63 ಜನರಿದ್ದ ಕೂಡು ಕುಟುಂಬದಲ್ಲಿ ಜನಿಸಿದ ಉದಯ್ ಕೋಟಕ್​ಗೆ, ಇಡೀ ಕಂಪನಿ ಒಂದು ಜಾಯಿಂಟ್ ಫ್ಯಾಮಿಲಿ ಇದ್ದಂತೆ

|

Updated on: Mar 22, 2024 | 12:20 PM

Uday Kotak's Journey: ವ್ಯಕ್ತಿಗಿಂತ ಸಂಸ್ಥೆ ಮುಖ್ಯ. ವ್ಯಕ್ತಿಗಳು ಬರುತ್ತಾರೆ ಹೋಗುತ್ತಾರೆ, ಆದರೆ ಸಂಸ್ಥೆಗಳು ಮುಂದುವರಿಯುತ್ತಿರಬೇಕು ಎಂದು ಬ್ಯಾಂಕಿಂಗ್ ಉದ್ಯಮಿ ಉದಯ್ ಕೋಟಕ್ ಹೇಳಿದ್ದಾರೆ. 63 ಜನರಿದ್ದ ಕೂಡು ಕುಟುಂಬದಲ್ಲಿ ಜನಿಸಿದ್ದಾಗಿ ಹೇಳಿಕೊಳ್ಳುವ ಉದಯ್ ಕೋಟಕ್, ಒಂದು ಸಂಸ್ಥೆ ಕೂಡು ಕುಟುಂಬ ಇದ್ದಂತೆ ಎಂದು ಸಮೀಕರಿಸಿದ್ದಾರೆ. 1985ರಲ್ಲಿ ಸ್ಥಾಪನೆಯಾದ ಕೋಟಕ್ ಬ್ಯಾಂಕ್ ಇದೀಗ ಕೋಟಕ್ ಮಹೀಂದ್ರ ಬ್ಯಾಂಕ್ ಆಗಿ ರೂಪುಗೊಳ್ಳುವ ಹಾದಿಯಲ್ಲಿ ಬಹಳ ದೊಡ್ಡ ಸವಾಲುಗಳನ್ನು ಎದುರಿಸಿತ್ತು.

63 ಜನರಿದ್ದ ಕೂಡು ಕುಟುಂಬದಲ್ಲಿ ಜನಿಸಿದ ಉದಯ್ ಕೋಟಕ್​ಗೆ, ಇಡೀ ಕಂಪನಿ ಒಂದು ಜಾಯಿಂಟ್ ಫ್ಯಾಮಿಲಿ ಇದ್ದಂತೆ
ಉದಯ್ ಕೋಟಕ್
Follow us on

ನವದೆಹಲಿ, ಮಾರ್ಚ್ 22: ಒಬ್ಬ ವ್ಯಕ್ತಿಗಿಂತ ಸಂಸ್ಥೆ ಹೆಚ್ಚು ಮುಖ್ಯ. ವ್ಯಕ್ತಿಗಳು ಬರಬಹುದು, ಹೋಗಬಹುದು, ಆದರೆ ಸಂಸ್ಥೆಗಳು ಮುಂದುವರಿಯುತ್ತಿರಬೇಕು. ಈ ತತ್ವವನ್ನು ನಂಬಿದವನು ನಾನು ಎಂದು ಭಾರತದ ಪ್ರಮುಖ ಬ್ಯಾಂಕಿಂಗ್ ಉದ್ಯಮಿ ಎನಿಸಿದ ಉದಯ್ ಕೋಟಕ್ (Uday Kotak) ಹೇಳಿದ್ದಾರೆ. ರಾಜಕೀಯ ಪಕ್ಷಗಳಲ್ಲಿರುವಂತೆ ಹಲವು ಉದ್ಯಮಗಳು ಕೂಡ ಕುಟುಂಬ (Joint family) ಸದಸ್ಯರೊಳಗೆ ಮುಂದುವರಿದುಕೊಂಡು ಹೋಗುತ್ತಿರುವ ಟ್ರೆಂಡ್​ನ ಮಧ್ಯೆ ಉದಯ್ ಕೋಟಕ್ ವಿಭಿನ್ನ ನಿಲುವು ತಳೆದಿದ್ದಾರೆ. ಜೆಪಿ ಮಾರ್ಗನ್, ಗೋಲ್ಡ್​ಮ್ಯಾನ್ ಸ್ಯಾಕ್ಸ್, ಮಾರ್ಗನ್ ಸ್ಟಾನ್ಲೀ, ಮೆರಿಲ್ ಲಿಂಚ್ ಇತ್ಯಾದಿ ಹಣಕಾಸು ಸಂಸ್ಥೆಗಳ ಉದಾಹರಣೆಯನ್ನು ಉದಯ್ ಕೋಟಕ್ ಉಲ್ಲೇಖಿಸಿದ್ದಾರೆ. ಈ ಮೇಲಿನ ಕಂಪನಿಗಳು ಒಂದು ಕುಟುಂಬದ ಹೆಸರಿನ ಮೇಲೆ ಹುಟ್ಟಿದಂಥವು. ಈಗ ಆ ಕುಟುಂಬ ಸದಸ್ಯರು ಇಲ್ಲದಿದ್ದರೂ ಇವು ಮುಂದುವರಿಯುತ್ತಿರುವುದನ್ನು ಕೋಟಕ್ ತಿಳಿಸಿದ್ದಾರೆ.

