ರಾಧಿಕಾ ಗುಪ್ತಾ ಶ್ರೀಮಂತ ಉದ್ಯಮಿಯಾದರೂ ಲಕ್ಷುರಿ ಕಾರು ಒಲ್ಲೆ ಎನ್ನುವುದು ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ಕಾರಣ

Radhika Gupta speaks: ಎಡೆಲ್​ವೀಸ್ ಮ್ಯುಚುವಲ್ ಫಂಡ್ ಸಂಸ್ಥೆಯ ಸಿಇಒ ರಾಧಿಕಾ ಗುಪ್ತಾ ಉದ್ಯಮ ವಲಯದಲ್ಲಿ ಅಪಾರ ಯಶಸ್ವು ಪಡೆದ ಮಹಿಳೆ. ದೈಹಿಕ ನ್ಯೂನತೆ ನಡುವೆಯೂ ತಮ್ಮ ಸ್ವಂತಿಕೆ ಬಿಡದೆ ವೈಯಕ್ತಿಕ ಜೀವನ ನಡೆಸುತ್ತಿದ್ದಾರೆ. ಎಲ್ಲಾ ರೀತಿಯ ಲಕ್ಷುರಿ ವಸ್ತುಗಳನ್ನು ಪಡೆದು ಅನುಭವಿಸುವಷ್ಟು ಶಕ್ತಳಾದರೂ ಅವರ ಜೀವನ ಸರಳತೆಯಿಂದ ಕೂಡಿದೆ.

ರಾಧಿಕಾ ಗುಪ್ತಾ ಶ್ರೀಮಂತ ಉದ್ಯಮಿಯಾದರೂ ಲಕ್ಷುರಿ ಕಾರು ಒಲ್ಲೆ ಎನ್ನುವುದು ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ಕಾರಣ
ರಾಧಿಕಾ ಗುಪ್ತಾ
Follow us
|

Updated on: Sep 16, 2024 | 3:55 PM

ಶಾರ್ಕ್ ಟ್ಯಾಂಕ್ ಇಂಡಿಯಾ ಕಾರ್ಯಕ್ರಮ ನೋಡುತ್ತಿರುವವರಿಗೆ ರಾಧಿಕಾ ಗುಪ್ತಾ ಪರಿಚಯ ಇರಬಹುದು. ಶೋನಲ್ಲಿ ಈಕೆ ಒಬ್ಬ ಜಡ್ಜ್. ಅದಕ್ಕಿಂತ ಹೆಚ್ಚಾಗಿ ಎಡೆಲ್​ವೇಸ್ ಮ್ಯೂಚುವಲ್ ಫಂಡ್​ನ ಸಿಇಒ ಮತ್ತು ಎಂಡಿಯೂ ಅವರು. ಎಲ್ಲಕ್ಕಿಂತ ಹೆಚ್ಚಾಗಿ ದೈಹಿಕ ನ್ಯೂನತೆ ನಡುವೆಯೂ ಟಿಪಿಕಲ್ ಮಿಡಲ್ ಕ್ಲಾಸ್ ಮಹಿಳೆಯಾಗಿ ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತು ಯಶಸ್ವಿಯಾದ ವ್ಯಕ್ತಿ ಈ ರಾಧಿಕಾ ಗುಪ್ತಾ. ಸಿರಿವಂತರಾದರೆ ದೊಡ್ಡದೊಡ್ಡ ಬಂಗಲೆ, ಲಕ್ಷುರಿ ಕಾರು, ಲೂಯಿಸ್ ವ್ಯೂಟೋನ್​ನಂಥ ವ್ಯಾನಿಟಿ ಬ್ಯಾಗು, ಮೈತುಂಬ ಒಡವೆ ಇತ್ಯಾದಿ ಶೋಕಿಗಳು ಇರಬೇಕು ಎಂದು ಭಾವಿಸುವ ಮಧ್ಯವ ವರ್ಗದವರಾದರೂ ರಾಧಿಕಾ ಗುಪ್ತಾ ವಿಭಿನ್ನ ಆಲೋಚನೆಯವರು. ರಾಧಿಕಾ ಗುಪ್ತಾ ಇನ್ನೋವಾ ಕಾರನ್ನು ಓಡಿಸುತ್ತಾರೆ. ಈಕೆಯ ಸರಿಸಮಾನ ಉದ್ಯಮಿಗಳು ಪೋರ್ಷೆ, ಬೆಂಜ್ ಇತ್ಯಾದಿ ಓಡಿಸಿದರೆ, ಇವರು ಇನ್ನೋವಾ ಕಾರನ್ನು ಹೊಂದಿರುವುದು ಯಾಕೆ?

