, ಸಾಫ್ಟ್​ಬ್ಯಾಂಕ್ ಬೆಂಬಲ ಇರುವ ಸ್ನ್ಯಾಪ್​ಡೀಲ್, ಅಮೆಜಾನ್ ಹಾಗೂ ಫ್ಲಿಪ್​ಕಾರ್ಟ್ ಇವೆಲ್ಲವೂ ಒಳಗೊಂಡಿವೆ.

ಈಗಾಗಲೇ ನೀತಿ ನಿರೂಪಣೆ ವಿಚಾರದಲ್ಲೇ ಅಮೆರಿಕ ಮೂಲದ ತಂತ್ರಜ್ಞಾನ ದೈತ್ಯ ಕಂಪೆನಿಗಳು ಹಾಗೂ ಭಾರತ ಸರ್ಕಾರದ ಮಧ್ಯ ತಿಕ್ಕಾಟ ನಡೆಯುತ್ತಿದೆ. “ಈ ಕಾನೂನುಗಳಿಂದ ಎಲ್ಲ ಬಗೆಯ ಇ-ಕಾಮರ್ಸ್ ಮೇಲೆ ಪರಿಣಾಮ ಆಗಲಿದ್ದು, ಉದ್ಯಮದ ವೆಚ್ಚ ಹೆಚ್ಚಾಗಲಿದೆ. ದೊಡ್ಡ ದೊಡ್ಡ ಕಂಪೆನಿಗಳ ಆಚೆಗೂ ಈ ನಿಯಮಾವಳಿಯ ಪ್ರಭಾವ ಹೇಗಿರಲಿದೆ ಎಂಬ ವಿಶ್ಲೇಷಣೆಗಳಾಗುತ್ತಿವೆ. ಆ ಬಗೆಗಿನ ತಮ್ಮ ಆತಂಕಗಳನ್ನು ಸರ್ಕಾರದ ಜತೆಗೆ ಹಂಚಿಕೊಳ್ಳಲಿವೆ,” ಎಂದು ಕಾನೂನು ಸಲಹೆ ಸಂಸ್ಥೆಯೊಂದರ ಪ್ರತಿನಿಧಿ ಮಾಧ್ಯಮ ಸಂಸ್ಥೆಗೆ ತಿಳಿಸಿದ್ದಾರೆ. ಸರ್ಕಾರದ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಲು ಜುಲೈ 6ರ ತನಕ ಅವಕಾಶ ಇದೆ. ಆ ನಂತರ ಯಾವುದೇ ಸಮಯದಲ್ಲಿ ನಿಯಮಾವಳಿಗಳನ್ನು ಇನ್ನಷ್ಟು ಪರಿಶೀಲನೆ ಮಾಡಬಹುದು ಅಥವಾ ಜಾರಿಗೆ ತರಬಹುದು. ಸ್ನ್ಯಾಪ್​ಡೀಲ್​ ಹೇಳಿರುವ ಪ್ರಕಾರ, ನಿಯಮಾವಳಿಗಳನ್ನು ಪರಿಶೀಲನೆ ಮಾಡುತ್ತಿದೆ. ಬಿಗ್​ಬ್ಯಾಸ್ಕೆಟ್ ಯಾವ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ ಎಂದು ತಿಳಿಸಿದೆ. ಇನ್ನು ರಿಲಯನ್ಸ್ ಪ್ರತಿಕ್ರಿಯಿಸಿಲ್ಲ.

