ಬೈಸಿಕಲ್​ನಿಂದ ಹಿಡಿದು ಬ್ರಹ್ಮೋಸ್​ವರೆಗೆ, ಜಾಗತಿಕವಾಗಿ ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಹವಾ ಹೇಗಿದೆ ನೋಡಿ

Indian manufacturing industry shining: ಭಾರತದ ಮ್ಯಾನುಫ್ಯಾಕ್ಚರಿಂಗ್ ಇಂಡಸ್ಟ್ರಿ ಗರಿಗೆದರಿ ನಿಂತಿದೆ. ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿಯಲ್ಲಿದ್ದ ಈ ಉದ್ಯಮಕ್ಕೆ ಈಗ ಸಿಕ್ಕಾಪಟ್ಟೆ ಬೇಡಿಕೆ ಬಂದಿದೆ. ಒಂದು ಕಾಲದಲ್ಲಿ ಶೇ. 80ರಷ್ಟು ಮೊಬೈಲ್​ಗಳನ್ನು ರಫ್ತು ಮಾಡಿಕೊಳ್ಳುತ್ತಿದ್ದ ಭಾರತ ಈಗ ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ದೇಶವಾಗಿದೆ.

ಬೈಸಿಕಲ್​ನಿಂದ ಹಿಡಿದು ಬ್ರಹ್ಮೋಸ್​ವರೆಗೆ, ಜಾಗತಿಕವಾಗಿ ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಹವಾ ಹೇಗಿದೆ ನೋಡಿ
ಭಾರತದ ಆರ್ಥಿಕತೆ
Follow us
|

Updated on: Jul 18, 2024 | 2:05 PM

ನವದೆಹಲಿ, ಜುಲೈ 18: ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಉತ್ಪಾದನಾ ವಲಯಕ್ಕೆ ಒತ್ತು ಕೊಡಲಾಗುತ್ತಿದೆ. ಇದು ಯಶಸ್ವಿಯಾಗುವುದು ಕಷ್ಟ ಎಂದು ಕೆಲ ಆರ್ಥಿಕ ತಜ್ಞರು ಅಭಿಪ್ರಾಯಪಡುವುದು ಹೌದು. ಮ್ಯಾನುಫ್ಯಾಕ್ಚರಿಂಗ್​ನಲ್ಲಿ ಬಹಳ ಮುಂಚೂಣಿಯಲ್ಲಿರುವ ಚೀನಾದಂತಹ ದೈತ್ಯ ದೇಶದೆದುರು ಭಾರತ ಏನೂ ಮಾಡಲಾಗದು. ಉತ್ಪಾದನಾ ಕಾರ್ಯಗಳಿಗೆ ಬೇಕಾದ ಸೌಕರ್ಯ ವ್ಯವಸ್ಥೆ ಭಾರತದಲ್ಲಿ ಇಲ್ಲ ಎಂದು ಮೂಗು ಮುರಿಯುವವರೇ ಹೆಚ್ಚು. 2014ರಲ್ಲಿ ಸರ್ಕಾರ ತಂದ ಮೇಕ್ ಇನ್ ಇಂಡಿಯಾ ಯೋಜನೆ 10 ವರ್ಷದಲ್ಲಿ ನಿರೀಕ್ಷೆಮೀರಿದ ಯಶಸ್ಸು ಗಳಿಸಿದೆ. ಇವತ್ತು ಉತ್ಪಾದನಾ ವಲಯದ ಜಾಗತಿಕ ಭೂಪಟದಲ್ಲಿ ಭಾರತದ ಹೆಸರು ಕಾಣಿಸಿಕೊಳ್ಳತೊಡಗಿದೆ.

ಇವತ್ತು ಮೊಬೈಲ್ ಫೋನ್ ತಯಾರಿಕೆಯಲ್ಲಿ ಭಾರತ ಎರಡನೇ ಸ್ಥಾನಕ್ಕೇರಿದೆ. ಒಂದೊಮ್ಮೆ ಭಾರತ ಶೇ. 80ರಷ್ಟು ಮೊಬೈಲ್ ಫೋನ್​ಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಇವತ್ತು ಭಾರತಕ್ಕೆ ಬೇಕಾದ ಶೇ. 99.9ರಷ್ಟು ಫೋನ್​ಗಳು ಭಾರತದಲ್ಲೇ ತಯಾರಾಗುತ್ತಿವೆ. ಬ್ರಿಟನ್, ಆಸ್ಟ್ರಿಯಾ, ನೆದರ್​ಲ್ಯಾಂಡ್ಸ್, ಇಟಲಿ ಮೊದಲಾದ ದೇಶಗಳಲ್ಲಿ ಮೇಡ್ ಇನ್ ಇಂಡಿಯಾ ಫೋನ್​ಗಳು ಸರಬರಾಜಾಗುತ್ತಿವೆ.

