AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಧದಷ್ಟು ಭಾರತೀಯ ಕುಟುಂಬಗಳ ಆದಾಯ ಮತ್ತು ಉಳಿತಾಯ ಇಳಿಕೆ; ಬಜೆಟ್​ನಲ್ಲಿ ರಿಲೀಫ್ ಸಿಗುವ ಅಪೇಕ್ಷೆ

Budget 2024 expections: ಹಣದುಬ್ಬದಿಂದಾಗಿ ಜನರ ಜೀವನ ವೆಚ್ಚ ದಿನೇ ದಿನೇ ದುಬಾರಿ ಆಗುತ್ತಿದೆ. ಅದೇ ವೇಳೆ ಆದಾಯ ಏರಿಕೆ ಆಗುತ್ತಿಲ್ಲ. ಇದರಿಂದಾಗಿ ಮಧ್ಯಮವರ್ಗದವರು ಕಷ್ಟಪಟ್ಟು ಕೂಡಿಟ್ಟ ಹಣ ಕರಗುತ್ತಿದೆ. ವೆಚ್ಚ ಹೆಚ್ಚಾಗಿ ಸಾಲ ಮಾಡುವವರು, ಆಸ್ತಿ ಮಾರುವವರ ಸಂಖ್ಯೆ ಹೆಚ್ಚಿದೆ. ಇದು ಲೋಕಲ್ ಸರ್ಕಲ್ಸ್ ಎಂಬ ಸಂಸ್ಥೆ ದೇಶಾದ್ಯಂತ ನಡೆಸಿದ ಸಮೀಕ್ಷೆ ಬಿಚ್ಚಿಟ್ಟ ವಾಸ್ತವ ಸ್ಥಿತಿ.

ಅರ್ಧದಷ್ಟು ಭಾರತೀಯ ಕುಟುಂಬಗಳ ಆದಾಯ ಮತ್ತು ಉಳಿತಾಯ ಇಳಿಕೆ; ಬಜೆಟ್​ನಲ್ಲಿ ರಿಲೀಫ್ ಸಿಗುವ ಅಪೇಕ್ಷೆ
ಉಳಿತಾಯ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 19, 2024 | 11:21 AM

Share

ನವದೆಹಲಿ, ಜುಲೈ 19: ಆಹಾರ, ಶಿಕ್ಷಣ, ಬಾಡಿಗೆ, ಸಾರಿಗೆ ಇತ್ಯಾದಿ ಎಲ್ಲಾ ಅಗತ್ಯ ವಸ್ತು ಮತ್ತು ಸೇವೆಗಳ ಬೆಲೆ ಸ್ಥಿರವಾಗಿ ಹೆಚ್ಚುತ್ತಲೇ ಇದೆ. ಮಧ್ಯಮ ವರ್ಗದವರ ಜೀವನ ವೆಚ್ಚ ಹೆಚ್ಚುತ್ತಿದೆ. ಆದರೆ, ಆದಾಯ ಮಾತ್ರ ಹೆಚ್ಚೂಕಡಿಮೆ ನಿಂತ ನೀರಾಗಿದೆ. ಖರ್ಚಿಗೆ ಹಣ ಸಾಲದಾಗಿ ಜನರು ತಮ್ಮ ಇಪಿಎಫ್ ಇತ್ಯಾದಿ ಉಳಿತಾಯ ಹಣವನ್ನು ಹಿಂಪಡೆಯುವುದೋ, ಸಾಲ ಮಾಡುವುದೋ ಅಥವಾ ಆಸ್ತಿ ಮಾರುವುದೋ ಅನಿವಾರ್ಯವಾಗಿದೆ. ಇಪಿಎಫ್ ಹಿಂಪಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಇದರ ಸೂಚಕವಾಗಿರಬಹುದು. ಲೋಕಲ್​ಸರ್ಕಲ್ಸ್ ಎಂಬ ಸಂಸ್ಥೆ ರಾಷ್ಟ್ರಮಟ್ಟದಲ್ಲಿ ಮನೆಮನೆಗಳ ಸಮೀಕ್ಷೆ ನಡೆಸಿದ್ದು, ಅವರ ಆದಾಯ ಮತ್ತು ಉಳಿತಾಯ ಎಷ್ಟಿದೆ ಎಂಬುದರ ದತ್ತಾಂಶ ಪಡೆಯಲು ಯತ್ನಿಸಿದೆ. ಇದರ ವರದಿಯಲ್ಲಿ ಈ ಮಧ್ಯಮವರ್ಗದವರ ಆದಾಯ ಇಳಿಮುಖವಾಗುತ್ತಿರುವುದು ಮತ್ತು ಖರ್ಚು ಹೆಚ್ಚಾಗುತ್ತಿರುವುದು ವ್ಯಕ್ತವಾಗಿದೆ.

