ನ್ಯೂಯಾರ್ಕ್: ಎಲಾನ್ ಮಸ್ಕ್ ನಾಯಕತ್ವದಲ್ಲಿ ಟ್ವಿಟ್ಟರ್ ಭವಿಷ್ಯ ಅಸ್ಪಷ್ಟವಾಗಿದೆ. ಮುಂದಿನ ದಿನಗಳಲ್ಲಿ ಟ್ವಿಟ್ಟರ್ನ ನಡೆ ಹೇಗಿರಬಹುದು ಎಂದು ಈಗಲೇ ಹೇಳಲು ಆಗುವುದಿಲ್ಲ ಎಂದು ಟ್ವಿಟ್ಟರ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಾಗ್ ಅಗರ್ವಾಲ್ ಹೇಳಿದ್ದಾರೆ. ಉದ್ಯಮಿ ಎಲಾನ್ ಮಸ್ಕ್ ಅವರಿಗೆ ಟ್ವಿಟ್ಟರ್ ಮಾರಾಟ ಪ್ರಕ್ರಿಯೆ ಪೂರ್ಣಗೊಂಡ ನಂತರ ಉದ್ಯೋಗಿಗಳೊಂದಿಗೆ ಮುಖಾಮುಖಿಯಾಗಿ ಮಾತನಾಡಿದ ಅವರು ಕಂಪನಿಯು ಪ್ರೈವೇಟ್ ಲಿಮಿಟೆಡ್ ಆದ ನಂತರ ಅದರ ಭವಿಷ್ಯ ಹೇಗಿರುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದರು.
‘ಒಮ್ಮೆ ವ್ಯವಹಾರದ ಮಾತುಕತೆಗಳು ಅಂತಿಮಗೊಂಡು, ಡೀಲ್ ಮುಕ್ತಾಯವಾದ ನಂತರ ಟ್ವಿಟ್ಟರ್ ನಡೆ ಯಾವ ಕಡೆ ಇರುತ್ತದೆ ಎಂದು ಹೇಳಲು ಆಗುವುದಿಲ್ಲ’ ಎಂದು ಅಗರ್ವಾಲ್ ತಮ್ಮ ಉದ್ಯೋಗಿಗಳಿಗೆ ತಿಳಿಸಿದರು. ಎಲಾನ್ ಮಸ್ಕ್ ಸಹ ಮುಂದಿನ ದಿನಗಳಲ್ಲಿ ಟ್ವಿಟ್ಟರ್ ಉದ್ಯೋಗಿಗಳೊಂದಿಗೆ ಮುಖಾಮುಖಿ ಮಾತನಾಡಲಿದ್ದಾರೆ ಎಂದು ಕಂಪನಿಯು ತನ್ನ ಸಿಬ್ಬಂದಿಗೆ ತಿಳಿಸಿದೆ.
ವಿಶ್ವದ ಪ್ರಮುಖ ಜಾಲತಾಣ ಟ್ವಿಟ್ಟರ್ ಕಂಪನಿಯನ್ನು ಅಮೆರಿಕದ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ ಖರೀದಿಸಿದ್ದಾರೆ. ಪ್ರತಿ ಷೇರಿಗೆ 54.20 ಡಾಲರ್ನಂತೆ 44 ಶತಕೋಟಿ ಡಾಲರ್ಗೆ ಟ್ವಿಟ್ಟರ್ ಕಂಪನಿಯನ್ನು ಮಸ್ಕ್ ಖರೀದಿಸಿದ್ದಾರೆ. ‘ಎಲಾನ್ ಮಸ್ಕ್ ಅವರಿಗೆ ಟ್ವಿಟ್ಟರ್ ಮಾರಾಟ ಮಾಡಲಾಗಿದೆ. ಈಗ ಟ್ವಿಟ್ಟರ್ ಸಂಪೂರ್ಣವಾಗಿ ಎಲಾನ್ ಮಸ್ಕ್ ಮಾಲೀಕತ್ವದ ಕಂಪನಿ’ ಎಂದು ಮಾರಲಾಗಿದೆ ಟ್ವಿಟ್ಟರ್ ಅಧ್ಯಕ್ಷ ಬ್ರೈಟ್ ಟೈಲರ್ ಹೇಳಿದ್ದಾರೆ. ಈವರೆಗೆ ಟ್ವಿಟರ್ನಲ್ಲಿ ಎಲಾನ್ ಮಸ್ಕ್ ಶೇ 10ರಷ್ಟು ಷೇರು ಹೊಂದಿದ್ದರು. ಮಸ್ಕ್ ಸಹ ಟ್ವಿಟ್ಟರ್ ಖರೀದಿಯನ್ನು ದೃಢಪಡಿಸಿದ್ದಾರೆ.
