AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬಾನಿ ಕುಟುಂಬದ ಹೊಸ ಸ್ಟಾರ್ ಅನ್ಮೋಲ್; ಅಪ್ಪ ಅನಿಲ್ ಅಂಬಾನಿಗೆ ಸಿಕ್ಕಿದೆ ಮಗನ ಬಲ

Anil Ambani's Two Children Anmol and Anshul: ಪತನಗೊಂಡಿದ್ದ ಅನಿಲ್ ಅಂಬಾನಿ ಅವರ ರಿಲಾಯನ್ಸ್ ಗ್ರೂಪ್ ಸಾಮ್ರಾಜ್ಯ ಮತ್ತೆ ಬೆಳೆಯತೊಡಗಿದೆ. ಸಾಲಗಳು ತೀರತೊಡಗಿವೆ. ಬಂಡವಾಳ ಹರಿದುಬರತೊಡಗಿದೆ. ಷೇರು ಮಾರುಕಟ್ಟೆಯಲ್ಲಿ ಬೇಡಿಕೆ ಶುರುವಾಗಿದೆ. ಈ ಮಧ್ಯೆ ಅನಿಲ್ ಅಂಬಾನಿ ಅವರ ಇಬ್ಬರು ಮಕ್ಕಳಾದ ಅನ್ಮೋಲ್ ಮತ್ತು ಅನ್ಷುಲ್ ಅಂಬಾನಿ ಇಬ್ಬರೂ ಸೇರಿ ರಿಲಾಯನ್ಸ್ ಕ್ಯಾಪಿಟಲ್ ಅನ್ನು ಈಗ 20,000 ಕೋಟಿ ರೂ ಮೌಲ್ಯದ ಕಂಪನಿಯಾಗಿ ಬೆಳೆಸಿದ್ದಾರೆ.

ಅಂಬಾನಿ ಕುಟುಂಬದ ಹೊಸ ಸ್ಟಾರ್ ಅನ್ಮೋಲ್; ಅಪ್ಪ ಅನಿಲ್ ಅಂಬಾನಿಗೆ ಸಿಕ್ಕಿದೆ ಮಗನ ಬಲ
ಅನಿಲ್ ಅಂಬಾನಿ ಮಕ್ಕಳು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 21, 2024 | 5:56 PM

