Turkey: ಟರ್ಕಿ ಏರ್​​ಲೈನ್ಸ್ ಜೊತೆ ಪಾರ್ಟ್ನರ್​ಶಿಪ್ ಮುರಿದುಕೊಂಡಿದ್ದೇವೆ: ಭಾರತದ ಗೋ ಹೋಮ್​​ಸ್ಟೇಸ್ ಘೋಷಣೆ

Go HomeStays cuts partnership with Turkish Airlines: ಟರ್ಕಿಶ್ ಏರ್​​ಲೈನ್ಸ್ ಜೊತೆಗಿನ ಸಹಭಾಗಿತ್ವವನ್ನು ಕಡಿದುಕೊಳ್ಳುತ್ತಿದ್ದೇವೆ ಎಂದು ಭಾರತದ ಟ್ರಾವಲ್ ಸರ್ವಿಸ್ ಸಂಸ್ಥೆಯಾದ ಗೋ ಹೋಂಸ್ಟೇಸ್ ಹೇಳಿದೆ. ಟರ್ಕಿ ದೇಶದ ಭಾರತ ವಿರೋಧಿ ನಿಲುವಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಗೋ ಹೋಮ್​​ಸ್ಟೇಸ್ ತಿಳಿಸಿದೆ. ಟರ್ಕಿ ದೇಶ ಸದಾ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಾ ಬಂದಿದೆ. ಪಾಕಿಸ್ತಾನಕ್ಕೆ ಇರುವ ಕೆಲ ಖಾಸಾ ದೋಸ್ತ್​​​ಗಳಲ್ಲಿ ಟರ್ಕಿಯೂ ಒಂದು.

Turkey: ಟರ್ಕಿ ಏರ್​​ಲೈನ್ಸ್ ಜೊತೆ ಪಾರ್ಟ್ನರ್​ಶಿಪ್ ಮುರಿದುಕೊಂಡಿದ್ದೇವೆ: ಭಾರತದ ಗೋ ಹೋಮ್​​ಸ್ಟೇಸ್ ಘೋಷಣೆ
ಟರ್ಕಿಶ್ ಏರ್​​ಲೈನ್ಸ್

Updated on: May 09, 2025 | 12:16 PM

ನವದೆಹಲಿ, ಮೇ 9: ಪಾಕಿಸ್ತಾನಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ, ಹಾಗೂ ಮಿಲಿಟರಿ ಹಾಗು ನೈತಿಕ ಬೆಂಬಲ ನೀಡುತ್ತಿರುವ ಟರ್ಕಿ ದೇಶದೊಂದಿಗೆ ಭಾರತ ಪೂರ್ಣ ಸಂಬಂಧ ಕಡಿದುಕೊಳ್ಳಬೇಕು ಎನ್ನುವ ಕೂಗು ಭಾರತದೊಳಗೆ ಬಹಳ ಕೇಳಿಬರುತ್ತಿದೆ. ಇದೇ ಹೊತ್ತಿನಲ್ಲಿ ಭಾರತದ ಪ್ರವಾಸೀ ಸೇವೆಗಳ ಬ್ರ್ಯಾಂಡ್ ಆದ ಗೋ ಹೋಮ್​​ಸ್ಟೇಸ್ (Go Homestays) ಎನ್ನುವ ಕಂಪನಿಯು ಟರ್ಕಿಶ್ ಏರ್​​ಲೈನ್ಸ್ (Turkish Airlines) ಜೊತೆಗಿನ ವ್ಯವಹಾರವನ್ನು ನಿಲ್ಲಿಸಲು ನಿರ್ಧರಿಸಿದೆ. ಭಾರತದ ವಿರುದ್ಧ ನಿಂತಿರುವ ಒಂದು ದೇಶಕ್ಕೆ ಸೇರಿದ ಏರ್​​ಲೈನ್ಸ್ ಜೊತೆ ತನ್ನ ಪಾರ್ಟ್ನರ್​ಶಿಪ್ ಇರುವುದಿಲ್ಲ ಎಂದು ಗೋ ಹೋಮ್​​ಸ್ಟೇಸ್ ಹೇಳಿದೆ. ಸೋಷಿಯಲ್ ಮೀಡಿಯಾದಲ್ಲಿ ಇದನ್ನು ಪ್ರಕಟಿಸಿ ಒಂದು ಪೋಸ್ಟ್ ಹಾಕಿದೆ. ಈ ಪೋಸ್ಟ್​​​ಗೆ ಬೆಂಬಲ ವ್ಯಕ್ತವಾಗಿದೆ.

ಟರ್ಕಿಶ್ ಏರ್​​ಲೈನ್ಸ್ ಜೊತೆ ಹಲವು ಭಾರತೀಯ ಕಂಪನಿಗಳು ಸಹಭಾಗಿತ್ವ ಹೊಂದಿವೆ. ಇಂಡಿಗೋ ಏರ್​​ಲೈನ್ಸ್ ಮತ್ತು ಟರ್ಕಿಶ್ ಏರ್​ಲೈನ್ಸ್ ನಡುವೆ ಒಪ್ಪಂದ ಇದ್ದು ಜಂಟಿಯಾಗಿ ಹಲವು ಐರೋಪ್ಯ ಸ್ಥಳಗಳಿಗೆ ವಿಮಾನ ಸೇವೆ ನೀಡುತ್ತಿವೆ. ಆದರೆ, ಈ ಒಪ್ಪಂದದಲ್ಲಿ ಬಹುಪಾಲು ಲಾಭವು ಟರ್ಕಿ ಕಂಪನಿಗೇ ಹೋಗುತ್ತದೆ. ಇದೊಂದು ಅನ್ಯಾಯದ ಒಪ್ಪಂದ ಎಂದು ಸೋಷಿಯಲ್ ಮೀಡಿಯಾದಲ್ಲಿ ಟೀಕಿಸುತ್ತಿರುವವರಿದ್ದಾರೆ.