ಕಾರು ಒಂದು ಸವಕಳಿ ಆಸ್ತಿ. ಅದನ್ನು ಖರೀದಿಸಿದಾಕ್ಷಣವೇ ಶೇ. 30ರಷ್ಟು ಮೌಲ್ಯ ಹೊರಟು ಹೋದಂತೆಯೇ. ನಾನೇನೂ ಕಾರು ಚಲಾಯಿಸುವುದಿಲ್ಲ. ಐಷಾರಾಮಿ ಕಾರು ಖರೀದಿಸುವಷ್ಟು ಶಕ್ತಿ ನನಗಿದೆ. ಅದನ್ನು ಖರೀದಿಸಲು ಯೋಚಿಸುವಾಗೆಲ್ಲಾ, ಕಾರು ಒಂದು ಸವಕಳಿ ಆಸ್ತಿ ಎಂಬ ವಿಚಾರ ಕಣ್ಮುಂದೆ ಬರುತ್ತದೆ. ಹಾಗಾಗಿ ಲಕ್ಷುರಿ ಕಾರು ಖರೀದಿಸುವುದಿಲ್ಲ ಎನ್ನುತ್ತಾರೆ ರಾಧಿಕಾ ಗುಪ್ತಾ.

ಎರಡು ದಶಕಗಳ ಹಿಂದೆ ತನ್ನ ಬಳಿ ದುಬಾರಿ ವಸ್ತುಗಳು ಇಲ್ಲದಿರುವುದನ್ನು ಕಂಡು ಜನರು ಏನಂದುಕೊಳ್ಳುತ್ತಾರೋ ಎನ್ನುವ ಕೀಳರಿಮೆ ರಾಧಿಕಾಗೆ ಇತ್ತಂತೆ. ಈಗ ಯಾರಾದರೂ ಕೂಡ ಹಾಗೆ ಭಾವಿಸಿದರೆ ಅವರಿಗೇನೂ ಅನಿಸೋದಿಲ್ಲ. ‘ನಾನ್ಯಾಕೆ ಇನ್ನೋವಾ ಓಡಿಸುತ್ತೇನೆ ಎಂದು ಯಾರಾದರೂ ಕೇಳಿದರೆ, ನನ್ನ ಜೀವನ ನನ್ನ ಇಷ್ಟ ಎಂದು ಸ್ಪಷ್ಟವಾಗಿ ಹೇಳಬಲ್ಲೆ. ಯಾರಿಗೂ ನಾನೇನೆಂದು ಸಾಬೀತು ಮಾಡಬೇಕು ಅಂತ ಅನಿಸುವುದಿಲ್ಲ,’ ಎಂದು ಎಡೆಲ್​ವೇಸ್ ಮ್ಯೂಚುವಲ್ ಫಂಡ್ ಮುಖ್ಯಸ್ಥೆ ಹೇಳುತ್ತಾರೆ.

ಇದನ್ನೂ ಓದಿ: UPI Transaction Limit: ಕೆಲ ಯುಪಿಐ ಪಾವತಿ ಮಿತಿ 5 ಲಕ್ಷ ರೂಗೆ ಹೆಚ್ಚಳ; ಇವತ್ತಿನಿಂದ ಅಪ್​ಡೇಟೆಡ್ ಸೌಲಭ್ಯ ಜಾರಿ

ಟ್ರೇಡಿಂಗ್ ಹೆಸರಲ್ಲಿ ದಾರಿ ತಪ್ಪುವ ಯುವಕರು

ಇಂದಿನ ಯುವಕರು, ಯುವತಿಯರು ತಮ್ಮ ಐಷಾರಾಮಿ ಜೀವನಶೈಲಿಗೆ ಹಣ ಹೊಂದಿಸಲು ತುಂಬಾ ರಿಸ್ಕಿ ಎನಿಸುವ ಹೂಡಿಕೆಗಳನ್ನು ಮಾಡುತ್ತಿರುವ ಬಗ್ಗೆ ರಾಧಿಕಾ ಗುಪ್ತಾ ಕಳವಳ ವ್ಯಕ್ತಪಡಿಸಿದ್ದಾರೆ. ‘ಇಪ್ಪತ್ತರ ಹರೆಯದಲ್ಲಿರುವ ಜನರು ತಾವು ಎಫ್ ಅಂಡ್ ಒ ಮಾಡುತ್ತಿರುವುದರಿಂದ ಕೆಲಸ ಮಾಡುವ ಅವಶ್ಯಕತೆ ಇಲ್ಲ ಎನ್ನುತ್ತಿದ್ದಾರೆ. ಇದು ಯೋಚಿಸಬೇಕಾದ ಸಂಗತಿ. ಇಂಥ ಟ್ರೇಡಿಂಗ್ ಬಗ್ಗೆ ಎಕನಾಮಿಕ್ ಸರ್ವೆನಲ್ಲಿ ಅಸಮಾಧಾನ ತೋರಿಸಲಾಗಿದೆ. ಇಂಥ ಟ್ರೇಡಿಂಗ್ ಟ್ರೆಂಡ್​ಗಳು ವೈಯಕ್ತಿಕವಾಗಿ ಮಾತ್ರವಲ್ಲ ಒಟ್ಟಾರೆ ಆರ್ಥಿಕತೆಗೂ ಅಪಾಯಕಾರಿ ಆಗಿದೆ,’ ಎಂದು ರಾಧಿಕಾ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