ಲೋಕಲ್ ಸರ್ಕಲ್ಸ್ ಸಂಸ್ಥೆ ದೇಶಾದ್ಯಂತ 327 ಜಿಲ್ಲೆಗಳಿಂದ 21,000 ಜನರನ್ನು ಸಂದರ್ಶಿಸಿದೆ. ಆದಾಯಕ್ಕೆ ಹೋಲಿಸಿದರೆ ವೆಚ್ಚಗಳು ಹೆಚ್ಚಾಗುತ್ತಿರುವುದರಿಂದ ಈ ಹಣಕಾಸು ವರ್ಷದಲ್ಲಿ ಸರಾಸರಿ ಗೃಹ ಉಳಿತಾಯ ಕಡಿಮೆ ಆಗಬಹುದು ಎಂಬುದನ್ನು ಈ ಸಮೀಕ್ಷೆ ಗ್ರಹಿಸಿದೆ. ಜೀವನ ವೆಚ್ಚ ಹೆಚ್ಚಾಗುತ್ತಿರುವುದರಿಂದ ಜನರು ತಮ್ಮ ಉಳಿತಾಯ ಹಣವನ್ನು ಬಳಸುತ್ತಿದ್ದಾರೆ. ತಮ್ಮ ಹಣಕಾಸು ಅವಶ್ಯಕತೆ ಪೂರ್ಣಗೊಳಿಸಲು ಆಸ್ತಿಯನ್ನು ಅಡ ಇಟ್ಟು ಸಾಲ ಪಡೆಯುತ್ತಿದ್ದಾರೆ. ಹಲವರು ತಮ್ಮ ಆಸ್ತಿಯನ್ನು ಮಾರಿ ಆ ಹಣವನ್ನು ತಮ್ಮ ವೆಚ್ಚಕ್ಕಾಗಿ ಬಳಸುತ್ತಿರುವ ಸಂಗತಿಯನ್ನು ಈ ಸಮೀಕ್ಷೆ ಗುರುತಿಸಿದೆ.

ಇದನ್ನೂ ಓದಿ: ಯೂರೋಪ್​ನ ಕಾರ್ಬನ್ ಟ್ಯಾಕ್ಸ್​ನಿಂದ ಭಾರತಕ್ಕೆ ಜಿಡಿಪಿಯ ಶೇ. 0.05ರಷ್ಟು ನಷ್ಟ; ಇಯು ವಿರುದ್ದವೂ ಪ್ರತಿಯಾಗಿ ತೆರಿಗೆ ವಿಧಿಸಲು ಶಿಫಾರಸು

