Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಲರಿ ಸ್ಲಿಪ್​ನಲ್ಲಿರುವ ಎಚ್​ಆರ್​ಎ ಮತ್ತು ಅದರ ಟ್ಯಾಕ್ಸ್ ಸೇವಿಂಗ್ ವಿಧಾನ ತಿಳಿಯಿರಿ

HRA as tax saving instrument: ತೆರಿಗೆ ಉಳಿಸುವ ಅಥವಾ ಟ್ಯಾಕ್ಸ್ ಡಿಡಕ್ಷನ್ ಅವಕಾಶಗಳಲ್ಲಿ ಎಚ್​ಆರ್​ಎ ಕೂಡ ಒಂದು. ಈ ಹೌಸ್ ರೆಂಟ್ ಅಲೋಯನ್ಸ್ ಎಂಬುದು ಸಂಬಳದಾರನ ಸ್ಯಾಲರಿ ಸ್ಟ್ರಕ್ಚರ್​ನಲ್ಲಿ ಇರುತ್ತದೆ. ಹಾಗೊಂದು ವೇಳೆ ಅದಿಲ್ಲದಿದ್ದರೆ ಎಚ್​ಆರ್​ಎ ಟ್ಯಾಕ್ಸ್ ಎಕ್ಸೆಂಪ್ಷನ್ ಸಿಗುವುದಿಲ್ಲ. ರೆಂಟಲ್ ರೆಸಿಪ್ಟ್ಸ್ ದಾಖಲೆ ಬಹಳ ಮುಖ್ಯ. ಬಾಡಿಗೆ ಕರಾರು ಪತ್ರದ ದಾಖಲೆ ಸಲ್ಲಿಸಬೇಕಾಗಬಹುದು.

ಸ್ಯಾಲರಿ ಸ್ಲಿಪ್​ನಲ್ಲಿರುವ ಎಚ್​ಆರ್​ಎ ಮತ್ತು ಅದರ ಟ್ಯಾಕ್ಸ್ ಸೇವಿಂಗ್ ವಿಧಾನ ತಿಳಿಯಿರಿ
ಆದಾಯ ತೆರಿಗೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 18, 2024 | 11:33 AM

ಬೆಂಗಳೂರು, ಜುಲೈ 18: ಐಟಿ ರಿಟರ್ನ್ ಫೈಲ್ ಮಾಡುವ ಸಂದರ್ಭದಲ್ಲಿ ಎಚ್​ಆರ್​ಎ ವಿಚಾರ ಬಹಳ ಜನರ ಗಮನ ಸೆಳೆಯುತ್ತದೆ. ಇದು ಹೌಸ್ ರೆಂಟ್ ಅಲೋಯನ್ಸ್ ಅಥವಾ ಮನೆ ಬಾಡಿಗೆ ಭತ್ಯೆ. ಈ ಎಚ್​ಆರ್​ಎಗೆ ಟ್ಯಾಕ್ಸ್ ಡಿಡಕ್ಷನ್ ಸಿಗುತ್ತದೆ. ಹೀಗಾಗಿ, ನಿಮ್ಮ ಒಟ್ಟಾರೆ ಟ್ಯಾಕ್ಸಬಲ್ ಇನ್ಕಮ್​ನಲ್ಲಿ ಒಂದಷ್ಟು ರಿಯಾಯಿತಿ ಸಿಗಲು ಅವಕಾಶ ಒದಗಿಸುತ್ತದೆ. ಎಚ್​ಆರ್​ಎ ಎಂಬುದು ಎಲ್ಲರಿಗೂ ಸಿಗುವುದಿಲ್ಲ. ನಿಮ್ಮ ಉದ್ಯೋಗದಲ್ಲಿ ಸ್ಯಾಲರಿ ಸ್ಟ್ರಕ್ಚರ್​ನಲ್ಲಿ ಅದು ಇದ್ದರೆ ಸೌಲಭ್ಯ ಪಡೆಯಬಹುದು.

ಇಡೀ ಎಚ್​ಆರ್​ಎ ಮೊತ್ತಕ್ಕೆ ಟ್ಯಾಕ್ಸ್ ಡಿಡಕ್ಷನ್ ಸಿಗುವುದಿಲ್ಲ ಎಂಬುದು ಗೊತ್ತಿರಲಿ. ಎಷ್ಟು ಡಿಡಕ್ಷನ್ ಸಿಗುತ್ತದೆ ಎಂಬುದಕ್ಕೆ ಕೆಲ ಮಾನದಂಡಗಳಿವೆ. ಈ ಕೆಳಗೆ ಇರುವ ಪಟ್ಟಿಯಲ್ಲಿ ಅತೀ ಕಡಿಮೆ ಮೊತ್ತ ಯಾವುದು ಇರುತ್ತೋ ಅಷ್ಟು ಮಾತ್ರವೇ ಎಚ್​ಆರ್​ಎ ಟ್ಯಾಕ್ಸ್ ಡಿಡಕ್ಷನ್​ಗೆ ಅವಕಾಶ ಇರುತ್ತದೆ. ಇಲ್ಲಿದೆ ಆ ಪಟ್ಟಿ:

