ಬೆಂಗಳೂರಿನಲ್ಲೂ ತಲೆ ಎತ್ತಲಿದೆ ಟ್ರಂಪ್ ಟವರ್; ಅಮೆರಿಕ ಬಿಟ್ಟರೆ ಭಾರತದಲ್ಲೇ ಹೆಚ್ಚು

|

Updated on: Nov 11, 2024 | 12:54 PM

Trump Towers in India: ಡೊನಾಲ್ಡ್ ಟ್ರಂಪ್ ಕುಟುಂಬದವರ ಟ್ರಂಪ್ ಆರ್ಗನೈಸೇಶನ್ ಸಂಸ್ಥೆಯಿಂದ ಭಾರತದಲ್ಲಿ ಇನ್ನಷ್ಟು ಟ್ರಂಪ್ ಟವರ್​ಗಳ ನಿರ್ಮಾಣ ಆಗಲಿದೆ. ಮುಂಬೈ ಸೇರಿದಂತೆ ಈಗಾಗಲೇ ನಾಲ್ಕು ಕಡೆ ಟ್ರಂಪ್ ಟವರ್​ಗಳಿವೆ. ಮುಂದಿನ ಕೆಲ ವರ್ಷಗಳಲ್ಲಿ ಬೆಂಗಳೂರು ಸೇರಿ ಇನ್ನೂ ಆರು ಕಡೆ ಟ್ರಂಪ್ ಟವರ್ ತಲೆಎತ್ತಲಿವೆ. ಟ್ರಂಪ್ ಆರ್ಗನೈಸೇಶನ್​ಗೆ ಭಾರತದಲ್ಲಿ ರಿಯಲ್ ಎಸ್ಟೇಟ್ ಪಾರ್ಟ್ನರ್ ಆಗಿರುವುದು ಟ್ರಿಬೆಕಾ ಡೆವಲಪರ್ಸ್.

ಬೆಂಗಳೂರಿನಲ್ಲೂ ತಲೆ ಎತ್ತಲಿದೆ ಟ್ರಂಪ್ ಟವರ್; ಅಮೆರಿಕ ಬಿಟ್ಟರೆ ಭಾರತದಲ್ಲೇ ಹೆಚ್ಚು
ಟ್ರಂಪ್ ಟವರ್ಸ್
Follow us on

ಬೆಂಗಳೂರು, ನವೆಂಬರ್ 11: ಡೊನಾಲ್ಡ್ ಟ್ರಂಪ್ ಕುಟುಂಬದ ಸಹಯೋಗದಲ್ಲಿ ರಿಯಲ್ ಎಸ್ಟೇಟ್ ಯೋಜನೆಗಳು ಭಾರತದಲ್ಲಿ ಹೆಚ್ಚೆಚ್ಚು ವ್ಯಾಪಿಸುತ್ತಿವೆ. ಮುಗಿಲೆತ್ತರದ ಕಟ್ಟಡಗಳು, ವಿಲ್ಲಾಗಳು, ಗಾಲ್ಫ್ ಕೋರ್ಸ್​ಗಳು ಇತ್ಯಾದಿ ಯೋಜನೆಗಳು ಭಾರತದಲ್ಲಿವೆ. ಮುಂಬೈ, ಪುಣೆ, ಗುರುಗ್ರಾಮ್ ಮತ್ತು ಕೋಲ್ಕತಾದಲ್ಲಿ ಟ್ರಂಪ್ ಟವರ್​ಗಳಿವೆ. ಈಗ ಇನ್ನೂ ಕೆಲವು ಟವರ್​ಗಳು ಸ್ಥಾಪನೆಯಾಗಲಿವೆಯಂತೆ. ವರದಿ ಪ್ರಕಾರ ಮುಂದಿನ ಆರು ವರ್ಷದಲ್ಲಿ ಭಾರತದಲ್ಲಿ ಟ್ರಂಪ್ ಟವರ್​ಗಳ ಸಂಖ್ಯೆ ಹತ್ತಕ್ಕೆ ಏರಬಹುದು. ಬೆಂಗಳೂರು, ಹೈದರಾಬಾದ್ ಮೊದಲಾದ ನಗರಗಳಲ್ಲೂ ಈ ಟವರ್​ಗಳು ತಲೆ ಎತ್ತಲಿವೆ. ಅಮೆರಿಕದ ಹೊರಗೆ ಯಾವುದೇ ದೇಶದಲ್ಲೂ ಇಷ್ಟೊಂದು ಟ್ರಂಪ್ ಟವರ್​ಗಳನ್ನು ಸ್ಥಾಪಿಸಲಾಗಿಲ್ಲ.