Share

ದಿವಾಳಿಯಾಗಿದ್ದ ಅನಿಲ್ ಅಂಬಾನಿ (Anil Ambani) ತಿರುಗಿ ನಿಂತಿದ್ದಾರೆ. ಅವರ ರಿಲಾಯನ್ಸ್ ಗ್ರೂಪ್​ನ ರಿಲಾಯನ್ಸ್ ಪವರ್ ಮತ್ತು ರಿಲಾಯನ್ಸ್ ಇಂಡಸ್ಟ್ರೀಸ್ ಷೇರುಗಳ ಬೆಲೆ ಸತತವಾಗಿ ಏರತೊಡಗಿದೆ. ಹಂತ ಹಂತವಾಗಿ ಸಾಲಗಳನ್ನು ತೀರಿಸಲಾಗುತ್ತಿದೆ. ಇದೇ ವೇಳೆ ರಿಲಾಯನ್ಸ್ ಕ್ಯಾಪಿಟಲ್ (Reliance Capital) ಭಾರತದ ಹಣಕಾಸು ಮತ್ತು ಇನ್ಷೂರೆನ್ಸ್ ಮಾರುಕಟ್ಟೆಯಲ್ಲಿ ಛಾಪು ಮೂಡಿಸತೊಡಗಿದೆ. ಇದರ ಹಿಂದಿನ ಶಕ್ತಿಯಾಗಿ ಅನಿಲ್ ಅಂಬಾನಿ ಅವರ ಇಬ್ಬರು ಮಕ್ಕಳು ನಿಂತಿದ್ದಾರೆ. ಕಳೆದುಹೋದ ಅಪ್ಪನ ಗತವೈಭವ ಮರಳಿ ತರಲು ಮಕ್ಕಳು ಚುಕ್ಕಾಣಿ ಹಿಡಿದಿರುವಂತೆ ತೋರುತ್ತಿದೆ. ಅನಿಲ್ ಅಂಬಾನಿ ಅವರ ಇಬ್ಬರು ಮಕ್ಕಳಾದ ಜೈ ಅನ್ಮೋಲ್ (Jai Anmol Ambani) ಮತ್ತು ಅನ್ಶುಲ್ ಅಂಬಾನಿ (Anshul Ambani) ಇವತ್ತಿನ ಸ್ಪರ್ಧಾತ್ಮಕ ಬಿಸಿನೆಸ್​ನಲ್ಲಿ ಹಿಡಿತ ಸಾಧಿಸುತ್ತಿದ್ದಾರೆ. ಅಂಬಾನಿ ಕುಟುಂಬದ ಮೂರನೇ ತಲೆಮಾರಿನಲ್ಲಿ ಈಗ ಪೈಪೋಟಿ ಶುರುವಾಗಿದೆ. ಮುಕೇಶ್ ಅಂಬಾನಿ ಅವರ ಮೂವರು ಮಕ್ಕಳಾದ ಇಶಾ, ಆಕಾಶ್ ಮತ್ತು ಅನಂತ್ ಅಂಬಾನಿ ಅಖಾಡದಲ್ಲಿ ಇದ್ದಾರೆ. ಇತ್ತ ಅನಿಲ್ ಅಂಬಾನಿ ಅವರ ಇಬ್ಬರು ಮಕ್ಕಳಾದ ಅನ್ಮೋಲ್ ಮತ್ತು ಅನ್ಷುಲ್ ಕೂಡ ಅಖಾಡದಲ್ಲಿದ್ದಾರೆ. ಯಾವ ಜೂನಿಯರ್ ಅಂಬಾನಿ ಯಾವ ಮಟ್ಟಕ್ಕೆ ಹೋಗುತ್ತಾರೆ ಎಂಬುದು ಕುತೂಹಲದ ಸಂಗತಿ.

ರೈಸಿಂಗ್ ಸ್ಟಾರ್ ಅನ್ಮೋಲ್ ಅಂಬಾನಿ

ಅನಿಲ್ ಅಂಬಾನಿ ಉದ್ಯಮ ಸಾಮ್ರಾಜ್ಯ ಪತನವಾಗಿದ್ದು ಇತ್ತೀಚೆಗೆ. ಅವರ ಮಕ್ಕಳು ಐಷಾರಾಮಿ ಜೀವನಶೈಲಿಯೊಂದಿಗೆ ಬೆಳೆದವರು. ಅನ್ಮೋಲ್ ಅಂಬಾನಿ ದೇಶ ವಿದೇಶಗಳ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಓದಿದ್ದಾರೆ. ರಿಲಾಯನ್ಸ್ ಕ್ಯಾಪಿಟಲ್ ಅನ್ನು 20,000 ಕೋಟಿ ರೂ ಮೌಲ್ಯದ ಉದ್ಯಮ ಸಾಮ್ರಾಜ್ಯ ಕಟ್ಟಲು ಅವರ ಪಾತ್ರ ಮಹತ್ವದ್ದು. ಅವರು ಅನಿಲ್ ಅಂಬಾನಿ ಪುತ್ರ ಎಂದು ಒಮ್ಮೆಗೇ ರಿಲಾಯನ್ಸ್ ಕ್ಯಾಪಿಟಲ್​ನ ಚುಕ್ಕಾಣಿ ಪಡೆದವರಲ್ಲ. ಹಂತ ಹಂತವಾಗಿ ಬೆಳವಣಿಗೆ ಹೊಂದಿದ್ದಾರೆ.