  1. ನಿಮ್ಮ ಸಂಬಳದಲ್ಲಿ ನಮೂದಾಗಿರುವ ಇರುವ ಎಚ್​ಆರ್​ಎ ಮೊತ್ತ
  2. ನೀವು ಕಟ್ಟುತ್ತಿರುವ ಮನೆ ಬಾಡಿಗೆ ಹಣ ಮತ್ತು ನಿಮ್ಮ ಶೇ. 10ರಷ್ಟು ಸಂಬಳ
  3. ನಿಮ್ಮ ನಗರದಲ್ಲಿರುವ ಎಚ್​ಆರ್​ಎ ಮಿತಿ

ಇದನ್ನೂ ಓದಿ: ನೀವು ನಕಲಿ ರೆಂಟ್ ರೆಸಿಪ್ಟ್ ಸಲ್ಲಿಸಿದ್ರೆ ಸರ್ಕಾರಕ್ಕೆ ಗೊತ್ತಾಗುತ್ತೆ ಹುಷಾರ್..! ಇಲಾಖೆ ನೆರವಿಗೆ ಎಐ ಟೆಕ್ನಾಲಜಿ

ಇಲ್ಲಿ ಎರಡನೇ ಅಂಶವನ್ನು ನೋಡುವುದಾದರೆ, ನಿಮ್ಮ ಸಂಬಳ 50,000 ರೂ ಎಂದಿಟ್ಟುಕೊಳ್ಳಿ. ಶೇ. 10 ಎಂದರೆ 5,000 ರೂ ಆಗುತ್ತದೆ. ನೀವು ಕಟ್ಟುತ್ತಿರುವ ಮನೆ ಬಾಡಿಗೆ ಮೊತ್ತ 12,000 ರೂ ಆಗಿತ್ತೆಂದರೆ ಆಗ 12,000 – 5,000 = 7,000 ರೂ ಆಗುತ್ತದೆ. ವರ್ಷಕ್ಕೆ 84,000 ರೂ ಆಗುತ್ತದೆ.

ಇನ್ನು, ಮೂರನೇ ಅಂಶ ನೋಡುವುದಾದರೆ, ನಾಲ್ಕು ಮೆಟ್ರೋ ನಗರಗಳಾದ ದೆಹಲಿ, ಮುಂಬೈ, ಕೋಲ್ಕತಾ ಮತ್ತು ಚೆನ್ನೈನಲ್ಲಿ ಕೆಲಸ ಮಾಡುವವರ ಬೇಸಿಕ್ ಸ್ಯಾಲರಿಯ ಶೇ 50ರಷ್ಟು ಮೊತ್ತ ಮತ್ತು ಡಿಎ ಹಣವು ಎಚ್​ಆರ್​ಎ ಮಿತಿ ಆಗಿರುತ್ತದೆ.

ಬೆಂಗಳೂರು ಇತ್ಯಾದಿ ಮೆಟ್ರೋ ಅಲ್ಲದ ನಗರಗಳ ಸಂಬಳದಾರರ ಶೇ. 40ರಷ್ಟು ಮೂಲ ಸಂಬಳ ಮತ್ತು ಡಿಎ ಮೊತ್ತವನ್ನು ಎಚ್​ಆರ್​ಎ ಲಿಮಿಟ್ ಎಂದು ಪರಿಗಣಿಸಲಾಗುತ್ತದೆ.

ಎಚ್​ಆರ್​ಎ ಡಿಡಕ್ಷನ್ ಕ್ಲೇಮ್ ಮಾಡಲು ಈ ದಾಖಲೆಗಳು ಬೇಕಾಗಬಹುದು

  • ರೆಂಟ್ ಅಗ್ರೀಮೆಂಟ್
  • ರೆಂಟ್ ರೆಸಿಪ್ಟ್ಸ್
  • ಮನೆ ಮಾಲಕರ ಪ್ಯಾನ್ ಕಾರ್ಡ್
  • ಪಾವತಿಗೆ ದಾಖಲೆ

ಇದನ್ನೂ ಓದಿ: ಆದಾಯ ತೆರಿಗೆ ಸ್ಲ್ಯಾಬ್ ದರ, ಎಕ್ಸೆಂಪ್ಷನ್ ಮಿತಿಯಲ್ಲಿ ಬದಲಾವಣೆ ನಿರೀಕ್ಷಿಸುತ್ತಿರುವವರಿಗೆ ಕಾದಿದೆ ನಿರಾಸೆ

ಮನೆ ಬಾಡಿಗೆ ವರ್ಷಕ್ಕೆ ಒಂದು ಲಕ್ಷ ರೂಗಿಂತ ಕಡಿಮೆ ಇದ್ದರೆ ಮನೆ ಮಾಲೀಕರ ಪ್ಯಾನ್ ಕಾರ್ಡ್ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಒಂದು ಲಕ್ಷ ಹಾಗೂ ಅಧಿಕ ಬಾಡಿಗೆ ಇದ್ದರೆ ಪ್ಯಾನ್ ಕಾರ್ಡ್ ಕೊಡಬೇಕಾಗುತ್ತದೆ. ನೀವು ಕ್ಯಾಷ್​ನಲ್ಲಿ ಹಣ ಕೊಟ್ಟಿದ್ದರೆ ರೆಂಟ್ ರೆಸಿಪ್ಟ್ ಅತ್ಯವಶ್ಯ. ಇಲ್ಲದಿದ್ದರೆ ಆನ್ಲೈನ್​ನಲ್ಲಿ ಹಣ ಪಾವತಿಸಿರುವುದಕ್ಕೆ ಪೇಮೆಂಟ್ ದಾಖಲಾತಿ ಕೊಡಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ
ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ
28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