AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

₹ 2,000 ನೋಟುಗಳ ವಿನಿಮಯಕ್ಕೆ ಇಂದು ಕೊನೆಯ ದಿನ

ಈಗಾಗಲೇ ಚಲಾವಣೆಯಿಂದ ಹಿಂಪಡೆಯಲಾಗಿರುವ 2,000 ರೂ. ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಇಂದು(ಅ.7) ಕೊನೆಯ ದಿನ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೆ.30ರಂದು ಈ ಆದೇಶವನ್ನು ಹೊರಡಿಸಿತ್ತು.

₹ 2,000 ನೋಟುಗಳ ವಿನಿಮಯಕ್ಕೆ ಇಂದು ಕೊನೆಯ ದಿನ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Oct 07, 2023 | 6:03 PM

Share

ಈಗಾಗಲೇ ಚಲಾವಣೆಯಿಂದ ಹಿಂಪಡೆಯಲಾಗಿರುವ 2,000 ರೂ. ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಇಂದು(ಅ.7) ಕೊನೆಯ ದಿನ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೆ.30ರಂದು ಈ ಆದೇಶವನ್ನು ಹೊರಡಿಸಿತ್ತು. ಸೆ.30 2,000 ರೂ. ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಕೊನೆಯ ದಿನವಾಗಿತ್ತು. ಆದರೆ ಈ ಅವಧಿಯನ್ನು ಮತ್ತಷ್ಟು ಹೆಚ್ಚಿಸುವ ನಿರ್ಧಾರವನ್ನು ಆರ್​​ಬಿಐ ಮಾಡಿತ್ತು. ಅದಕ್ಕಾಗಿ ಅ.7ರವರೆಗೆ ಮರಳಿಸಲು ಮತ್ತು ವಿನಿಮಯ ಕಲಾವಕಾಶವನ್ನು ನೀಡಲಾಗಿತ್ತು. ಇಂದು 2,000 ರೂ. ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಕೊನೆಯ ದಿನವಾಗಿದೆ. ಅ.7ರ ನಂತರ 2,000 ರೂ. ನೋಟುಗಳನ್ನು ಆರ್‌ಬಿಐ ನಿಗದಿಪಡಿಸಿರುವ 19 ಕಛೇರಿಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು ಎಂದು ಹೇಳಿದೆ.

ಇನ್ನು ಈ 19 ಕಛೇರಿಗಳಲ್ಲಿ 20 ಸಾವಿರದವರೆಗೆ ವಿನಿಮಯ ಮಾಡಿಕೊಳ್ಳಬಹುದು. ಜತೆಗೆ 2 ಸಾವಿರ ನೋಟುಗಳನ್ನು ಜನರು ತಮ್ಮ ಬ್ಯಾಂಕ್​​ಗಳಲ್ಲಿ ಯಾವುದೇ ಮೊತ್ತಕ್ಕೆ ಕ್ರೆಡಿಟ್​​ ಮಾಡಿಕೊಳ್ಳಬಹುದು ಎಂದು ಹೇಳಿದೆ.

2,000 ರೂ. ನೋಟುಗಳ ವಿನಿಮಯ ಇಂದಿಗೆ ಕೊನೆ, ಮುಂದೆ ಏನು?

ಆರ್​​ಬಿಐ ಪ್ರಕಾರ 2,000 ರೂ. ನೋಟು ಅ.7ರವರೆಗೆ ಕಾನೂನುಬದ್ಧವಾಗಿ ಬ್ಯಾಂಕ್​​ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು. ಆದರೆ ಈ ನೋಟುಗಳನ್ನು ಯಾವುದೇ ವಹಿವಾಟುಗಳಲ್ಲಿ ಸ್ವೀಕರಿಸುವುದಿಲ್ಲ ಎಂದು ಹೇಳಿದೆ. ಅ.7 ನಂತರ ಆರ್​​ಬಿಐ ಸೂಚಿಸಿದ 19 ಕಛೇರಿಗಳಲ್ಲಿ ಮಾತ್ರ ವಿನಿಮಯ ಮಾಡಿಕೊಳ್ಳಬಹುದು.

