ಅನಿಲ್ ಅಂಬಾನಿಯ ಎರಡು ಕಂಪನಿಗಳ ಷೇರುಬೆಲೆ ಏರುಗತಿಯಲ್ಲಿ; ರಿಲಾಯನ್ಸ್ ಪವರ್​ಗೆ ಸಿಕ್ಕಿದೆ ಹೊಸ ಗುತ್ತಿಗೆ

Reliance Power wins 500 MW energy storage contract: ಅನಿಲ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಪವರ್ ಮತ್ತು ರಿಲಾಯನ್ಸ್ ಇನ್​ಫ್ರಾಸ್ಟ್ರಕ್ಚರ್ ಕಂಪನಿಗಳ ಷೇರುಗಳಿಗೆ ಇತ್ತೀಚೆಗೆ ಬೇಡಿಕೆ ಕುದುರುತ್ತಿದೆ. ರಿಲಾಯನ್ಸ್ ಪವರ್ 500 ಮೆಗಾವ್ಯಾಟ್ ಬ್ಯಾಟರಿ ಸ್ಟೋರೇಜ್ ಗುತ್ತಿಗೆಯೊಂದನ್ನು ಗೆದ್ದುಕೊಂಡಿದೆ. ರಿಲಾಯನ್ಸ್ ಇನ್​ಫ್ರಾ ಬಂಡವಾಳ ಸಂಗ್ರಹಕ್ಕೆ ಮುಂದಾಗಿರುವ ಮಾಹಿತಿ ಇದೆ.

ಅನಿಲ್ ಅಂಬಾನಿಯ ಎರಡು ಕಂಪನಿಗಳ ಷೇರುಬೆಲೆ ಏರುಗತಿಯಲ್ಲಿ; ರಿಲಾಯನ್ಸ್ ಪವರ್​ಗೆ ಸಿಕ್ಕಿದೆ ಹೊಸ ಗುತ್ತಿಗೆ
ಅನಿಲ್ ಅಂಬಾನಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 17, 2024 | 2:10 PM

ನವದೆಹಲಿ, ಸೆಪ್ಟೆಂಬರ್ 17: ಸಾಕಷ್ಟು ಹಿನ್ನಡೆಗಳಿಂದಾಗಿ ಬಿಸಿನೆಸ್​ನಲ್ಲಿ ದಿವಾಳಿ ಆಗಿರುವ ಅನಿಲ್ ಅಂಬಾನಿ ಮತ್ತೆ ಕಂಬ್ಯಾಕ್ ಮಾಡಲು ಪ್ರಯತ್ನಿಸುತ್ತಲೇ ಇದ್ದಾರೆ. ಈ ನಿಟ್ಟಿನಲ್ಲಿ ಅವರ ಬಿಸಿನೆಸ್ ಗ್ರೂಪ್​ನ ಕಂಪನಿಯೊಂದಕ್ಕೆ ಮಹತ್ವದ ಗುತ್ತಿಗೆಯೊಂದು ಸಿಕ್ಕಿದೆ. ರಿಲಾಯನ್ಸ್ ಪವರ್ ಸಂಸ್ಥೆ 500 ಮೆಗಾವ್ಯಾಟ್ ಬ್ಯಾಟರಿ ಸ್ಟೋರೇಜ್ ಗುತ್ತಿಗೆಯನ್ನು ಗೆದ್ದುಕೊಂಡಿದೆ. ಇದರೊಂದಿಗೆ ಅನಿಲ್ ಅಂಬಾನಿ ಅವರು ಮರುಬಳಕೆ ಇಂಧನ ಮತ್ತು ಎನರ್ಜಿ ಸ್ಟೋರೇಜ್ ವಲಯಕ್ಕೆ ಪದಾರ್ಪಣೆ ಮಾಡಿದಂತಾಗಿದೆ. ಸೋಲಾರ್ ಎನರ್ಜಿ ಕಾರ್ಪೊರೇಶನ್ (ಎಸ್​ಇಸಿಐ) ಸೆಪ್ಟೆಂಬರ್ 11ರಂದು ನಡೆಸಿದ ಇ-ರಿವರ್ಸ್ ಹರಾಜಿನಲ್ಲಿ ರಿಲಾಯನ್ಸ್ ಪವರ್ ಸಲ್ಲಿಸಿದ ಬಿಡ್ಡಿಂಗ್​ಗೆ ಗೆಲುವು ಸಿಕ್ಕಿದೆ.

