ಅಮೆರಿಕದ ಶ್ರೀಮಂತರಿಂದ ಹಣ ಪಡೆದು ಭಾರತದ ಶ್ರೀಮಂತರನ್ನು ನಿಂದಿಸುತ್ತಾರೆ: ಆಕ್ಸ್​ಫ್ಯಾಮ್, ಪಿಕೆಟ್ಟಿ ವಿರುದ್ಧ ಸಂಜೀವ್ ಸಾನ್ಯಾಲ್ ಗುಡುಗು

Sanjeev Sanyal blasts against foreign NGOs: ಭಾರತದಲ್ಲಿ ಶ್ರೀಮಂತರು ಮತ್ತು ಬಡವರ ಮಧ್ಯೆ ಬಹಳ ದೊಡ್ಡ ಅಂತರ ಇದೆ. ಆದಾಯ ಅಸಮಾನತೆ ಭಾರತದಲ್ಲಿ ಬಹಳ ಇದೆ ಎಂದು ಆಕ್ಸ್​ಫ್ಯಾಮ್ ಮೊದಲಾದ ಎನ್​ಜಿಒ ಸಂಸ್ಥೆಗಳು ವರದಿ ಮಾಡುವುದನ್ನು ನೋಡಿದ್ದೇವೆ. ಪ್ರಧಾನಿ ಆರ್ಥಿಕ ಸಲಹೆಗಾರರ ತಂಡದ ಸದಸ್ಯರಾಗಿರುವ ಆರ್ಥಿಕ ತಜ್ಞ ಸಂಜೀವ್ ಸಾನ್ಯಾಲ್ ಈ ಎನ್​ಜಿಒಗಳ ವಿರುದ್ಧ ಗುಡುಗಿದ್ದಾರೆ. ಭಾರತಕ್ಕೆ ಉದ್ಯಮಿಗಳು ಮತ್ತು ಶ್ರೀಮಂತರ ಅವಶ್ಯಕತೆ ಇದೆ ಎಂದಿದ್ದಾರೆ.

ಅಮೆರಿಕದ ಶ್ರೀಮಂತರಿಂದ ಹಣ ಪಡೆದು ಭಾರತದ ಶ್ರೀಮಂತರನ್ನು ನಿಂದಿಸುತ್ತಾರೆ: ಆಕ್ಸ್​ಫ್ಯಾಮ್, ಪಿಕೆಟ್ಟಿ ವಿರುದ್ಧ ಸಂಜೀವ್ ಸಾನ್ಯಾಲ್ ಗುಡುಗು
ಸಂಜೀವ್ ಸಾನ್ಯಾಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 19, 2024 | 12:11 PM

ನವದೆಹಲಿ, ಜುಲೈ 19: ಭಾರತದಲ್ಲಿ ಆದಾಯ ಅಸಮಾನತೆ (Income inequality) ಬಹಳ ಹೆಚ್ಚಿದೆ. ಇದನ್ನು ಕಡಿಮೆ ಮಾಡಲು ಶ್ರೀಮಂತರಿಗೆ ಹೆಚ್ಚು ತೆರಿಗೆ ವಿಧಿಸಬೇಕು ಎಂದು ಆಗಾಗ್ಗೆ ವರದಿ ನೀಡುವ ಆಕ್ಸ್​ಫ್ಯಾಮ್, ಥಾಮಸ್ ಪಿಕೆಟ್ಟಿ (Thomas Piketty) ಮತ್ತಿತರ ಅಂತಾರಾಷ್ಟ್ರೀಯ ವ್ಯಕ್ತಿ ಮತ್ತು ಎನ್​ಜಿಒಗಳ ವಿರುದ್ಧ ಆರ್ಥಿಕ ತಜ್ಞ ಹಾಗು ಮೋದಿ ಟೀಮ್ ಸದಸ್ಯ ಸಂಜೀವ್ ಸಾನ್ಯಾಲ್ ತಿರುಗೇಟು ನೀಡಿದ್ದಾರೆ. ಈ ಜಾಗತಿಕ ಎನ್​ಜಿಒಗಳ ಅಜೆಂಡಾ ಬೇರೆಯೇ ಇದ್ದು, ಇವರು ಭಾರತದ ಶ್ರೀಮಂತರು ಮತ್ತು ಉದ್ಯಮಿಗಳ ಪತನ ಆಗಬಯಸುತ್ತಾರೆ ಎಂದು ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಯ ಸದಸ್ಯರಾಗಿರುವ ಅವರು ವ್ಯಾಖ್ಯಾನಿಸಿದ್ದಾರೆ.