ಮೇಡ್-ಇನ್-ಇಂಡಿಯಾ ಉತ್ಪನ್ನಗಳಿಗೆ ಉತ್ತಮ ಈಗ ಪ್ರಸ್ತಾವ ಆಗಿರುವ ನಿಯಮಾವಳಿಗಳಲ್ಲಿ ನಿರ್ದಿಷ್ಟವಾಗಿ ಆಗುವ ಪರಿಣಾಮ ಅಂದರೆ, ರೀಟೇಲರ್ ಆಮದಾದ ವಸ್ತುಗಳನ್ನು ಮಾರಾಟಕ್ಕೆ ಇಟ್ಟಿದ್ದಲ್ಲಿ ಅದಕ್ಕೆ ಪರ್ಯಾಯವಾಗಿ ದೊರೆಯುವ ದೇಶೀಯ ಉತ್ಪನ್ನಗಳನ್ನೂ ತೋರಿಸಿ, ನ್ಯಾಯಸಮ್ಮತ ಅವಕಾಶ ದೊರೆಯುವಂತೆ ನಡೆದುಕೊಳ್ಳಬೇಕು. ​ಈ ಆಲೋಚನೆಯು ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವುದಾಗಿ. ಇದು ಮೇಡ್-ಇನ್-ಇಂಡಿಯಾ ಉತ್ಪನ್ನಗಳಿಗೆ ಉತ್ತಮ. ಆದರೆ ಪ್ಲಾಟ್​ಫಾರ್ಮ್​ಗಳಿಗೆ ಅಲ್ಲ ಎನ್ನುತ್ತಾರೆ ವಿಶ್ಲೇಷಕರು. ಈಗ ರೂಪಿಸಿರುವ ನಿಯಮಾವಳಿಗಳು ಜಾರಿಗೆ ಬಂದಲ್ಲಿ, ಒಂದು ವೇಳೆ ಅವುಗಳನ್ನು ಅನುಸರಿಸದಿದ್ದ್ಲಲ್ಲಿ ಜೈಲು ವಾಸದ ಶಿಕ್ಷೆ, ಕನಿಷ್ಠ ದಂಡದ ಮೊತ್ತವಾದ 25 ಸಾವಿರ ರೂಪಾಯಿ ವಿಧಿಸಬಹುದು.

ಇ-ಕಾಮರ್ಸ್​​ಗಳಿಂದ ನ್ಯಾಯಸಮ್ಮತ ಅಲ್ಲದ ಮತ್ತು ವಂಚನೆಯ ಮಾರ್ಗವನ್ನು ಅನುಸರಿಸಲಾಗುತ್ತಿದೆ ಎಂದು ಸಾಕಷ್ಟು ದೂರುಗಳು ಬರುವುದಕ್ಕೆ ಆರಂಭಿಸಿದ ಮೇಲೆ ಈ ನಿಯಮಾವಳಿ ರೂಪಿಸುವ ತೀರ್ಮಾನಕ್ಕೆ ಬರಲಾಯಿತು ಎನ್ನಲಾಗಿದೆ. ಆದರೆ ಯಾವುದೇ ನಿರ್ದಿಷ್ಟ ಕಂಪೆನಿಯ ಹೆಸರನ್ನು ಪ್ರಸ್ತಾಪಿಸಿಲ್ಲ. ಮುಖ್ಯವಾಗಿ ಫ್ಲಿಪ್​ಕಾರ್ಟ್​, ಅಮೆಜಾನ್​ ಮೇಲೆ ಹೇಗೆ ಈ ನಿಯಮಾವಳಿ ಪರಿಣಾಮ ಬೀರುತ್ತದೆ ಅಂತ ನೋಡುವುದಾದರೆ, ಆ ಕಂಪೆನಿಗಳಿಗೆ ಸಂಬಂಧಿಸಿದ ಮಾರಾಟಗಾರರನ್ನು ಶಾಪಿಂಗ್ ವೆಬ್​ಸೈಟ್​ನ ಲಿಸ್ಟ್ ಮಾಡುವಂತಿಲ್ಲ. ಇನ್ನು ಅಂಗಸಂಸ್ಥೆಗಳು ಪ್ಲಾಟ್​ಫಾರ್ಮ್​ನಲ್ಲಿ ಕಾರ್ಯ ನಿರ್ವಹಿಸುತ್ತಿರುವಂಥ ಆನ್​ಲೈನ್​ ಮಾರಾಟಗಾರರಿಗೆ ಮಾರಾಟ ಮಾಡುವಂತಿಲ್ಲ. ಅಂದಹಾಗೆ ತನ್ನ ಟಾಪ್ ಎರಡು ಮಾರಾಟಗಾರ ಸಂಸ್ಥೆಯಲ್ಲಿ ಅಮೆಜಾನ್​ಗೆ ಪರೋಕ್ಷವಾಗಿ ಪಾಲಿದೆ.