ಇದನ್ನೂ ಓದಿ: ಯುದ್ಧದ ಹೊಡೆತದ ಮಧ್ಯೆಯೂ ಪಾಕಿಸ್ತಾನದ ಷೇರುಪೇಟೆ ಏರಿಕೆ; ಭಾರತದ ಮಾರುಕಟ್ಟೆ ಇಳಿಕೆ; ಏನು ಕಾರಣ?

ಇದನ್ನೂ ಓದಿ
ಇವತ್ತಿನ ಷೇರುಬಜಾರು ಭಾರತಕ್ಕೆ ಹೊಡೆತ
ಆಪರೇಷನ್ ಸಿಂದೂರ್ ಟ್ರೇಡ್​​ಮಾರ್ಕ್ ಅರ್ಜಿ ಹಿಂಪಡೆದ ರಿಲಾಯನ್ಸ್
ಆಪರೇಷನ್ ಸಿಂದೂರ್​​​ಗೆ ಬೆಂಗಳೂರು ನಂಟು?
ಟರ್ಕಿ ಜೊತೆ ಸ್ನೇಹ ಯಾಕೆ? ಸರ್ಕಾರವನ್ನು ಟೀಕಿಸಿದ ತಜ್ಞರು

ಟರ್ಕಿ ದೇಶ ಪಾಕಿಸ್ತಾನಕ್ಕೆ ಸದಾ ಬೆಂಬಲ ನೀಡುತ್ತಾ ಬಂದಿದೆ. ಪಾಕಿಸ್ತಾನದಲ್ಲಿರುವ ಹೆಚ್ಚಿನ ಶಸ್ತ್ರಾಸ್ತ್ರಗಳು ಚೀನಾ ಮತ್ತು ಟರ್ಕಿ ವತಿಯಿಂದ ಬಂದಂಥವೇ ಆಗಿವೆ. ಹೀಗಾಗಿ, ಟರ್ಕಿ ದೇಶಕ್ಕೆ ಪ್ರವಾಸ ಹೋದರೆ, ಅಥವಾ ಟರ್ಕಿ ಏರ್​​ಲೈನ್ಸ್ ಬಳಸಿದರೆ ಅದರ ವೆಚ್ಚದ ಒಂದೊಂದು ಪೈಸೆಯೂ ಭಾರತ ವಿರೋಧಿ ಚಟುವಟಿಕೆಗೆ ಬಳಕೆ ಆಗುತ್ತದೆ. ಟರ್ಕಿಯನ್ನು ಸಂಪೂರ್ಣ ಬಾಯ್ಕಾಟ್ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾರತೀಯರು ಒತ್ತಾಯಿಸುತ್ತಿದ್ದಾರೆ.

ಟರ್ಕಿ ಒಂದು ಹಾವಿದ್ದಂತೆ…

‘ಆಪರೇಷನ್ ದೋಸ್ತ್ ನೆನಪಿದೆಯಾ? ಟರ್ಕಿಯಲ್ಲಿ ಭೂಕಂಪ ಆದ ಒಂದೇ ಗಂಟೆಯಲ್ಲಿ ಭಾರತವು ನೆರವಿಗೆ ವಿವಿಧ ತಂಡಗಳನ್ನು ಕಳುಹಿಸಿತ್ತು. ನೆರವು ನೀಡಿದ ಮೊದಲ ದೇಶವೇ ಭಾರತವಾಗಿತ್ತು. ಆದರೆ, ಟರ್ಕಿ ಒಂದು ಹಾವು… ಈ ಹಾವಿಗೆ ಹಾಲೆರದು ಕಚ್ಚುವುದಿಲ್ಲ ಎಂದು ನಂಬಲು ಸಾಧ್ಯವಿಲ್ಲ,’ ಎಂದು ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಆಪರೇಷನ್ ಸಿಂದೂರ್: ಹ್ಯಾಮರ್, ಲಾಯ್ಟರಿಂಗ್ ಮ್ಯುನಿಶನ್​​ಗಳ ತಯಾರಿಸಿದ್ದು ಬೆಂಗಳೂರಿನ ಕಂಪನಿಗಳು

ಪಹಲ್ಗಾಂ ಮೇಲೆ ಪಾಕ್ ಪ್ರೇರಿತ ಉಗ್ರರು ದಾಳಿ ಮಾಡಿದ ಘಟನೆ ಬೆನ್ನಲ್ಲೇ ಟರ್ಕಿಯಿಂದ ಪಾಕಿಸ್ತಾನಕ್ಕೆ ಮಿಲಿಟರಿ ನೆರವು ಹರಿದುಬರತೊಡಗಿದ್ದು ಕುತೂಹಲ ಮೂಡಿಸಿದೆ. ಟರ್ಕಿಯ ಸಮರನೌಕೆಯು ಪಾಕಿಸ್ತಾನದ ಕರಾಚಿ ಬಂದರಿಗೆ ಬಂದಿಳಿದಿದೆ. ಇದೇ ಭಾನುವಾರದಂದು (ಮೇ 4) ಟರ್ಕಿಯ ಆರು ಸಿ-130 ಏರ್​​ಕ್ರಾಫ್ಟ್ ಬಂದು, ಯುದ್ಧ ಸಾಮಗ್ರಿಗಳನ್ನು ತಂದಿದ್ದಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