ಮೊಬೈಲ್ ಮಾತ್ರವಲ್ಲ, ಮಿಲಿಟರಿ, ಸ್ಪೇಸ್, ಎಲೆಕ್ಟ್ರಿಕ್ ವಾಹನ, ಸೆಮಿಕಂಡಕ್ಟರ್, ಕಟ್ಟಡ ನಿರ್ಮಾಣ, ರೈಲ್ವೆ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಬಂಡವಾಳ ಹರಿದುಬರುತ್ತಿದೆ. ಉತ್ಪಾದನೆ ಗಣನೀಯವಾಗಿ ಹೆಚ್ಚುತ್ತಿದೆ. ಇದೆಲ್ಲದರ ಮಧ್ಯೆ ಇತರ ಕೆಲ ಕ್ಷೇತ್ರಗಳಲ್ಲಿ ಅನಿರೀಕ್ಷಿತ ರೀತಿಯಲ್ಲಿ ಭಾರತದ ಮ್ಯಾನುಫ್ಯಾಕ್ಚರಿಂಗ್ ಉದ್ಯಮ ಗರಿಗೆದರಿದೆ. ಅಂಥ ಕೆಲ ಸಂಗತಿಗಳ ವಿವರ ಇಲ್ಲಿದೆ…

ಇದನ್ನೂ ಓದಿ: ರಷ್ಯಾದ ಮೈನಸ್ 40 ಡಿಗ್ರಿ ಚಳಿಗೆ ಭಾರತದ ಶೂ; ರಷ್ಯನ್ ಸೈನಿಕರ ಕಾಲಿಗೆ ಹಾಜಿಪುರ್ ರಕ್ಷೆ

ರಷ್ಯಾ ಸೇನೆಗೆ ಹಾಜಿಪುರ್ ಶೂ

ಬಿಹಾರದ ಕೃಷಿಕರ ನಾಡೆನಿಸಿದ ಹಾಜಿಪುರ್​ನಲ್ಲಿ ಶೂ ತಯಾರಿಕೆಯ ಕಾರ್ಖಾನೆ ಇದ್ದು ಇಲ್ಲಿ ರಷ್ಯನ್ ಸೇನೆ ಸೇಫ್ಟಿ ಶೂ ತಯಾರಿಸಿ ರಫ್ತು ಮಾಡುತ್ತಿದೆ. ಯೂರೋಪ್ ದೇಶಗಳಿಗೆ ಡಿಸೈನರ್ ಶೂ ತಯಾರಿಸುವ ಕಾರ್ಯವೂ ಇಲ್ಲಿ ನಡೆಯಲಿದೆ.

ಮೇಡ್ ಇನ್ ಇಂಡಿಯಾ ಬೈಸಿಕಲ್

ವಿಶ್ವದ ಬೈಸಿಕಲ್ ರಾಜಧಾನಿ ಎನಿಸಿದ ನೆದರ್​ಲ್ಯಾಂಡ್ಸ್​ನಲ್ಲಿ ಮೇಡ್ ಇನ್ ಇಂಡಿಯಾ ಬೈಸಿಕಲ್ ಜನಪ್ರಿಯವಾಗಿದೆ. ಇಲ್ಲಿ ಮಾತ್ರವಲ್ಲ, ಬ್ರಿಟನ್, ಜರ್ಮನಿಯಲ್ಲೂ ಭಾರತದ ಸೈಕಲ್​ಗಳಿಗೆ ಬೇಡಿಕೆ ಇದೆ. ಚೀನಾ ನಿರ್ಮಿತ ಸೈಕಲ್​ಗಿಂತ ಭಾರತೀಯ ಸೈಕಲ್​ಗಳ ಗುಣಮಟ್ಟ ಉತ್ತಮ ಎನಿಸಿದೆ.

ಅಮೆರಿಕದಲ್ಲಿ ಅಮುಲ್

ಭಾರತದ ಅಗ್ರಗಣ್ಯ ಹಾಲು ತಯಾರಕಾ ಸಂಸ್ಥೆಯಾದ ಅಮುಲ್ 50ಕ್ಕೂ ಹೆಚ್ಚು ದೇಶಗಳಲ್ಲಿ ಮಾರುಕಟ್ಟೆ ಹೊಂದಿದೆ. ಅಮೆರಿಕ ದೇಶಕ್ಕೂ ಅದು ಲಗ್ಗೆ ಹಾಕಿದೆ. ಕೆಎಂಎಫ್ ನಂದಿನಿ ಹಾಲು ಕೂಡ ಬೇರೆ ಬೇರೆ ದೇಶಗಳಿಗೆ ರಫ್ತಾಗುತ್ತಿದೆ.