RBI FAQ ಗಳ ಪ್ರಕಾರ, 2 ಸಾವಿರ ನೋಟುಗಳನ್ನು ವ್ಯಕ್ತಿ ಅಥವಾ ಸಂಸ್ಥೆಗಳು ಆರ್​​ಬಿಐ ನಿಗದಿಪಡಿಸಿರುವ 19 ಕಛೇರಿಗಳಲ್ಲಿ 20 ಸಾವಿರದವರೆಗೆ ವಿನಿಮಯ ಮಾಡಿಕೊಳ್ಳಬಹುದು. ಈ ಮೊತ್ತವನ್ನು ಭಾರತದಲ್ಲಿರುವ ಯಾವುದೇ ಬ್ಯಾಂಕ್​​ಗಳ ಖಾತೆಗಳಿಗೆ ಜಮೆ ಮಾಡಿಕೊಳ್ಳಬಹುದು. ಆದರೆ ಈ 19 ಕಛೇರಿಗಳಲ್ಲಿ ವಿನಿಮಯ ಮಾಡಿಕೊಳ್ಳುವ ಮೊದಲು ಅದಕ್ಕೆ ಸರಿಯಾದ ದಾಖಲೆಗಳು ಬೇಕು ಮತ್ತು ಪಾನ್​​ ಕಾರ್ಡ್​​, ಆಧಾರ್​​ ಕಾರ್ಡ್​​ನಂತಹ ಸರ್ಕಾರದಿಂದ ಮಾನ್ಯತೆ ಪಡೆದ ದಾಖಲೆಗಳು ಇರಬೇಕು ಎಂದು ಹೇಳಿದೆ.

ಇದನ್ನೂ ಓದಿ: ಚಲಾವಣೆಯಿಂದ ಹಿಂಪಡೆಯಲಾದ 2,000 ರೂ ನೋಟುಗಳಲ್ಲಿ ಈವರೆಗೆ ಮರಳಿರುವುದು ಎಷ್ಟು? ಆರ್​ಬಿಐ ನೀಡಿದ ಮಾಹಿತಿ ಇದು

2,000 ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದು ಹೇಗೆ?

ಆರ್‌ಬಿಐ ನಿಗಪಡಿಸಿರುವ 18 ಕಛೇರಿಗಳಲ್ಲಿ 2 ಸಾವಿರದ ನೋಟನ್ನು ವಿನಿಮಯ ಮಾಡಿಕೊಳ್ಳಲು ಅಹಮದಾಬಾದ್, ಬೆಂಗಳೂರು, ಬೇಲಾಪುರ್, ಭೋಪಾಲ್, ಭುವನೇಶ್ವರ್, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ ಮತ್ತು ತಿರುವನಂತಪುರಂಗಳಲ್ಲಿ ಶಾಖೆಯನ್ನು ಈಗಾಗಲೇ ತೆರೆಯಲಾಗಿದೆ.

ಇದಲ್ಲದೆ ನಿಮ್ಮ ಹತ್ತಿರದ ಬ್ಯಾಂಕ್​​ಗಳಲ್ಲಿ ಈ ವಿನಿಮಯಗಳನ್ನು ಮಾಡಿಕೊಳ್ಳಬಹುದು. ಆದರೆ ಇದು ಆರ್​​ಬಿಐ ಸೂಚಿಸಿದ 19 ಕಚೇರಿಗಳ ವ್ಯಾಪ್ತಿಯನ್ನು ಹೊಂದಿರಬೇಕು. ಒಂದು ವೇಳೆ ಈ ಕಚೇರಿಗಳು ನಿಮ್ಮ ಬ್ಯಾಂಕ್​​​ಗಳಲ್ಲಿ ಇಲ್ಲವೆಂದರೆ, 2 ಸಾವಿರ ನೋಟುಗಳನ್ನು ಪೋಸ್ಟ್​ ಕೂಡ ಮಾಡಬಹುದು ಎಂದು ಆರ್​​ಬಿಐ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:00 pm, Sat, 7 October 23

ಪಿಕ್​ಅಪ್ ವ್ಯಾನ್ ಮೇಲೆ ಬಿದ್ದ ನಿರ್ಮಾಣ ಹಂತದ ಮೇಲ್ಸೇತುವೆಯ ಗ್ರಿಡರ್
ಪಿಕ್​ಅಪ್ ವ್ಯಾನ್ ಮೇಲೆ ಬಿದ್ದ ನಿರ್ಮಾಣ ಹಂತದ ಮೇಲ್ಸೇತುವೆಯ ಗ್ರಿಡರ್
ದಾರಿಯಲ್ಲಿ ಸಿಕ್ಕ ಹಣ ರೈತನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್
ದಾರಿಯಲ್ಲಿ ಸಿಕ್ಕ ಹಣ ರೈತನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್
ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