ಉದಯ್ ಕೋಟಕ್ ಅವರು ಕೋಟಕ್ ಮಹೀಂದ್ರ ಬ್ಯಾಂಕ್​ನ ಸಂಸ್ಥಾಪಕರು. ವ್ಯಕ್ತಿಗಿಂತ ಸಂಸ್ಥೆ ಮುಖ್ಯ ಎನ್ನುವ ಇವರು, ತಮ್ಮ ಸಂಸ್ಥೆಯನ್ನು ಒಂದು ಕೂಡು ಕುಟುಂಬ ಎಂದು ಪರಿಗಣಿಸುತ್ತಾರೆ. ಇದು ಅವರು ಬೆಳೆದು ಬಂದ ಪರಿಸರವೇ ಪ್ರಭಾವ ಬೀರಿದೆ.

‘ಒಂದು ಕಂಪನಿಯು ಜಾಯಿಂಟ್ ಫ್ಯಾಮಿಲಿಯಂತೆ ಎನ್ನುವುದು ನನ್ನ ಅನಿಸಿಕೆ. ಒಂದೇ ಅಡುಗೆ ಮನೆ ಇರುವ 63 ಕುಟುಂಬ ಸದಸ್ಯರು ಇರುವ ಮನೆಯಲ್ಲಿ ಹುಟ್ಟಿದವನು ನಾನು. ಸಹೋದರರು, ಚಿಕ್ಕಪ್ಪ, ದೊಡ್ಡಪ್ಪ, ಚಿಕ್ಕಮ್ಮ, ದೊಡ್ಡಮ್ಮ ಹೀಗೆ ಎಲ್ಲರೊಂದಿಗೆ ಬದುಕುತ್ತಾ, ನೀವು ನಿಮ್ಮದೇ ಗುರಿ ಮತ್ತು ಆಸಕ್ತಿಗಳನ್ನು ಅನ್ವೇಷಿಸುತ್ತಾ ಹೋಗುತ್ತೀರಿ ಎಂಬುದು ಕುತೂಹಲ,’ ಎಂದು ಉದಯ್ ಕೋಟಕ್ ಹೇಳುತ್ತಾರೆ.

ಇದನ್ನೂ ಓದಿ: ಅಮೆರಿಕದ ರಾಬಿನ್​ಹುಡ್ ಮಾರ್ಕೆಟ್ಸ್​ನ ಸಹ-ಸಂಸ್ಥಾಪಕ ಬೈಜು ಭಟ್ ಚೀಫ್ ರಾಜೀನಾಮೆ

ಉದಯ್ ಕೋಟಕ್ 1985ರಲ್ಲಿ ಕೋಟಕ್ ಬ್ಯಾಂಕ್ ಅನ್ನು ಸ್ಥಾಪಿಸಿದ್ದು. ಇವತ್ತಿನ ಸ್ಟಾರ್ಟಪ್​ನಂತಿತ್ತು ಅಂದಿನ ಈ ಬ್ಯಾಂಕ್. ಅಲ್ಲಿ ಕೆಲಸ ಮಾಡುತ್ತಿದ್ದವರೆಲ್ಲಾ ಮಧ್ಯಮ ವರ್ಗದ ಕುಟುಂಬಗಳಿಂದ ಬಂದವರು. ಮಧ್ಯಮವರ್ಗದವರ ಮೌಲ್ಯಗಳು ತಮ್ಮ ತಂಡವನ್ನು ಒಟ್ಟುಗೂಡಿಸಿತ್ತು ಎಂದು ಉದಯ್ ಕೋಟಕ್ ವಿವರಿಸುತ್ತಾರೆ.

ಎನ್​ಬಿಎಫ್​ಸಿ ಬಿಕ್ಕಟ್ಟಿನಿಂದ ಬಚಾವಾದ ಕೋಟಕ್

ಕೋಟಕ್ ಬ್ಯಾಂಕ್ 1985ರಿಂದ ಆರಂಭಿಸಿದ ಸುದೀರ್ಘ ಪ್ರಯಾಣದಲ್ಲಿ ಹಲವು ಅಗ್ನಿ ಪರೀಕ್ಷೆಗಳು ಎದುರಾದವು ಎಂದು ವಿವರಿಸಿದ ಉದಯ್ ಕೋಟಕ್, 1997ರಿಂದ 2003ರವರೆಗಿನ ಏಷ್ಯನ್ ಬ್ಯಾಂಕಿಂಗ್ ಬಿಕ್ಕಟ್ಟು ಮತ್ತು ಎನ್​ಬಿಎಫ್​ಸಿ ಬಿಕ್ಕಟ್ಟನ್ನು ಉಲ್ಲೇಖಿಸುತ್ತಾರೆ.

ಇದನ್ನೂ ಓದಿ: ಅಂಬಾನಿ ಕುಟುಂಬದ ಹೊಸ ಸ್ಟಾರ್ ಅನ್ಮೋಲ್; ಅಪ್ಪ ಅನಿಲ್ ಅಂಬಾನಿಗೆ ಸಿಕ್ಕಿದೆ ಮಗನ ಬಲ

‘ನಮ್ಮ ಸಂಸ್ಥೆ ಆಗ ಎನ್​ಬಿಎಫ್​ಸಿ ಆಗಿತ್ತು. ಆಗ 4,000ಕ್ಕೂ ಹೆಚ್ಚು ಎನ್​ಬಿಎಫ್​ಸಿಗಳಿದ್ದವು. ಅವುಗಳಲ್ಲಿ ಸುಮಾರು 20 ಸಂಸ್ಥೆಗಳು ಉಳಿದವು. ಆಗ ನನಗೆ ಅನಿಸಿದ್ದು, ನೀವು ಸರಿಯಾದ ಕೆಲಸ ಮಾಡಿದರೆ, ಕಾನೂನು ಪ್ರಕಾರ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ ಎಂಬುದು ಗೊತ್ತಾಯಿತು,’ ಎಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