Unemployment: ದೇಶದ ಎಂಟು ಭಾಗಗಳಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಳ; ವಿವಿಧ ರಾಜ್ಯಗಳಲ್ಲಿ ಎರಡಂಕಿ ಮುಟ್ಟಿದ ದರ

| Updated By: Srinivas Mata

Updated on: Dec 15, 2021 | 1:44 PM

ಭಾರತದ ಎಂಟು ಪ್ರದೇಶದಲ್ಲಿ ನಿರುದ್ಯೋಗ ಪ್ರಮಾಣ ಭಾರೀ ಹೆಚ್ಚಾಗಿದೆ. ಅದಕ್ಕೆ ಕಾರಣ ಏನು ಎಂಬ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ.

Unemployment: ದೇಶದ ಎಂಟು ಭಾಗಗಳಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಳ; ವಿವಿಧ ರಾಜ್ಯಗಳಲ್ಲಿ ಎರಡಂಕಿ ಮುಟ್ಟಿದ ದರ
ಸಾಂದರ್ಭಿಕ ಚಿತ್ರ
Follow us on

ರಾಷ್ಟ್ರೀಯ, ನಗರ ಮತ್ತು ಗ್ರಾಮೀಣ ನಿರುದ್ಯೋಗ ದರಗಳು ನವೆಂಬರ್‌ನಲ್ಲಿ ಅನುಕ್ರಮವಾಗಿ ಕಡಿಮೆಯಾಗುತ್ತಿದ್ದರೂ ಎಂಟು ಪ್ರದೇಶಗಳಲ್ಲಿ ಅಧಿಕವಾಗಿತ್ತು. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಪ್ರಕಾರ, ರಾಜಸ್ಥಾನ (ಶೇ 20.4), ಜಮ್ಮು ಮತ್ತು ಕಾಶ್ಮೀರ (ಶೇ 21.4) ಮತ್ತು ಹರ್ಯಾಣ (ಶೇ 29.3) ಗಳಲ್ಲಿ ನಿರುದ್ಯೋಗವು ತುಂಬ ಹೆಚ್ಚಾಗಿದೆ. ಈ ಪ್ರದೇಶಗಳಲ್ಲಿ ಹಲವು ತಿಂಗಳಿಂದ ಹೆಚ್ಚಿನ ನಿರುದ್ಯೋಗವನ್ನು ಅನುಭವಿಸುತ್ತಿವೆ. ಬಿಹಾರ, ಗೋವಾ, ತ್ರಿಪುರಾ, ಹಿಮಾಚಲ ಪ್ರದೇಶ ಮತ್ತು ಜಾರ್ಖಂಡ್‌ಗಳು ಎರಡಂಕಿಯ ನಿರುದ್ಯೋಗ ದರಗಳನ್ನು ವರದಿ ಮಾಡಿದ್ದು, ಮೊದಲ ಮೂರು ಅನುಕ್ರಮವಾಗಿ ಏರುತ್ತಿವೆ. ಬಿಹಾರದಲ್ಲಿ ನಿರುದ್ಯೋಗವು ಶೇ 13.9ರಿಂದ ಶೇ 14.8ಕ್ಕೆ ಏರಿದೆ. ತ್ರಿಪುರಾದಲ್ಲಿ ನಿರುದ್ಯೋಗವು ಶೇ 3.5 ಹೆಚ್ಚಳವಾಗಿ, ಶೇ 13.4ಕ್ಕೆ ಏರಿದೆ. ಗೋವಾದಲ್ಲಿ ಇದು ಶೇಕಡಾ ಒಂದರಷ್ಟು ಏರಿಕೆಯಾಗಿ ಶೇ 12.7ಕ್ಕೆ ತಲುಪಿದೆ.