‘ನಾನು ಶಾಲೆಯಲ್ಲಿರುವಾಗ ಟಾಟಾ ಮತ್ತು ಬಿರ್ಲಾ ಬಗ್ಗೆ ಹೆಚ್ಚಾಗಿ ಕೇಳುತ್ತಿದ್ದೆವು. ಈಗ ಅಂಬಾನಿ, ಅದಾನಿ ಹೆಸರು ಕೇಳುತ್ತಿದೆ. ಇಂಥ ಉದ್ಯಮಿಗಳು ಹೂಡಿಕೆ ಮಾಡುವುದರಿಂದ ಭಾರತಕ್ಕೆ ಅವರ ಅಗತ್ಯತೆ ಇದೆ… ನಮಗೆ ಲಕ್ಷಗಟ್ಟಲೆ ಉದ್ಯೋಗಗಳು ಬೇಕು. ಪಿಕೆಟ್ಟಿಯಾಗಲಿ, ಅಕ್ಸ್​ಫ್ಯಾಮ್ ಆಗಲಿ ಅಥವಾ ಇತರ ಎನ್​ಜಿಒಗಳಾಗಲೀ ಈ ಉದ್ಯೋಗ ಕೊಡುವುದಿಲ್ಲ. ಕೈಗಾರಿಕೋದ್ಯಮಿಗಳಿಂದ ಮಾತ್ರ ಇದು ಸಾಧ್ಯ. ಆದ್ದರಿಂದ ಈ ಉದ್ಯಮಿಗಳನ್ನು ಗುರಿ ಮಾಡುವುದು ತಪ್ಪು,’ ಎಂದು ಸಂಜೀವ್ ಸಾನ್ಯಾಲ್ ಹೇಳಿದ್ದಾರೆ.

ಅಮೆರಿಕದ ಶ್ರೀಮಂತರಿಂದ ಹಣ ಪಡೆದು ಭಾರತದ ಶ್ರೀಮಂತರನ್ನು ದೂಷಿಸ್ತಾರೆ…

‘ಥಾಮಸ್ ಪಿಕೆಟ್ಟಿ, ಆಕ್ಸ್​ಫ್ಯಾಮ್ ಅಥವಾ ಇಂಥ ಸಾವಿರಾರು ಎನ್​ಜಿಒಗಳ ಬ್ಯಾಲನ್ಸ್ ಶೀಟ್ ತೆಗೆದು ನೋಡಿ. ಅವುಗಳಿಗೆ ಎಲ್ಲಿಂದ ಹಣ ಬರುತ್ತದೆ ಎಂಬುದು ಗೊತ್ತಾಗುತ್ತದೆ. ಈ ಎನ್​ಜಿಒಗಳಿಗೆ ಫೋರ್ಡ್ ಫೌಂಡೇಶನ್, ರಾಕ್​ಫೆಲ್ಲರ್ ಫೌಂಡೇಶನ್, ಗೇಟ್ಸ್ ಫೌಂಡೇಶನ್, ಸೋರೋಸ್ ಓಪನ್ ಸೊಸೈಟಿಯಂತಹ ಸಂಘಟನೆಗಳಿಂದ ಫಂಡಿಂಗ್ ಸಿಗುತ್ತದೆ…

ಇದನ್ನೂ ಓದಿ: ಅರ್ಧದಷ್ಟು ಭಾರತೀಯ ಕುಟುಂಬಗಳ ಆದಾಯ ಮತ್ತು ಉಳಿತಾಯ ಇಳಿಕೆ; ಬಜೆಟ್​ನಲ್ಲಿ ರಿಲೀಫ್ ಸಿಗುವ ಅಪೇಕ್ಷೆ