ವಿದೇಶೀ ಹೂಡಿಕೆ ನಿರ್ಬಂಧಗಳ ಉಲ್ಲಂಘನೆ ಭಾರತೀಯ ರೀಟೇಲರ್​ಗಳು ಆರೋಪಿಸುವಂತೆ, ನೇರ ಮಾರಾಟಕ್ಕೆ ಸಂಬಂಧಿಸಿದಂತೆ ಇರುವ ವಿದೇಶೀ ಹೂಡಿಕೆ ನಿರ್ಬಂಧಗಳನ್ನು ಮೀರಿ, ಅಮೆಜಾನ್ ಮತ್ತು ಫ್ಲಿಪ್​ಕಾರ್ಟ್​ ತಮ್ಮ ಹೋಲ್​ಸೇಲ್ ಘಟಕದಿಂದ ಪರೋಕ್ಷವಾಗಿ ಉತ್ಪನ್ನಗಳನ್ನು ವೆಬ್​ಸೈಟ್​ನಲ್ಲಿ ಪಟ್ಟಿ ಮಾಡುತ್ತಿವೆ. ಆದರೆ ಈ ಆರೋಪವನ್ನು ಎರಡೂ ಕಂಪೆನಿಗಳು ನಿರಾಕರಿಸಿವೆ. ಈಗಿನ ಪ್ರಸ್ತಾವಿತ ನಿಯಮದ ವಿರುದ್ಧ ಅಮೆಜಾನ್ ಮತ್ತು ಫ್ಲಿಪ್​ಕಾರ್ಟ್​ ಧ್ವನಿ ಎತ್ತಲಿವೆ ಎಂದು ಮೂಲಗಳು ತಿಳಿಸಿವೆ. “ಈಗಿನ ಹೊಸ ನಿಯಮದ ಅಡಿಯಲ್ಲಿ ತಂದಿರುವ ವಿಚಾರದಲ್ಲಿ ಗ್ರಾಹಕ ವ್ಯವಹಾರಗಳ ಸಚಿವಾಲಯ ಮಾಡುವುದು ಏನೂ ಇಲ್ಲ,” ಎಂದು ಇ-ಕಾಮರ್ಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇನ್ನು ಹೊಸ ನಿಯಮಾವಳಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಅಮೆಜಾನ್, ಫ್ಲಿಪ್​ಕಾರ್ಟ್ ನಿರಾಕರಿಸಿವೆ.

ಅಮೆಜಾನ್​​ನಿಂದ ಕೆಲವೇ ಕಂಪೆನಿಗಳ ಮಾರಾಟಗಾರರಿಗೆ ಆದ್ಯತೆ ನೀಡುವ ಮೂಲಕ ಸರ್ಕಾರದ ಕಾನೂನು ಉಲ್ಲಂಘನೆ ಮಾಡಿರುವುದು ದಾಖಲಾತಿಗಳಲ್ಲಿ ಕಂಡುಬಂದಿದ್ದಾಗಿ 2021ರ ಫೆಬ್ರವರಿಯಲ್ಲಿ ರಾಯಿಟರ್ಸ್ ವರ್ಇ ಮಾಡಿತ್ತು. ಆ ಸಂದರ್ಭದಲ್ಲಿ ಭಾರತದಲ್ಲಿ ಅಮೆಜಾನ್ ನಿರ್ಬಂಧಕ್ಕೆ ಆಗ್ರಹ ಕೇಳಿಬಂದಿತ್ತು. ಆದರೆ ತಾನು ಯಾರಿಗೂ ಆದ್ಯತೆ ನೀಡಿಲ್ಲ ಎಂದು ಅಮೆಜಾನ್​ ಕಂಪೆನಿ ಹೇಳಿಕೊಂಡಿದೆ.

ಇದನ್ನೂ ಓದಿ: ಅಮೆಜಾನ್, ಫ್ಲಿಪ್​ಕಾರ್ಟ್ ವಿರುದ್ಧದ ತನಿಖೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಕರ್ನಾಟಕ ಹೈಕೋರ್ಟ್

(New set of rules framed by central government become challenge for e commerce companies. Here is an explainer)

Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?