AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏರ್ ಇಂಡಿಯಾ ಜೊತೆ ವಿಲೀನಗೊಂಡ ವಿಸ್ತಾರ; 9 ವರ್ಷದ ವಿಸ್ತಾರ ಬ್ರ್ಯಾಂಡ್ ಇನ್ನು ಗತ ಇತಿಹಾಸ

Vistara brand ends after 9 years: 2015ರಲ್ಲಿ ಆರಂಭವಾಗಿದ್ದ ವಿಸ್ತಾರಾ ಏರ್ಲೈನ್ಸ್ ಸಂಸ್ಥೆ ಇದೀಗ ಏರ್ ಇಂಡಿಯಾ ಜೊತೆ ವಿಲೀನಗೊಂಡಿದೆ. ವಿಸ್ತಾರಾ ಬ್ರ್ಯಾಂಡ್ ಅಡಿಯಲ್ಲಿ ವೈಮಾನಿಕ ಸೇವೆ ಇವತ್ತು ಮುಗಿಯುತ್ತದೆ. ನಾಳೆಯಿಂದ ಏರ್ ಇಂಡಿಯಾ ಹೆಸರಿನಲ್ಲಿ ವಿಸ್ತಾರಾ ಸೇವೆ ಮುಂದುವರಿಯಲಿದೆ. ಈಗ ವಿಸ್ತಾರವನ್ನು ನಿರ್ವಹಿಸುತ್ತಿರುವ ತಂಡಗಳೇ ಮುಂದೆಯೂ ಅದನ್ನು ಮುಂದುವರಿಸಿಕೊಂಡು ಹೋಗಲಿದ್ದಾರೆ.

ಏರ್ ಇಂಡಿಯಾ ಜೊತೆ ವಿಲೀನಗೊಂಡ ವಿಸ್ತಾರ; 9 ವರ್ಷದ ವಿಸ್ತಾರ ಬ್ರ್ಯಾಂಡ್ ಇನ್ನು ಗತ ಇತಿಹಾಸ
ವಿಸ್ತಾರಾ ಏರ್ಲೈನ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 11, 2024 | 10:39 AM

Share

ನವದೆಹಲಿ, ನವೆಂಬರ್ 11: ಟಾಟಾ ಗ್ರೂಪ್​ಗೆ ಸೇರಿದ ಏರ್ ಇಂಡಿಯಾ ಮತ್ತು ವಿಸ್ತಾರ ಏರ್ಲೈನ್ಸ್ ಸಂಸ್ಥೆಗಳು ವಿಲೀನಗೊಂಡಿವೆ. ವಿಸ್ತಾರಾ ಬ್ರ್ಯಾಂಡ್ ಇವತ್ತಿಗೆ ಮುಗಿಯುತ್ತದೆ. ವಿಸ್ತಾರಾದ ವಿಮಾನಗಳೆಲ್ಲವೂ ನವೆಂಬರ್ 12ರಿಂದ ಏರ್ ಇಂಡಿಯಾ ಬ್ರ್ಯಾಂಡ್ ಅಡಿ ಕಾರ್ಯಾಚರಿಸುವುದನ್ನು ಮುಂದುವರಿಸಲಿವೆ. ಟಾಟಾ ಗ್ರೂಪ್ ಸಂಸ್ಥೆ ತನ್ನ ಎಲ್ಲಾ ವೈಮಾನಿಕ ಸೇವೆ ಸಂಸ್ಥೆಗಳನ್ನು ಏರ್ ಇಂಡಿಯಾ ಬ್ರ್ಯಾಂಡ್ ಅಡಿಯಲ್ಲಿ ಸೇರಿಸುವ ಪ್ರಯತ್ನದ ಭಾಗವಾಗಿ ವಿಸ್ತಾರ ಮತ್ತು ಏರ್ ಇಂಡಿಯಾ ವಿಲೀನ ನಡೆದಿದೆ.

2015ರಲ್ಲಿ ಟಾಟಾ ಗ್ರೂಪ್ ಮತ್ತು ಸಿಂಗಾಪುರ್ ಏರ್ಲೈನ್ಸ್ ಸಂಸ್ಥೆಗಳು ಜಂಟಿಯಾಗಿ ವಿಸ್ತಾರ ಏರ್ಲೈನ್ಸ್ ಅನ್ನು ಆರಂಭಿಸಿದ್ದವು. ಇದರಲ್ಲಿ ಸಿಂಗಾಪುರ್ ಏರ್ಲೈನ್ಸ್ ಪಾಲು ಶೇ. 49 ಇತ್ತು. ಈಗ ಏರ್ ಇಂಡಿಯಾ ಜೊತೆ ವಿಸ್ತಾರ ವಿಲೀನಗೊಂಡ ಬಳಿಕ ಸಿಂಗಾಪುರ್ ಏರ್ಲೈನ್ಸ್ ಸಂಸ್ಥೆ ಏರ್ ಇಂಡಿಯಾದಲ್ಲಿ ಶೇ. 25.1ರಷ್ಟು ಪಾಲು ಹೊಂದಿರಲಿದೆ. ಹೊಸ ಏರ್ ಇಂಡಿಯಾದಲ್ಲಿ ಸಿಂಗಾಪುರ್ ಏರ್ಲೈನ್ಸ್ 276 ಮಿಲಿಯನ್ ಡಾಲರ್ ಹೂಡಿಕೆ ಕೂಡ ಮಾಡಲಿದೆ.