‘ಬಿಲ್ ಗೇಟ್ಸ್, ಸೋರೋಸ್, ಫೋರ್ಡ್, ರಾಕ್​ಫೆಲ್ಲರ್ ಇವೆಲ್ಲಾ ಯಾರು? ಇವರು ಅಮೆರಿಕದ ಶ್ರೀಮಂತರು. ಈ ಶ್ರೀಮಂತರಿಂದ ಹಣ ಪಡೆಯುವ ಎನ್​ಜಿಒಗಳು ಅವರನ್ನು ಹೊಗಳುತ್ತವೆ. ನಮ್ಮ ದೇಶಕ್ಕೆ ಬಂದು ನಮ್ಮ ಶ್ರೀಮಂತರನ್ನು ದೂಷಿಸುತ್ತವೆ’ ಎಂದು ಸಂಜೀವ್ ಸಾನ್ಯಾಲ್ ವಿಷಾದಿಸಿದ್ದಾರೆ.

ಶ್ರೀಮಂತರು ಬೆಳೆಯಲಿ, ಹಾಗೆಯೇ ಬಡವರಿಗೂ ನೆರವು ಸಿಗಲಿ

ಜಾಗತಿಕ ಜನಸಂಖ್ಯೆಯಲ್ಲಿ ಭಾರತದ ಪಾಲು ಶೇ. 16ರಿಂದ 17ರಷ್ಟಿದೆ. ಜಾಗತಿಕವಾಗಿ ಬಿಲಿಯನೇರ್​ಗಳ ಸಂಖ್ಯೆಯಲ್ಲಿ ಭಾರತೀಯರ ಸಂಖ್ಯೆ ಶ. 16ರಿಂದ 17ರಷ್ಟಿರಬೇಕು. ಇದರ ಜೊತೆಗೆ ಸರ್ಕಾರ ಬಡವರಿಗೂ ಸಹಾಯ ಮಾಡಬೇಕು ಎನ್ನುವುದು ನನ್ನ ಅಪೇಕ್ಷೆ. ಅದಕ್ಕಾಗಿ ಹೂಡಿಕೆದಾರರನ್ನು, ಸೃಜನಶೀಲರನ್ನು ಹತ್ತಿಕ್ಕಬೇಕೆಂದಿಲ್ಲ ಎಂಬುದು ಸಂಜೀವ್ ಸಾನ್ಯಾಲ್ ಅನಿಸಿಕೆ.

ಇದನ್ನೂ ಓದಿ: ಯೂರೋಪ್​ನ ಕಾರ್ಬನ್ ಟ್ಯಾಕ್ಸ್​ನಿಂದ ಭಾರತಕ್ಕೆ ಜಿಡಿಪಿಯ ಶೇ. 0.05ರಷ್ಟು ನಷ್ಟ; ಇಯು ವಿರುದ್ದವೂ ಪ್ರತಿಯಾಗಿ ತೆರಿಗೆ ವಿಧಿಸಲು ಶಿಫಾರಸು

‘ನಿಮಗೆ ಗೊತ್ತಿರಲಿ, ಈ ವಿದೇಶೀ ಎನ್​ಜಿಒಗಳಿಗೆ ಭಾರತಕ್ಕೆ ಒಳಿತಾಗಬೇಕೆನ್ನುವ ಇಚ್ಛೆ ಇಲ್ಲ. ನಮ್ಮನ್ನು ನಿಯಂತ್ರಣದಲ್ಲಿ ಇಡುವುದಷ್ಟೇ ಅವರಿಗೆ ಬೇಕು. ಅವರಿಗೆ ಶ್ರೀಮಂತರನ್ನು ಕಂಡರೆ ಆಗದು ಎಂದ ಮೇಲೆ ಸೋರೋಸ್, ಫೋರ್ಡ್ ಮತ್ತಿತರರಿಂದ ಯಾಕೆ ಫಂಡಿಂಗ್ ಪಡೆಯುತ್ತಾರೆ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