ಈ ಮಧ್ಯೆ, ರಾಷ್ಟ್ರೀಯ ದರವು ಅಕ್ಟೋಬರ್‌ನಲ್ಲಿ ಶೇ 7.75ರಿಂದ ನವೆಂಬರ್‌ನಲ್ಲಿ ಶೇ 7ಕ್ಕೆ ಇಳಿದಿದೆ. ಮತ್ತು ಗ್ರಾಮೀಣ ನಿರುದ್ಯೋಗವು ಶೇ 7.91ರಿಂದ ಶೇ 6.44ಕ್ಕೆ ಇಳಿದಿದೆ. ನಗರ ದರವು ಹಿಂದಿನ ತಿಂಗಳಿನ ಶೇ 7.38ಕ್ಕೆ ಹೋಲಿಸಿದರೆ ನವೆಂಬರ್‌ನಲ್ಲಿ ಶೇ 8.21 ರಷ್ಟಿತ್ತು. ಎಂಟು ಪ್ರದೇಶಗಳಲ್ಲಿನ ಹೆಚ್ಚಿನ ನಿರುದ್ಯೋಗ ಆಗುವುದಕ್ಕೆ ವಿಳಂಬವಾದ ಆರ್ಥಿಕ ಚೇತರಿಕೆ, ವಲಯದ ಮೃದುತ್ವ, ಹೆಚ್ಚುವರಿ ಕಾರ್ಯಪಡೆ ಮತ್ತು ನವೆಂಬರ್‌ನಲ್ಲಿ ಮಂದವಾದ ಕೃಷಿ ಋತುವಿನಿಂದ ಎನ್ನಲಾಗುತ್ತಿದೆ. “ನೀವು ಗೋವಾ, ರಾಜಸ್ಥಾನ, ಹಿಮಾಚಲ ಮತ್ತು ಜಮ್ಮು ಮತ್ತು ಕಾಶ್ಮೀರದಂತಹ ಪ್ರದೇಶಗಳನ್ನು ನೋಡಿದರೆ ಪ್ರವಾಸೋದ್ಯಮ ಮತ್ತು ಆತಿಥ್ಯವು ಅಲ್ಲಿ ಉತ್ತಮ ಉದ್ಯೋಗ ಸೃಷ್ಟಿಸುತ್ತವೆ ಎಂದು ತಿಳಿಯುತ್ತೀರಿ. ಕೊರೊನಾದ ನಿರಂತರ ಭಯದಿಂದಾಗಿ ಈ ವಲಯಗಳಲ್ಲಿನ ಚೇತರಿಕೆಯು ನಿರೀಕ್ಷೆಗಿಂತ ಬಹಳ ಹಿಂದೆ ಬಿದ್ದಿದೆ,” ಎಂದು ದೆಹಲಿ ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಪ್ರಾಧ್ಯಾಪಕ ಅರೂಪ್ ಮಿತ್ರಾ ಹೇಳಿದ್ದಾರೆ.

ಉತ್ಪಾದನೆಯು ಇನ್ನೂ ಪೂರ್ಣ ಸಾಮರ್ಥ್ಯಕ್ಕೆ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಕೆಲವು ಭಾಗಗಳು ಕಳೆದ ಒಂದೂವರೆ ವರ್ಷಗಳಲ್ಲಿ ಕಾರ್ಮಿಕರ ಬದಲಾಗಿ ಹೆಚ್ಚಿನ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ ಎಂದು ಮಿತ್ರಾ ವಿವರಿಸಿದ್ದಾರೆ. ಇದು ಹರ್ಯಾಣದಂತಹ ಕೈಗಾರಿಕೆಗಳನ್ನು ಹೊಂದಿರುವ ರಾಜ್ಯಗಳನ್ನು ನಾಶಪಡಿಸಿರಬೇಕು ಎಂದು ಅಭಿಪ್ರಾಯ ಪಡುತ್ತಾರೆ. “ಬೇಡಿಕೆಯಲ್ಲಿ ಮೃದುತ್ವದ ಹಿಂದಿನ ಒಂದು ದೊಡ್ಡ ಅಂಶವೆಂದರೆ ಅನೌಪಚಾರಿಕ ವಲಯ. ಇದರಿಂದ ಬಿಹಾರ ಮತ್ತು ಜಾರ್ಖಂಡ್ ನಷ್ಟ ಅನುಭವಿಸಿರಬಹುದು. ಜತೆಗೆ, ನವೆಂಬರ್ ಕೂಡ ಕೃಷಿ ರಂಗದಲ್ಲಿ ಸ್ವಲ್ಪ ನೀರಸವಾಗಿದೆ. ಎಲ್ಲವನ್ನೂ ಒಟ್ಟುಗೂಡಿಸಿ ಮತ್ತು ದೊಡ್ಡ ಕಾರ್ಮಿಕ ಮಾರುಕಟ್ಟೆಯಲ್ಲಿ ಪೂರ್ಣ ಚೇತರಿಕೆ ಇನ್ನೂ ದೂರವಿದೆ ಎಂದು ನೀವು ತಿಳಿಯಬಹುದು,” ಎಂದು ಮಿತ್ರಾ ಹೇಳಿದ್ದಾರೆ. CMIE ಪ್ರಕಾರ, ಕೊವಿಡ್‌ನ ಮೊದಲ ಅಲೆಗಿಂತ ಮುಂಚೆ ಕಾರ್ಮಿಕ ಭಾಗವಹಿಸುವಿಕೆಯು ಸುಮಾರು ಶೇ 43ರಿಂದ ಸುಮಾರು ಶೇ 36ಕ್ಕೆ ಇಳಿದಿದೆ.

ಇದನ್ನೂ ಓದಿ: Consumer Confidence: ಭಾರತ ನಗರಪ್ರದೇಶದ ಗ್ರಾಹಕರ ವಿಶ್ವಾಸದಲ್ಲಿ ಹೆಚ್ಚಳ; ನಿರುದ್ಯೋಗದ ಬಗ್ಗೆ ಹೆಚ್ಚಿದ ಆತಂಕ