ಇದನ್ನೂ ಓದಿ: ಬ್ಯಾಟ್​ಮ್ಯಾನ್ ಕಾರ್​ನಿಂದ ಬಂಗಲೆಯವರೆಗೆ, ದೊಡ್ಡ ಉದ್ಯಮಿಗಳ ಮಕ್ಕಳಿಗೆ ಸಿಕ್ಕ ಭರ್ಜರಿ ಗಿಫ್ಟ್​ಗಳಿವು…

18 ವರ್ಷ ವಯಸ್ಸಿದ್ದಾಗ ಅನ್ಮೋಲ್ ಅಂಬಾನಿ ರಿಲಾಯನ್ಸ್ ಮ್ಯೂಚುವಲ್ ಫಂಡ್​ನಲ್ಲಿ ಕೇವಲ ಇಂಟರ್ನ್ ಮಾತ್ರವೇ ಆಗಿ ಪ್ರಯಾಣ ಆರಂಭಿಸಿದರು. ಹಂತ ಹಂತವಾಗಿ ಭಡ್ತಿ ಪಡೆದರು. 2016ರಲ್ಲಿ ರಿಲಾಯನ್ಸ್ ಕ್ಯಾಪಿಟಲ್​ನ ಮಂಡಳಿಗೆ ಹೆಚ್ಚುವರಿ ನಿರ್ದೇಶಕರಾದರು. ರಿಲಾಯನ್ಸ್ ನಿಪ್ಪೋನ್ ಲೈಫ್ ಅಸೆಟ್ ಮ್ಯಾನೇಜ್ಮೆಂಟ್, ರಿಲಾಯನ್ಸ್ ಹೋಮ್ ಫೈನಾನ್ಸ್​ನ ಮಂಡಳಿ ನಿರ್ದೇಶಕ ಸ್ಥಾನ ಪಡೆದರು.

ರಿಲಾಯನ್ಸ್ ಗ್ರೂಪ್​ಗೆ ಅನ್ಮೋಲ್ ಸ್ಪರ್ಶ

ರಿಲಾಯನ್ಸ್ ಗ್ರೂಪ್​ಗೆ ಅನ್ಮೋಲ್ ಅಂಬಾನಿ ಪ್ರವೇಶ ಮಾಡಿದ ಬಳಿಕ ಆ ಸಂಸ್ಥೆಗೆ ಹೊಸ ಕಳೆ ಬಂದಿತು. ಜಪಾನ್​ನ ನಿಪ್ಪೋನ್ ಜೊತೆಗಿನ ಹೊಂದಾಣಿಕೆ, ಹೀಗೆ ಹೊಸ ರೀತಿಯ ಆಲೋಚನೆಗಳೊಂದಿಗೆ ಅವರು ಇಟ್ಟ ಹೆಜ್ಜೆಗಳು ರಿಲಾಯನ್ಸ್ ಗ್ರೂಪ್ ಬಗ್ಗೆ ಹೂಡಿಕೆದಾರರ ವಿಶ್ವಾಸ ಹೆಚ್ಚಿಸಿದೆ.

ಇದನ್ನೂ ಓದಿ: ಪುಟಿದೆದ್ದ ಅನಿಲ್ ಅಂಬಾನಿ; ಸಾಲಗಳನ್ನು ತೀರಿಸಿ ಮೈಕೊಡವುತ್ತಿರುವ ಮುಕೇಶ್ ಸಹೋದರ; ರಿಲಾಯನ್ಸ್ ಪವರ್ ಷೇರುಪೇಟೆಯಲ್ಲಿ ಹೊಸ ಖದರ್

ಅತ್ತ ಕಿರಿಯ ಮಗ ಅನ್ಷುಲ್ ಅಂಬಾನಿ ಕೂಡ ರಿಲಾಯನ್ಸ್ ಕ್ಯಾಪಿಟಲ್​ನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈ ಇಬ್ಬರು ಮಕ್ಕಳು ಅಪ್ಪನ ಹಿಂದಿನ ವೈಭವ ಮರಳಿಸಲು ಪಣತೊಟ್ಟಂತೆ ತೋರುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More