ಭಾರತೀಯ ಸೌರ ಶಕ್ತಿ ನಿಗಮ (ಎಸ್​ಇಸಿಐ) ದೇಶಾದ್ಯಂತ ಎನರ್ಜಿ ಸ್ಟೋರೇಜ್ ಸಾಮರ್ಥ್ಯ ಹೆಚ್ಚಿಸುವ ಗುರಿ ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ 500 ಮೆಗಾವ್ಯಾಟ್ ಸ್ಟೋರೇಜ್​ಗೆ ಕಳೆದ ವಾರ ಹರಾಜು ನಡೆಸಲಾಗಿತ್ತು. ಆನ್​ಲೈನ್​ನಲ್ಲಿ ನಡೆದ ಆಕ್ಷನ್​ನಲ್ಲಿ ರಿಲಾಯನ್ಸ್ ಪವರ್ ಸೇರಿದಂತೆ ವಿವಿಧ ಸಂಸ್ಥೆಗಳು ಭಾಗಿಯಾಗಿದ್ದವು. ರಿಲಾಯನ್ಸ್ ಪವರ್ ಅತಿ ಕಡಿಮೆ ಬೆಲೆ ಕೋಟ್ ಮಾಡಿತು ಎನ್ನಲಾಗಿದೆ. ಮಾಧ್ಯಮಗಳಿಗೆ ಬಂದ ಮಾಹಿತಿ ಪ್ರಕಾರ ಒಂದು ಮೆಗಾವ್ಯಾಟ್ ವಿದ್ಯುತ್ ಸಂಗ್ರಹಕ್ಕೆ ರಿಲಾಯನ್ಸ್ ಪವರ್ 3.81999 ಲಕ್ಷ ರೂ ಬೆಲೆಗೆ ಬಿಡ್ಡಿಂಗ್ ಸಲ್ಲಿಸಿತು ಎನ್ನಲಾಗಿದೆ. ಅಂತಿಮವಾಗಿ ರಿಲಾಯನ್ಸ್ ಪವರ್​ಗೆ ಈ ಗುತ್ತಿಗೆ ನೀಡಲಾಗಿದೆ.

ಇದನ್ನೂ ಓದಿ: 1,900 ಕೋಟಿ ರೂಗೆ ಕಟ್ಟಿದ ರಸ್ತೆಗೆ 8,000 ಕೋಟಿ ರೂ ಟೋಲ್? ನಿತಿನ್ ಗಡ್ಕರಿ ಉತ್ತರ ಇದು

ಒಟ್ಟು 1,000 ಮೆಗಾವ್ಯಾಟ್​ನ ಬಿಇಎಸ್​ಎಸ್ (ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ) ಯೂನಿಟ್ ಸ್ಥಾಪನೆಯ ಪೈಕಿ ರಿಲಾಯನ್ಸ್ ಪವರ್ ಸಂಸ್ಥೆಗೆ 500 ಮೆಗಾವ್ಯಾಟ್ ಗುತ್ತಿಗೆ ಸಿಕ್ಕಿದೆ. ಈ ಬಿಇಎಸ್​ಎಸ್ ಟೆಂಡರ್​ನಲ್ಲಿ ರಿಲಾಯನ್ಸ್ ಪವರ್ ಕೋಟ್ ಮಾಡಿದ ಬೆಲೆ ಈವರೆಗಿನ ಕನಿಷ್ಠದ್ದು ಎನ್ನಲಾಗಿದೆ.