ಇದನ್ನೂ ಓದಿ: ಒಂದು ದೇಶ ಸೂಪರ್​ಪವರ್ ಆಗಲು ಹೇಗಿರಬೇಕು? ಭಾರತದ ಬಗ್ಗೆ ಪುಟಿನ್ ನಿರೀಕ್ಷೆಗಳೇನು?

ಸರಿಯಾಗಿ ಒಂದು ವರ್ಷದ ಹಿಂದೆ, 2023ರ ನವೆಂಬರ್​ನಲ್ಲಿ ವಿಸ್ತಾರ ಮತ್ತು ಏರ್ ಇಂಡಿಯಾ ವಿಲೀನವನ್ನು ಪ್ರಕಟಿಸಲಾಯಿತು. ಇದೀಗ ಎಲ್ಲಾ ಪ್ರಾಧಿಕಾರಗಳ ಅನುಮೋದನೆ ಸಿಕ್ಕಾಗಿದೆ. ನವೆಂಬರ್ 11, ಅಂದರೆ ಇವತ್ತಿಗೆ ವಿಸ್ತಾರ ಬ್ರ್ಯಾಂಡ್​ನಲ್ಲಿ ವಿಮಾನ ಸೇವೆ ಅಂತ್ಯಗೊಳ್ಳುತ್ತದೆ. ನವೆಂಬರ್ 12 ಹಾಗೂ ನಂತರ ದಿನಾಂಕಕ್ಕೆ ವಿಸ್ತಾರ ಟಿಕೆಟ್ ಬುಕ್ ಮಾಡಿದವರು ಏರ್ ಇಂಡಿಯಾ ಬ್ರ್ಯಾಂಡ್​ನ ವಿಮಾನದಲ್ಲಿ ಪ್ರಯಾಣ ಮಾಡಬಹುದು.

ವಿಸ್ತಾರ ವಿಮಾನಗಳಿಗೆ ಹೊಸ ಕೋಡ್

ವಿಸ್ತಾರಾ ಏರ್ಲೈನ್ಸ್​ನಲ್ಲಿರುವ ವಿಮಾನಗಳು ಮಾಮೂಲಿಯ ರೀತಿಯಲ್ಲೇ ಕಾರ್ಯಾಚರಿಸಲಿವೆ. ಆದರೆ, ವಿಸ್ತಾರಾ ಹೆಸರು ಬದಲು ಏರ್ ಇಂಡಿಯಾ ಬ್ರ್ಯಾಂಡಿಂಗ್ ಹೊಂದಿರಲಿವೆ. ಏರ್ ಇಂಡಿಯಾದಿಂದ ಇದನ್ನು ಪ್ರತ್ಯೇಕವಾಗಿ ಗುರುತಿಸಲು ಸಹಾಯವಾಗುವಂತೆ ಡಿಜಿಟಲ್ ಕೋಡ್ ಅನ್ನು ಬದಲಾಯಿಸಲಾಗಿದೆ. ಎಐ2 ಎಂಬುದನ್ನು ಸೇರಿಸಲಾಗಲಿದೆ.

ಇದನ್ನೂ ಓದಿ: ಭಾರತದಲ್ಲಿ ಚೊಚ್ಚಲ ಆ್ಯಪಲ್ ಆರ್ ಅಂಡ್ ಡಿ; ಅಮೆರಿಕ, ಚೀನಾ, ಜರ್ಮನಿ, ಇಸ್ರೇಲ್ ಸಾಲಿಗೆ ಭಾರತ

ಉದಾಹರಣೆಗೆ, ವಿಸ್ತಾರಾ ಏರ್ಲೈನ್ಸ್ ವಿಮಾನಕ್ಕೆ ಯುಕೆ955 ಕೋಡ್ ಇದ್ದರೆ, ಅದನ್ನು ಎಐ2955 ಎಂದು ಬದಲಾಯಿಸಲಾಗುತ್ತದೆ. ವಿಮಾನದ ಮೇಲೆ ವಿಸ್ತಾರಾ ಏರ್ಲೈನ್ಸ್ ಬದಲು ಏರ್ ಇಂಡಿಯಾ ಎಂದು ಬರೆದಿರಲಾಗುತ್ತದೆ. ವಿಸ್ತಾರಾ ಏರ್ಲೈನ್ಸ್ ವಿಮಾನಗಳನ್ನು ನಿರ್ವಹಿಸುತ್ತಿದ್ದ ಸಿಬ್ಬಂದಿಯೇ ಇನ್ಮುಂದೆಯೂ ಅದನ್ನು ಮುಂದುವರಿಸಿಕೊಂಡು ಹೋಗಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಸ್ಕತ್​​ನಲ್ಲಿ ಭಾರತೀಯರಿಂದ ಪ್ರಧಾನಿ ಮೋದಿಗೆ ಯಕ್ಷಗಾನ, ನೃತ್ಯದ ಸ್ವಾಗತ
ಮಸ್ಕತ್​​ನಲ್ಲಿ ಭಾರತೀಯರಿಂದ ಪ್ರಧಾನಿ ಮೋದಿಗೆ ಯಕ್ಷಗಾನ, ನೃತ್ಯದ ಸ್ವಾಗತ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