ಟ್ರಂಪ್ ಆರ್ಗನೈಸೇಶನ್ ಜೊತೆ ಟ್ರಿಬೆಕಾ ಡೆವಲಪರ್ಸ್ ಸಹಯೋಗ

ಡೊನಾಲ್ಡ್ ಟ್ರಂಪ್ ಮಗ ಜೂನಿಯರ್ ಟ್ರಂಪ್ ಸೇರಿದಂತೆ ಅವರ ಕುಟುಂಬದ ಪ್ರಮುಖ ಬಿಸಿನೆಸ್​ಗಳಲ್ಲಿ ರಿಯಲ್ ಎಸ್ಟೇಟ್ ಒಂದು. ಭಾರತದಲ್ಲಿ ಟ್ರಂಪ್ ಆರ್ಗನೈಸೇಶನ್​ ರಿಯಲ್ ಎಸ್ಟೇಟ್ ಪಾರ್ಟ್ನರ್ ಅಗಿರುವುದು ಟ್ರಿಬೆಕಾ ಡೆವಲಪರ್ಸ್. ಭಾರತದಲ್ಲಿ ಟ್ರಂಪ್ ಟವರ್​​ಗಳನ್ನು ನಿರ್ಮಿಸುತ್ತಿರುವುದು ಇದೇ ಸಂಸ್ಥೆಯೇ.

ಇದನ್ನೂ ಓದಿ: ಒಂದು ಬಿಟ್​ಕಾಯಿನ್ 68 ಲಕ್ಷ ರೂ; ಕ್ರಿಪ್ಟೋಕರೆನ್ಸಿ ಬೆಲೆ ಈ ಪರಿ ಏರಿಕೆ ಯಾಕೆ? ಭಾರತದಲ್ಲಿ ಹೂಡಿಕೆಗೆ ಅವಕಾಶವಿದೆಯಾ?

ಸುಮಾರು 13-14 ವರ್ಷಗಳ ಹಿಂದೆ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರನ್ನು ನ್ಯೂಯಾರ್ಕ್​ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದೆ ಎಂದು ಟ್ರಿಬೆಕಾ ಡೆವಲಪರ್ಸ್ ಸಂಸ್ಥಾಪಕ ಕಲ್ಪೇಶ್ ಮೆಹ್ತಾ ಹೇಳುತ್ತಾರೆ. ‘ನಮಗೆ ತುಂಬಾ ಹೆಚ್ಚು ಪ್ರಾಜೆಕ್ಟ್​ಗಳು ಬೇಕಾಗಿಲ್ಲ. ಏನೇ ಮಾಡಿದರೂ ಆ ವಿಭಾಗದಲ್ಲಿ ಅತ್ಯುತ್ತಮವಾಗಿರಬೇಕು ಅಷ್ಟೇ ಎಂದು ಜೂನಿಯರ್ ಟ್ರಂಪ್ ನಮಗೆ ಹೇಳಿದ್ದರು,’ ಎಂದು ಕಲ್ಪೇಶ್ ಹೇಳುತ್ತಾರೆ.

ಟ್ರಂಪ್ ಟವರ್ಸ್​ನಲ್ಲಿ ಲಕ್ಷುರಿ ಫ್ಲಾಟ್ ಬೆಲೆ 6 ಕೋಟಿ ರೂನಿಂದ ಆರಂಭ

ಭಾರತದಲ್ಲಿ ಸದ್ಯ ಮುಂಬೈ, ಪುಣೆ, ಗುರುಗ್ರಾಂ ಮತ್ತು ಕೋಲ್ಕತಾದಲ್ಲಿ ಟ್ರಂಪ್ ಟವರ್​ಗಳಿವೆ. ಒಟ್ಟಾರೆ ಇವುಗಳ ವಿಸ್ತೀರ್ಣ 30 ಲಕ್ಷ ಚದರಡಿ ಇದ್ದು, 800 ನಿವಾಸಗಳಿವೆ. ಒಂದೊಂದರ ಬೆಲೆ 6 ಕೋಟಿ ರೂನಿಂದ 25 ಕೋಟಿ ರೂವರೆಗೂ ಇದೆ. ಇವುಗಳೆಲ್ಲದರ ಒಟ್ಟು ಮೌಲ್ಯ ಬರೋಬ್ಬರಿ 7,500 ಕೋಟಿ ರೂ.

ಇದನ್ನೂ ಓದಿ: ಏರ್ ಇಂಡಿಯಾ ಜೊತೆ ವಿಲೀನಗೊಂಡ ವಿಸ್ತಾರ; 9 ವರ್ಷದ ವಿಸ್ತಾರ ಬ್ರ್ಯಾಂಡ್ ಇನ್ನು ಗತ ಇತಿಹಾಸ

ಈಗ ಬೆಂಗಳೂರು ಸೇರಿದಂತೆ ಇನ್ನೂ ಆರು ಟ್ರಂಪ್ ಟವರ್​ಗಳು ಮುಂದಿನ ಆರು ವರ್ಷದಲ್ಲಿ ಬರಲಿವೆ. ಇವುಗಳ ಫ್ಲೋರ್ ಏರಿಯಾ 80 ಲಕ್ಷ ಚದರಡಿಗೆ ಏರಲಿದೆ. ಒಟ್ಟು ಮೌಲ್ಯ 15,000 ಕೋಟಿ ರೂ ಆಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