ಒಪ್ಪಂದ ಜಾರಿಗೆ ಬಂದ 24 ತಿಂಗಳಲ್ಲಿ ಪೂರ್ಣ ಸಾಮರ್ಥ್ಯದೊಂದಿಗೆ ಯೋಜನೆ ಚಾಲನೆಯಲ್ಲಿರಬೇಕು ಎಂದು ಒಪ್ಪಂದದಲ್ಲಿ ನಿಯಮ ಇದೆ.

ಅನಿಲ್ ಅಂಬಾನಿ ಷೇರುಗಳ ಬೆಲೆ ಹೆಚ್ಚಳ

ರಿಲಾಯನ್ಸ್ ಪವರ್​ಗೆ ಈ ಮಹತ್ವದ ಗುತ್ತಿಗೆ ಸಿಗುತ್ತಂದೆಯೇ ಅದರ ಷೇರಿಗೆ ಸ್ವಲ್ಪ ಬೇಡಿಕೆ ಹೆಚ್ಚಳ ಆಗುತ್ತಿದೆ. ನಿನ್ನೆ ಮತ್ತು ಇವತ್ತು ರಿಲಾಯನ್ಸ್ ಪವರ್ ಷೇರು ಬೆಲೆ ಹೆಚ್ಚಳವಾಗಿದ್ದು ಇವತ್ತು ಮಧ್ಯಾಹ್ನದ ವೇಳೆ 31.36 ರೂ ತಲುಪಿದೆ. ಮಂಗಳವಾರ ಶೇ. 1ರಷ್ಟು ಷೇರುಬೆಲೆ ಹೆಚ್ಚಿದೆ.

ಇದನ್ನೂ ಓದಿ: ರಾಧಿಕಾ ಗುಪ್ತಾ ಶ್ರೀಮಂತ ಉದ್ಯಮಿಯಾದರೂ ಲಕ್ಷುರಿ ಕಾರು ಒಲ್ಲೆ ಎನ್ನುವುದು ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ಕಾರಣ

ಅನಿಲ್ ಅಂಬಾನಿ ಅವರ ಇನ್ನೊಂದು ಕಂಪನಿಯಾದ ರಿಲಾಯನ್ಸ್ ಇನ್​ಫ್ರಾಸ್ಟ್ರಕ್ಚರ್​ನ ಷೇರುಬೆಲೆಯೂ ಹೆಚ್ಚಳವಾಗತೊಡಗಿದೆ. ಈ ಸಂಸ್ಥೆ ಬಂಡವಾಳ ಸಂಗ್ರಹಕ್ಕೆ ಮುಂದಾಗುತ್ತಿದೆ ಎನ್ನುವಂತಹ ಸುದ್ದಿ ದಟ್ಟವಾಗಿ ಹರಿದಾಡುತ್ತಿರುವುದು ಜನರು ಈ ಷೇರಿನತ್ತ ಮುಗಿಬೀಳಲು ಕಾರಣವಾಗಿರಬಹುದು.

ರಿಲಾಯನ್ಸ್ ಇನ್​ಫ್ರಾ ಒಂದು ಸಂದರ್ಭದಲ್ಲಿ ಹೆಚ್ಚೂಕಡಿಮೆ ಪ್ರತೀ ಷೇರಿಗೆ ಎರಡೂವರೆ ಸಾವಿರ ರೂ ಮೌಲ್ಯ ಹೊಂದಿತ್ತು. ಈಗ ಅದು 231 ರೂಗೆ ಇಳಿದಿದೆ. ಕಳೆದ ನಾಲ್ಕು ವರ್ಷದಿಂದ ತಕ್ಕಮಟ್ಟಿಗೆ ಮೇಲೇರಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