ಕಾಶ್ಮೀರದ ವಿಲ್ಲೋ ಬ್ಯಾಟು

ಜಮ್ಮು ಮತ್ತು ಕಾಶ್ಮೀರದಲ್ಲಿ ಬೆಳೆಯಲಾಗುವ ವಿಲ್ಲೋ ಮರದಿಂದ ಮಾಡಲಾದ ಕ್ರಿಕೆಟ್ ಬ್ಯಾಟ್ ಜನಪ್ರಿಯವಾಗುತ್ತಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ದೇಶಗಳಿಂದ ಈ ಬ್ಯಾಟ್​ಗಳಿಗೆ ಆರ್ಡರ್ ಬರುತ್ತಿದೆ. ಈ ವಿಲ್ಲೋ ಮರಗಳು ಕಾಶ್ಮೀರದಲ್ಲಿ ಬೆಳೆಯುವ ವಿಶೇಷ ಜಾತಿಯ ಮರ. ಈ ವಿಲ್ಲೋ ಬ್ಯಾಟ್​ಗಳಿಗೆ ಜಿಐ ಟ್ಯಾಗ್ ಪಡೆಯಲು ಸರ್ಕಾರ ಯತ್ನಿಸುತ್ತಿದೆ.

ಬ್ರಹ್ಮೋಸ್ ಕ್ಷಿಪಣಿ

ಭಾರತವೇ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್ ವಿಶ್ವದ ಪ್ರಬಲ ಕ್ಷಿಪಣಿಗಳಲ್ಲಿ ಒಂದಾಗಿದೆ. ಈ ಸೂಪರ್​ಸೋನಿಕ್ ಕ್ರೂಸ್ ಮಿಸೈಲ್ ಬಗ್ಗೆ ಹಲವು ದೇಶಗಳು ಆಸಕ್ತವಾಗಿವೆ. ಸದ್ಯ ಫಿಲಿಪ್ಪೈನ್ಸ್ ದೇಶ ಈ ಕ್ಷಿಪಣಿಯನ್ನು ಖರೀದಿಸಿದೆ. ಇತರ ದೇಶಗಳೂ ಕೂಡ ಈ ಕ್ಷಿಪಣಿ ಪಡೆಯಲು ಮುಂದಾಗಬಹುದು.

ಇದನ್ನೂ ಓದಿ: 25,000 ಜನರಿಗೆ ಕೆಲಸ ಕೊಟ್ಟಿದ್ದೇನೆ, ನನ್ನ ಮಕ್ಕಳು ಕರ್ನಾಟಕದಲ್ಲಿ ಕೆಲಸ ಮಾಡಬಾರದಾ?: ಮೀಸಲಾತಿ ಮಸೂದೆಗೆ ಫೋನ್​ಪೆ ಸಂಸ್ಥಾಪಕರ ಕಿಡಿ

ಜಾಗತಿಕವಾಗಿ ಯುಪಿಐ

ಭಾರತದ ಯುಪಿಐ ಪಾವತಿ ವ್ಯವಸ್ಥೆ ದೇಶದಲ್ಲಿ ಚಮತ್ಕಾರವನ್ನೇ ಮಾಡಿದೆ. ಈ ಮಾದರಿ ಪೇಮೆಂಟ್ ಸಿಸ್ಟಂ ಬೇರೆ ಬೇರೆ ದೇಶಗಳಲ್ಲೂ ಅಳವಡಿಕೆ ಆಗುತ್ತಿದೆ. ಫ್ರಾನ್ಸ್, ಯುಎಇ, ಸಿಂಗಾಪುರ್, ಶ್ರೀಲಂಕಾ, ಮಾರಿಷಸ್, ನೇಪಾಳ ಮೊದಲಾದ ದೇಶಗಳಲ್ಲಿ ಯುಪಿಐ ಅಳವಡಿಕೆ ಆಗಿದೆ.

ಅಮೇಜಾನ್​ನಲ್ಲಿ ಭಾರತದ ಉತ್ಪನ್ನಗಳು…

ಅಮೇಜಾನ್​ನ ಬ್ಲ್ಯಾಕ್ ಫ್ರೈಡೆ, ಸೈಬರ್ ಮಂಡೇ ಮಾರಾಟ ಕಾರ್ಯಕ್ರಮದಲ್ಲಿ ಮೇಡ್ ಇನ್ ಇಂಡಿಯಾ ಉತ್ಪನ್ನಗಳೇ ಹೆಚ್ಚು ಮಾರಾಟವಾಗುತ್ತಿವೆ. ಇದು ಜಾಗತಿಕ ಇಕಾಮರ್ಸ್ ಮಾರುಕಟ್ಟೆಯಲ್ಲಿ ಭಾರತದ ಮಹತ್ವವನ್ನು ತೋರಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