‘ನನ್ನನ್ನು ಕೆಟ್ಟದಾಗಿ ಟೀಕಿಸುವವರು ಸಹ ಟ್ವಿಟ್ಟರ್ನಲ್ಲಿಯೇ ಉಳಿಯಬೇಕೆಂದು ಬಯಸುತ್ತೇನೆ. ವಾಕ್ ಸ್ವಾತಂತ್ರ್ಯ ಎಂದರೆ ಅದೇ ತಾನೆ’ ಎಂದು ಮಸ್ಕ್ ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.
ಟ್ವಿಟ್ಟರ್ ಖರೀದಿಯನ್ನು ‘Yessss’ ಎಂದು ಸಂಭ್ರಮಿಸಿರುವ ಅವರು, ‘ವಾಕ್ ಸ್ವಾತಂತ್ರ್ಯವು ಕಾರ್ಯರೂಪದಲ್ಲಿರುವ ಯಾವುದೇ ಪ್ರಜಾಪ್ರಭುತ್ವದ ತಳಹದಿಯಾಗಿದೆ. ಟ್ವಿಟರ್ ಎನ್ನುವ ಡಿಜಿಟಲ್ ಜಗಲಿಯಲ್ಲಿ ಮನುಷ್ಯತ್ವದ ಭವಿಷ್ಯದ ಬಗ್ಗೆ ಚರ್ಚೆಯಾಗುತ್ತದೆ. ಟ್ವಿಟರ್ನ ಆಲ್ಗೊರಿದಂಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವುದಷ್ಟೇ ಅಲ್ಲದೆ, ಎಲ್ಲರನ್ನೂ ತಲುಪುವಂತೆ ಮಾಡಬೇಕಿದೆ. ಟ್ವಿಟರ್ಗೆ ಅಗಾಧವಾಗಿ ಬೆಳೆಯುವ ಸಾಮರ್ಥ್ಯವಿದೆ. ಅದನ್ನು ಸಾಧ್ಯವಾಗಿಸಲು ಕಂಪನಿಯೊಂದಿಗೆ, ಬಳಕೆದಾರರೊಂದಿಗೆ ಕೆಲಸ ಮಾಡಲು ನಾನು ಬಯಸುತ್ತೇನೆ’ ಎಂಬ ತಮ್ಮದೇ ಹೇಳಿಕೆಯ ತುಣುಕನ್ನು ಅವರು ಟ್ವೀಟ್ ಮಾಡಿದ್ದಾರೆ.
??♥️ Yesss!!! ♥️?? pic.twitter.com/0T9HzUHuh6
— Elon Musk (@elonmusk) April 25, 2022
ಇದನ್ನೂ ಓದಿ: Elon Musk: ಟ್ವಿಟ್ಟರ್ ಖರೀದಿಸಿದ ಎಲಾನ್ ಮಸ್ಕ್: ಪ್ರತಿ ಷೇರಿಗೆ 54.20 ಡಾಲರ್ನಂತೆ 44 ಶತಕೋಟಿ ಡಾಲರ್ ದರ ನಿಗದಿ
Published On - 7:37 am, Tue, 26 April 22