ಸರ್ಕಾರದ ವರದಿಯಲ್ಲಿನ ಅಂಕಿ ಅಂಶವೂ ಇದನ್ನೇ ಹೇಳುತ್ತೆ…

2020-21ರಿಂದ 2022-23ರವರೆಗೆ ಮೂರು ವರ್ಷದಲ್ಲಿ ಭಾರತದಲ್ಲಿ ನಿವ್ವಳ ಗೃಹ ಉಳಿತಾಯ 14.16 ಟ್ರಿಲಿಯನ್ ಡಾಲರ್​ನಷ್ಟಿದೆ ಎಂದು ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿದ ನ್ಯಾಷನಲ್ ಅಕೌಂಟ್ ಸ್ಟಾಟಿಸ್ಟಿಕ್ಸ್ 2024 ವರದಿಯಲ್ಲಿ ತಿಳಿಸಿದೆ. ಹಿಂದಿನ ಅವಧಿಗೆ ಹೋಲಿಸಿದರೆ ಗೃಹ ಉಳಿತಾಯದಲ್ಲಿ 9 ಟ್ರಿಲಿಯನ್ ಡಾಲರ್​ನಷ್ಟು ಕಡಿಮೆ ಆಗಿದೆ. ಕೋವಿಡ್ ಬರುವ ಮುನ್ನ ಜನರು ಹೊಂದಿದ್ದ ಉಳಿತಾಯ ಹಣದ ಮಟ್ಟವನ್ನು ಈಗಲೂ ತಲುಪಲು ಆಗಿಲ್ಲದಿರುವುದ ಈ ವರದಿಯಿಂದ ದೃಢಪಟ್ಟಿದೆ.

ಬಜೆಟ್​ನಲ್ಲಿ ರಿಲೀಫ್ ಸಿಗುತ್ತಾ ಎನ್ನುವ ನಿರೀಕ್ಷೆ…

ಈ ಬಾರಿಯ ಬಜೆಟ್​ನಲ್ಲಿ ಸರ್ಕಾರ ತೆರಿಗೆ ಹೊರೆಯನ್ನು ಇಳಿಸಬಹುದು ಎನ್ನುವ ನಿರೀಕ್ಷೆಯಲ್ಲಿ ಮಧ್ಯಮವರ್ಗದವರಿದ್ದಾರೆ. ಟ್ಯಾಕ್ಸ್ ಸ್ಲ್ಯಾಬ್ ದರಗಳ ಇಳಿಕೆ ಮತ್ತು ತೆರಿಗೆ ವಿನಾಯಿತಿ ಮಿತಿ ಏರಿಕೆ ಇವು ಈ ಮಧ್ಯಮ ವರ್ಗದವರ ಪ್ರಮುಖ ಬೇಡಿಕೆ. 2023ರ ಬಜೆಟ್​ನಲ್ಲಿ ಹೊಸ ಟ್ಯಾಕ್ಸ್ ಸಿಸ್ಟಂನಲ್ಲಿ 7 ಲಕ್ಷ ರೂವರೆಗಿನ ಆದಾಯಕ್ಕೆ ಟ್ಯಾಕ್ಸ್ ರಿಬೇಟ್ ನೀಡಿ, ಶೂನ್ಯ ತೆರಿಗೆ ಅವಕಾಶ ನೀಡಲಾಗಿತ್ತು. ಈ ರಿಬೇಟ್​ಗೆ ಆದಾಯ ಮಿತಿಯನ್ನು ಹೆಚ್ಚಿಸಲಿ ಎನ್ನುವ ಕೂಗು ಇದೆ.

ಇದನ್ನೂ ಓದಿ: ಬೈಸಿಕಲ್​ನಿಂದ ಹಿಡಿದು ಬ್ರಹ್ಮೋಸ್​ವರೆಗೆ, ಜಾಗತಿಕವಾಗಿ ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಹವಾ ಹೇಗಿದೆ ನೋಡಿ

ಹಾಗೆಯೇ, ಹಳೆಯ ಟ್ಯಾಕ್ಸ್ ಸಿಸ್ಟಂ ಬಳಸುವವರು ಟ್ಯಾಕ್ಸ್ ಡಿಡಕ್ಷನ್ ಪ್ರಮಾಣವನ್ನು ಒಂದೂವರೆ ಲಕ್ಷ ರೂಗಿಂತ ಮೇಲೆ ಹೆಚ್ಚಿಸಬೇಕು ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!